Weird News: ಪುರುಷರ ಪ್ರವೇಶ ನಿಷಿದ್ಧವಿರುವ ಗ್ರಾಮದಲ್ಲಿ ಮದುವೆಯಾಗದೇ ಗರ್ಭಿಣಿಯಾಗ್ತಾರೆ ಹುಡುಗೀರು

Published : Jul 27, 2022, 03:11 PM ISTUpdated : Jul 27, 2022, 03:14 PM IST
Weird News: ಪುರುಷರ ಪ್ರವೇಶ ನಿಷಿದ್ಧವಿರುವ ಗ್ರಾಮದಲ್ಲಿ ಮದುವೆಯಾಗದೇ ಗರ್ಭಿಣಿಯಾಗ್ತಾರೆ ಹುಡುಗೀರು

ಸಾರಾಂಶ

ಕಳೆದ 30 ವರ್ಷಗಳಿಂದ ಆ ಹಳ್ಳಿಗೆ ಪುರುಷರು ಬಂದಿಲ್ಲ. ಅದು ಮಹಿಳೆಯರ ಪ್ರಪಂಚ. ದಟ್ಟ ಕಾಡಿನ ಮಧ್ಯೆ ಇರುವ ಆ ಹಳ್ಳಿಯಲ್ಲಿ ಮದುವೆಯಾಗದೆ ಗರ್ಭಧರಿಸುವ ಪದ್ಧತಿಯಿದೆ. ಆ ಗ್ರಾಮದ ವಿಚಿತ್ರ ಪದ್ಧತಿ ಬಗ್ಗೆ ನಾವಿಂದು ಹೇಳ್ತೇವೆ.

ವಿವಿಧ ಧರ್ಮದ, ಸಂಸ್ಕೃತಿಯ ಜನರು ಪ್ರಪಂಚದಾದ್ಯಂತ ವಾಸಿಸುತ್ತಿದ್ದಾರೆ. ಪ್ರತಿಯೊಬ್ಬರ ಪದ್ಧತಿ, ಸಂಸ್ಕೃತಿಗಳು ಒಂದಕ್ಕೊಂದು ಭಿನ್ನವಾಗಿವೆ.  ವಿವಿಧತೆಯನ್ನು ಹೊಂದಿರುವ ದೇಶ ಭಾರತದಲ್ಲಿಯೇ ಒಂದೊಂದು ಜನಾಂಗ, ಒಂದೊಂದು ಪ್ರದೇಶದಲ್ಲಿ ಚಿತ್ರ- ವಿಚಿತ್ರ ಪದ್ಧತಿಗಳಿವೆ. ಹಾಗೆಯೇ ವಿಶ್ವದ ಬೇರೆ ಬೇರೆ ಜನಾಂಗಗಳು ತಮ್ಮದೇ ಪದ್ಧತಿಯನ್ನು ಆಚರಿಸಿಕೊಂಡು ಬಂದಿವೆ. ಜಗತ್ತು ಆಧುನಿಕತೆಯೆಡೆಗೆ ಮುಖ ಮಾಡಿದ್ದರೂ ಹಿಂದಿನ ಪದ್ಧತಿಯನ್ನು ಉಳಿಸಿಕೊಂಡು ಬಂದ ಜನಾಂಗಗಳು ಸಾಕಷ್ಟಿವೆ. ಭಾರತದಲ್ಲಿ ವಿವಾಹದ ನಂತ್ರ ಗರ್ಭಿಣಿಯಾಗ್ಬೇಕು. ಮದುವೆಗೆ ಮುನ್ನವೇ ಗರ್ಭಿಣಿಯಾದ್ರೆ ಸಮಾಜ ಮಹಿಳೆಗೆ ಅವಮಾನ ಮಾಡುತ್ತದೆ. ಆಕೆಯನ್ನು ಶಂಕಿಸುತ್ತದೆ. ಸಮಾಜದಲ್ಲಿ ಆಕೆಗೆ ಗೌರವ ಸಿಗುವುದಿಲ್ಲ. ಮದುವೆ ಮುನ್ನ ಗರ್ಭ ಧರಿಸಿದ ಮಗಳನ್ನು ಮನೆಯಿಂದ ಹೊರಗೆ ತಳ್ಳಿದ ಅನೇಕ ಪಾಲಕರಿದ್ದಾರೆ. ಇತ್ತೀಚಿನ ದಿನಗಳಲ್ಲಿ ಗರ್ಭಿಣಿಯಾದ್ಮೇಲೆ ಮದುವೆಯಾದ ಅನೇಕ ಸೆಲೆಬ್ರಿಟಿಗಳನ್ನು ನಾವು ಕಾಣಬಹುದು. ಆದ್ರೆ ಇದಕ್ಕೆ ಆಧುನಿಕತೆ ಹೆಸರನ್ನು ನಮ್ಮಲ್ಲಿ ನೀಡಲಾಗುತ್ತಿದೆ. ನಿಮಗೆ ಗೊತ್ತಿರಲಿ, ದಕ್ಷಿಣ ಆಫ್ರಿಕಾದ ಒಂದು ಹಳ್ಳಿಯಲ್ಲಿಯೂ ಈ ಪದ್ಧತಿಯಿದೆ. ಜನರು ಆಧುನಿಕತೆಗೆ ತೆರೆದುಕೊಂಡ ಮೇಲೆ ರೂಢಿಗೆ ಬಂದ ಪದ್ಧತಿಯಲ್ಲ. ತಲೆ ತಲಾಂತರಗಳಿಂದ ನಡೆದುಕೊಂಡು ಬಂದ ಪದ್ಧತಿ. ಅದೇನು ಎಂಬುದನ್ನು ವಿಸ್ತಾರವಾಗಿ ನಾವು ಹೇಳ್ತೇವೆ.

ಪುರುಷರ ಪ್ರವೇಶಕ್ಕೆ ನಿಷೇಧ : ದಕ್ಷಿಣ ಆಫ್ರಿಕಾ (South Africa ) ದ ಉಮೋಜಾ ಹಳ್ಳಿಯಲ್ಲಿ ಮಹಿಳೆ ಮದುವೆ (Marriage) ಯಾಗದೆ ಗರ್ಭ ಧರಿಸುತ್ತಾಳೆ. ವಿಶೇಷ ಅಂದ್ರೆ ಈ ಹಳ್ಳಿಗೆ ಪುರುಷ (Male) ರ ಪ್ರವೇಶ ನಿಷಿದ್ಧ. ಇಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಮಾತ್ರ ಉಳಿಯಲು ಅವಕಾಶವಿದೆ. 30 ವರ್ಷಗಳಿಂದ ಈ ಗ್ರಾಮಕ್ಕೆ ಪುರುಷರು ಕಾಲಿಟ್ಟಿಲ್ಲ. ಏಕೆಂದರೆ ಇಲ್ಲಿ ಪುರುಷರ ಪ್ರವೇಶವನ್ನು ನಿಷೇಧಿಸಲಾಗಿದೆ. ಹಳ್ಳಿ (Village) ಯಲ್ಲಿರುವ ಮಕ್ಕಳಿಗೆ ತಮ್ಮ ತಂದೆ ಯಾರು ಎಂಬುದೇ ಗೊತ್ತಿಲ್ಲ. ಗ್ರಾಮದ ಎಲ್ಲ ಜವಾಬ್ದಾರಿಯೂ ಮಹಿಳೆಯರ ಮೇಲಿದೆ. ಮಹಿಳೆಯರು ತಮ್ಮ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಹೊತ್ತಿರುತ್ತಾರೆ. ಕಷ್ಟಪಟ್ಟು ದುಡಿದು ಮನೆಯನ್ನು ನೋಡಿಕೊಳ್ತಾಳೆ.  
ಈ ಗ್ರಾಮದಲ್ಲಿ ಸುಮಾರು 250 ಮಹಿಳೆಯರು ವಾಸಿಸುತ್ತಿದ್ದಾರೆ. ದಟ್ಟ ಕಾಡಿನ ನಡುವೆ ಇರುವ ಈ ಗ್ರಾಮದಲ್ಲಿ ಮಹಿಳೆಯರು ಒಂಟಿಯಾಗಿರಲು ಸ್ವಲ್ಪವೂ ಹೆದರುವುದಿಲ್ಲ. ಈ ಗ್ರಾಮವು ಮಹಿಳೆಯರಿಂದಲೇ ನೆಲೆನಿಂತಿದೆ. 

ಪುರುಷರನ್ನು ದ್ವೇಷಿಸಲು ಇದೆ ಇತಿಹಾಸ : ಕೆಲ ವರ್ಷಗಳ ಹಿಂದೆ ಬ್ರಿಟಿಷ್ ಸೈನಿಕರು ಇಲ್ಲಿಗೆ ಬಂದಿದ್ದರಂತೆ. ಬುಡಕಟ್ಟು ಮಹಿಳೆಯರು ಮೇಕೆ ಮತ್ತು ಕುರಿಗಳನ್ನು ಮೇಯಿಸುತ್ತಿದ್ದಾಗ  ಬ್ರಿಟಿಷ್ ಸೈನಿಕರು ಅವರ ಮೇಲೆ  ಅತ್ಯಾಚಾರವೆಸಗಿದರು ಎಂದು ಹೇಳಲಾಗುತ್ತದೆ.  ಸುಮಾರು 15 ಮಹಿಳೆಯರು ಅತ್ಯಾಚಾರಕ್ಕೊಳಗಾಗಿದ್ದರಂತೆ. ಇದರ ನಂತ್ರ  ಆ ಹೆಂಗಸರು ಪುರುಷರಿಂದ ಪ್ರತ್ಯೇಕಗೊಂಡು ಪ್ರತ್ಯೇಕ ಜಗತ್ತನ್ನು ಸ್ಥಾಪಿಸಿದರು. 

Weird News: ಇಲ್ಲಿ ಮದುವೆಯ ನಂತರ ವಧುವನ್ನು ಆಶೀರ್ವದಿಸಲು ತಲೆ ಮೇಲೆ ಉಗುಳ್ತಾರೆ

ಮಹಿಳೆ ಗರ್ಭ ಧರಿಸೋದು ಹೇಗೆ?  : ಇದು ಯಾವುದೇ ರೀತಿಯ ಪವಾಡವಲ್ಲ. ಗರ್ಭ ಧರಿಸಲು ಪುರುಷರ ಅಗತ್ಯವಿದೆ. ಇದು ಪ್ರಕೃತಿಯ ನಿಯಮವೂ ಹೌದು. ರಾತ್ರಿಯ ಕತ್ತಲೆಯಲ್ಲಿ ಪುರುಷರು ಈ ದಟ್ಟವಾದ ಕಾಡುಗಳಿಗೆ ಬರುತ್ತಾರಂತೆ. ಹಳ್ಳಿಯ ಯುವತಿಯರು ಪುರುಷರ  ಬಳಿಗೆ ಹೋಗುತ್ತಾರೆ ಎಂದು ಹೇಳಲಾಗುತ್ತದೆ. ಹೆಣ್ಣು ಮಕ್ಕಳು ಗರ್ಭಿಣಿಯಾಗುವವರೆಗೂ ಅವರೊಂದಿಗೆ ದೈಹಿಕ ಸಂಬಂಧ ಬೆಳೆಸುತ್ತಾರೆ. ಗರ್ಭಿಣಿಯಾದ ನಂತರ  ಹುಡುಗಿಯರು ಅವನೊಂದಿಗಿನ ಸಂಬಂಧವನ್ನು ಕೊನೆಗೊಳಿಸುತ್ತಾರೆ. ಮಕ್ಕಳಿಗೆ ಜನ್ಮ ನೀಡಿದ ನಂತರವೂ ಆಕೆಯೇ ಮಕ್ಕಳನ್ನು ನೋಡಿಕೊಳ್ಳುತ್ತಾಳೆ. ಮಕ್ಕಳು ಕೂಡ ತಂದೆಯ ಬಗ್ಗೆ ಏನನ್ನೂ ಕೇಳುವುದಿಲ್ಲ.

ಮದುವೆ ದಿನ ವರ-ವಧು ನಗುವಂತೆಯೇ ಇಲ್ಲ, ಇದೆಂಥಾ ವಿಚಿತ್ರ ಸಂಪ್ರದಾಯ !

ಕೌಟುಂಬಿಕ ದೌರ್ಜನ್ಯಕ್ಕೆ (Domestic Violence) ಒಳಗಾದ ಮಹಿಳೆಯರೂ ಈ ಗ್ರಾಮಕ್ಕೆ  ಬಂದು ವಾಸಿಸುತ್ತಿದ್ದಾರೆ. ಬಾಲ್ಯವಿವಾಹದಿಂದ (Child Marriage) ತಪ್ಪಿಸಿಕೊಂಡು ಅತ್ಯಾಚಾರಕ್ಕೊಳಗಾದ ಮಹಿಳೆಯರೂ ಈ ಗ್ರಾಮಕ್ಕೆ ಬಂದು ನೆಲೆಸಿದ್ದಾರೆ. ಈ ಗ್ರಾಮದಲ್ಲಿ ಮಕ್ಕಳಿಗಾಗಿ ಶಾಲೆಯನ್ನೂ ತೆರೆಯಲಾಗಿದೆ.
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಾವಿರ ಕೋಟಿ ಕುಬೇರ 'ಮಹಾಪುರುಷ'ನಿಗೆ ಡಿವೋರ್ಸ್ ಕೊಡ್ತಾರಾ ಈ ನಟಿ? ಇದೆಂಥ ಶಾಕಿಂಗ್ ಮ್ಯಾಟರ್!
ತಾಳಿ ಕಟ್ಟು ಮೊದಲು ಬಿಗ್ ಟ್ವಿಸ್ಟ್ ಕೊಟ್ಟ ವರ, 8ನೇ ವಚನದೊಂದಿದೆ ಮದುವೆ ವಿಡಿಯೋ