ಇದೀಗ ಭಾರತ ಹಾಗೂ ಪಾಕಿಸ್ತಾನ ನಡುವಿನ ಗಡಿಯಾಚೆಗಿನ ಪ್ರೀತಿ ಟ್ರೆಂಡ್ ಆಗಿದೆ. ಒಂದರ ಮೇಲೊಂದರಂತೆ ಲವ್ ಸ್ಟೋರಿ, ಮದುವೆ ಬಹಿರಂಗವಾಗುತ್ತಿದೆ. ಸೀಮಾ ಹೈದರ್, ಅಂಜು ಬಳಿಕ ಇದೀಗ ಪಾಕಿಸ್ತಾನದ ಅಮೀನಾ ಸರದಿ. ಪಾಕಿಸ್ತಾನದ ಅಮೀನಾ ಭಾರತೀಯನನ್ನು ವರಿಸಿದ್ದಾಳೆ. ಆದರೆ ಈ ಮದುವೆ ನಡೆದಿರುವುದು ವರ್ಚುವಲ್ ಮೂಲಕ.
ಜೋಧಪುರ(ಜು.05) ಪಾಕಿಸ್ತಾನದ ಸೀಮಾ ಹೈದರ್ ಭಾರತಕ್ಕೆ ಬಂದು ಸಚಿನ್ ಮೀನಾ ಜೊತೆ ಮದುವೆ, ಭಾರತದ ಅಂಜು ಪಾಕಿಸ್ತಾನಕ್ಕೆ ತೆರಳಿ ನಸ್ರುಲ್ಲಾ ಜೊತೆ ಮದುವೆ ಭಾರಿ ಸಂಚಲನ ಸೃಷ್ಟಿಸಿದೆ. ಪಬ್‌ಜಿ ಲವ್, ಫೇಸ್‌ಬುಕ್ ಲವ್ ಗಡಿಗಳನ್ನು ಮೀರಿ ಸಂಬಂಧವನ್ನು ಗಟ್ಟಿಗೊಳಿಸಿದೆ. ಆದರೆ ಈ ಪ್ರಕರಣಗಳ ಬಳಿಕ ಗಡಿಯಾಚಗಿನ ಲವ್ ಇದೀಗ ಟ್ರೆಂಡ್ ಆಗಿದೆ. ಇದೇ ರೀತಿಯ ಹಲವು ಪ್ರಕರಣಗಳು, ಪ್ರಯತ್ನಗಳು ವರದಿಯಾಗಿದೆ. ಇದೀಗ ಪಾಕಿಸ್ತಾನದ ಅಮೀನಾ ಭಾರತದ ಯುವಕ ಅರ್ಬಾಜ್ ಜೊತೆ ಪ್ರೀತಿಯಲ್ಲಿ ಬಿದ್ದು ಇದೀಗ ಮದುವೆಯಾಗಿರುವ ಪ್ರಕರಣ ಬಹಿರಂಗವಾಗಿದೆ. ಆದರೆ ಈ ಮದುವೆಯಲ್ಲಿ ಒಂದು ಟ್ವಿಸ್ಟ್ ಇದೆ. ಮದುವೆ ವಿಡಿಯೋ ಕಾಲ್ ಮೂಲಕ ಆಗಿದೆ. ಸದ್ಯ ಅಮೀನಾ ಪಾಕಿಸ್ತಾನದಲ್ಲೇ ಇದ್ದರೆ, ಅರ್ಬಾಜ್ ಭಾರತದಲ್ಲಿದ್ದಾನೆ.
ಜೋಧಪುರದ ಅರ್ಬಾಜ್ ಹಾಗೂ ಪಾಕಿಸ್ತಾನದ ಅಮೀನಾ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು.ಇದೊಂದು ರೀತಿ ಲವ್ ಕಮ್ ಅರೇಂಜ್ ಮ್ಯಾರೇಜ್. ಅರ್ಬಾಜ್ ಕುಟುಂಬದ ಆಪ್ತರೊಬ್ಬರು ಪಾಕಿಸ್ತಾನದ ಅಮೀನಾ ಕುಟುಂಬಸ್ಥರೊಬ್ಬರನ್ನು ಮದುವೆಯಾಗಿದ್ದಾರೆ. ಹೀಗಾಗಿ ಮೊದಲೇ ಇವರಿಬ್ಬರು ಕುಟುಂಬಕ್ಕೆ ಪರಿಚಯ. ಈ ಪರಿಚಯ ಪ್ರೀತಿಯಾಗಿದೆ. ಇಷ್ಟೇ ಅಲ್ಲ. ವಿಶೇಷ ಅಂದರೆ ಅಮೀನಾ ಪೋಷಕರು ಅರ್ಬಾಜ್‌ಗೆ ಮಗಳನ್ನು ಮದುವೆ ಮಾಡುವ ಆಲೋಚನೆಯಲ್ಲಿದ್ದರು.
ಸೀಮಾ, ಅಂಜು ಬಳಿಕ ಭಾರತ-ಬಾಂಗ್ಲಾ ಲವ್ ಸ್ಟೋರಿ, ಆದ್ರೆ ಕಹಾನಿಯಲ್ಲಿ ಹಲವು ಟ್ವಿಸ್ಟ್!
ರೋಗಿ ಬಯಸಿದ್ದು ಹಾಲು, ವೈದ್ಯರು ಹೇಳಿದ್ದು ಹಾಲು ಎಂಬಂತೆ, ಪೋಷಕರು ಆಲೋಚನೆ ಹೇಳಿದ ತಕ್ಷಣವೇ ಅಮೀನಾ ಒಂದು ಕ್ಷಣ ಹಿಂದೂ ಮುಂದೂ ಯೋಚನೆ ಮಾಡದೆ ಒಕೆ ಎಂದಿದ್ದಾಳೆ. ಬಳಿಕ ಅಮೀನಾ ಪೋಷಕರು ಜೋಧಪುರದ ಅರ್ಬಾಜ್ ಪೋಷಕರ ಬಳಿ ಮದುವೆ ಕುರಿತು ಮಾತುಕತೆ ನಡೆಸಿದ್ದಾರೆ. ಇಷ್ಟಾದರೂ ವರ್ಚುವಲ್ ಮದುವೆ ಯಾಕಾಯ್ತು? ಅನ್ನೋ ಪ್ರಶ್ನೆ ಸಹಜ. ಇದಕ್ಕೆ ಮುಖ್ಯ ಕಾರಣ ವೀಸಾ ಹಾಗೂ ಇಮಿಗ್ರೇಶನ್ ಸಮಸ್ಯೆ.
ಮೆರವಣಿ ಮೂಲಕ ಅರ್ಬಾಜ್ ಹಾಗೂ ಕುಟುಂಬಸ್ಥರು ಜೋಧಪುರದ ಒಸ್ವಾಲ್ ಸಮಾಜ ಭವನಕ್ಕೆ ಆಗಮಿಸಿದ್ದಾರೆ. ವಿಡಿಯೋ ಕಾನ್ಪರೆನ್ಸ್ ಮೂಲಕ ವರ್ಚುವಲಿ ಮದುವೆ ನಡೆದಿದೆ. ಪಾಕಿಸ್ತಾನದಲ್ಲಿ ಮದುವೆಯಾಗಲು ಸಲಹೆಗಳು ಬಂದಿತ್ತು. ಅಮೀನಾ ಕುಟುಂಬಸ್ಥರು ಇದೇ ಮಾತು ಹೇಳಿದ್ದರು. ಆದರೆ ಪಾಕ್‌ನಲ್ಲಿನ ಮದುವೆಗೆ ಭಾರತದಲ್ಲಿ ಸಂಸಾರ ನಡೆಸಲು ಹಾಗೂ ದಾಖಲೆ ಪತ್ರಗಳಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಹೀಗಾಗಿ ಸದ್ಯ ವರ್ಚುವಲ್ ಮದುವೆಯಾಗಿದ್ದೇನೆ.
ಸಹೋದರನ ಕೆಲಸಕ್ಕೆ ಕೊಕ್, ಮಕ್ಕಳು ತಬ್ಬಲಿ; ಅಂಜು ಮತಾಂತರ ಬಳಿಕ ಸಂಕಷ್ಠದಲ್ಲಿ ಕುಟುಂಬ!
ಅಮೀನಾ ಇದೀಗ ವೀಸಾ ಹಾಗೂ ಇಮಿಗ್ರೇಶನ್‌ಗೆ ಅರ್ಜಿ ಹಾಕಿದ್ದಾರೆ. ಅತೀ ದೊಡ್ಡ ಕಾನೂನು ಸಮಸ್ಯೆಗಳು ಅಂತ್ಯಗೊಂಡಿದೆ. ಶೀಘ್ರದಲ್ಲೇ ಅಮೀನಾಗೆ ವೀಸಾ ಲಭ್ಯವಾಗಲಿದೆ. ಅಮೀನಾ ಭಾರತಕ್ಕೆ ಆಗಮಿಸಿದ ಬಳಿಕ ಮದುವೆ ಸಮಾರಂಭ ಆಯೋಜಿಸುತ್ತೇವೆ ಎಂದು ಅರ್ಬಾಜ್ ಹೇಳಿದ್ದಾರೆ.