Wedding Anniversary ಖುಷಿ ದುಪ್ಪಟ್ಟು ಆಗ್ಬೇಕಂದ್ರೆ ಪ್ಲಾನ್ ಹೀಗಿರಲಿ

By Suvarna News  |  First Published Apr 1, 2022, 1:12 PM IST

ಮದುವೆ (Marriage)ಯಾಗಿ ಒಂದು ವರ್ಷವಾಗಿರಲಿ, ಎರಡು ವರ್ಷವಾಗಿರಲಿ, ಇಲ್ಲ 30 ವರ್ಷವಾಗಲಿ. ಅನ್ಯೋನ್ಯ ದಂಪತಿ (Couple) ಮದುವೆ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಲು ಬಯಸ್ತಾರೆ. ಪ್ರತಿ ಬಾರಿ ಒಂದೇ ರೀತಿ ಪಾರ್ಟಿ (Party) ಮಾಡಿ ಬೋರ್ ಆಗಿದ್ರೆ ಪ್ಲಾನ್ ಚೇಂಜ್‌ ಮಾಡೋಕೆ ನಾವ್ ಐಡಿಯಾ ಕೊಡ್ತೀವಿ.


ಮದುವೆ (Marriage) ಸುಂದರ ಬಂಧವಾಗಿದೆ. ಇದು ಎರಡು ಹೃದಯಗಳನ್ನು ಮಾತ್ರವಲ್ಲ ಎರಡು ಕುಟುಂಬ (Family) ಗಳನ್ನು ಒಂದುಗೂಡಿಸುತ್ತದೆ. ಮದುವೆಯಾಗಿ ಎಷ್ಟೇ ವರ್ಷಗಳಾಗಿರಲಿ,ವರ್ಷ ಹೆಚ್ಚಾದಂತೆ ಸಂಬಂಧ (Relationship) ಮತ್ತಷ್ಟು ಗಟ್ಟಿಯಾಗುತ್ತದೆ. ಮದುವೆ ನೆನಪು ಸದಾ ಇರಲೆಂದು ಎಲ್ಲರೂ ಬಯಸ್ತಾರೆ. ಮದುವೆ ವಾರ್ಷಿಕೋತ್ಸವ (Anniversary) ವನ್ನು ಪ್ರತಿವರ್ಷ ನೆನಪಿಟ್ಟು ಆಚರಿಸಿಕೊಳ್ತಾರೆ.

ಅನೇಕ ಬಾರಿ ಪತಿ ಅಥವಾ ಪತ್ನಿ ಮದುವೆ ದಿನವನ್ನು ಮರೆತರೆ ದಂಪತಿ ಮಧ್ಯೆ ಗಲಾಟೆ ನಡೆಯುತ್ತದೆ. ಮದುವೆ ದಿನವನ್ನು ನೆನಪಿಟ್ಟುಕೊಂಡು ಸಂಗಾತಿಗೆ ಸರ್ಪ್ರೈಸ್ ಕೊಟ್ಟರೆ ಅದು ಅವರ ಖುಷಿಯನ್ನು ದುಪ್ಪಟ್ಟು ಮಾಡುತ್ತದೆ. ಉಳಿದ ದಿನಗಳಲ್ಲಿ ಎಲ್ಲರೂ ಬ್ಯುಸಿಯಾಗಿರ್ತಾರೆ. ಆದ್ರೆ ಮದುವೆ ವಾರ್ಷಿಕೋತ್ಸವದ ದಿನದಂದು ಕೆಲಸಕ್ಕೆ ರಜೆ ಪಡೆದು ಸಂಗಾತಿ ಜೊತೆ ಸಮಯ ಕಳೆಯುವುದು ಅತ್ಯಗತ್ಯ.

Tap to resize

Latest Videos

Relationship Tips: ಸಂಗಾತಿಯ ಬೆನ್ನು ಬೀಳ್ಬೇಡಿ

ಮದುವೆ ವಾರ್ಷಿಕೋತ್ಸವ ಒಂದು ವಾರವಿರುವಾಗ್ಲೇ ಅನೇಕರು ತಯಾರಿ ನಡೆಸ್ತಾರೆ. ಮದುವೆ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಬಯಸಿದ್ದರೆ ಕೆಲವೊಂದು ವಿಷ್ಯವನ್ನು ಗಮನದಲ್ಲಿಟ್ಟುಕೊಳ್ಳಿ. ಸಂಬಂಧಿಕರು, ಸ್ನೇಹಿತರು ಮತ್ತು ಕುಟುಂಬಸ್ಥರ ಜೊತೆ ಸೇರಿ ನೀವು ವಾರ್ಷಿಕೋತ್ಸವದ ಸಂಭ್ರಮವನ್ನು ಹೆಚ್ಚಿಸಬಹುದು. ಎಲ್ಲದಕ್ಕೂ ನಿಮ್ಮ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು. 

ಮದುವೆ ವಾರ್ಷಿಕೋತ್ಸವ ಕಾರ್ಯಕ್ರಮದ ಪ್ಲಾನ್ ಹೀಗಿರಲಿ : 
* ಮದುವೆಯಾದ ಮೊದಲ ವಾರ್ಷಿಕೋತ್ಸವ ಹೆಚ್ಚು ವಿಶೇಷವಾಗಿರುತ್ತದೆ. ಮೊದಲ ವಾರ್ಷಿಕೋತ್ಸವವಾಗಿರಲಿ ಇಲ್ಲ 10ನೇ ವಾರ್ಷಿಕೋತ್ಸವವಾಗಿರಲಿ ನೀವು ಅದನ್ನು ಪ್ರತಿ ಬಾರಿ ವಿಶೇಷವಾಗಿ ಆಚರಿಸಬೇಕು. ನೀವು ಮದುವೆ ವಾರ್ಷಿಕೋತ್ಸವದಂದು ಡೆಸ್ಟಿನೇಷನ್ ಪ್ಲಾನ್ ಮಾಡಬಹುದು. ನಿಮ್ಮ ಮದುವೆ ವಾರ್ಷಿಕೋತ್ಸವ ಬೇಸಿಗೆಯಲ್ಲಾದ್ರೆ ಗಿರಿಧಾಮಕ್ಕೆ ಹೋಗುವ ಪ್ಲಾನ್ ಮಾಡ್ಬಹುದು. ಬೀಚ್ ಇಷ್ಟಪಡ್ತಿದ್ದರೆ ಸಮುದ್ರ ತೀರಕ್ಕೆ ಹೋಗಿ ಎಂಜಾಯ್ ಮಾಡ್ಬಹುದು. ನಿಮಗಿಷ್ಟವಾದ ಇನ್ನೂ ಹೋಗದ ಪ್ರವಾಸಿ ಸ್ಥಳಕ್ಕೆ ಕೂಡ ನೀವು ಹೋಗ್ಬಹುದು. 

* ಮದುವೆಗೆ ಆಮಂತ್ರಣ ಪತ್ರವನ್ನು ಹೇಗೆ ತಯಾರಿಸಲಾಗುತ್ತದೆಯೋ, ಅದೇ ರೀತಿಯಲ್ಲಿ, ನೀವು ವಾರ್ಷಿಕೋತ್ಸವದ ಪಾರ್ಟಿಗೆ ಸಹ ಕಾರ್ಡ್ ಮಾಡಬಹುದು. ನಿಮ್ಮ ಸಂಗಾತಿ ಜೊತೆ ಈ ಕಾರ್ಡ್ ಅನ್ನು ನೀವೇ ವಿನ್ಯಾಸಗೊಳಿಸಬಹುದು. ಈ ದಿನಗಳಲ್ಲಿ ಕಾರ್ಡ್‌ಗಳನ್ನು ಆನ್‌ಲೈನ್‌ನಲ್ಲಿಯೂ ವಿನ್ಯಾಸಗೊಳಿಸಬಹುದು. ಇದರಲ್ಲಿ ನೀವು ನಿಮ್ಮ ಮದುವೆ ಅಥವಾ ನಿಮ್ಮ ಜೋಡಿಯ ಫೋಟೋವನ್ನು ಹಾಕಬಹುದು. ಕಾರ್ಡ್ ಗಳನ್ನು ಡಿಜಿಟಲ್ ರೂಪದಲ್ಲಿ ಕಳುಹಿಸಿ ಸಂಬಂಧಿಕರು, ಸ್ನೇಹಿತರನ್ನು ಆಹ್ವಾನಿಸಬಹುದು.

ಹೆಂಡ್ತಿಗೆ ಮೂವರು ಬಾಯ್‌ಫ್ರೆಂಡ್ಸ್ ಇದ್ರಂತೆ, ಏನೆಲ್ಲಾ ಮಾಡ್ತಿದ್ರೋ ! ವಿಷ್ಯ ಗೊತ್ತಾದ್‌ ಮೇಲೆ ಗಂಡನಿಗೆ ನಿದ್ದೇನೆ ಇಲ್ಲ

* ಪಾರ್ಟಿಗಾಗಿ ನೀವು ಯಾವುದಾದ್ರೂ ಥೀಮ್  ಸಹ ಇರಿಸಬಹುದು. ಯಾವ ಬಣ್ಣದ ಬಟ್ಟೆಗಳನ್ನು ಧರಿಸಬೇಕು ಅಥವಾ ಹೀಗೆ ಅಲಂಕಾರ ಮಾಡ್ಬೇಕು ಎಂಬುದನ್ನು ನೀವು ಹೇಳಬಹುದು. ರೆಟ್ರೊ, ಫಿಲ್ಮಿ ಅಥವಾ ಇತರ ಅನೇಕ ಮೋಜಿನ ಥೀಮ್‌ಗಳನ್ನು ನೀವು ಪ್ರಯತ್ನಿಸಬಹುದು. ಇದು ನಿಮ್ಮ ವಾರ್ಷಿಕೋತ್ಸವ ಸಮಾರಂಭಕ್ಕೆ ಮತ್ತಷ್ಟು ಮೆರಗು ನೀಡುತ್ತದೆ.

* ನೀವು ಪಾರ್ಟಿ ಥೀಮ್ ಇಟ್ಟುಕೊಂಡಿದ್ದರೆ, ಅದರ ಪ್ರಕಾರ ನೀವು ಹಾಡುಗಳ ಪ್ಲೇಪಟ್ಟಿಯನ್ನು ಮಾಡಬಹುದು ಅಥವಾ ಪಾರ್ಟಿಯಲ್ಲಿ ಪ್ಲೇ ಮಾಡಲು ನಿಮ್ಮ ಸಂಗಾತಿಯ ಆಯ್ಕೆಯ ಹಾಡುಗಳನ್ನು ಸಹ ನೀವು ಆಯ್ಕೆ ಮಾಡಬಹುದು.

* ನಿಮ್ಮ ಆದ್ಯತೆಗಳು ಮತ್ತು ಜನರ ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಆಹಾರ ಮೆನುವನ್ನು ತಯಾರಿಸಬೇಕು. ಪಾರ್ಟಿಯಲ್ಲಿ ಅತಿಥಿಗಳಿಗಾಗಿ ಎಲ್ಲಾ ರೀತಿಯ ವಸ್ತುಗಳನ್ನು ಇರಿಸಿ. ಅತಿಥಿಗಳಿಗೆ ಯಾವುದೂ ಕೊರತೆಯಾಗದಂತೆ ನೋಡಿಕೊಳ್ಳಿ. 

* ಮದುವೆಯಂತೆಯೇ  ವಾರ್ಷಿಕೋತ್ಸವಕ್ಕೂ ಉತ್ತಮ ಫೋಟೋಗಳನ್ನು ಕ್ಲಿಕ್ಕಿಸಲು ಒಳ್ಳೆ ಫೋಟೋಗ್ರಾಫರ್ ಆಯ್ಕೆ ಮಾಡಿ. ಒಂದು ವೇಳೆ ಇದು ಸಾಧ್ಯವಿಲ್ಲವೆಂದಾದ್ರೆ ಸ್ನೇಹಿತರ ಬಳಿ ಫೋಟೋ ಕ್ಲಿಕ್ಕಿಸಲು ಹೇಳಿ. ನಿಮ್ಮ ಮತ್ತು ನಿಮ್ಮ ಪಾಲುದಾರರ ಅನನ್ಯ ಫೋಟೋಗಳೊಂದಿಗೆ ನೀವು ಸ್ಲೈಡ್‌ಶೋ ಅಥವಾ ವೀಡಿಯೊವನ್ನು ರಚಿಸಬಹುದು. ಈ ವಿಡಿಯೋ ಮತ್ತು ಫೋಟೋಗಳನ್ನು ಆಗಾಗ ನೋಡ್ತಿದ್ದರೆ ಖುಷಿ ಸಿಗುತ್ತದೆ. ಆ ನೆನಪುಗಳು ಸದಾ ಹಸಿರಾಗಿರುತ್ತವೆ. ಪಾರ್ಟಿಗೆ ಬಂದ ಅತಿಥಿಗಳನ್ನು ಖುಷಿಯಾಗಿಡಲು ಮೋಜಿನ ಆಟ ಅಥವಾ ಜೋಡಿಗಳ ಆಟವನ್ನು ಆಯೋಜಿಸಬಹುದು.

click me!