ಸುಂದರ ಯುವತಿಯೊಬ್ಬಳು ಮದುವೆಗೆ ಹೆಣ್ಣು ಹುಡುಕುತ್ತಿದ್ದ ಅಮಾಯಕ ಯುವಕರನ್ನೇ ಟಾರ್ಗೆಟ್ ಮಾಡಿ ಅವರನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿ ಅವರಲ್ಲಿ ನಾಲ್ವರನ್ನು ಮದುವೆಯಾಗಿ 13 ಜನರಿಗೆ ಕೈಕೊಟ್ಟ ವಿಚಿತ್ರ ಘಟನೆಯೊಂದು ಹೈದರಾಬಾದ್‌ನಲ್ಲಿ ನಡೆದಿದ್ದು, ಈ ಘಟನೆಯಲ್ಲಿ ಮೋಸ ಹೋದ ಯುವಕನೋರ್ವ ಈಗ ಪೊಲೀಸ್ ಠಾಣೆ ಕದ ತಟ್ಟಿದ್ದಾನೆ.
ಸುಂದರ ಯುವತಿಯೊಬ್ಬಳು ಮದುವೆಗೆ ಹೆಣ್ಣು ಹುಡುಕುತ್ತಿದ್ದ ಅಮಾಯಕ ಯುವಕರನ್ನೇ ಟಾರ್ಗೆಟ್ ಮಾಡಿ ಅವರನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿ ಅವರಲ್ಲಿ ನಾಲ್ವರನ್ನು ಮದುವೆಯಾಗಿ 13 ಜನರಿಗೆ ಕೈಕೊಟ್ಟ ವಿಚಿತ್ರ ಘಟನೆಯೊಂದು ಹೈದರಾಬಾದ್‌ನಲ್ಲಿ ನಡೆದಿದ್ದು, ಈ ಘಟನೆಯಲ್ಲಿ ಮೋಸ ಹೋದ ಯುವಕನೋರ್ವ ಈಗ ಪೊಲೀಸ್ ಠಾಣೆ ಕದ ತಟ್ಟಿದ್ದಾನೆ. ತೆಳ್ಳನೆ ಬೆಳ್ಳನೆ ಸುಂದರವಾಗಿದ್ದ ಯುವತಿಯೊಬ್ಬಳು ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ವಿವಾಹ ನೋಂದಣಿ ಮಾಡಿಕೊಂಡು ಅಲ್ಲಿ ವಧುಗಳಿಗೆ ಖಾತೆ ತೆರೆದಿದ್ದ ಶ್ರೀಮಂತ ಹುಡುಗರನ್ನೇ ಟಾರ್ಗೆಟ್ ಮಾಡಿ ಬಲೆಗೆ ಕೆಡವುತ್ತಿದ್ದಳು, ಮದುವೆಯಾಗುವ ಭರವಸೆ ನೀಡಿ ಅವರಿಂದ ಬೇಕಾದನ್ನೆಲ್ಲಾ ವಸೂಲಿ ಮಾಡಿ ಬಳಿಕ ಪರಾರಿಯಾಗುತ್ತಿದ್ದಳು.
ಈಕೆಯ ಮೋಸದ ಜಾಲಕ್ಕೆ ಇತ್ತೀಚೆಗೆ ತೆಂಗಾಣದ ಪೆದ್ದಪಲ್ಲಿಯ ಜಿಲ್ಲೆಯ ಎನ್‌ಸಿಟಿಪಿಅಸಿ ಕಾಲೋನಿಯ ಸುದ್ದಲ ರೇವಂತ್ ಎಂಬ ಹುಡುಗ ಬಿದ್ದಿದ್ದು, ಕೆಲವೇ ದಿನಗಳಲ್ಲಿ ಹುಡುಗಿಯ ಸುಂದರ ಫೋಟೋ ನೋಡಿ ಬೆರಗಾದ ಆತ ಆಕೆಗೆ ವಿವಾಹ ನಿವೇದನೆ ಮಾಡಿದ್ದಾನೆ.. ಹುಡುಗ ಆರ್ಯವೈಶ್ಯ ಸಮುದಾಯದವನಾಗಿದ್ದು, ಈ ಸಮುದಾಯದಲ್ಲಿ ಹೆಣ್ಣು ಮಕ್ಕಳ ಕೊರತೆ ತೀವ್ರವಾಗಿದೆ. ಹೀಗಾಗಿ ಹುಡುಗರು ಜಾತಿ ನೋಡದೇ ಒಂದು ಹೆಣ್ಣು ಸಿಕ್ಕರೆ ಸಾಕು ಎಂದು ಬೇರೆ ಸಮುದಾಯದ ಹುಡುಗಿಯನ್ನು ಕೂಡ ಮದುವೆ ಆಗುತ್ತಾರೆ. ಅದರಂತೆ ರೇವಂತ್ ಮೋಸಗಾತಿಗೆ ವಿವಾಹವಾಗುವ ಪ್ರಪೋಸಲ್ ಇಟ್ಟಿದ್ದಾನೆ. ಇದ್ದನ್ನೇ ಕಾಯುತ್ತಿದ್ದ ಮಹಿಳೆ ಆತನೊಂದಿಗೆ ಮದುವೆಗೆ ರೆಡಿ ಆಗಿದ್ದು, ಮದುವೆಗೂ ಮೊದಲೇ ಆತನಿಂದ 2 ಲಕ್ಷದ 90 ಸಾವಿರ ಹಣವನ್ನು ಪಡೆದಿದ್ದಾಳೆ. ನಂತರ ಕಳೆದ ಡಿಸೆಂಬರ್‌ನಲ್ಲಿ ಆತನನ್ನು ಮಹಿಳೆ ಮದುವೆಯಾಗಿದ್ದಾಳೆ.
ಹುಡುಗರೇ ಗೆಳತಿ ಭೇಟಿಗೆ ತೆರಳುವ ಮುನ್ನ ಸಾವಿರ ಬಾರಿ ಯೋಚಿಸಿ: ಇಲ್ಲೇನಾಯ್ತು ನೋಡಿ
ಮದುವೆಯಾಗಿ ಕೆಲ ದಿನಗಳ ನಂತರ ಯುವತಿ ತವರಿಗೆ ಹೋಗಿ ಬರುವುದಾಗಿ ಹೇಳಿ ಪರಾರಿಯಾಗಿದ್ದು, ಬಳಿಕ ಆಕೆಯ ಫೋನ್ ಸ್ವಿಚ್ ಆಫ್ ಆಗಿದೆ. ಹೀಗೆ ಹೋಗುವ ವೇಳೆ ಆಕೆ ಮದುವೆಗೆ ವರನ ಕಡೆಯವರು ಹಾಕಿದ್ದ 4 ತೊಲ ಬಂಗಾರ ಹಾಗೂ 70 ಸಾವಿರ ರೂಪಾಯಿ ನಗದನ್ನು ತೆಗೆದುಕೊಂಡು ಹೋಗಿದ್ದಾಳೆ. ನಂತರ ಆಕೆಯ ಫೋನ್ ಸ್ವಿಚ್ ಆಫ್ ಆಗಿದೆ. ನಂತರ ಆಕೆಯ ಬಗ್ಗೆ ವಿಚಾರಿಸಿದಾಗ ಆಕೆ ಈಗಾಗಲೇ ಮೂವರನ್ನು ಮದುವೆಯಾಗಿದ್ದೂ 13ಕ್ಕೂ ಹೆಚ್ಚು ಜನರಿಗೆ ವಂಚನೆ ಮಾಡಿದ್ದಾಳೆ ಎಂಬುದು ತಿಳಿದು ಬಂದಿದೆ.
ಕೂಡಲೇ ರೇವಂತ್ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾನೆ.
ಆದರೆ ಇಷ್ಟಕ್ಕೆ ಪ್ರಕರಣ ಅಂತ್ಯ ಕಂಡಿಲ್ಲ, ತನ್ನ ಮೋಸ ರೇವಂತ್‌ಗೆ ತಿಳಿದಿದೆ ಎಂಬುದು ಗೊತ್ತಾದ ನಂತರ ಆಕೆ ರೇವಂತ್‌ನನ್ನು ಹೈದಾರಾಬಾದ್‌ಗೆ ಕರೆಸಿಕೊಂಡು ಆತನಿಗೆ ಚೆನ್ನಾಗಿ ಥಳಿಸಿ ಅದರ ವೀಡಿಯೋ ಮಾಡಿದ್ದು, ಬಳಿಕ ವೀಡಿಯೋ ಕಳುಹಿಸಿ ಮತ್ತೆ 20 ಲಕ್ಷ ಹಣ ನೀಡುವಂತೆ ಬೇಡಿಕೆ ಇರಿಸಿದ್ದಾಳೆ. ಹಣ ನೀಡದಿದ್ದಾರೆ ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಮಾನ ಕಳೆಯುವುದಾಗಿ ಬೆದರಿಸಿದ ಆಕೆ, ರೇವಂತ್ ಪೋಷಕರಿಗೆ ಕರೆ ಮಾಡಿದ ಹಣ ನೀಡದಿದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾಳೆ. ಈಕೆಯ ಉಪಟಳ ತೀವ್ರವಾದಾಗ ರೇವಂತ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಈ ಕಿಲಾಡಿ ವಧುವಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
Romance Scam : ಪ್ರೀತಿ ಹೆಸರಿನಲ್ಲಿ ಲಕ್ಷಾಂತರ ಲೂಟಿ! ಎಚ್ಚರ ತಪ್ಪಿದ್ರೆ ಕಥೆ ಮುಗಿದಂತೆ