Extra Marital Affairs: ವಿಚ್ಛೇದಿತ ಮ್ಯಾನೇಜರ್ ಜೊತೆ ಪತಿಯ ಅಕ್ರಮ ಸಂಬಂಧ..ನಾನೇನ್ಮಾಡ್ಲಿ?

Published : Jun 17, 2022, 03:44 PM ISTUpdated : Jun 17, 2022, 05:18 PM IST
Extra Marital Affairs: ವಿಚ್ಛೇದಿತ ಮ್ಯಾನೇಜರ್ ಜೊತೆ ಪತಿಯ ಅಕ್ರಮ ಸಂಬಂಧ..ನಾನೇನ್ಮಾಡ್ಲಿ?

ಸಾರಾಂಶ

ಪ್ರೀತಿಸಿದ ವ್ಯಕ್ತಿ ಬೇರೆಯವರ ಪಾಲಾದ್ರೆ ಆ ನೋವನ್ನು ಸಹಿಸಲು ಸಾಧ್ಯವಿಲ್ಲ. ಪತಿಗೆ ಅಕ್ರಮ ಸಂಬಂಧವಿದೆ ಎಂಬುದು ಗೊತ್ತಾದ್ರೆ ಪತ್ನಿ ಕುಸಿದು ಬೀಳ್ತಾಳೆ. ಪತಿಯನ್ನು ವಾಪಸ್ ಪಡೆಯಲು ಇನ್ನಿಲ್ಲದ ಪ್ರಯತ್ನ ನಡೆಸ್ತಾಳೆ.  

ದಾಂಪತ್ಯ (Marriage) ದ್ರೋಹವನ್ನು ಸಹಿಸಿಕೊಳ್ಳೋದು ತುಂಬಾ ಕಷ್ಟ. ಪ್ರೀತಿ (Love) ಸಿದ ವ್ಯಕ್ತಿ ಇನ್ನೊಬ್ಬರ ಮಡಿಲು ಸೇರಿದ್ದಾನೆ ಎಂಬ ಸತ್ಯವನ್ನು ಅರಗಿಸಿಕೊಳ್ಳುವುದು ಕಷ್ಟ. ಮದುವೆ ನಂತ್ರ ಪತಿ (Husband ) ಬೇರೆಯವರ ಮನೆ ಬಾಗಿಲಿಗೆ ಹೋದ್ರೆ ಪತ್ನಿಯಾದವಳ ಸಂಕಟ ಹೇಳತೀರದು. ಮುಂದೇನು ಎಂಬ ಪ್ರಶ್ನೆ ಆಕೆಯನ್ನು ಸದಾ ಕಾಡುತ್ತದೆ. ಇನ್ನೊಬ್ಬಳ ಪಾಲಾಗಿರುವ ಪತಿಯನ್ನು ಹೇಗೆ ವಾಪಸ್ ಕರೆದು ತರಬೇಕೆಂಬ ಚಿಂತೆ ಒಂದು ಕಡೆಯಾದ್ರೆ ಇನ್ನೊಂದು ಕಡೆ ಇದಕ್ಕೆಲ್ಲ ತಾನೇ ಕಾರಣವೆಂದು ಆಕೆ ಕೊರಗ್ತಾಳೆ. ಮಹಿಳೆಯೊಬ್ಬಳ ಸ್ಥಿತಿಯೂ ಇದೇ ಆಗಿದೆ. ಮನೆ,ಕುಟುಂಬದ ಜವಾಬ್ದಾರಿ, ಕೆಲಸದ ಕಾರಣದಿಂದಾಗಿ ಆಕೆ ಪತಿಗೆ ಸಮಯ ನೀಡಲು ಸಾಧ್ಯವಾಗ್ತಿರಲಿಲ್ಲವಂತೆ. ಇತ್ತ ಪತಿ, ಮ್ಯಾನೇಜರ್ ಜೊತೆ ಸಂಬಂಧ ಬೆಳೆಸಿದ್ದಾನೆ. ತನ್ನಿಂದ ದೂರವಾಗ್ತಿರುವ ಪತಿಯನ್ನು ಹೇಗೆ ತನ್ನ ಬಳಿ ಕರೆದುತರಲಿ ಎಂದು ಆಕೆ ಪ್ರಶ್ನೆ ಮಾಡಿದ್ದಾಳೆ. 

ಪತಿಯ ಬಾಳಿಗೆ ಬಂದ ಮ್ಯಾನೇಜರ್ : ಮಹಿಳೆ ಮದುವೆಯಾಗಿ ತುಂಬಾ ಸಮಯ ಕಳೆದಿಲ್ಲ. ಮದುವೆಯಾದ ನಂತ್ರ ಇಬ್ಬರಿಗೂ ಜವಾಬ್ದಾರಿ ಹೆಚ್ಚಾಗುವುದು ಸಾಮಾನ್ಯ. ಅದ್ರಲ್ಲೂ ಮಹಿಳೆ, ಮನೆ, ಮಕ್ಕಳು, ಕೆಲಸ ಎಲ್ಲವನ್ನೂ ಸಂಭಾಳಿಸಬೇಕು. ಅದರ ಜೊತೆ ಪತಿಯ ಆಸೆಯ ಬಗ್ಗೆ ಗಮನ ಹರಿಸಬೇಕು. ಆದ್ರೆ ಮಹಿಳೆ ಪತಿ ವಿಷ್ಯದಲ್ಲಿ ಸ್ವಲ್ಪ ಎಡವಿದ್ದಾಳಂತೆ. ತಾನು ಆತನಿಗೆ ಹೆಚ್ಚು ಸಮಯ ನೀಡಿಲ್ಲ ಎನ್ನುತ್ತಾಳೆ. ಇದೇ ಕಾರಣಕ್ಕೆ ಆತ ಮ್ಯಾನೇಜರ್ ಜೊತೆ ಸಂಬಂಧವಿಟ್ಟುಕೊಂಡಿದ್ದಾನೆ ಎಂಬುದು ಮಹಿಳೆ ವಾದ. 
ಪತಿ, ಕಚೇರಿಯಲ್ಲಿ ಕೆಲಸ ಮಾಡುವ ಮ್ಯಾನೇಜರ್ ಗೆ ಹೆಚ್ಚು ಆದ್ಯತೆ ನೀಡ್ತಾನಂತೆ. ಆಕೆ ಕರೆದಲ್ಲೆಲ್ಲ ಹೋಗ್ತಾನಂತೆ. ಆಕೆ ಇಷ್ಟ ಪೂರೈಸಲು, ಕುಟುಂಬದ ಸಮಾರಂಭಗಳನ್ನು ಮಿಸ್ ಮಾಡಿಕೊಳ್ತಾನಂತೆ. ಆಕೆ ವಿಚ್ಛೇದಿತ ಮಹಿಳೆ. ತನಗಿಂತ ಆಕೆಗೆ ಹೆಚ್ಚು ಮಾನ್ಯತೆ ನೀಡುವ ಪತಿ, ತನ್ನನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾನೆ ಎನ್ನುತ್ತಾಳೆ ಮಹಿಳೆ. ಮದುವೆ ಉಳಿಸಿಕೊಳ್ಳಲು ನಾನೇನು ಮಾಡ್ಬೇಕು ಎಂಬುದು ಗೊತ್ತಾಗ್ತಿಲ್ಲ ಎನ್ನುತ್ತಾಳೆ ಮಹಿಳೆ.

REAL STORY : 40 ವರ್ಷದ ಬಾಸ್ ಜೊತೆ ಮದುವೆಯಾಗಿದ್ದಕ್ಕೆ ಇವಳಿಗೇಕಿಲ್ಲ ಗೊಂದಲ?

ತಜ್ಞರ ಸಲಹೆ : ಪ್ರೀತಿಸಿದ ಪತಿ ಮೋಸ ಮಾಡಿದ್ರೆ ಎಲ್ಲರಿಗೂ ನೋವಾಗುವುದು ಸಾಮಾನ್ಯ. ಅದ್ರಿಂದ ಹೊರಗೆ ಬರುವುದು ಕಷ್ಟ. ಪ್ರೀತಿಯಲ್ಲಾಗುವ ಮೋಸವನ್ನು ಮರೆಯಲು ಎಂದಿಗೂ ಸಾಧ್ಯವಿಲ್ಲ. ಅಕ್ರಮ ಸಂಬಂಧಗಳು ಶಾಶ್ವತವಲ್ಲ. ಆದ್ರೆ ಆ ಸಂಬಂಧದಲ್ಲಿ ಸಿಕ್ಕಿ ಬಿದ್ದವರನ್ನು ಹೊರ ತರುವುದು ಸುಲಭದ ಕೆಲಸವಲ್ಲ ಎನ್ನುತ್ತಾರೆ ತಜ್ಞರು. ಇದಕ್ಕೆ ಪ್ರಭಾವಿತ ಕೆಲಸ ಮಾಡ್ಬೇಕಾಗುತ್ತದೆ.

ಮಾತುಕತೆ : ಮಾತುಕತೆಯಲ್ಲಿಯೇ ಅನೇಕ ಸಮಸ್ಯೆ ಬಗೆಹರಿಯುತ್ತದೆ. ಜನರು ಪರಸ್ಪರ ಮಾತನಾಡಲು ಅವಕಾಶ ನೀಡುವುದಿಲ್ಲ. ಪತಿ ಜೊತೆ ಶಾಂತವಾಗಿ ಕುಳಿತು ಈ ವಿಷ್ಯವನ್ನು ಪ್ರಾಸ್ತಾಪಿಸಬೇಕು. ಅದು ಎಷ್ಟೇ ಕಠೋರವಾಗಿರಲಿ ಸುಮ್ಮನೆ ಕುಳಿತು ಕೇಳ್ಬೇಕು. ಆತ ಇನ್ನೊಬ್ಬರ ಜೊತೆ ಸಂಬಂಧ ಬೆಳೆಸಲು ಕಾರಣವೇನು ಎಂಬುದನ್ನು ತಿಳಿಯಬೇಕು. ಮಾತುಕತೆ ವೇಳೆ ಯಾವುದೇ ಕಾರಣಕ್ಕೂ ಕೂಗಾಡಬೇಡಿ,ರೇಗಾಡಬೇಡಿ ಎನ್ನುತ್ತಾರೆ ತಜ್ಞರು. ಅಷ್ಟು ಮಾತ್ರವಲ್ಲ ಮಾತಿನ ಮಧ್ಯೆ ಕೋಪ ಮಾಡಿಕೊಂಡು ಕೋಣೆಯಿಂದ ಹೊರಗೆ ಹೋಗುವುದು ಕೂಡ ಸೂಕ್ತವಲ್ಲ. ಅವರ ಸಮಸ್ಯೆ ಏನು? ಅವರು ಏನು ಬಯಸ್ತಾರೆ ಎಂಬುದನ್ನು ತಿಳಿದಾಗ ಮಾತ್ರ ಮುಂದಿನ ಕೆಲಸ ಸುಲಭ. ಹಾಗಾಗಿ ಮೊದಲು ಪತಿ ಜೊತೆ ಮಾತನಾಡಿ ಎಂದಿದ್ದಾರೆ ತಜ್ಞರು.

ಮಗುವಾದ ಮೇಲೆ ಗಂಡನಿಗೆ ಲೈಂಗಿಕಾಸಕ್ತಿಯೇ ಇಲ್ಲ, ಏನ್ಮಾಡ್ಲಿ?

ತಪ್ಪು ನನ್ನನ್ನು : ದಾಂಪತ್ಯದಲ್ಲಿ ಸಮಸ್ಯೆಯಾದಾಗ ತಪ್ಪನ್ನು ಒಬ್ಬರೇ ಹೊತ್ತುಕೊಳ್ಳುವುದು ತಪ್ಪು. ಇಬ್ಬರ ಪಾಲುದಾರಿಕೆ ಇದರಲ್ಲಿ ಇರುತ್ತದೆ. ಸಮಯ ನೀಡಿಲ್ಲ ಎಂಬ ಕಾರಣಕ್ಕೆ ಪತಿ ಬೇರೆಯವರ ಜೊತೆ ಸಂಬಂಧ ಬೆಳೆಸಿದ್ರೆ ಅದ್ರಲ್ಲಿ ನಿಮ್ಮದೇನೂ ತಪ್ಪಿಲ್ಲ.  ಈ ಬಗ್ಗೆ ಅವರು ನಿಮ್ಮ ಬಳಿ ಮಾತನಾಡ್ಬೇಕಿತ್ತು. ಹಾಗಾಗಿ ನಿಮ್ಮನ್ನು ಅಪರಾಧಿ ಸ್ಥಾನದಲ್ಲಿ ಇಡಬೇಡಿ ಎಂದು ತಜ್ಞರು ಹೇಳಿದ್ದಾರೆ. 
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು
ಪುರುಷರೇ ನೀವು ಈ 3 ದಿನಾಂಕಗಳಲ್ಲಿ ಹುಟ್ಟಿದ್ದೀರಾ? ಇದು ಖ್ಯಾತಿ ಮತ್ತು ಯಶಸ್ಸನ್ನು ತರುವ ಚಿಹ್ನೆ