ಫಸ್ಟ್ ನೈಟ್ ದಿನ ಸೆಕ್ಸ್ ಬದಲು ಶಾಕ್ ನೀಡಿದ ಪತಿ! ಹೆಂಡ್ತಿ ತವರಿಗೆ ಹೋಗುವಂತೆ ಮಾಡಿದ್ದೆಂಥ ಈ ಗಂಡ?

By Roopa Hegde  |  First Published Aug 5, 2024, 1:37 PM IST

ಮದುವೆ ಮೊದಲ ರಾತ್ರಿ ಸದಾ ನೆನಪಿನಲ್ಲಿರಬೇಕೆಂದು ಎಲ್ಲರೂ ಬಯಸ್ತಾರೆ. ಈ ಮಹಿಳೆ ಕೂಡ ಅದೇ ನಿರೀಕ್ಷೆಯಲ್ಲಿ ರೂಮ್ ಸೇರಿದ್ದಳು. ಆದ್ರೆ ಅಲ್ಲಿ ನಡೆದಿದ್ದೇ ಬೇರೆ. ಸಂಸಾರನಡೆಸುವ ಬದಲು ಈಗ ಕೋರ್ಟ್ ಗೆ ಅಲೆಯುವಂತಾಗಿದೆ.
 


ಭವಿಷ್ಯದ ಸುಂದರ ಕನಸು ಹೊತ್ತ ಹುಡುಗಿಯೊಬ್ಬಳು ಮನೆಯವರು ಮೆಚ್ಚಿದ ಹುಡುಗನ ಜೊತೆ ಮದುವೆಯಾಗಿದ್ದಳು. ಮದುವೆ ನಂತ್ರ ಜೀವನ ಹೇಗಿರಬೇಕು ಎಂಬ ಬಗ್ಗೆ ಆಕೆ ಕಂಡಿದ್ದ ಮಹಾನ್ ಕನಸುಗಳೆಲ್ಲ ಮೊದಲ ರಾತ್ರಿಯೇ ನುಚ್ಚು ನೂರಾಯ್ತು. ಫಸ್ಟ್ ನೈಟ್ ದಿನ ವರನಿಗಾಗಿ ಕಾದುಕುಳಿತಿದ್ದವಳಿಗೆ ದೊಡ್ಡ ಶಾಕ್ ಕಾದಿತ್ತು. ತನ್ನ ಮುಂದೆ ನಡೆಯುತ್ತಿರುವ ಘಟನೆಯನ್ನು ನೋಡಿ ಅಕ್ಷರಶಃ ಬೆಚ್ಚಿ ಬಿದ್ದ ವಧು, ಮರುದಿನ ಮನೆ ಬಿಟ್ಟಿದ್ದಳು. ತವರಿನಲ್ಲಿ ಆ ರಾತ್ರಿ ನಡೆದ ಎಲ್ಲ ವಿಷ್ಯವನ್ನು ಬಿಚ್ಚಿಟ್ಟಾಗ ಬೆಚ್ಚಿ ಬೀಳುವ ಸರದಿ ಕುಟುಂಬಸ್ಥರದ್ದಾಗಿತ್ತು. ಫಸ್ಟ್ ನೈಟ್ ನಂದು ವರ ಶಾರೀರಿಕ ಸಂಬಂಧ ಬೆಳೆಸ್ತಾನೆ ಅಂದ್ಕೊಂಡಿದ್ದವಳಿಗೆ ಕಣ್ಣೀರೆ ಗತಿಯಾಯ್ತು. ಆತ ಹೇಳಿದ ಸತ್ಯ ಕೇಳಿ ವಧು, ಆಘಾತಕ್ಕೊಳಗಾಗಿದ್ದಳು. ನಂಬಿಕೆಟ್ಟವಳು ಅಲ್ಲಿ ನಡೆದಿದ್ದು ಏನು ಎಂಬುದನ್ನು ಮಹಿಳೆ ಅಧಿಕಾರಿಗಳ ಮುಂದೆ ವಿವರಿಸಿದ್ದಾಳೆ.

ಮೊದಲ ದಿನ ರಾತ್ರಿ ಶಾಕ್ (Shock) ನೀಡಿದ ಪತಿ : ಈ ಘಟನೆ ಉತ್ತರಾಖಂಡ (Uttarakhand) ದ ಹರಿದ್ವಾರದಲ್ಲಿ ನಡೆದಿದೆ. ಇಲ್ಲಿನ ಹುಡುಗಿ, ಹರಿಯಾಣದ ಯಮುನಾನಗರದ ಯುವಕನನ್ನು ಮದುವೆ (wedding) ಯಾಗಿದ್ದಾಳೆ. ಮನೆಯವರ ಒಪ್ಪಿಗೆ ಮೇರೆಗೆ ಸಂಬಂಧ ಫಿಕ್ಸ್ ಆಗಿತ್ತು. ವಧು – ವರ ಇಬ್ಬರೂ ಮೆಚ್ಚಿಕೊಂಡಿದ್ದರು. ನಿಶ್ಚಿತಾರ್ಥ ನಡೆದ ಕೆಲ ದಿನಗಳ ನಂತ್ರ ಮದುವೆ ದಿನಾಂಕ ಫಿಕ್ಸ್ ಆಗಿತ್ತು. ಎರಡೂ ಕುಟುಂಬಗಳು ಖುಷಿಯಲ್ಲಿ, ಅದ್ಧೂರಿಯಾಗಿ ಮದುವೆ ಮಾಡಿದ್ದವು. ಮದುವೆ ನಂತ್ರ ಸಂತೋಷದಲ್ಲಿದ್ದ ವಧು, ವರನ ಮನೆ ಸೇರಿದ್ದಳು. ಆದ್ರೆ ಆ ದಿನ ರಾತ್ರಿ ನಡೆದ ಘಟನೆ ಆಕೆಯ ಜೀವನ ಹಾಳು ಮಾಡಿದೆ. ಎಂದೂ ಮರೆಯಲಾಗದ ಪೆಟ್ಟು ಬಿದ್ದಿದೆ. 

Tap to resize

Latest Videos

undefined

ವಧು ರಾತ್ರಿ ವರನಿಗಾಗಿ ಕಾಯ್ತಿದ್ದಳು. ಎಷ್ಟೇ ಸಮಯ ಕಳೆದ್ರೂ ವರ ಅಲ್ಲಿಗೆ ಬಂದಿರಲಿಲ್ಲ. ವರನನ್ನು ಹುಡುಕಿಕೊಂಡು ವಧು, ರೂಮಿನಿಂದ ಹೊರಗೆ ಹೋಗಿದ್ದಾಳೆ. ಈ ಸಮಯದಲ್ಲಿ ಇನ್ನೊಂದು ಕೋಣೆಯಲ್ಲಿದ್ದ ಪತಿಯನ್ನು ನೋಡಿ ಆಕೆ ಅಚ್ಚರಿಗೊಳಗಾಗಿದ್ದಳು.

ಅಮವಾಸ್ಯೆ ದಿನ ಸೆಕ್ಸ್‌ ಮಾಡಬಾರದಂತೆ! ಹೀಗ್ಯಾಕಂತಾರೆ?

ರೂಮಿನಲ್ಲಿದ್ದ ವರ ಆಕೆಗೆ ಸಂಪೂರ್ಣ ಭಿನ್ನವಾಗಿ ಕಂಡಿದ್ದ. ಇಷ್ಟು ದಿನ ತಾನು ಮಾತನಾಡಿದ, ನೋಡಿದ ವ್ಯಕ್ತಿ ಆತನಾಗಿರಲಿಲ್ಲ. ಕನ್ನಡಿ ಮುಂದೆ ನಿಂತು ಮೇಕಪ್ ಮಾಡ್ತಿದ್ದ ಪತಿಯನ್ನು ನೋಡಿ ಆಕೆ ದಂಗಾದ್ಲು. ವಧು ಆತನನ್ನು ನೋಡಿ ಛೀರಿಕೊಂಡಿದ್ದಳು. ಇಂದು ನಮ್ಮ ಫಸ್ಟ್ ನೈಟ್. ಹೊಸ ಜೀವನ ಶುರು ಮಾಡುವ ಸಮಯ. ಹಾಸಿಗೆಗೆ ಬನ್ನಿ ಎಂದು ಕರೆದಾಗ್ಲೇ ಆಕೆಗೆ ಗಂಡನ ಸತ್ಯ ಗೊತ್ತಾಗಿದ್ದು.

ಮದುವೆಯಾಗುವವರೆಗೂ ಸುಮ್ಮನಿದ್ದ ವರ, ತನ್ನ ವ್ಯಕ್ತಿತ್ವವನ್ನು ಬಿಚ್ಚಿಟ್ಟಿದ್ದ. ನಾನು ಮಹಿಳೆಯರಂತೆ ಬದುಕಲು ಇಷ್ಟಪಡ್ತೇನೆ ಎಂದಿದ್ದ. ನಾನು ಸಲಿಂಗಕಾಮಿ ಎಂಬುದನ್ನು ಕೂಡ ಪತ್ನಿ ಮುಂದೆ ಹೇಳಿದ್ದ.  ಪುರುಷರ ಜೊತೆ ಸಂಬಂಧವನ್ನಿಟ್ಟುಕೊಂಡಿದ್ದ ಪತಿಗೆ, ಪತ್ನಿ ಮೇಲೆ ಆಸಕ್ತಿಯೇ ಇರಲಿಲ್ಲ. ಒಂದಷ್ಟು ದಿನ ನಾಟಕವಾಡಿ ನಂತ್ರ ಸತ್ಯ ಹೇಳುವ ಬದಲು ಮೊದಲ ದಿನವೇ ಆತ ಎಲ್ಲವನ್ನೂ ಆಕೆ ಮುಂದೆ ಹೇಳುವ ನಿರ್ಧಾರಕ್ಕೆ ಬಂದಿದ್ದ. 

ಶಾರೀರಿಕ ಸಂಬಂಧ ಬೆಸೆಯುವಂತೆ ಕನಸು ಬಿತ್ತಾ? ಇಂಥ ಕನಸು ಬೀಳೋದ್ಯಾಕೆ

ಪತಿಯ ಮಾತಿಗೆ ಕೋಪಗೊಂಡಿದ್ದ ಪತ್ನಿ, ಪ್ರೀತಿ, ಮದುವೆ ನಾಟಕ ಏಕೆ ಬೇಕಿತ್ತು ಎಂದು ಪ್ರಶ್ನೆ ಮಾಡಿದ್ದಳು. ಸಲಿಂಗಕಾಮವನ್ನು ಸಮಾಜ, ಕುಟುಂಬಸ್ಥರು ಒಪ್ಪುವುದಿಲ್ಲ. ಹಾಗಾಗಿಯೇ ನಾನು ಮದುವೆ ಆಗ್ಬೇಕಾಯ್ತು. ಅದು ಬಲವಂತದ ಮದುವೆ ಎಂದು ವರ ಹೇಳಿದ್ದ. ವರನ ಮಾತು ಕೇಳಿ ಕಣ್ಣೀರು ಹಾಕಿದ್ದ ಪತ್ನಿ, ಮರುದಿನ ಬೆಳಿಗ್ಗೆ ಗಂಡನ ಮನೆ ತೊರೆದಿದ್ದಳು. ಈಗ ಈ ಪ್ರಕರಣ ಮಹಿಳಾ ಆಯೋಗದ ಮೆಟ್ಟಿಲೇರಿದೆ. ಪ್ರಕರಣದ ಬಗ್ಗೆ ವಿಚಾರಣೆ ನಡೆಯುತ್ತಿದೆ. 

click me!