
ಮಕ್ಕಳು ದೊಡ್ಡವರನ್ನ ನೋಡಿ ಕಲೀತಾರೆ. ಈ ಮಾತು ಅಕ್ಷರಶಃ ನಿಜ. ನಾವು ಯಾವ ಭಾಷೆಯನ್ನು ಹೇಗೆ ಆಡುತ್ತೇವೆಯೋ ಮಕ್ಕಳು ಕೂಡ ಹಾಗೆಯೇ ನಮ್ಮನ್ನು ಅನುಸರಿಸುತ್ತಾರೆ. ಮಕ್ಕಳು ಮನೆಯವರ ಹೊರತಾಗಿ ಸುತ್ತ ಮುತ್ತಲ ಪರಿಸರದಿಂದಲೂ ಭಾಷೆ, ಸಂಸ್ಕೃತಿಗಳನ್ನು ಕಲಿಯುತ್ತಾರೆ. ಹೀಗೆ ಸುತ್ತಲಿನ ಜನರೊಂದಿಗೆ ಬೆರೆಯುವುದರಿಂದ ಮಕ್ಕಳ ಭಾಷೆ, ಕಮ್ಯುನಿಕೇಷನ್ ಸ್ಕಿಲ್ ಕೂಡ ವೃದ್ಧಿಯಾಗುತ್ತದೆ. ಈಗಂತೂ ಮಕ್ಕಳ ಕಲಿಕೆಗೆ ಪೂರಕವಾಗುವಂತ ಆಟಿಕೆಗಳು, ಪುಸ್ತಕಗಳು ಸಾಕಷ್ಟು ಲಭ್ಯವಿದೆ.
ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನೋ ಹಾಗೆ ಮಕ್ಕಳು (Children ) ಚಿಕ್ಕವರಿರುವಾಗಲೇ ನಾವು ಅವರಿಗೆ ಭಾಷೆ (Language) , ವಿಚಾರ, ಸಂಸ್ಕೃತಿಯ ಬಗ್ಗೆ ಹೇಳಿಕೊಟ್ಟರೆ ಅವರ ಮುಂದಿನ ಭವಿಷ್ಯ (Future ) ಉಜ್ವಲವಾಗಿರುತ್ತೆ. ಭಾಷೆ ಮಕ್ಕಳಿಗೆ ಇತರರೊಡನೆ ಬೆರೆಯಲು ಒಂದು ಸಂಪರ್ಕ ಸಾಧನದಂತೆ ಕೆಲಸಮಾಡುತ್ತದೆ. ಮಕ್ಕಳು ಬೇರೆ ಬೇರೆ ಭಾಷೆ ಕಲಿಯುವುದರಿಂದ ಇನ್ನೊಬ್ಬರ ಆಚಾರ, ವಿಚಾರವನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಒಂದು ಮಗು ಇನ್ನೊಂದು ಮಗುವಿನ ಭಾಷೆಯನ್ನು ಅರಿತಾಗ ಅವರಿಬ್ಬರ ನಡುವೆ ಒಳ್ಳೆಯ ಬಾಂಧವ್ಯ ಬೆಳೆಯುತ್ತದೆ. ಇದರಿಂದ ಮಕ್ಕಳಲ್ಲಿ ಕ್ರಿಯೆಟಿವಿಟಿ ಹೆಚ್ಚುತ್ತದೆ. ಯಾವುದೇ ವಿಷ್ಯವನ್ನು ಕೂಡ ದೊಡ್ಡವರಿಗಿಂತ ಮಕ್ಕಳು ಬೇಗ ಕಲಿಯುತ್ತಾರೆ. ಹಾಗಾಗಿ ಬಾಲ್ಯದಲ್ಲಿ ಮಕ್ಕಳಿಗೆ ಬೇರೆ ಬೇರೆ ಭಾಷೆ ಕಲಿಸಬೇಕು. ಇದ್ರಿಂದ ಇನ್ನೂ ಅನೇಕ ಲಾಭಗಳಿವೆ. ನಾವಿಂದು ಮಕ್ಕಳಿಗೆ ಬೇರೆ ಭಾಷೆ ಯಾಕೆ ಕಲಿಸಬೇಕು ಎನ್ನುವ ಬಗ್ಗೆ ನಿಮಗೆ ಹೇಳ್ತೆವೆ.
ಮಕ್ಕಳಿಗೆ ತಿಳಿದಿರಲಿ ನಾಲ್ಕೈದು ಭಾಷೆ :
ಪ್ರೊಫೆಶನಲ್ ಲೈಫ್ ಗೆ ನೆರವಾಗುತ್ತೆ : ಮಕ್ಕಳು ಚಿಕ್ಕವರಿರುವಾಗಲೇ ಅವರಿಗೆ ಬೇರೆ ಬೇರೆ ಭಾಷೆ ಕಲಿಸಬೇಕು. ಅದರಿಂದ ಮುಂದೆ ಅವರಿಗೆ ಹೊರಗಿನ ವ್ಯಕ್ತಿಗಳೊಂದಿಗೆ ಮಾತಾಡಲು, ವ್ಯವಹರಿಸಲು ಅನುಕೂಲವಾಗುತ್ತೆ. ಭಾಷೆಗಳನ್ನು ಕಲಿಯುವುದರಿಂದ ಹೊರ ದೇಶಗಳ ವ್ಯಕ್ತಿಗಳೊಂದಿಗೆ ಕೂಡ ಸಂಪರ್ಕದಲ್ಲಿ ಇರಲು ಸಹಾಯವಾಗುತ್ತೆ. ಭಾಷೆಯ ಹಿಡಿತ ಇರುವುದರಿಂದ ಇತರರೊಂದಿಗೆ ಮಾತಾಡಲು ಅವರು ಹಿಂಜರಿಯುವುದಿಲ್ಲ.
ಸ್ಮರಣ ಶಕ್ತಿ ಹೆಚ್ಚುತ್ತೆ : ಒಂದು ಮಗು ಹೆಚ್ಚಿನ ಭಾಷೆಗಳನ್ನು ಕಲಿಯುವುದರಿಂದ ಅದರ ಸ್ಮರಣ ಶಕ್ತ ಕೂಡ ಹೆಚ್ಚುತ್ತದೆ ಎಂದು ಅನೇಕ ವರದಿಗಳು ಹೇಳುತ್ತವೆ. ಇದರಿಂದ ಮಕ್ಕಳ ವಿಚಾರ ಶಕ್ತಿ, ಶ್ರವಣ ಶಕ್ತಿ ಮತ್ತು ಸಮಸ್ಯೆಯನ್ನು ಬಗೆಹರಿಸುವ ಜಾಣತನವೂ ಬರುತ್ತದೆ. ಇವೆಲ್ಲವುಗಳಿಂದ ಮಕ್ಕಳು ಮಲ್ಟಿಟಾಸ್ಕಿಂಗ್ ಆಗುತ್ತಾರೆ.
ಸ್ಕಿಲ್ಸ್ ಡೆವಲಪ್ ಆಗುತ್ತೆ : ಚಿಕ್ಕ ಮಕ್ಕಳಿಗೆ ನಾವು ಯಾವುದಾದರೂ ವಸ್ತುವನ್ನು ತೋರಿಸಿ ಅದೇನೆಂದು ಹೇಳಿದರೆ ಅವು ಅದನ್ನು ನೆನಪಿಟ್ಟುಕೊಂಡು ಹೇಳುತ್ತವೆ. ಹಾಗೆಯೇ ಅನ್ಯ ಭಾಷೆಗಳನ್ನು ಕಲಿಸುವುದರಿಂದ ಅವರ ಮೆಮೊರಿ ಪವರ್ ಹೆಚ್ಚುತ್ತದೆ. ಇದರಿಂದ ಅವರ ಸ್ಕಿಲ್ ಡೆವಲಪ್ ಆಗಲು ಸಹಾಯವಾಗುತ್ತದೆ.
ಮಗಳು, ತಪ್ಪು ಮಾಡಿದರೆ ಮನ್ನಿಸಿ, ಹೊರ ಹೋಗಿ ಸುತ್ತಾಡಿಕೊಂಡು ಬನ್ನಿಯೊಮ್ಮೆ!
ವಿಚಾರ ಶಕ್ತಿ ಹೆಚ್ಚುತ್ತೆ : ಬೇರೆ ಭಾಷೆಗಳನ್ನು ಕಲಿಯುವುದರಿಂದ ಮಕ್ಕಳ ವಿಚಾರ ಶಕ್ತಿ ಹೆಚ್ಚುತ್ತದೆ. ಯಾವುದಾದರೂ ಒಂದು ಪ್ರಶ್ನೆಗೆ ಉತ್ತರಿಸಲು ಅವರಿಗೆ ಭಾಷೆ ಸಹಾಯ ಮಾಡುತ್ತೆ. ಮಕ್ಕಳು ಬೇರೆ ಬೇರೆ ರೀತಿ ವಿಚಾರ ಮಾಡುವುದರಿಂದ ಅವರ ಕ್ರಿಯಾಶಕ್ತಿ ಹೆಚ್ಚು ಕೆಲಸ ಮಾಡುತ್ತೆ ಮತ್ತು ಮೆದುಳು ಕೂಡ ಕ್ರಿಯಾಶೀಲವಾಗಿರುತ್ತೆ.
Zodiac Sign: ಮಗುವನ್ನ ಬೆಳೆಸೋಕೆ ಸಂಗಾತಿಗೆ ಸಹಕಾರ ನೀಡೋದ್ರಲ್ಲಿ ಇವ್ರು ಗ್ರೇಟ್
ಮಾತೃಭಾಷೆ ಮೇಲೆ ಹೆಚ್ಚಿನ ಹಿಡಿತ ಬರುತ್ತೆ : ಹೆಚ್ಚಿನ ತಂದೆ ತಾಯಿಯರಿಗೆ ತಮ್ಮ ಮಕ್ಕಳು ಬೇರೆ ಬಾಷೆಯನ್ನು ಕಲಿಯುವುದರಿಂದ ಮಾತೃಭಾಷೆಯನ್ನು ಮರೆತುಬಿಡುತ್ತಾರೆ ಎಂಬ ಭಯವಿರುತ್ತೆ. ಆದರೆ ಅದು ಸುಳ್ಳು ಎಂದು ಕೆಲವು ವರದಿಗಳು ಹೇಳುತ್ತೆ. ಮಕ್ಕಳ ಮೇಲೆ ನಡೆಸಿದ ಅಧ್ಯಯನದ ಪ್ರಕಾರ, ಮಕ್ಕಳು ಬೇರೆ ಭಾಷೆಯನ್ನು ಕಲಿತಾಗ ಅವು ತಮ್ಮ ಭಾಷೆಯ ಮೇಲೆ ಹೆಚ್ಚಿನ ಹಿಡಿತ ಸಾಧಿಸುತ್ತಾರೆ ಎಂಬುದು ತಿಳಿದುಬಂದಿದೆ. ಇತರೆ ಭಾಷೆಗಳನ್ನು ಕಲಿಯುವುದರಿಂದ ಮಕ್ಕಳಲ್ಲಿ ಓದುವ ಹವ್ಯಾಸ ಚಿಕ್ಕಂದಿನಿಂದಲೇ ಬೆಳೆಯುತ್ತದೆ. ಭಾಷೆಯ ಬಗ್ಗೆ ಜ್ಞಾನ ಹೆಚ್ಚಿದಂತೆ ವ್ಯಾಕರಣಗಳು ಕೂಡ ತಿಳಿಯುತ್ತಾ ಹೋಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.