ಮಕ್ಕಳ ಪಾಲನೆ ಚಿಕ್ಕ ವಿಷ್ಯವಲ್ಲ. ಪ್ರತಿ ಹಂತದಲ್ಲೂ ಮಕ್ಕಳ ಆರೋಗ್ಯ, ಶಿಕ್ಷಣ ನೋಡಿಕೊಂಡ್ರೆ ಸಾಲದು. ಸಮಾಜದಲ್ಲಿ ಗಣ್ಯ ವ್ಯಕ್ತಿಯಾಗ್ಬೇಕೆಂದ್ರೆ ಪಾಲಕರ ನಡವಳಿಕೆ ಮುಖ್ಯವಾಗುತ್ತದೆ. ಮಕ್ಕಳ ಮುಂದೆ ಏನು ಹೇಳ್ಬೇಕು, ಏನು ಹೇಳ್ಬಾರದು ಎಂಬ ಸಂಗತಿ ಪಾಲಕರಿಗೆ ತಿಳಿದಿರಬೇಕಾಗುತ್ತದೆ.
ಮಕ್ಕಳು ದೊಡ್ಡವರಾಗ್ತಿದ್ದಂತೆ ಅವರಿಗೆ ಪ್ರಪಂಚದ ಜ್ಞಾನ ಬರ್ತಾ ಹೋಗುತ್ತದೆ. ಒಂದೊಂದೇ ವಿಷ್ಯವನ್ನು ಅವರು ಅರ್ಥ ಮಾಡಿಕೊಳ್ಳಲು ಶುರು ಮಾಡ್ತಾರೆ. ಎಲ್ಲ ವಿಷ್ಯದ ಬಗ್ಗೆ ಸರಿ – ತಪ್ಪು ಅವರಿಗೆ ತಿಳಿದಿರುವುದಿಲ್ಲ. ಹಾಗಾಗಿ ಕೆಲವೊಂದು ವಿಷ್ಯಗಳನ್ನು ಅವರು ತಪ್ಪು ತಿಳಿಯುವುದು ಹೆಚ್ಚು. ಮಕ್ಕಳಿಗೆ ಯಾವ ಹಂತದಲ್ಲಿ ಏನನ್ನು ಕಲಿಸಬೇಕು ಎಂಬುದು ಯಾವಾಗ್ಲೂ ಪಾಲಕರಿಗೆ ತಿಳಿದಿರಬೇಕು. ಹಾಗೆ ಮಕ್ಕಳು ಯಾರನ್ನೂ, ಯಾವುದನ್ನೂ ತಪ್ಪಾಗಿ ಅರ್ಥೈಸಿಕೊಳ್ಳದಂತೆ ಪಾಲಕರು ಗಮನ ಹರಿಸಬೇಕು. ಇದೆಲ್ಲದರ ಮಧ್ಯೆ ಪಾಲಕರು ಮಕ್ಕಳ ಮುಂದೆ ಕೆಲ ವಿಷ್ಯಗಳನ್ನು ಅಪ್ಪಿತಪ್ಪಿಯೂ ಹೇಳಬಾರದು. ಇದು ಮಕ್ಕಳ ಮನಸ್ಸಿನ ಮೇಲೆ ಗಾಢವಾದ ಪ್ರಭಾವ ಬೀರುತ್ತದೆ. ಮಕ್ಕಳ ಮುಂದೆ ಯಾವ ವಿಷ್ಯವನ್ನು ಚರ್ಚಿಸಬಾರದು ಎಂಬುದನ್ನು ನಾವು ಹೇಳ್ತೇವೆ.
ಮಕ್ಕಳ (Children) ಮುಂದೆ ಎಂದೂ ಇದನ್ನು ಹೇಳ್ಬೇಡಿ :
ಸಂಗಾತಿ ಅಥವಾ ಬೇರೆಯವರ ಬಗ್ಗೆ ಕೆಟ್ಟ ಮಾತನ್ನಾಡ್ಬೇಡಿ : ಕೆಲ ಪಾಲಕರಿಗೆ ಕೋಪ (Anger) ದಲ್ಲಿ ನಾವು ಏನು ಮಾತನಾಡ್ತಿದ್ದೇವೆ ಎಂಬ ಅರಿವಿರುವುದಿಲ್ಲ. ಇದೇ ಕಾರಣಕ್ಕೆ ಅವರು ತಮ್ಮ ಸಂಗಾತಿ ಅಥವಾ ಸಂಬಂಧಿಕರ ಬಗ್ಗೆ ಕೆಟ್ಟ ಮಾತುಗಳನ್ನು ಆಡಿರ್ತಾರೆ. ಮಕ್ಕಳ ಮುಂದೆ ಹೀಗೆ ಮಾತನಾಡಬಾರದು ಎಂಬ ಜ್ಞಾನ ಇರೋದಿಲ್ಲ. ಮಕ್ಕಳು ತಮ್ಮ ಜೊತೆ ಕಳೆದ ಸಮಯವನ್ನೇ ಕುಟುಂಬ (Family) ದ ಇತರ ಸದಸ್ಯರ ಜೊತೆ ಕಳೆಯುತ್ತಾರೆ ಎಂಬುದನ್ನು ಪಾಲಕರು ಮರೆಯುತ್ತಾರೆ. ಇದು ಮಕ್ಕಳ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಮಕ್ಕಳು ಮನೆಯನ್ನು ಎರಡು ಪಾಲು ಮಾಡ್ತಾರೆ. ನೀವು ಬೈದ ವ್ಯಕ್ತಿಯನ್ನು ಅವರು ದ್ವೇಷಿಸಲು ಶುರು ಮಾಡುವ ಸಾಧ್ಯತೆಯೂ ಇದೆ.
ಜವಾಬ್ದಾರಿ ಬಗ್ಗೆ ಭಯ : ಪಾಲಕರು, ಮಕ್ಕಳ ಮುಂದೆ ಎಂದೂ ಹಣಕಾಸಿನ ಸಮಸ್ಯೆ ಹಾಗೂ ರೋಗದ ಬಗ್ಗೆ ಹೇಳಬಾರದು. ಆರ್ಥಿಕ ಸಮಸ್ಯೆಯಾಗಿದೆ ಅಥವಾ ಯಾವುದೋ ಖಾಯಿಲೆ ಬಂದಿದೆ ಎಂದಾಗ ಅಥವಾ ಅದರಿಂದ ಹೊರಬರಲು ಪಾಲಕರು ಕಷ್ಟಪಡ್ತಿದ್ದಾರೆ ಎಂಬುದು ಮಕ್ಕಳಿಗೆ ಗೊತ್ತಾದಾಗ ಅವರೂ ಭಯಕ್ಕೆ ಒಳಗಾಗ್ತಾರೆ. ಅವರ ಜೀವನದಲ್ಲಿ ಮುಂದೆ ಬರುವ ಇಂಥ ಸಮಸ್ಯೆಯನ್ನು ಎದುರಿಸಲು ಅವರು ಸಿದ್ಧರಾಗುವುದಿಲ್ಲ.
ಮಕ್ಕಳನ್ನು ಬೇರೆಯವರಿಗೆ ಹೋಲಿಕೆ (Comparision) ಮಾಡುವುದು : ಬಹುತೇಕ ಪಾಲಕರು ಇದನ್ನು ಮಾಡ್ತಾರೆ. ಬೇರೆ ಮಕ್ಕಳು ಅಥವಾ ಬೇರೆಯವರ ಜೊತೆ ಮಕ್ಕಳನ್ನು ಹೋಲಿಕೆ ಮಾಡ್ತಾರೆ. ಇದು ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳು ಖಿನ್ನತೆಗೆ ಒಳಗಾಗ್ತಾರೆ. ಅವರ ಆತ್ಮವಿಶ್ವಾಸ ಕುಗ್ಗುತ್ತದೆ. ಅವರು ಯಾವುದೇ ಕೆಲಸ ಮಾಡಲು ಮುನ್ನುಗ್ಗುವ ಸಾಹಸಕ್ಕೆ ಹೋಗುವುದಿಲ್ಲ. ಹಾಗೆ ತನಗಿಂತ ಉತ್ತಮ ಎಂದು ಪಾಲಕರು ಹೊಗಳಿದ ವ್ಯಕ್ತಿಯನ್ನು ಅವರು ದ್ವೇಷಿಸಲು ಶುರು ಮಾಡ್ತಾರೆ.
ಮಕ್ಕಳ ಓಟ್ಟಾರೆ ಬೆಳವಣಿಗೆಗೆ ಈ ಗುಣವನ್ನು ಪ್ರೋತ್ಸಾಹಿಸಿ
ಮಕ್ಕಳ ನೋವಿನ ಬಗ್ಗೆ ಸ್ಪಂದನೆ : ಮಕ್ಕಳು ಅಳ್ತಿದ್ದರೆ ಪಾಲಕರು ನಗುತ್ತಿರುತ್ತಾರೆ. ಇದು ದೊಡ್ಡ ವಿಷ್ಯವಲ್ಲ, ಇದಕ್ಕೆ ಅಳ್ತಿಯಾ ಎಂದು ಕೇಳ್ತಿರುತ್ತಾರೆ. ಹೀಗೆ ಮಾಡಬಾರದು. ಮಕ್ಕಳ ನೋವಿಗೆ ಸ್ಪಂದಿಸಬೇಕು. ಯಾಕೆಂದ್ರೆ ಮುಂದೆ ಮಕ್ಕಳು ತಮ್ಮ ದುಃಖವನ್ನು ನಿಮ್ಮ ಮುಂದೆ ಹೇಳೋದಿಲ್ಲ. ಎಲ್ಲರ ಮುಂದೆ ಖುಷಿಯಾಗಿರುವ ನಾಟಕ ಮಾಡ್ತಾರೆ. ಇದು ಮಕ್ಕಳ ಮಾನಸಿಕ ಸ್ಥಿತಿ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಹೆಣ್ಮಕ್ಕಳು ಸ್ವಾವಲಂಬಿಯಾಗಬೇಕೆಂದರೆ ಪೋಷಕರು ಹೀಗ್ ಮಾಡಬೇಕು
ನೀನು ಹುಟ್ಟದೆ ಹೋಗಿದ್ರೆ : ನೀವು ಎಷ್ಟೇ ದುಃಖದಲ್ಲಿರಲಿ. ಮಕ್ಕಳ ಮುಂದೆ ಅಪ್ಪಿತಪ್ಪಿಯೂ ಈ ವಿಷ್ಯವನ್ನು ಹೇಳಬೇಡಿ. ಯಾವುದೇ ಮಕ್ಕಳು, ಪಾಲಕರ ಬಾಯಿಂದ ಈ ಮಾತು ಕೇಳಲು ಬಯಸುವುದಿಲ್ಲ. ಇದು ಮಕ್ಕಳ ಭಾವನೆ ಮೇಲೆ ಪರಿಣಾಮ ಬೀರುತ್ತದೆ. ಅವರ ಆತ್ಮ ಸಮ್ಮಾನವನ್ನು ಕುಗ್ಗಿಸುತ್ತದೆ. ನನ್ನನ್ನು ಯಾರೂ ಪ್ರೀತಿಸುವುದಿಲ್ಲ ಎನ್ನುವ ಭಾವನೆ ಮಕ್ಕಳಲ್ಲಿ ಬರಲು ಶುರುವಾಗುತ್ತದೆ. ಇದ್ರಿಂದ ಮಕ್ಕಳು ಮಾನಸಿಕ ಒತ್ತಡಕ್ಕೆ ಒಳಗಾಗ್ತಾರೆ.