
ಪತಿ – ಪತ್ನಿ ಸಂಬಂಧದಲ್ಲಿ ನಾನು ಎನ್ನೋದು ನಡೆಯೋದಿಲ್ಲ. ಇಲ್ಲಿ ನಾವು ಅನ್ನೋದು ಪ್ರಾಮುಖ್ಯತೆ ಪಡೆಯುತ್ತದೆ. ಎರಡು ಕೈ ಸೇರಿಯೇ ದಾಂಪತ್ಯದ ಚಪ್ಪಾಳೆ ಹೊಡೆಯಬೇಕು. ಒಬ್ಬೊಬ್ಬರು ಒಂದೊಂದು ದಾರಿಯಲ್ಲಿ ಸಾಗಿದ್ರೆ ದಾಂಪತ್ಯ ಜೀವನ ಹಳಿ ತಪ್ಪುತ್ತದೆ. ಜೀವನದಲ್ಲಿ ಯಾವುದೂ ಅತಿಯಾಗಬಾರದು. ಅತಿ ಆಹಾರ ಸೇವನೆ, ಅತಿಯಾದ ಕೋಪ, ಅತಿಯಾದ ನಿದ್ರೆ ಹಾಗೆ ಅತಿಯಾದ ಆಧ್ಯಾತ್ಮಿಕ ಒಲವು ಕೂಡ ಸಂಬಂಧ ಹಾಳು ಮಾಡುತ್ತದೆ. ಈಗ ಮಹಿಳೆಯೊಬ್ಬಳು ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದಾಳೆ. ಆಕೆಯ ಪತಿ ದಾಂಪತ್ಯ ಬಿಟ್ಟು ಗುರುಗಳ ಪ್ರವಚನ ಕೇಳೋದ್ರಲ್ಲಿ ಬ್ಯುಸಿಯಾಗಿದ್ದಾನಂತೆ. ಆಕೆ ಕಥೆ ಏನು ಅನ್ನೋದನ್ನು ನಾವು ಹೇಳ್ತೇವೆ.
ಮಕ್ಕಳಿ (Children) ಗಾಗಿ ಐದು ವರ್ಷಗಳಿಂದ ಪ್ರಯತ್ನ : ಮದುವೆ (Marriage) ಯಾಗಿ ಆರು ವರ್ಷ ಕಳೆದಿದೆ. ಕಳೆದ ಐದು ವರ್ಷಗಳಿಂದ ಮಕ್ಕಳಿಗಾಗಿ ಮಹಿಳೆ ಪ್ರಯತ್ನಿಸುತ್ತಿದ್ದಾಳೆ. ಆದ್ರೆ ಆಕೆಗೆ ಗರ್ಭಿಣಿ (Pregnant) ಯಾಗುವ ಭಾಗ್ಯ ಸಿಗ್ತಿಲ್ಲ. ವೈದ್ಯರು ಐವಿಎಫ್ (IVF) ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದಾರಂತೆ. ಸದ್ಯ ಸ್ನೇಹಿತರ ಸಹಾಯ ಪಡೆದು ಐವಿಎಫ್ ಗೆ ಮುಂದಾಗಿದ್ದಾಳಂತೆ ಮಹಿಳೆ.
Online Dating: ಹೀಗೆಲ್ಲಾ ವಂಚನೆ ಮಾಡುತ್ತಾರೆ ತಿಳ್ಕೊಳ್ಳಿ!
ಅಷ್ಟಕ್ಕೂ ಸ್ನೇಹಿತರ ಸಲಹೆ ಪಡೆಯಲು ಕಾರಣವೇನು? : ಪತಿ, ಪತ್ನಿಯ ನೋವಿಗೆ ಸ್ಪಂದಿಸುತ್ತಿಲ್ಲ ಎಂದಾಗ ಪತ್ನಿಯಾದವಳು ಬೇರೆ ದಾರಿ ಹುಡುಕಬೇಕಾಗುತ್ತದೆ. ಈಗ ಈ ಮಹಿಳೆ ಸ್ಥಿತಿಯೂ ಅದೇ ಆಗಿದೆ. ಆಕೆ ಪತಿಯ ಆಧ್ಯಾತ್ಮಿಕ ಒಲವು ಈಕೆಗೆ ನುಂಗಲಾರದ ತುತ್ತಾಗಿದೆಯಂತೆ.
ಆರಂಭದಲ್ಲಿ ಪುಸ್ತಕ ಓದುತ್ತಿದ್ದವ ಈಗ ಪ್ರವಚನದಲ್ಲಿ ಲೀನ : ಮಹಿಳೆಯ ಪತಿ ಮೌನಿಯಂತೆ. ಅತಿ ಕಡಿಮೆ ಮಾತನಾಡುವ ಆತ ಯಾವಾಗ್ಲೂ ತನ್ನ ಸಮಸ್ಯೆಯನ್ನು ಪತ್ನಿ ಮುಂದೆ ಹೇಳಿಲ್ಲವಂತೆ. ತನ್ನದೇ ಲೋಕದಲ್ಲಿ ಜೀವಿಸಲು ಇಷ್ಟಪಡುವ ಪತಿ ಆರಂಭದಲ್ಲಿ ಆಧ್ಯಾತ್ಮಿಕ ಪುಸ್ತಕಗಳನ್ನು ಓದುತ್ತಿದ್ದನಂತೆ. ಆತನಿಗೆ ಖುಷಿ ಸಿಗುತ್ತೆ ಎನ್ನುವ ಕಾರಣಕ್ಕೆ ಪತ್ನಿ ಇದನ್ನು ಪ್ರೋತ್ಸಾಹಿಸಿದ್ದಳಂತೆ. ದಿನಕಳೆದಂತೆ ಪತಿ ಗುರುಗಳ ಪ್ರವಚನ ಕೇಳಲು ಶುರು ಮಾಡಿದ್ದನಂತೆ. ಈಗ ಪ್ರತಿ ದಿನ ಪ್ರವಚನ ಕೇಳ್ತಾ ಕಾಲ ಕಳೆಯುತ್ತಾನಂತೆ. ಪತ್ನಿ ಹತ್ತಿರ ಬಂದ್ರೆ ಆಕೆಯನ್ನು ನಿರ್ಲಕ್ಷ್ಯಿಸುತ್ತಾನಂತೆ. ಮುಂದೇನು ಮಾಡ್ಬೇಕು ತಿಳಿಯುತ್ತಿಲ್ಲ ಎಂದು ಪತ್ನಿ ಹೇಳಿದ್ದಾಳೆ.
ತಜ್ಞರ ಸಲಹೆ : ದಾಂಪತ್ಯದಲ್ಲಿ ಆತುರದ ನಿರ್ಧಾರ ಬೇಡ ಎನ್ನುತ್ತಾರೆ ತಜ್ಞರು. ಮೊದಲು ಪತಿ ಜೊತೆ ಮಾತನಾಡುವುದು ಮುಖ್ಯ. ನಿಮಗೆ ಜೀವನದಲ್ಲಿ ಏನು ಬೇಕು ಎಂಬುದನ್ನು ಅರಿತುಕೊಳ್ಳಿ. ದಾಂಪತ್ಯ ಮುಂದುವರೆಸುವ ಆಸೆಯಿದ್ದರೆ ನೀವು ಸಂಬಂಧವನ್ನು ಸುಧಾರಿಸುವ ಕೆಲಸ ಮಾಡಬಹುದು.
Long distance Relationship ನಲ್ಲಿ ಪ್ರೀತಿನೇ ಇರಲ್ಲ ಅನ್ನೋರು ಇದನ್ನ ಓದಿ
ಪತಿ ಜೊತೆ ಕುಳಿತು ಅವರ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಏಕೆ ಅವರು ನಿಮ್ಮನ್ನು ದೂರ ತಳ್ಳುತ್ತಿದ್ದಾರೆ, ಆಧ್ಯಾತ್ಮಿಕದ ಕಡೆ ಒಲವು ತೋರಲು ಕಾರಣವೇನು ಎಂಬುದನ್ನು ನೀವು ಪತ್ತೆ ಮಾಡಬೇಕಾಗಿದೆ ಎನ್ನುತ್ತಾರೆ ತಜ್ಞರು. ಪರಿಸ್ಥಿತಿ ಹೀಗಿರುವಾಗ್ಲೂ ನೀವು ತಾಳ್ಮೆ ಕಳೆದುಕೊಳ್ಳಬಾರದು. ಇಬ್ಬರು ವಿರುದ್ಧ ದಿಕ್ಕಿನಲ್ಲಿ ಸಾಗಿದ್ರೆ ದಾಂಪತ್ಯ ಮುರಿದು ಬೀಳುವ ಸಾಧ್ಯತೆಯಿರುತ್ತದೆ. ಹಾಗಾಗಿ ನಿಮ್ಮ ಪತಿಯ ನೋವನ್ನು ಅರಿಯಲು ಪ್ರಯತ್ನಿಸಿ. ಹಾಗೆಯೇ ನಿಮ್ಮ ಮನಸ್ಥಿತಿ ಹೇಗಿದೆ, ಮಗುವಿಗಾಗಿ ನೀವು ಎಷ್ಟು ಪರಿತಪಿಸುತ್ತಿದ್ದೀರಿ ಎಂಬುದನ್ನು ಅವರಿಗೆ ವಿವರಿಸಿ ಎನ್ನುತ್ತಾರೆ ತಜ್ಞರು. ನೀವು ಒಂಟಿಯಾಗಿಲ್ಲ, ನಿನ್ನ ಜೊತೆ ನಾನಿದ್ದೇನೆ ಎಂದು ಪತಿಗೆ ಭರವಸೆ ಮೂಡಿಸಿ. ಆಧ್ಯಾತ್ಮಿಕ ಪುಸ್ತಕಗಳು ಅಥವಾ ಪ್ರವಚನಗಳನ್ನು ಕೇಳುವುದು ಅವರ ಮನಸ್ಸಿಗೆ ಶಾಂತಿಯನ್ನು ನೀಡಿದರೆ ಅದನ್ನು ತಡೆಯಬೇಡಿ. ಅದು ನಿಮ್ಮ ಸಂಬಂಧಕ್ಕೂ ವರದಾನವಾಗಬಹುದು. ಆಧ್ಯಾತ್ಮಿಕ ಜಾಗೃತಿ ಹೊಂದಿರುವ ವ್ಯಕ್ತಿ ತನ್ನನ್ನು ತಾನು ಆಳವಾಗಿ ಅರಿತಿರುತ್ತಾನೆ. ಬೇರೆಯವರನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಾನೆ. ನಿರ್ಧಾರ ತೆಗೆದುಕೊಳ್ಳುವ ಮುನ್ನ ಸರಿಯಾಗಿ ಆಲೋಚಿಸಿರುತ್ತಾನೆ ಎನ್ನುತ್ತಾರೆ ತಜ್ಞರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.