ಮಧ್ಯಪ್ರದೇಶ ಸೇರಿ ದೇಶದ ಹಲವು ರಾಜ್ಯಗಳಲ್ಲಿ ಈ ಗೋಂಡ್ ಆದಿವಾಸಿ ಸಮುದಾಯ ನೆಲೆಸಿದೆ. ಇಲ್ಲಿ ಎಂದಿಗೂ ಮಹಿಳೆಯರು ವಿಧವೆಯರಾಗೋದಿಲ್ಲ.
women Jun 18 2023
Author: Suvarna News Image Credits:pixabay
Kannada
ಗಂಡ ಸಾವನ್ನಪ್ಪಿದರೂ ಇಲ್ಲಿನ ಮಹಿಳೆಯರು ಮುತ್ತೈದೆಯರು
ಇಲ್ಲಿ ಗಂಡ ಸಾವನ್ನಪ್ಪಿದರೂ ಇಲ್ಲಿನ ಮಹಿಳೆಯರು ಮುತ್ತೈದೆಯರಾಗಿರುತ್ತಾರೆ. ಹರೆಯದಲ್ಲಿ ಅಥವಾ ವಯಸ್ಸಾದ ಮೇಲೂ ಪತಿ ಸಾವನ್ನಪ್ಪಿದರೂ ಇವರು ವಿಧವೆಯರಾಗೋದಿಲ್ಲ.
Image credits: our own
Kannada
ಪತಿ ಸಾವನ್ನಪ್ಪಿದ 10ನೇ ದಿನ ಈ ಆಚರಣೆ
ಈ ಸಮಾಜದ ಮಹಿಳೆಯರ ಪತಿ ಸಾವನ್ನಪ್ಪಿದಾಗ, 10 ನೇ ದಿನ ಈ ಮಹಿಳೆಗೆ ಇನ್ನೊಂದು ಮದುವೆ ಮಾಡಿಸಲಾಗುತ್ತೆ. ಅಂದರೆ ಇಲ್ಲಿನ ಮಹಿಳೆಯರು ತಮ್ಮ ಗಂಡ ಸಾವನ್ನಪ್ಪಿದಾಗ ಬೇಸರ ವ್ಯಕ್ತ ಪಡಿಸೋಕು ಸಾಧ್ಯವಾಗೋದಿಲ್ಲ.
Image credits: Unsplash
Kannada
ಯಾರ ಜೊತೆ ಮದುವೆ ಮಾಡಿಸುತ್ತಾರೆ?
ಮಹಿಳೆಯ ಎರಡನೇ ಮದುವೆಯನ್ನು ಅವರ ಮನೆಯಲ್ಲಿನ ಇನ್ನೊಬ್ಬ ಪುರುಷರ ಜೊತೆ ಮಾಡಿಸಲಾಗುತ್ತೆ. ಆ ಪುರುಷರು, ಭಾವ, ಮೈದುನರೂ ಆಗಿರಬಹುದು ಅಥವಾ ಸಣ್ಣ ಮಕ್ಕಳು ಆಗಿರಬಹುದು.
Image credits: Unsplash
Kannada
ಗೋಂಡ್ ಸಮುದಾಯದಲ್ಲಿ ವಿಧವೆಯರಿಗೆ ಜಾಗವೇ ಇಲ್ಲ
ಗೋಂಡ್ ಸಮುದಾಯದಲ್ಲಿ ಒಂದು ವೇಳೆ ಮನೆಯಲ್ಲಿ ಯಾವ ಪುರುಷರೂ ಮಹಿಳೆಯನ್ನು ಮದುವೆಯಾಗಲು ತಯಾರಿರದಿದ್ದರೆ, ಅವರಿಗೆ 10ನೇ ದಿನ ಬೆಳ್ಳಿ ಬಳೆ ತೊಡಿಸಲಾಗುತ್ತೆ. ಅದರ ನಂತರ ಅವರನ್ನು ಮುತ್ತೈದೆ ಎನ್ನಲಾಗುತ್ತೆ.
Image credits: Unsplash
Kannada
ವಿಧವೆ ಆಗೋದು ಶಾಪ
ದೇಶದ ಹಲವು ಭಾಗಗಳಲ್ಲಿ ಇಂದಿಗೂ ಗಂಡ ಸಾವನ್ನಪ್ಪಿದರೆ ಮಹಿಳೆಯರನ್ನು ವಿಧವೆ ಎಂಬ ಪಟ್ಟ ಕಟ್ಟಿ ಕೆಟ್ಟದಾಗಿ ನಡೆಸುತ್ತಾರೆ. ಇನ್ನೊಂದು ಮದುವೆ ಇಲ್ಲ, ಬೇರೆ ಪುರುಷರನ್ನು ನೋಡುವ ಹಾಗೆ ಇರೋದಿಲ್ಲ, ಶೃಂಗಾರ ಕೂಡ ಮಾಡಬಾರದು.
Image credits: Unsplash
Kannada
ಗೋಂಡ್ ಸಮಾಜದಲ್ಲಿ ಮಹಿಳೆಯರಿಗೆ ಗೌರವ
ಗೋಂಡ್ ಸಮಾಜದಲ್ಲಿ ಮಹಿಳೆಯರಿಗೆ ಗೌರವ ನೀಡಲಾಗುತ್ತದೆ. ಮಹಿಳೆಯರ ಸಾಮಾಜಿಕ ಸುರಕ್ಷೆಯ ಬಗ್ಗೆ ಗಮನ ಹರಿಸೋದು ಪುರುಷರ ಕರ್ತವ್ಯವಾಗಿರುತ್ತೆ.