Personality Tips: ನೀವು ಇಂಟ್ಯೂಷನ್‌ ಹೊಂದಿದ್ದೀರಾ? ನಿಮಗೂ ಹೀಗೆಲ್ಲ ಆಗುತ್ತಾ?

By Suvarna News  |  First Published Jun 7, 2023, 6:38 PM IST

ಸಾಮಾನ್ಯರ ಪ್ರಜ್ಞೆಗೆ ಸಿಲುಕದ ಕೆಲವು ಸನ್ನಿವೇಶ, ಭಾವನೆಗಳು ಅಂತಃಪ್ರಜ್ಞೆ ಹೊಂದಿರುವವರಿಗೆ ದಕ್ಕುತ್ತವೆ. ಅವರು ಸುಲಭವಾಗಿ ಇತರರನ್ನು ಅರಿತುಕೊಳ್ಳಬಲ್ಲರು. ಜನ, ಸನ್ನಿವೇಶ, ಸ್ಥಳದ ಎನರ್ಜಿಯನ್ನೂ ಗ್ರಹಿಸಬಲ್ಲರು. ಅಷ್ಟಕ್ಕೂ ಇದು ಭಾವನೆ ಮಾತ್ರವಲ್ಲ, ನಿಜಕ್ಕೂ ಸಂಭವಿಸುವ ವಿದ್ಯಮಾನ.
 


ಕೆಲವರಿಗೆ ಇಂಟ್ಯೂಷನ್‌ ಹೆಚ್ಚಿರುತ್ತದೆ. “ಇದೊಂದು ಕೇವಲ ಭಾವನೆ, ಭ್ರಮೆʼ ಎನ್ನುವವರಿದ್ದಾರೆ. ಆದರೆ, ಇಂಟ್ಯೂಷನ್‌ ಅಥವಾ ಅಂತಃಪ್ರಜ್ಞೆ ಭ್ರಮೆಯಲ್ಲ. ಸಾಮಾನ್ಯ ಜನರ ಅರಿವಿಗೆ ಬಾರದ ಅಂಶಗಳು ಇವರ ಪರಿಧಿಗೆ ನಿಲುಕುತ್ತಿರುತ್ತಿವೆ. ನೀವೂ ಸಹ ಸಾಕಷ್ಟು ಅಂತಃಪ್ರಜ್ಞೆ ಹೊಂದಿರುವ ಜನರಾಗಿದ್ದು, ಅನೇಕ ಸೂಕ್ಷ್ಮತೆಗಳು ನಿಮ್ಮ ಅರಿವಿಗೆ ಬಂದಿರಬಹುದು. ನೀವು ಜಗತ್ತಿನ ಆಗುಹೋಗುಗಳ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ಇದ್ದರೆ, ಇಂಟ್ಯೂಷನ್‌ ಜಾಗ್ರತವಾಗಿರುತ್ತದೆ. ಆಗ ನಿಮಗೆ ನಿಮ್ಮ ಸಮೀಪವರ್ತಿಗಳ ಭಾವನೆಗಳು ಬಹುಬೇಗ ಅರಿವಿಗೆ ಬರುತ್ತವೆ. ಎಂದಾದರೂ ಒಮ್ಮೆ ನಿಮಗೆ ಹೊಟ್ಟೆಯ ಆಳದಿಂದ ಭಾವನೆಯೊಂದು ಮೂಡಿರಬಹುದು. ಯಾರದ್ದಾದರೂ ತಪ್ಪಿನ ಬಗ್ಗೆ ಯಾವ ಸಾಕ್ಷಿಗಳೂ ಇಲ್ಲದೆ ಖಚಿತ ಭಾವನೆ ಬಂದಿರಬಹುದು. ವಿವೇಕಕ್ಕೆ ಸಿಗದ ಅಶಾಂತ, ಅಹಿತದ ಭಾವನೆಗಳು ಕಾಡಬಹುದು. ಇಂಥವುಗಳನ್ನು ಗಟ್‌ ಫೀಲಿಂಗ್‌ ಎಂದು ಕರೆಯುತ್ತಾರೆ. ಇವು ನಿಮ್ಮ ಅಂತಃಪ್ರಜ್ಞೆಯಿಂದ ಉಂಟಾಗಿರುವ ಭಾವನೆಗಳಾಗಿರುವ ಸಾಧ್ಯತೆ ಹೆಚ್ಚು. ಕೆಲವೊಮ್ಮೆ ಇವು ಜೀವನದ ಹಲವು ಹಂತಗಳನ್ನು ನಿಭಾಯಿಸಿಕೊಂಡು ಹೋಗಲು ಪ್ರಮುಖ ಸಾಧನವಾಗಬಲ್ಲವು. ಕೆಲವು ಅಂಶಗಳು  ಇಂಟ್ಯೂಷನ್‌ ಹೊಂದಿರುವ ಗುರುತಾಗಿ ಗೋಚರಿಸಬಲ್ಲವು.

•    ಜನರ ಎನರ್ಜಿ (Energy) ಅರಿತುಕೊಳ್ಳುವ ಸೂಕ್ಷ್ಮತೆ (Sensitivity)
ಅಂತಃಪ್ರಜ್ಞೆ (Intuition) ಹೊಂದಿರುವ ವ್ಯಕ್ತಿಗಳು ಜನ (People), ಸ್ಥಳ (Place) ಹಾಗೂ ಸನ್ನಿವೇಶದ (Situation) ಎನರ್ಜಿ ಅರಿತುಕೊಳ್ಳುವ ಸೂಕ್ಷ್ಮತೆ ಹೊಂದಿರುತ್ತಾರೆ. ಯಾವುದಾದರೂ ಕೋಣೆ (Room) ಅಥವಾ ಪ್ರದೇಶವನ್ನು ಪ್ರವೇಶಿಸಿದಾಗ ಅಲ್ಲಿ ಒತ್ತಡದ (Stress) ಅಥವಾ ಧನಾತ್ಮಕ ವೈಬ್ರೇಷನ್‌ (Positive Vibration) ಇರುವುದು ನಿಮ್ಮ ಗಮನಕ್ಕೆ ಬರಬಹುದು. ಕೆಲವು ವ್ಯಕ್ತಿಗಳ ಜತೆ ಹೆಚ್ಚು ಸಮಯ ಕಳೆಯಲು ತೀರ ಇರಿಸುಮುರಿಸಾಗಬಹುದು. ಕೆಲವರ ಜತೆ ಆರಾಮಾಗಿ ಸಹಜವಾಗಿರಲು ಸಾಧ್ಯವಾಗಬಹುದು. ಇವೆಲ್ಲವೂ ನಿಮ್ಮಲ್ಲಿರುವ ಅಂತಃಪ್ರಜ್ಞೆಯನ್ನು ಸೂಚಿಸುತ್ತವೆ.

Tap to resize

Latest Videos

Personality Prediction: ಸಿ ಅಕ್ಷರದ ಹೆಸರುಳ್ಳವರು ಮೋಡಿಗಾರರು, ಭಾವುಕರು..

•    ಅಂತಃರ್ಬೋಧೆಯ (Instinct) ಮೇಲೆ ನಿಮ್ಮ ನಂಬಿಕೆ (Trust)
ನಿಮ್ಮ ಅಂತಃರ್ಬೋಧೆಯ ಮೇಲೆ ನಿಮಗೆ ನಂಬಿಕೆ ಇದ್ದರೆ ಅದು ನಿಮ್ಮಲ್ಲಿರುವ ಇಂಟ್ಯೂಷನ್‌ ನ ಉತ್ತಮ ಪ್ರತೀಕ. ಆಗ ನೀವು ನಿಮ್ಮ ಆಂತರಿಕ ಮಾರ್ಗದರ್ಶನದ (Guidance) ಮೇರೆಗೆ ಸಾಗುತ್ತೀರಿ. ಸಾಂಪ್ರದಾಯಿಕ ನಿಲುವು ಹಾಗೂ ತಾರ್ಕಿಕ (Logical) ಬುದ್ಧಿಗೆ ನಿಲುಕದಿದ್ದರೂ ಸರಿ, ನೀವು ನಿಮಗೆ ಒಳಗಿನಿಂದ ಏನು ಅನಿಸುತ್ತದೆಯೋ ಅದರಂತೆ ನಡೆಯಲು ಇಷ್ಟಪಡುತ್ತೀರಿ. ಯಾವುದು ತಪ್ಪು ಯಾವುದು ಸರಿ ಎನ್ನುವುದನ್ನು ದೃಢವಾಗಿ ಗ್ರಹಿಸುತ್ತೀರಿ.

•    ಕನಸುಗಳು (Dreams)
ಕೆಲವರಿಗೆ ಆಗಾಗ ವಿವಿಧ ಕನಸುಗಳು ಗೋಚರವಾಗುತ್ತವೆ. ಅವು ಕೆಲವು ಬಾರಿ ಮಾರ್ಗದರ್ಶನ ಮಾಡುವಂತಿರುತ್ತವೆ. ಮೌಲಿಕ ಪ್ರಜ್ಞೆಯನ್ನು ಮೂಡಿಸುತ್ತವೆ. ಕನಸುಗಳು ಕೆಲವೊಮ್ಮೆ ಸಂಕೇತಗಳಾಗಿರಬಹುದು, ಸಂದೇಶದಂತೆ (Message) ಇರಬಹುದು, ಜೀವನಕ್ಕೆ ಎಚ್ಚರಿಕೆ ನೀಡುತ್ತಿರಬಹುದು. ಕನಸುಗಳ ಬಗ್ಗೆ ಗಮನ ಹರಿಸಿದರೆ ಕೆಲ ಮಾರ್ಗಗಳು ಗೋಚರಿಸಬಹುದು. 

•    ಆಕಸ್ಮಿಕಗಳ ಅನುಭವ (Experience)
ನೀವು ಫೋನ್‌ ಮಾಡಬೇಕು ಎಂದುಕೊಂಡ ಸ್ನೇಹಿತರು ನಿಮಗೆ ಕಾಲ್‌ ಮಾಡಬಹುದು, ಯಾರನ್ನೋ ಭೇಟಿಯಾಗಬೇಕು ಎಂದುಕೊಂಡಿದ್ದವರು ಅಚಾನಕ್ಕಾಗಿ ಸಿಗಬಹುದು. ಕಚೇರಿಯಲ್ಲಿ ನೀವೇನು ಅಂದುಕೊಂಡಿದ್ದೀರೋ ನಿಮ್ಮ ಇಷ್ಟಕ್ಕೆ ಅನುಗುಣವಾಗಿ  ಸಂಭವಿಸಬಹುದು. 

ನಿದ್ರೆಯಲ್ಲಿ ಮಾತನಾಡೋದಕ್ಕೂ ಆಧ್ಯಾತ್ಮಿಕತೆಗೂ ಏನು ಸಂಬಂಧ?

•    ಮಾತಿನ ಹಿಂದಿರುವ ಭಾವನೆ (Feelings)
ಯಾರಾದರೂ ನಿಮ್ಮ ಬಳಿ ಏನಾದರೂ ಹೇಳಿದರೆ ಅದರ ಹಿಂದಿರುವ ಭಾವನೆಗಳನ್ನು ಅರಿತುಕೊಳ್ಳಲು ನಿಮ್ಮಿಂದ ಸಾಧ್ಯವೇ? ಈ ಗುಣ ಸಾಮಾಜಿಕವಾಗಿ ಒಡನಾಟ (Social Interaction) ಮಾಡಲು ಹೆಚ್ಚಿನ ಅನುಕೂಲ ಕಲ್ಪಿಸುತ್ತದೆ. ವ್ಯಕ್ತಿಗಳ ಭಾವನೆಯ ಅರಿವಾಗುವುದರಿಂದ ನಿಮ್ಮಿಂದ ಉತ್ತಮ ಮಾತುಕತೆ ಸಾಧ್ಯವಾಗುತ್ತದೆ. ಇನ್ನೊಬ್ಬರ ಒತ್ತಡ, ಸ್ಥಿತಿಯನ್ನೂ ಸಹ ಚೆನ್ನಾಗಿ ಅರಿತುಕೊಂಡು ವರ್ತಿಸುತ್ತೀರಿ.

•    ಆಳವಾದ ಕರುಣೆ (Deep Empathy)
ವ್ಯಕ್ತಿಯಲ್ಲಿರುವ ಆಳವಾದ ಕರುಣೆಗೂ ಅಂತಃಪ್ರಜ್ಞೆಗೂ ಸಂಬಂಧವಿದೆ. ನಿಮ್ಮಲ್ಲಿ ಅಂತರಾಳದಿಂದ ಕರುಣೆಯ ಭಾವ ಇರುತ್ತದೆ. ಈ ಕರುಣಾ ಭಾವನೆಯಿಂದಲೇ ಮತ್ತೊಬ್ಬರೊಂದಿಗೆ ಸಂಪರ್ಕ ಹೊಂದಲು, ಅಗತ್ಯ ಗೈಡೆನ್ಸ್‌, ಬೆಂಬಲ (Support) ನೀಡಲು ನಿಮ್ಮಿಂದ ಸಾಧ್ಯವಾಗುತ್ತದೆ.

click me!