ಲುಫ್ತಾನ್ಸಾ ವಿಮಾನದಲ್ಲಿ ಅಚ್ಚರಿ ಘಟನೆ ನಡೆದಿದೆ. ದಂಪತಿ ಫೈಟಿಂಗ್ ಗೆ ಪೈಲಟ್ ದಂಗಾಗಿದ್ದಾರೆ. ಇಬ್ಬರ ಮಧ್ಯೆ ಸಂಧಾನ ಸಾಧ್ಯವಾಗಲಿಲ್ಲ. ಸಹವಾಸ ಬೇಡ ಅಂತ ದೆಹಲಿಯಲ್ಲಿ ದಂಪತಿಯನ್ನು ಇಳಿಸಲಾಗಿದೆ.
ಮನೆಯಲ್ಲಿ ದಂಪತಿ ಜಗಳ ಆಡೋದು ಸಾಮಾನ್ಯ. ಸಣ್ಣಪುಟ್ಟ ವಿಷ್ಯಕ್ಕೂ ಮನೆಯಲ್ಲಿ ಕೆಲ ದಂಪತಿ ಕಚ್ಚಾಟುತ್ತಿರುತ್ತಾರೆ. ಅವರ ಕಿರುಚಾಟ ಮನೆಯಿಂದ ಹೊರಗೆ ಕೇಳ್ತಿರುತ್ತದೆ. ಅದು ಕೆಲ ಅಕ್ಕಪಕ್ಕದವರಿಗೆ ಮನರಂಜನೆಯಾದ್ರೆ ಮತ್ತೆ ಕೆಲವರಿಗೆ ಕಿರಿಕಿರಿಯುಂಟು ಮಾಡುತ್ತದೆ. ನಾಲ್ಕು ಗೋಡೆ ಮಧ್ಯೆ ನಡೆಯುವ ಗಲಾಟೆ ಹೊರಗೆ ಬರಬಾರದು ಎಂದು ದೊಡ್ಡವರು ಹೇಳ್ತಾರೆ. ಆದ್ರೆ ಎಲ್ಲ ಸಮಯದಲ್ಲೂ ಅದನ್ನು ಪಾಲಿಸೋದು ಕಷ್ಟ. ಸಾರ್ವಜನಿಕ ಪ್ರದೇಶದಲ್ಲಿ ಸಣ್ಣದಾಗಿ ಶುರುವಾಗುವ ದಂಪತಿ ಜಗಳ ಕ್ಷಣ ಕ್ಷಣಕ್ಕೂ ದೊಡ್ಡದಾಗುತ್ತದೆ. ರಸ್ತೆ ಮಧ್ಯೆ ದಂಪತಿ ಕಚ್ಚಾಡಿಕೊಳ್ಳೋದನ್ನು, ಬಡಿದಾಡಿಕೊಳ್ಳೋದನ್ನು ನೀವು ನೋಡಿರಬಹುದು. ಈಗ ದಂಪತಿ ವಿಮಾನ ನಿಲ್ದಾಣದಲ್ಲಿ ಜಗಳ ಮಾಡಿಕೊಂಡಿದ್ದಾರೆ. ಅವರ ಜಗಳ ಸಾಮಾನ್ಯವಾಗಿರಲಿಲ್ಲ. ಅವರಿಬ್ಬರ ಗಲಾಟೆ ಎಷ್ಟು ಗಂಭೀರವಾಗಿತ್ತೆಂದ್ರೆ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡ್ಬೇಕಾಯ್ತು. ಆ ಘಟನೆಯ ಸಂಪೂರ್ಣ ವಿವರ ಇಲ್ಲಿದೆ.
ವಿಮಾನ (Plane) ತುರ್ತು ಭೂಸ್ಪರ್ಶ : ಘಟನೆ ನಡೆದಿರೋದು ಮ್ಯೂನಿಚ್‌ನಿಂದ ಬ್ಯಾಂಕಾಕ್‌ಗೆ ತೆರಳುತ್ತಿದ್ದ ಲುಫ್ತಾನ್ಸಾ (Lufthansa) ವಿಮಾನದಲ್ಲಿ. ಲುಫ್ತಾನ್ಸಾ ವಿಮಾನ ಬುಧವಾರ ದೆಹಲಿಯಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದೆ. ವಿಮಾನ ಲ್ಯಾಂಡಿಂಗ್ ಹಿಂದಿನ ಕಾರಣ ದಂಪತಿ ನಡುವೆ ನಡೆದ ವಾಗ್ವಾದ. ಇದು ಗಂಭೀರ ಹಂತಕ್ಕೆ ತಲುಪಿದ್ದ ಕಾರಣ, ವಿಮಾನವನ್ನು ದೆಹಲಿಯಲ್ಲಿ ಇಳಿಸಲಾಗಿದೆ. ನಂತ್ರ ಜಗಳ ಮಾಡ್ತಿದ್ದ ಇಬ್ಬರನ್ನೂ ಕೆಳಗಿಳಿಸಿ ವಿಮಾನ ಮತ್ತೆ ತನ್ನ ಹಾರಾಟ ಶುರು ಮಾಡಿದೆ.
ನೇಪಾಳದ ಬೀದಿಯಲ್ಲಿ ಮೈಸೂರಿನ ರಾಜ-ರಾಣಿ ವಾಕಿಂಗ್, ಶಾಪಿಂಗ್!
ಲುಫ್ತಾನ್ಸಾ ಫ್ಲೈಟ್ LH 772 ಬೆಳಗ್ಗೆ 10.26 ಕ್ಕೆ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೂ ಮುನ್ನ ವಿಮಾನದ ಪೈಲಟ್ ಎಟಿಸಿಯನ್ನು ಸಂಪರ್ಕಿಸಿದ್ದರು. ಪರಿಸ್ಥಿತಿ ಮತ್ತು ಸಂಭವನೀಯ ಅಶಿಸ್ತಿನ ಪ್ರಯಾಣಿಕರ ಬಗ್ಗೆ ಮಾಹಿತಿ ನೀಡಿದ್ದರು.
ಗಂಡನ ಬಗ್ಗೆ ಪೈಲಟ್ ಗೆ ದೂರು ನೀಡಿದ್ದ ಪತ್ನಿ : ವಿಮಾನದಲ್ಲಿದ್ದ ದಂಪತಿಯಲ್ಲಿ ಪತಿ ಜರ್ಮನ್ ವ್ಯಕ್ತಿ. ಪತ್ನಿ ಥಾಯ್ ಮೂಲದವಳು. ಇಬ್ಬರ ನಡುವೆ ವಾಗ್ವಾದ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಇದಾದ ನಂತರ ಪರಿಸ್ಥಿತಿ ಹದಗೆಟ್ಟಿದೆ. ವಿಮಾನವನ್ನು ಲ್ಯಾಂಡ್ ಮಾಡಬೇಕಾದ ಸ್ಥಿತಿ ಬಂದಿದೆ. ನಂತರ ಐಜಿಐ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಸಲು ಅನುಮತಿ ಕೋರಲಾಗಿತ್ತು. ಅನುಮತಿ ಪಡೆದು ದೆಹಲಿಯಲ್ಲಿ ವಿಮಾನ ಲ್ಯಾಂಡ್ ಮಾಡಲಾಯ್ತು. ವಿಮಾನದಲ್ಲಿ ಗಲಾಟೆ ಮಾಡುತ್ತಿದ್ದ ದಂಪತಿಯನ್ನೂ ಇಲ್ಲಿಯೇ ಇಳಿಸಲಾಗಿದೆ. ಪತಿಯ ವರ್ತನೆಯ ಬಗ್ಗೆ ಪತ್ನಿ ಮೊದಲು ಪೈಲಟ್‌ಗೆ ದೂರು ನೀಡಿದ್ದರು. ಪತಿ ತನಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಪತ್ನಿ ಪೈಲಟ್ ಗೆ ಹೇಳಿದ್ದಳು. ಅಧಿಕಾರಿಯ ಪ್ರಕಾರ, ವಿಮಾನವನ್ನು ಡಿಬೋರ್ಡಿಂಗ್ ಮಾಡಿದ ನಂತರ ಪತಿ ಮತ್ತು ಪತ್ನಿಯನ್ನು ಟರ್ಮಿನಲ್ ಪ್ರದೇಶಕ್ಕೆ ಕರೆದೊಯ್ಯಲಾಗಿದೆ.
ಡೇಟಿಂಗ್ ಮಾಡಿ ಮುಂಚಿನಂತೆ ಹೆಣ್ಮಕ್ಕಳನ್ನು ದಾರಿ ತಪ್ಪಿಸೋದು ಅಷ್ಟು ಸುಲಭ ಅಂದು ಕೊಳ್ಳಬೇಡಿ ಈಗ!
ವಿಮಾನ ತುರ್ತು ಭೂಸ್ಪರ್ಶಕ್ಕೆ ಅನುಮತಿ ನೀಡದ ಪಾಕಿಸ್ತಾನ : ಪತಿ ಪತ್ನಿ ನಡುವಿನ ಜಗಳಕ್ಕೆ ಕಾರಣವೇನು ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ. ಆದರೆ ಅವರ ಕಾರಣದಿಂದಾಗಿ ವಿಮಾನ ಮಾರ್ಗವನ್ನು ಬದಲಾಯಿಸಬೇಕಾಯಿತು ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ. ದೆಹಲಿಗೆ ಮೊದಲೇ ವಿಮಾನವನ್ನು ಪಾಕಿಸ್ತಾನದಲ್ಲಿ ಇಳಿಸಲು ಕೋರಿಕೆ ಸಲ್ಲಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಪಾಕಿಸ್ತಾನ, ವಿಮಾನ ಕೆಳಗಿಳಿಸಲು ಅನುಮತಿ ನೀಡಲಿಲ್ಲ. ನಂತರ ವಿಮಾನವನ್ನು ದೆಹಲಿ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು. ವಿಮಾನದಲ್ಲಿ ಗಲಾಟೆ ಮಾಡುತ್ತಿದ್ದ ಪತಿ- ಪತ್ನಿ ಇಬ್ಬರನ್ನೂ ಅಲ್ಲಿಯೇ ಇಳಿಸಲಾಗಿದೆ. ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದಿದ್ದು, ಗಲಾಟೆಗೆ ಕಾರಣವೇನು ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ.