ಭಾರತದಲ್ಲಿ ಸಂಬಂಧಗಳು ಅದ್ರಲ್ಲೂ ಪತಿ – ಪತ್ನಿ ಸಂಬಂಧ ನಂಬಿಕೆ ಕಳೆದುಕೊಳ್ತಿದೆ. ಅತ್ಯಲ್ಪ ಸಮಯದಲ್ಲೇ ಸಂಬಂಧ ಮುರಿದುಬೀಳ್ತಿದೆ. ಭಾರತದ ಕೆಲ ರಾಜ್ಯಗಳಲ್ಲಿ ವಿಚ್ಛೇದಿತರ ಸಂಖ್ಯೆ ಹೆಚ್ಚಾಗ್ತಿರೋದು ಆತಂಕ ಮೂಡಿಸಿದೆ.
ಭಾರತದಲ್ಲಿ ವಿಚ್ಛೇದನ ಪಡೆಯುವವರ ಸಂಖ್ಯೆ ಹಿಂದೆ ಬಹಳ ಕಡಿಮೆ ಇತ್ತು. ಅಲ್ಲಿ ಇಲ್ಲಿ ಒಂದೋ ಎರಡೋ ವಿಚ್ಛೇದನಗಳು ನಡೆಯುತ್ತಿದ್ದವು. ಅದು ತೀರ ಅಪರೂಪಕ್ಕೆ. ಆದ್ರೆ ಈಗ ಭಾರತದ ಸ್ಥಿತಿ ಬದಲಾಗಿದೆ. ಅತಿ ಸಣ್ಣ ವಿಷ್ಯಕ್ಕೂ ಜನರು ವಿಚ್ಛೇದನ ಪಡೆಯುತ್ತಿದ್ದಾರೆ. ದಂಪತಿ ಮಧ್ಯೆ ಹೊಂದಾಣಿಕೆ, ತಾಳ್ಮೆ ಇಲ್ಲದಂದಾಗಿದೆ. ಈ ಹಿಂದೆ ವಕೀಲರೊಬ್ಬರು ಭಾರತದಲ್ಲಿ ವಿಚ್ಛೇದನಕ್ಕೆ ಮುಂದಾಗುವ ಪತಿ – ಪತ್ನಿ ನೀಡುವ ಕಾರಣವನ್ನು ಬಿಚ್ಚಿಟ್ಟಿದ್ದರು. ಇಷ್ಟದ ಬಟ್ಟೆ ಧರಿಸಿಲ್ಲ, ಅತಿಯಾದ ಪ್ರೀತಿ, ಮನೆ ಕೆಲಸಕ್ಕೆ ನೆರವಾಗ್ತಿಲ್ಲ ಹೀಗೆ ಚಿತ್ರವಿಚಿತ್ರ ಕಾರಣಕ್ಕೆ ಜನರು ವಿಚ್ಛೇದನ ನೀಡುತ್ತಾರೆಂದು ಅವರು ಹೇಳಿದ್ದಾರೆ. ಭಾರತದಲ್ಲಿ ವಿಚ್ಛೇದನ ಹೆಚ್ಚಾಗ್ತಿರೋದು ಆತಂಕವನ್ನುಂಟು ಮಾಡಿದೆ.
ಸಂಬಂಧ (Relationship) ಗಳನ್ನು ಕಾಪಾಡಿಕೊಳ್ಳುವಲ್ಲಿ ವಿಶ್ವದಲ್ಲಿ ಅಗ್ರಸ್ಥಾನದಲ್ಲಿರುವ ಭಾರತ (India) ದಲ್ಲೂ ವಿಚ್ಛೇದನ (Divorce) ಹೆಚ್ಚಾಗ್ತಿದೆ. ಜಾಗತಿಕವಾಗಿ ನೀವು ನೋಡಿದ್ರೆ ಭಾರತದಲ್ಲಿ ವಿಚ್ಛೇದನ ಸಂಖ್ಯೆ ಅತ್ಯಂತ ಕಡಿಮೆ. ಆದ್ರೆ ಭಾರತವೊಂದನ್ನೇ ಗಣನೆಗೆ ತೆಗೆದುಕೊಂಡ್ರೆ ಇದು ಹೆಚ್ಚು. ಗ್ಲೋಬಲ್ ಇಂಡೆಕ್ಸ್‌ನ ಮಾಹಿತಿಯ ಪ್ರಕಾರ, ಭಾರತದಲ್ಲಿ ವಿಚ್ಛೇದನ ದರವು ಶೇಕಡಾ 1 ರಷ್ಟಿದೆ.
undefined
ಭಾರತದ ಯಾವ ರಾಜ್ಯದಲ್ಲಿ ವಿಚ್ಛೇದನದ ಸಂಖ್ಯೆ ಹೆಚ್ಚಿದೆ? :
ಇಷ್ಟಪಟ್ಟವನನ್ನು ಮದುವೆಯಾಗುವುದು ವ್ಯಕ್ತಿಯ ಹಕ್ಕು, ಕುಟುಂಬದವರು ಆಕ್ಷೇಪಿಸುವಂತಿಲ್ಲ; ಹೈಕೋರ್ಟ್
ಮಹಾರಾಷ್ಟ್ರ: ನಾವು ಭಾರತದ ಯಾವ ರಾಜ್ಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವವರು ಹೆಚ್ಚಿದ್ದಾರೆ ಎಂಬುದನ್ನು ನೋಡಿದಾಗ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿ ಬರುತ್ತದೆ. ಭಾರತದ ವಿಚ್ಛೇದನದಲ್ಲಿ ಶೇಕಡಾ18.7 ರಷ್ಟು ವಿಚ್ಛೇದನ ಮಹಾರಾಷ್ಟ್ರದಲ್ಲಾಗುತ್ತದೆ.
ಕರ್ನಾಟಕ: ಇನ್ನು ಈ ಪಟ್ಟಿಯಲ್ಲಿ ನಮ್ಮ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಕರ್ನಾಟಕ ರಾಜ್ಯದ ವಿಚ್ಛೇದನ ದರ ಶೇಕಡಾ 11.7 ರಷ್ಟಿದೆ.
1980ರಿಂದ ಇಲ್ಲಿಯವರೆಗೂ ಪತ್ರ ಬರೆಯುತ್ತಿದ್ದ ಸ್ನೇಹಿತೆಯರ ಮೊದಲ ಭೇಟಿ..
ಉತ್ತರ ಪ್ರದೇಶ: ಅತಿ ಹೆಚ್ಚು ಡಿವೋರ್ಸ್ ಪಡೆಯುವ ರಾಜ್ಯಗಳ ಪಟ್ಟಿಯಲ್ಲಿ ಉತ್ತರ ಪ್ರದೇಶ ಮೂರನೇ ಸ್ಥಾನದಲ್ಲಿದೆ. ಭಾರತದ ವಿಚ್ಛೇದನ ದರದಲ್ಲಿ ಉತ್ತರ ಪ್ರದೇಶದ ಪಾಲು ಶೇಕಡಾ 8.8 ರಷ್ಟಿದೆ.
ಪಶ್ಚಿಮ ಬಂಗಾಳ : ವಿಚ್ಛೇದನದಲ್ಲಿ ಪಶ್ಚಿಮ ಬಂಗಾಳ ಕೂಡ ಹಿಂದೆ ಬಿದ್ದಿಲ್ಲ. ಇಲ್ಲಿ ವಿಚ್ಛೇದನದ ದರ ಶೇಕಡಾ 8.2 ರಷ್ಟಿದೆ. ಇಲ್ಲಿನ ದಂಪತಿ ಮಧ್ಯೆಯೂ ಸಾಕಷ್ಟು ವಿವಾದಗಳು ನಡೆಯುತ್ತಿರುತ್ತವೆ.
ದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಸವಾಗಿರುವ ಜನರು ಕೂಡ ಸಂಬಂಧ ನಿಭಾಯಿಸೋದ್ರಲ್ಲಿ ಅಷ್ಟು ಪರ್ಫೆಕ್ಟ್ ಇಲ್ಲ. ಇಲ್ಲಿಯೂ ವಿಚ್ಛೇದನದ ಸಂಖ್ಯೆ ಹೆಚ್ಚಿದೆ. ಮಾಹಿತಿ ಪ್ರಕಾರ, ದೆಹಲಿಯಲ್ಲಿ ಡಿವೋರ್ಸ್ ದರ ಶೇಕಡಾ 7.7ರಷ್ಟಿದೆ.
ತಮಿಳುನಾಡು : ದೆಹಲಿ ನಂತ್ರ ತಮಿಳುನಾಡು ಬರುತ್ತದೆ. ಅತಿ ಹೆಚ್ಚು ವಿಚ್ಛೇದನ ನಡೆಯುವ ರಾಜ್ಯಗಳ ಪಟ್ಟಿಯಲ್ಲಿ ತಮಿಳುನಾಡು ಆರನೇ ಸ್ಥಾನದಲ್ಲಿದೆ.
ತೆಲಂಗಾಣ : ತೆಲಂಗಾಣದಂತ ರಾಜ್ಯದಲ್ಲೂ ಸಂಬಂಧವನ್ನು ನಿಭಾಯಿಸುವಲ್ಲಿ ಜನರು ವಿಫಲರಾಗ್ತಿದ್ದಾರೆ. ಇಲ್ಲೂ ವಿಚ್ಛೇನದ ಸಂಖ್ಯೆ ಕಡಿಮೆ ಇಲ್ಲ. ಒಟ್ಟೂ ವಿಚ್ಛೇದನ ಸಂಖ್ಯೆಯಲ್ಲಿ ಶೇಕಡಾ 7.1 ರಷ್ಟು ಪಾಲು ತೆಲಂಗಾಣದ್ದಾಗಿದೆ.
ಕೇರಳ : ಕೇರಳದಲ್ಲಿ ವಿಚ್ಛೇದನ ದರ ಶೇಕಡಾ6.3 ರಷ್ಟಿದ್ದು, ಪಟ್ಟಿಯಲ್ಲಿ ಎಂಟನೇ ಸ್ಥಾನವನ್ನು ಇದು ಪಡೆದಿದೆ.
ವಿಚ್ಛೇದನಕ್ಕೆ ಇದು ಕಾರಣ : ಇತ್ತೀಚಿನ ರಾಷ್ಟ್ರೀಯ ಸಮೀಕ್ಷೆಯ ಪ್ರಕಾರ, ದಂಪತಿ ವಿಚ್ಛೇದನ ಪಡೆಯುವ ಸಾಮಾನ್ಯ ಕಾರಣವೆಂದರೆ ಬದ್ಧತೆಯ ಕೊರತೆ ಎನ್ನಲಾಗಿದೆ. ಇದಲ್ಲದೆ ಅನೇಕ ವಿಚ್ಛೇದನದ ಹಿಂದೆ ವಿವಾಹೇತರ ಸಂಬಂಧವು ದೊಡ್ಡ ಕಾರಣವಾಗಿದೆ. ಹಣಕಾಸಿನ ಸಮಸ್ಯೆಗಳು ಕೂಡ ಇದಕ್ಕೆ ಕಾರಣವೆಂದು ತಜ್ಞರು ಹೇಳ್ತಾರೆ. ಇಬ್ಬರಲ್ಲಿ ಒಬ್ಬರು ಹೆಚ್ಚು ಅಥವಾ ಕಡಿಮೆ ಗಳಿಸಿದಾಗ, ಅದು ಇನ್ನೊಬ್ಬ ವ್ಯಕ್ತಿಯ ಮನಸ್ಸಿನಲ್ಲಿ ಕೀಳರಿಮೆ ಸಂಕೀರ್ಣವನ್ನು ಸೃಷ್ಟಿಸುತ್ತದೆ. ಇದು ಆಗಾಗ್ಗೆ ಸಂಬಂಧದಲ್ಲಿ ಹುಳಿ ಹಿಂಡಲು ಕಾರಣವಾಗುತ್ತದೆ.