
ಸಂಭೋಗ ದಾಂಪತ್ಯ ಜೀವನದಲ್ಲಿ ಅನಿವಾರ್ಯ. ಇಬ್ಬರ ಮಧ್ಯೆ ಪ್ರೀತಿಯಿಂದ ಸಂಬಂಧ ಬೆಳೆದಾಗ ದಾಂಪತ್ಯವನ್ನು ಅದು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಬಲವಂತದ ಸಂಭೋಗ, ಸಂಬಂಧವನ್ನು ಹಾಳು ಮಾಡುತ್ತದೆ. ಆದ್ರೆ ಈ ಬಲವಂತ ಎನ್ನುವ ವಿಷ್ಯ ಬಂದಾಗ ಅದನ್ನು ಅನೇಕ ಮಜಲುಗಳಲ್ಲಿ ನಾವು ಪರೀಕ್ಷೆ ಮಾಡ್ಬೇಕಾಗುತ್ತದೆ. ಪತಿ ಬಲವಂತವಾಗಿ ಸಂಬಂಧ ಬೆಳೆಸುತ್ತಿದ್ದಾನೆ ಎಂದು ಆರೋಪ ಮಾಡುವ ಸಂದರ್ಭದಲ್ಲಿ ನಮ್ಮದೆಷ್ಟು ತಪ್ಪಿದೆ ಎಂದು ಪತ್ನಿಯಾದವಳು ಆಲೋಚನೆ ಮಾಡುವುದು ಕೂಡ ಮುಖ್ಯವಾಗುತ್ತದೆ. ಸಂಭೋಗ ಹಾಗೂ ಬಲವಂತದ ಬಗ್ಗೆ ತಜ್ಞರು ಏನು ಹೇಳ್ತಾರೆ ಎನ್ನುವುದು ಇಲ್ಲಿದೆ.
ಪತ್ನಿ (Wife) ಯಾದವಳು ತಿಳಿದಿರಬೇಕು ಈ ಸಂಗತಿ :
ಪತಿ ಜೊತೆ ಮಾತುಕತೆ : ಪ್ರತಿ ದಿನ ಸೆಕ್ಸ್ (Sex) ಬಯಸುವ ಪುರುಷರಿದ್ದಾರೆ. ಮತ್ತೆ ಕೆಲ ಪುರುಷರು ಪತ್ನಿ ಆಸೆಯನ್ನು ನೋಡಿ ಅದಕ್ಕೆ ಪ್ರತಿಕ್ರಿಯೆ ನೀಡ್ತಾರೆ. ಇನ್ನು ಕೆಲವರಿಗೆ ಪ್ರೀತಿ (Love) ಗಿಂತ ಸೆಕ್ಸ್ ಅಗತ್ಯವೆನ್ನಿಸುತ್ತದೆ. ಪತ್ನಿಯನ್ನು ಬಲವಂತಪಡಿಸಿ ಶಾರೀರಿಕ ಸುಖ ಪಡೆಯುತ್ತಾರೆ. ಈ ಸಮಯದಲ್ಲಿ ಪತ್ನಿಯಾದವಳು ಪತಿ ಜೊತೆ ಇದ್ರ ಬಗ್ಗೆ ಮಾತನಾಡುವುದು ಮುಖ್ಯವಾಗುತ್ತದೆ. ಸೆಕ್ಸ್ ಗೆ ಸಂಬಂಧಿಸಿದಂತೆ ದಂಪತಿ ಮಧ್ಯೆ ಮಾತುಕತೆ ಅತಿ ಕಡಿಮೆ. ಪತಿ ಅಮಲಿನಲ್ಲಿದ್ದಾಗ ಯಾವುದೇ ಚರ್ಚೆ ಬೇಡ. ಇದ್ರಿಂದ ಗಲಾಟೆಯಾಗುವ ಸಾಧ್ಯತೆಯಿರುತ್ತದೆ. ಹಾಗಾಗಿ ಅಮಲು ಇಳಿದ ಮೇಲೆ ಇಬ್ಬರ ಮಧ್ಯೆ ಸಮಸ್ಯೆ ಏನಾಗ್ತಿದೆ ಎಂಬುದನ್ನು ಪತ್ನಿಯಾದವಳು ಪತಿಗೆ ಹೇಳಬೇಕು. ಪತಿಯದ್ದು ಸಾರ್ವಕಾಲಿಕ ತಪ್ಪು ಎನ್ನುವ ತೀರ್ಮಾನಕ್ಕೆ ಅನೇಕ ಮಹಿಳೆಯರು ಬಂದಿರುತ್ತಾರೆ. ಇದು ತಪ್ಪು. ಪತಿಗೆ ಲೈಂಗಿಕತೆಯ ಅಗತ್ಯವಿರುತ್ತದೆ. ಹಾಗಾಗಿ ನಿಮ್ಮ ಬಳಿ ಬಂದಿರುತ್ತಾನೆ. ಈ ಬಗ್ಗೆ ನೀವು ಸಕಾರಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ಸೆಕ್ಸ್ ಇಬ್ಬರಿಗೂ ಅಗತ್ಯ ಎಂಬುದನ್ನು ತಿಳಿದಿರಬೇಕು. ಸೆಕ್ಸ್ ಗೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಪರಿಹರಿಸಲು ಒಟ್ಟಾಗಿ ಯೋಚಿಸಬೇಕು. ಮಾತುಕತೆಯಿಂದ ಸಮಸ್ಯೆ ಬಗೆಹರಿಯುತ್ತದೆ. ಬಲವಂತದ ಸೆಕ್ಸ್ ನಲ್ಲಿ ಇಬ್ಬರಿಗೂ ಸಂತೋಷ ಸಿಗಲು ಸಾಧ್ಯವಿಲ್ಲ.
ಲೈಂಗಿಕ ಕ್ರಿಯೆಯೂ ತಲೆ ನೋವು ತಂದು ಬಿಟ್ಟರೆ? ಇದ್ಯಾಕೆ ಹೀಗಾಗುತ್ತೆ?
ಸಕಾರಾತ್ಮಕ ಚಿಂತನೆ ಅಗತ್ಯ : ಮೊದಲೇ ಹೇಳಿದಂತೆ ಇಬ್ಬರಿಗೂ ಸೆಕ್ಸ್ ಅವಶ್ಯಕ. ಸಂಗಾತಿಗೆ ಸೆಕ್ಸ್ ನಲ್ಲಿ ಆಸಕ್ತಿ ಕಡಿಮೆಯಾಗುವುದು ಲೈಂಗಿಕ ಖಾಯಿಲೆಯಿಂದಲೂ ಆಗಿರಬಹುದು. ಅಂಥ ಸಂದರ್ಭದಲ್ಲಿ ತಜ್ಞರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಬೇಕು. ತಾಳ್ಮೆ ಮತ್ತು ತಿಳುವಳಿಕೆ ಅಗತ್ಯ.. ಮೊದಲಿಗೆ ನಿಮ್ಮ ಸಂಗಾತಿಯ ಅಗತ್ಯವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.
ಲೈಂಗಿಕತೆ ಬಗ್ಗೆ ಕೆಲ ಮಹಿಳೆಯರಲ್ಲಿ ನಕಾರಾತ್ಮಕ ಚಿಂತೆಯಿರುತ್ತದೆ. ಇದು ಗಂಡಸರನ್ನು ಬಲವಂತಗೊಳಿಸಲು ಪ್ರೇರೇಪಿಸುತ್ತದೆ. ಸೆಕ್ಸ್ ಕೊಳಕು ಎನ್ನುವ ಭಾವನೆ ನಿಮ್ಮಲ್ಲಿದ್ದರೆ ಅದನ್ನು ತೆಗೆದುಹಾಕಿ. ನಿಮ್ಮ ಈ ಭಾವನೆಯೇ ಪತಿಯ ದಬ್ಬಾಳಿಕೆಗೆ ಕಾರಣವಾಗಬಹುದು. ಸೆಕ್ಸ್ ಬಗ್ಗೆ ನೀವು ಸಕಾರಾತ್ಮಕವಾಗಿ ಆಲೋಚನೆ ಮಾಡಬೇಕು. ನೀವು ಸಂತೋಷವಾಗಿದ್ದರೆ ಪತಿಯನ್ನು ಸಂತೋಷವಾಗಿಡಲು ಸಾಧ್ಯ. ಪತಿಯಿಂದ ಬಲತ್ಕಾರಕ್ಕೆ ಒಳಗಾಗಬಾರದು ಎನ್ನುವವರು ನೀವಾಗಿದ್ದರೆ ಸೆಕ್ಸ್ ಬಗ್ಗೆ ಧನಾತ್ಮಕ ಚಿಂತನೆ ಬೆಳೆಸಿಕೊಳ್ಳಿ. ಅದ್ರಲ್ಲಿ ಆಸಕ್ತಿ ಹೆಚ್ಚಿಸಿಕೊಳ್ಳುವ ಪ್ರಯತ್ನ ನಡೆಸಿ.
ಕಾರಣ ಹೇಳೋದನ್ನು ಬಿಟ್ಬಿಡಿ : ಮಹಿಳೆಯರು ಸೆಕ್ಸ್ ವಿಷ್ಯ ಬಂದಾಗ ಕಾರಣ ಹೇಳ್ತಾರೆ ಎನ್ನುವ ಆರೋಪವನ್ನು ಪುರುಷರು ಮಾಡ್ತಾರೆ. ಮಕ್ಕಳು, ಕೆಲಸ, ಮೂಡ್ ಸರಿಯಾಗಿಲ್ಲ ಹೀಗೆ ಅನೇಕ ಕಾರಣಗಳನ್ನು ಹೇಳಿ ಸಂಭೋಗದಿಂದ ದೂರವಿರ್ತಾರೆ. ಇದು ಪುರುಷರನ್ನು ಬಲವಂತ ಮಾಡಲು ಪ್ರೇರೇಪಿಸುತ್ತದೆ. ಪತಿಗೆ ಹತ್ತಿರವಾಗುವುದು ಹೆಂಡತಿಯ ಆಂತರಿಕ ಭಾವನೆಗಳನ್ನು ಜಾಗೃತಗೊಳಿಸುತ್ತದೆ. ಇದರಿಂದ ಹೆಂಡತಿಯ ಮೂಡ್ ಸರಿಯಾಗಬಹುದು ಎನ್ನುತ್ತಾರೆ ತಜ್ಞರು.
PARENTING TIPS: ಹೆಚ್ಚೆಚ್ಚು ಭಾಷೆ ತಿಳಿದಷ್ಟು ಮಕ್ಕಳು ಜಾಣರಾಗ್ತಾರೆ
ಹೊಂದಾಣಿಕೆ ಮುಖ್ಯ : ಪತಿ – ಪತ್ನಿ ಇಬ್ಬರು ಒಟ್ಟಿಗೆ ವಾಸಿಸುವುದ್ರಿಂದ ಪತಿ ಏನನ್ನು ಬಯಸ್ತಿದ್ದಾನೆ ಎಂಬುದು ಪತಿಗೆ ತಿಳಿದಿರುತ್ತದೆ. ಕೆಲವರು ಮುನ್ಸೂಚನೆ ನೀಡಿರ್ತಾರೆ. ಮತ್ತೆ ಕೆಲವರು ಯಾವುದೇ ಮುನ್ಸೂಚನೆ ಇಲ್ಲದೆ ಶಾರೀರಿಕ ಸಂಬಂಧ ಬೆಳೆಸ್ತಾರೆ. ಈ ಸಮಯದಲ್ಲಿ ಪತ್ನಿಯಾದವಳು ಅದನ್ನು ವಿರೋಧಿಸಿ, ಗಲಾಟೆ ಮಾಡಿಕೊಂಡು ಮತ್ತಷ್ಟು ಸಂಕಷ್ಟ ಎದುರಿಸುವ ಬದಲು ಆತನ ಜೊತೆ ಹೊಂದಾಣಿಕೆ ಮಾಡಿಕೊಂಡ್ರೆ ಸಂಬಂಧ ಸುಗಮವಾಗಿ ಸಾಗುತ್ತದೆ. ಎಲ್ಲವೂ ಬಲವಂತದ ಸಂಭೋಗವಲ್ಲ. ಅದ್ರಲ್ಲಿ ಇಬ್ಬರ ತಪ್ಪಿರುತ್ತದೆ. ಇಬ್ಬರು ಪರಸ್ಪರ ಅರಿತಾಗ ದಾಂಪತ್ಯದಲ್ಲಿ ಈ ಸಮಸ್ಯೆ ಬರುವುದಿಲ್ಲ ಎನ್ನುತ್ತಾರೆ ತಜ್ಞರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.