MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Relationship
  • Sex Life: ಸೆಕ್ಸ್‌ ಲೈಫ್‌ ಚೆನ್ನಾಗಿರಲು ಈ ನ್ಯಾಚುರಲ್ ಟಿಪ್ಸ್ ಟ್ರೈ ಮಾಡಿ

Sex Life: ಸೆಕ್ಸ್‌ ಲೈಫ್‌ ಚೆನ್ನಾಗಿರಲು ಈ ನ್ಯಾಚುರಲ್ ಟಿಪ್ಸ್ ಟ್ರೈ ಮಾಡಿ

How to improve sex life: ಕಾಮಾಸಕ್ತಿ ಅಥವಾ ಸೆಕ್ಸ್ ಡ್ರೈವ್ ಕೊರತೆ ಸಾಮಾನ್ಯ ಸಮಸ್ಯೆಯಾಗಿದೆ. ಹೀಗಾದರೆ ಲೈಂಗಿಕ ಕ್ರಿಯೆಯಲ್ಲಿ ಯಾವುದೇ ಆಸಕ್ತಿ ಇರೋದಿಲ್ಲ. ಇದರಿಂದ ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರಬಹುದು. ಹಾಗಂತ ಇದಕ್ಕೆ ಮದ್ದೇ ಇಲ್ಲ ಎಂದು ಅಲ್ಲ. ನ್ಯಾಚುರಲ್ ವಿಧಾನದ ಮೂಲಕ ಸೆಕ್ಸ್ ಲೈಫ್ ಸುಧಾರಿಸಬಹುದು. ಹೇಗೆ ಅನ್ನೋದನ್ನು ನೋಡೋಣ. 

2 Min read
Suvarna News
Published : Nov 26 2022, 04:56 PM IST
Share this Photo Gallery
  • FB
  • TW
  • Linkdin
  • Whatsapp
110

ನಿಮ್ಮ ಜೀವನದ ಯಾವುದಾದರೂ ಒಂದು ಹಂತದಲ್ಲಿ ಕಡಿಮೆ ಕಾಮಾಸಕ್ತಿಯನ್ನು (sex drive) ಅನುಭವಿಸುವುದು ತುಂಬಾ ಸಾಮಾನ್ಯವಾಗಿದೆ. ಈ ಸಮಸ್ಯೆ ಯಾರಿಗಾದರೂ, ಯಾವಾಗ ಬೇಕಾದರೂ ಆಗಬಹುದು. ಆದರೆ ಒಳ್ಳೆಯ ವಿಷಯವೆಂದರೆ ಅದನ್ನು ಸುಲಭವಾಗಿ ಸರಿಪಡಿಸಬಹುದು. ನೀವು ಕೆಲವೊಂದು ನ್ಯಾಚುರಲ್ ವಿಧಾನಗಳನ್ನು ಅನುಸರಿಸುವ ಮೂಲಕ ಕಾಮಾಸಕ್ತಿಯನ್ನು ಹೆಚ್ಚಿಸಬಹುದು. ನಿಮ್ಮ ಸೆಕ್ಸ್ ಡ್ರೈವ್ ಅನ್ನು ನೀವು ಹೇಗೆ ಹೆಚ್ಚಿಸಬಹುದು ಅಥವಾ ನಿಮ್ಮ ಕಾಮಾಸಕ್ತಿಯನ್ನು ನೀವು ಹೇಗೆ ಹೆಚ್ಚಿಸಬಹುದು ಅನ್ನೋದರ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ… 

210

ವ್ಯಾಯಾಮ: ಸೆಕ್ಸ್ ಡ್ರೈವ್ ಕಡಿಮೆಯಾಗಲು ಒಂದು ಸಂಭಾವ್ಯ ಕಾರಣವೆಂದರೆ ವ್ಯಾಯಾಮದ (exercise) ಕೊರತೆ. ಆರೋಗ್ಯವನ್ನು ಕಾಪಾಡಿಕೊಳ್ಳಲು ವ್ಯಾಯಾಮವು ಮುಖ್ಯವಾಗಿದೆ. ಆರೋಗ್ಯವು ಉತ್ತಮವಾಗಿದ್ದರೆ ಸೆಕ್ಸ್ ಡ್ರೈವ್ ಉತ್ತಮವಾಗಿರುತ್ತದೆ. ಇದು ಯೋಗ, ಜಾಗಿಂಗ್ ಅಥವಾ ನಿಮ್ಮ ನೆಚ್ಚಿನ ಕ್ರೀಡೆಯ ಅಭ್ಯಾಸವಾಗಿರಲಿ, ವ್ಯಾಯಾಮವು ನೀವು ಉಚಿತವಾಗಿ ಪಡೆಯಬಹುದಾದ ಉತ್ತಮ ನೈಸರ್ಗಿಕ ಕಾಮಾಸಕ್ತಿ ವರ್ಧಕವಾಗಿದೆ. 

310

ಅನೇಕ ವೈದ್ಯರು ಮಲಗುವ ಕೋಣೆಯಲ್ಲಿ ಹೆಚ್ಚು ವಿಶ್ರಾಂತಿ ಮತ್ತು ಆತ್ಮವಿಶ್ವಾಸ ಹೆಚ್ಚಿಸಲು  ವ್ಯಾಯಾಮ ಮಾಡಿ ಎಂದು ಶಿಫಾರಸು ಮಾಡುತ್ತಾರೆ. ನೀವು ಪ್ರಯತ್ನಿಸಲು ಬಯಸುವ ಒಂದು ವ್ಯಾಯಾಮವೆಂದರೆ ಬಾಕ್ಸಿಂಗ್ ಕ್ಲಾಸ್ (boxing class) . ಬಾಕ್ಸಿಂಗ್ ಕಲಿಯುವುದು ಆತ್ಮವಿಶ್ವಾಸ ಹೆಚ್ಚಿಸಲು ಸಹಾಯ ಮಾಡುತ್ತದೆ, ಅಲ್ಲದೇ ಇದು ಕಾಮಾಸಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅದೇ ಸಮಯದಲ್ಲಿ, ಕೆಗೆಲ್ ವ್ಯಾಯಾಮ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಸೆಕ್ಸ್ ಲೈಫ್ ಚೆನ್ನಾಗಿರಬೇಕು ಅಂದ್ರೆ ವ್ಯಾಯಾಮ ಮಾಡೋದನ್ನು ಮರೆಯಬೇಡಿ.

410

ಸ್ಟ್ರೆಸ್ ದೂರ ಮಾಡಿ (kick away the stress): ಸಕಾರಾತ್ಮಕ ರೀತಿಯಲ್ಲಿ ಒತ್ತಡವನ್ನು ನಿರ್ವಹಿಸೋದ್ರಿಂದ ನಿಮ್ಮ ಸೆಕ್ಸ್ ಡ್ರೈವ್ ಹೆಚ್ಚಿಸಲು ಸಹಾಯ ಆಗುತ್ತೆ. ಒತ್ತಡವನ್ನು ಎದುರಿಸಲು ಧ್ಯಾನ ಉತ್ತಮ ಮಾರ್ಗವಾಗಿದೆ. ಸರಳ ಧ್ಯಾನವನ್ನು ನೀವು ಉತ್ತಮ ಶಿಕ್ಷಕರಿಂದ ಸುಲಭವಾಗಿ ಕಲಿಯಬಹುದು. ಆರೋಗ್ಯಕರ ಜೀವನ ಶೈಲಿ ಅಳವಡಿಸಿಕೊಂಡ್ರೆ ಕಾಮಾಸಕ್ತಿ ಹೆಚ್ಚಿಸೋದು ಸುಲಭವಾಗುತ್ತೆ.

510

ಸಂಗಾತಿಯೊಂದಿಗೆ ಮಾತನಾಡಿ: ಸಂಗಾತಿಯೊಂದಿಗೆ ಮುಕ್ತ ಮತ್ತು ಪ್ರಾಮಾಣಿಕ ರೀತಿಯಲ್ಲಿ ಮಾತನಾಡೋದು (talk to your partner) ನಿಮ್ಮ ಮನಸ್ಸಿನಿಂದ ಚಿಂತೆಗಳನ್ನು ದೂರ ಮಾಡಲು ಮತ್ತು ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ಉತ್ತಮ ಮಾರ್ಗವಾಗಿದೆ. ಫೋನ್ ಅಥವಾ ಟಿವಿ ಕಡೆಯಿಂದ ಗಮನವನ್ನು ಬೇರೆಡೆಗೆ ತಿರುಗಿಸಿ ಸಂಗಾತಿಯೊಂದಿಗೆ ಜೊತೆ ಒಂದು 20 ನಿಮಿಷ ಮನಸ್ಸು ಬಿಚ್ಚಿ ಮಾತನಾಡಿ. ಇದರಿಂದ ಮನಸ್ಸು ನಿರಾಳವಾಗುತ್ತೆ.
 

610
Image: Getty Images

Image: Getty Images

ಸಂಗಾತಿ ಜೊತೆ ಮನಸ್ಸು ಬಿಚ್ಚಿ ಮಾತನಾಡಿದಾಗ ಇಬ್ಬರ ನಡುವೆ ಆಳವಾದ ಸ್ನೇಹ ಬೆಳೆಯಲು ಸಹಾಯವಾಗುತ್ತೆ ಮತ್ತು ನಿಮ್ಮ ಲೈಂಗಿಕ ಜೀವನದಲ್ಲಿ ಏನು ಕೊರತೆಯಿದೆ ಎಂದು ನೀವು ಅವರಿಗೆ ಹೇಳಲು ಸುಲಭವಾಗುತ್ತೆ. ಬಹುಶಃ ನೀವು ದೀರ್ಘಕಾಲದವರೆಗೆ ಫೋರ್ ಪ್ಲೇ ಮಾಡಲು ಬಯಸಬಹುದು ಅಥವಾ ಸ್ವಲ್ಪ ಡರ್ಟಿ ಟಾಕ್ (dirty talk) ಬಯಸಬಹುದು, ಇದನ್ನೆಲ್ಲಾ ಸಂಗಾತಿ ಜೊತೆ ಹೇಳಿದ್ರೆ ಅಲ್ವಾ ಗೊತ್ತಾಗೋದು. 

710

ಚೆನ್ನಾಗಿ ನಿದ್ದೆ ಮಾಡಿ: ಬಿಡುವಿಲ್ಲದ ಜೀವನಶೈಲಿಯಿಂದಾಗಿ ರಾತ್ರಿ ಚೆನ್ನಾಗಿ ನಿದ್ರೆ ಮಾಡಲು ಕಷ್ಟವಾಗಬಹುದು, ಇದು ನಿಮಗೆ ಹಗಲಿನಲ್ಲಿ ಆಯಾಸ ಮತ್ತು ಒತ್ತಡವನ್ನು ಅನುಭವಿಸುವಂತೆ ಮಾಡುತ್ತದೆ. ನಿಮ್ಮ ದೇಹವು ಸಾಮಾನ್ಯವಾಗಿ ಕಾರ್ಯನಿರ್ವಹಿಸಲು ನಿದ್ರೆ ಮುಖ್ಯ. ಸಾಕಷ್ಟು ನಿದ್ರೆ ಪಡೆಯುವುದು (sound sleep) ನಿಮ್ಮ ಲೈಂಗಿಕ ಡ್ರೈವ್ ಹೆಚ್ಚಿಸಲು ಸಹಾಯ ಮಾಡುತ್ತದೆ.

810

ವೈದ್ಯರೊಂದಿಗೆ ಮಾತನಾಡಿ: ಯಾವುದೇ ರೀತಿಯ ಚಿಕಿತ್ಸೆಯ ಸಮಯದಲ್ಲಿ ಅಥವಾ ಅದಕ್ಕೂ ಮೊದಲು, ನಿಮ್ಮ ಮೊದಲ ಆದ್ಯತೆ ವೈದ್ಯರ ಜೊತೆ ಮಾತನಾಡುವುದೇ ಆಗಿರಬೇಕು. ನಿಮ್ಮ ಕಾಮಾಸಕ್ತಿಯ ಸಮಸ್ಯೆಯು ಒತ್ತಡ ಅಥವಾ ಇನ್ನಾವುದೇ ಅಂತರ್ಗತ ಸಮಸ್ಯೆಯಿಂದಾಗಿದೆಯೇ (internal problem) ಎಂದು ಕಂಡುಹಿಡಿಯಲು ವೈದ್ಯರು ನಿಮಗೆ ಸಹಾಯ ಮಾಡಬಲ್ಲರು. 

910

ಕಾಮಾಸಕ್ತಿ ಕಡಿಮೆಯಾಗುವುದು ಲೂಬ್ರಿಕೇಶನ್ ಅಥವಾ ಇತರ ಯಾವುದೇ ಇಂಟರ್ನಲ್ ಮೆಡಿಕಲ್ ಅಥವಾ ಮಾನಸಿಕ ಆರೋಗ್ಯ ಸ್ಥಿತಿಯಂತಹ (mental health) ಸಮಸ್ಯೆಗಳ ಪರಿಣಾಮವಾಗಿರಬಹುದು, ಹಾಗಾಗಿ ವೈದ್ಯರನ್ನು ಭೇಟಿ ನೀಡೋದು ನಿಮಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಕಾರಣ ಏನೇ ಇರಲಿ, ನಿಮ್ಮ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುವ ಸಮಸ್ಯೆಯ ಮೂಲವನ್ನು ತಲುಪಲು ಮತ್ತು ಪರಿಹಾರ ಕಂಡುಹಿಡಿಯಲು ವೈದ್ಯರು ಖಂಡಿತವಾಗಿ ಸಹಾಯ ಮಾಡುತ್ತಾರೆ. 

1010

ಔಷಧ ತೆಗೆದುಕೊಳ್ಳಿ: ಕಡಿಮೆ ಕಾಮಾಸಕ್ತಿಗೆ ಚಿಕಿತ್ಸೆ ನೀಡಲು ವೈದ್ಯರು ಔಷಧಗಳನ್ನು ಸೂಚಿಸಬಹುದು. ಗಿಡಮೂಲಿಕೆ ಔಷಧಗಳು ಕಾಮಾಸಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಕೆಲವರು ನಂಬುತ್ತಾರೆ, ಆದರೆ ಇದನ್ನು ಬೆಂಬಲಿಸಲು ಸಾಕಷ್ಟು ಡೇಟಾ ಇನ್ನೂ ಲಭ್ಯವಿಲ್ಲ. ಯಾವುದೇ ಔಷಧೋಪಚಾರ ಅಥವಾ ಪೂರಕ ತೆಗೆದುಕೊಳ್ಳುವ ಮೊದಲು ನಿಮ್ಮ ವೈದ್ಯರೊಂದಿಗೆ ಮಾತನಾಡುವುದು ಯಾವಾಗಲೂ ಉತ್ತಮ.

About the Author

SN
Suvarna News
ಜೀವನಶೈಲಿ
ಸಂಬಂಧಗಳು

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved