Relationship : ನಾನು ವಿರಾಟ್ ಕೊಹ್ಲಿ ಮಾತ್ರ ಮದುವೆ ಆಗೋದು… ಯುವತಿ ಈ ಮನಸ್ಥಿತಿಗೆ ಏನಂತೀರಿ?

By Roopa Hegde  |  First Published Jul 1, 2024, 4:13 PM IST

ಪ್ರತಿಯೊಬ್ಬರೂ ಸೆಲೆಬ್ರಿಟಿಯಲ್ಲಿ ಒಬ್ಬರನ್ನು ಡ್ರೀಮ್ ಗರ್ಲ್, ಡ್ರೀಮ್ ಬಾಯ್ ಅಂತ ನಂಬಿರ್ತಾರೆ. ಅವರ ಆದರ್ಶ ಪಾಲಿಸೋದು ಸರಿಯಾದ್ರೂ ಅವರ ಹಿಂದೆ ಓಡೋದು ಹುಚ್ಚುತನ. ವಾಸ್ತವ ಅರಿಯದೆ ಕಲ್ಪನಾ ಲೋಕದಲ್ಲಿರುವ ಸಂಬಂಧವನ್ನು ಏನನ್ನುತ್ತಾರೆ ಗೊತ್ತಾ?


ವಿರಾಟ್ ಕೊಹ್ಲಿ ನನ್ನ ಕನಸಿನ ರಾಜಕುಮಾರ. ಮದುವೆ ಆದ್ರೆ ಅವರನ್ನು ಮಾತ್ರ ಅಂತಾ ನಿಮ್ಮ ಸ್ನೇಹಿತೆಯರ್ಯಾರೋ ಹೇಳೋದನ್ನು ಕೇಳಿದ್ರೆ ವಿಚಿತ್ರ ಅನ್ನಿಸುತ್ತೆ. ಬರೀ ಕೊಹ್ಲಿ ಅಲ್ಲ, ಡ್ರೀಮ್ ಗರ್ಲ್ ಹೇಮಾಮಾಲಿನಿಯಿಂದ ಹಿಡಿದು ಧಾರಾವಾಹಿಯಲ್ಲಿ ಬರುವ ಕಲಾವಿಧರವರೆಗೆ ಪ್ರತಿಯೊಬ್ಬ ಸೆಲೆಬ್ರಿಟಿಗೂ ಅಭಿಮಾನಿಗಳಿದ್ದಾರೆ. ಈ ಅಭಿಮಾನ ಸ್ವಲ್ಪ ಹೆಚ್ಚಾದಾಗ ಅವರು ಭಾವನಾ ಲೋಕದಲ್ಲಿ ತೇಲಲು ಶುರು ಮಾಡ್ತಾರೆ. ಸೆಲೆಬ್ರಿಟಿಗಳನ್ನೇ ತನ್ನ ಸಂಗಾತಿ, ಸ್ನೇಹಿತ ಅಥವಾ ಸಹೋದರ ಎಂದು ಭಾವಿಸಲು ಶುರು ಆಡ್ತಾರೆ. ನೋಡೋರಿಗೆ ಇದು ವಿಚಿತ್ರವಾಗಿ ಕಾಣೋದು ಸುಳ್ಳಲ್ಲ. ಇದನ್ನು ವೈದ್ಯರು ಪ್ಯಾರಾಸೋಶಿಯಲ್ ಸಂಬಂಧ ಎಂದು ಕರೆಯುತ್ತಾರೆ.

ಪ್ಯಾರಾಸೋಶಿಯಲ್ (Parasocial) ಸಂಬಂಧ ಎಂದರೇನು? : ದೊಡ್ಡ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ವ್ಯಕ್ತಿಗಳ ಜೊತೆ ನೀವು ಕಾಲ್ಪನಿಕ ಸಂಬಂಧವನ್ನು  ಬೆಳೆಸಿಕೊಂಡಾಗ ಅದನ್ನು ಪ್ಯಾರಾಸೋಶಿಯಲ್ ಸಂಬಂಧ (Relationship) ಎನ್ನಲಾಗುತ್ತದೆ. ನೀವು ಸೆಲೆಬ್ರಿಟಿಯನ್ನು ಪ್ರೇಮಿ ಅಥವಾ ಸ್ನೇಹಿತ ಎಂದು ಭಾವಿಸಿರುತ್ತೀರಿ. ಆದ್ರೆ ಆ ಸೆಲೆಬ್ರಿಟಿ (Celebrity) ಗೆ ನಿಮ್ಮ ಪರಿಚಯವೇ ಇರೋದಿಲ್ಲ. ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಮದುವೆ ಸಮಯದಲ್ಲಿ ಮಹಿಳೆಯೊಬ್ಬಳು, ತಾನು ಅಭಿಷೇಕ್ ಬಚ್ಚನ್ ಮದುವೆ ಆಗಿದ್ದಾಗಿ ಹೇಳಿಕೊಂಡಿದ್ದಳು. ಇದು ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಸಲ್ಮಾನ್ ಮದುವೆ ಆಗ್ತೇನೆಂದು ಅವರ ಮನೆಗೆ ಹುಡುಗಿಯೊಬ್ಬಳು ನುಗ್ಗಿದ ಪ್ರಕರಣ ಬೆಳಕಿಗೆ ಬಂದಿತ್ತು. ಕಾರ್ತಿಕ್ ಆರ್ಯನ್ ಅವರನ್ನು ಮದುವೆ ಆಗೋದಾಗಿ ಕಾರ್ಯಕ್ರಮವೊಂದರಲ್ಲಿ ಹುಡುಗಿ ಹೇಳಿದ್ದಳು.. ಇಂಥವರನ್ನು ನೀವು ತುಂಬಾ ನೋಡಿರ್ತೀರಿ. ಈ ಸಂಬಂಧವನ್ನೇ ಪ್ಯಾರಾ ಸೋಶಿಯಲ್ ಸಂಬಂಧ ಎಂದು ಕರೆಯಲಾಗುತ್ತದೆ. 

Latest Videos

ಮದ್ವೆಯಾಗಿ ವರ್ಷವಾದ್ರೂ ಫಸ್ಟ್‌ನೈಟ್‌ಗೆ ಒಪ್ಪದ ಪತಿರಾಯ; ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ 

ಯುವಕ – ಯುವಕರಲ್ಲಿ ಇದು ಹೆಚ್ಚು : ಯುವಕರ- ಯುವತಿಯರ ರೂಮ್ ನಲ್ಲಿ ಇಂಥ ಒಂದು ಸೆಲೆಬ್ರಿಟಿ ಫೋಟೋವನ್ನು ನೀವು ನೋಡಿರ್ತೀರಿ. ಚಿಕ್ಕವರಿರುವಾಗ್ಲೇ ಸೆಲೆಬ್ರಿಟಿಗಳನ್ನು ಅವರು ಮೆಚ್ಚಿಕೊಂಡಿರ್ತಾರೆ. ದೊಡ್ಡವರಾಗ್ತಿದ್ದಂತೆ ಅದು ಪ್ರೀತಿಯಾಗಿ ಬದಲಾಗುತ್ತೆ ಎನ್ನುತ್ತಾರೆ ತಜ್ಞರು. ಕೆಲವರು ಸೆಲೆಬ್ರಿಟಿಗಳನ್ನು ಅತಿಯಾಗಿ ಹಚ್ಚಿಕೊಂಡಿರ್ತಾರೆ. ಇಡೀ ದಿನ ಅವರು ಪಕ್ಕದಲ್ಲಿರುವಂತೆ ಕಲ್ಪಿಸಿಕೊಂಡು ಜೀವನ ಮಾಡುವವರಿದ್ದಾರೆ. 16 – 18 ವರಯಸ್ಸಿನವರಲ್ಲಿ ಪ್ಯಾರಾಸೋಶಿಯಲ್ ಹೆಚ್ಚು ಪ್ರಭಾವ ಬೀರುತ್ತದೆ. 20 -30 ವರ್ಷ ವಯಸ್ಸಿನವರು ಕೂಡ ಈ ಸಂಬಂಧದಲ್ಲಿ ಬೀಳೋದಿದೆ.

ಇದು ಮಾನಸಿಕ ಅಸ್ವಸ್ಥತೆಯಾ? : ನಿಮ್ಮ ಬಗ್ಗೆ ಪರಿಚಯವೇ ಇಲ್ಲದ ವ್ಯಕ್ತಿಯನ್ನು ನೀವು ಪ್ರೀತಿ ಮಾಡೋದು ಹುಚ್ಚುತನವೇ ಎಂಬ ಪ್ರಶ್ನೆ ಕಾಡೋದು ಸಾಮಾನ್ಯ. ನಿಮ್ಮಲ್ಲಿ ಒಳ್ಳೆಯ ಭಾವನೆ ಇದ್ರೆ ಅದನ್ನು ಪ್ಯಾರಾಸೋಶಿಯಲ್ ಸಂಬಂಧ ಎಂದು ಕರೆಸಿಕೊಳ್ಳುತ್ತದೆ. ಅಂದ್ರೆ ಸೆಲೆಬ್ರಿಟಿ ನೋಡಿ ಸ್ಪೂರ್ತಿ ಪಡೆದರೆ, ಅವರಂತೆ ಮಹಾನ್ ವ್ಯಕ್ತಿಯಾಗಲು ನೀವು ಪ್ರಯತ್ನಿಸಿದ್ರೆ ಅದು ತಪ್ಪಲ್ಲ. ಆದ್ರೆ ನೀವು ಆ ವ್ಯಕ್ತಿಯನ್ನು ಪಡೆಯಲು ಬಯಸಿದಾಗ ಅದು ಮಾನಸಿಕ ಸಮಸ್ಯೆಯಾಗುತ್ತದೆ.

ಇದನ್ನು ಮೂರು ರೀತಿಯಲ್ಲಿ ವಿಂಗಡಿಸಬಹುದು. ಮನರಂಜನೆ ವಿಷ್ಯದಲ್ಲಿ ಮಾತ್ರ ಸೆಲೆಬ್ರಿಟಿಯನ್ನು ಇಷ್ಟಪಡೋದು ಒಂದು ವಿಧವಾದ್ರೆ, ಎರಡನೇಯದು, ಸೆಲೆಬ್ರಿಟಿ ಬಗ್ಗೆ ಹೆಚ್ಚು ವೈಯಕ್ತಿಕವಾಗಿ ಆಲೋಚನೆ ಮಾಡೋದಾಗಿದೆ. ಮೂರನೇಯದರಲ್ಲಿ ವ್ಯಕ್ತಿ ತನ್ನ ಮೇಲೆ ನಿಯಂತ್ರಣ ಹೊಂದಿರೋದಿಲ್ಲ. ತನ್ನಿಷ್ಟದ ವ್ಯಕ್ತಿಯನ್ನು ಪಡೆಯಲು ಆತ ಏನು ಮಾಡಲೂ ಸಿದ್ಧವಿರುತ್ತಾನೆ. ಇಂಥ ವ್ಯಕ್ತಿಗೆ ಚಿಕಿತ್ಸೆಯ ಅಗತ್ಯವಿರುತ್ತದೆ. 

ಸೀತಾಗೆ ಮಗುವಿದ್ರೂ ರಾಮನ ಜೊತೆ ಮದುವೆಗೆ ಜನರ ಫುಲ್ ಸಪೋರ್ಟ್, ಬದಲಾಗಿದೆ ಟ್ರೆಂಡ್!

ಸಂಗಾತಿಯಾದ ಅಭಿಮಾನಿಗಳು : ಸಾಮಾನ್ಯ ವ್ಯಕ್ತಿಗಳು ಸೆಲೆಬ್ರಿಟಿಗಳ ಸಂಗಾತಿಯಾಗ್ಬಾರದು ಎಂದೇನಿಲ್ಲ. ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ, ಮೊದಲು ಶಿಲ್ಪಾ ಶೆಟ್ಟಿ ಅಭಿಮಾನಿಯಾಗಿದ್ದರು. ನಟಿ ಅಮೃತಾ ರಾವ್ ಹಾಗೂ ಅವರ ಪತಿ ಆರ್‌ಜೆ ಅನ್ಮೋಲ್ ಪ್ರೇಮ ಕತೆಯೂ ಹೀಗೆ ಇದೆ. 

click me!