Latest Videos

ಪತ್ನಿ ಇನ್ನೊಬ್ಬರ ಜೊತೆ ಸಂಬಂಧ ಬೆಳೆಸಿದ್ರೆ No Problem ಅಂತಾನೆ ಈ ಪತಿ ಮಹಾಶಯ!

By Suvarna NewsFirst Published Mar 17, 2022, 5:16 PM IST
Highlights

ಸಾಮಾನ್ಯವಾಗಿ ದಾಂಪತ್ಯದಲ್ಲಿ ಬಿರುಕು ಮೂಡುವುದೇ ವಿವಾಹೇತರ ಸಂಬಂಧಗಳಿಂದ. ಆದ್ರೆ ಇಲ್ಲೊಂದು ವಿಚಿತ್ರ ಜೋಡಿಯಿದೆ. ಪತ್ನಿ ಪರಪುರುಷನ ಜೊತೆ ಸಂಬಂಧ ಬೆಳೆಸಿದ್ರೂ ಓಕೆ ಎನ್ನುವ ಪತಿ ತಾನೇ ಕೆಲ ಹುಡುಗರನ್ನು ಸಜೆಸ್ಟ್ ಮಾಡ್ತಾನಂತೆ.
 

ಬಯಸಿದ ಸಂಗಾತಿ (Partner) ಸಿಗುವುದು ಬಹಳ ಅಪರೂಪ. ಸಿಕ್ಕಾಗ ಸ್ವರ್ಗ (Heaven) ಕ್ಕೆ ಮೂರೇ ಗೇಣು ಎನ್ನುವವರಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ (Photo) , ವಿಡಿಯೋ ಹಾಕುವವರ ಸಂಖ್ಯೆ ಹೆಚ್ಚಾಗಿದೆ. ಮನೆ (Home)ಯೊಳಗೆ ಎಷ್ಟು ಕಚ್ಚಾಡಿಕೊಂಡ್ರೂ ಫೋಟೋಕ್ಕೆ ಪ್ರೀತಿಯ ಫೋಸ್ ನೀಡುವ ಸಂಗಾತಿಗಳಿಗೆ ಕಮ್ಮಿಯೇನಿಲ್ಲ. ಅವರ ಫೋಟೋಗಳನ್ನು ತಮ್ಮ ಜೀವನಕ್ಕೆ ಹೋಲಿಕೆ ಮಾಡಿಕೊಂಡು ನೋವುಣ್ಣುವವರು ಅನೇಕರಿದ್ದಾರೆ. ಆದ್ರೆ ನೋಡಿದ್ದೆಲ್ಲ ಸತ್ಯವಲ್ಲ ಎಂಬುದು ತಿಳಿದಿರಬೇಕು. ಹಾಗೆ ಎಲ್ಲ ಸಂಗಾತಿಗಳ ಮಧ್ಯೆ ನಾವುಂದುಕೊಂಡಷ್ಟು ಪ್ರೀತಿ, ಆತ್ಮೀಯತೆ ಇರುವುದಿಲ್ಲ. ಅವರಲ್ಲೂ ಅನೇಕ ಗುಟ್ಟು ಅಡಗಿರುತ್ತದೆ. ಮಹಿಳೆಯೊಬ್ಬಳು ತನ್ನ ಕಥೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಕುಟುಂಬಸ್ಥರಿಗೆ ಮೋಸ ಮಾಡ್ತಿರುವ ಆಕೆ, ತನ್ನ ಜೀವನ ಶೈಲಿಯನ್ನು ವಿವರಿಸಿದ್ದಾಳೆ. ಆಕೆ ಬದುಕುತ್ತಿರುವ ರೀತಿ ವಿಚಿತ್ರವಾಗಿದೆ.

ಮಹಿಳೆ ತನ್ನ ಹೆಸರನ್ನು ಹೇಳಿಲ್ಲ. ಆದ್ರೆ ಆಕೆ ಪತಿಯ ಹೆಸರನ್ನು ಬಹಿರಂಗಪಡಿಸಿದ್ದಾಳೆ. ಆಕೆ ಪತಿಯ ಹೆಸರು ಅವಿನಾಶ್. ಕೆಲವೇ ದಿನಗಳ ಹಿಂದೆ ಇವರಿಬ್ಬರ ಮದುವೆಯಾಗಿದೆಯಂತೆ. ಮಹಿಳೆ ಬಾಳಲ್ಲಿ ಪ್ರೀತಿ ಬಿಟ್ಟು ಎಲ್ಲವೂ ಇದೆಯಂತೆ. ಇದಕ್ಕೆ ತಾನೇ ಕಾರಣ ಎನ್ನುತ್ತಾಳೆ ಮಹಿಳೆ. ಮೊದಲಿನಿಂದಲೂ ಮಾಡರ್ನ್ ಜೀವನ ನಡೆಸುತ್ತಿರುವ ಮಹಿಳೆಗೆ ತಂದೆ-ತಾಯಿಯಿಂದ ಯಾವುದೇ ಅಡ್ಡಿಯಾಗಿರಲಿಲ್ಲವಂತೆ. ಸದಾ ತನ್ನಿಷ್ಟದಂತೆ ಬದುಕುತ್ತಿದ್ದ ಆಕೆಯನ್ನು ಪಾಲಕರು ತಡೆದಿರಲಿಲ್ಲವಂತೆ. ಸಂಗಾತಿ ಹುಡುಕುವಾಗ ಕೂಡ ಮಹಿಳೆ ಅದನ್ನೇ ಬಯಸಿದ್ದಳಂತೆ. ಪ್ರೀತಿಗಿಂತ ಹೆಚ್ಚು ತನ್ನ ಆಸೆಗಳನ್ನು ಅರ್ಥ ಮಾಡಿಕೊಂಡು ನಡೆಯುವ, ತನಗೆ ಸ್ವಾತಂತ್ರ ನೀಡುವ ಪತಿಯ ಹುಡುಕಾಟ ನಡೆಸಿದ್ದಳಂತೆ. ಮೊದಲ ಭೇಟಿಯಲ್ಲಿಯೇ ಅವಿನಾಶ್ ಆಕೆಗೆ ಇಷ್ಟವಾಗಿದ್ದನಂತೆ. ನಿನಗೆ ಬೇಕಾದಂತೆ ಜೀವಿಸಬಹುದೆಂದು ಅವಿನಾಶ್ ಹೇಳಿದ್ದನಂತೆ.

First Night ಹಾಳು ಮಾಡುತ್ತೆ ಪುರುಷರ ಈ ಸಣ್ಣ ತಪ್ಪು

ಮದುವೆ ನಂತ್ರದ ಬದುಕು : ಮದುವೆಯಾದ್ಮೇಲೆ ಸ್ನೇಹಿತರಂತಿದೆ ನನ್ನ ಜೀವನ ಎನ್ನುತ್ತಾಳೆ ಮಹಿಳೆ. ವಾಸ್ತವವಾಗಿ ಆಕೆ ಬದುಕಿನಲ್ಲಿ ಎಂದೂ ಅವಿನಾಶ್ ಇಣುಕಿ ನೋಡಿಲ್ಲವಂತೆ. ಸ್ವತಂತ್ರವಾಗಿ ಬದುಕುವ ಅವಕಾಶ ನೀಡಿದ್ದಾನಂತೆ. ಇದನ್ನೇ ಮಹಿಳೆ ಬಯಸಿದ್ದಳಂತೆ. ಇಬ್ಬರ ಮಧ್ಯೆ ಶಾರೀರಿಕ ಸಂಬಂಧ ಬೆಳೆದಿಲ್ಲವೆಂದ್ರೂ ತಪ್ಪಿಲ್ಲ. ನಮ್ಮಿಬ್ಬರ ಮಧ್ಯೆ ಪ್ರೀತಿಯಿಲ್ಲ. ಆದ್ರೆ ಇಬ್ಬರೂ ಖುಷಿಯಾಗಿ ಜೀವನ ನಡೆಸುತ್ತಿದ್ದೇವೆ ಎನ್ನುತ್ತಾಳೆ ಆಕೆ. 

ಕುಟುಂಬದ ಕಣ್ಣು ಕಟ್ಟುವ ಯತ್ನ : ನಮ್ಮಿಬ್ಬರ ಗುಟ್ಟು ಎಂದೂ ಹೊರಗೆ ಬರಬಾರದು ಎಂಬ ಶರತ್ತನ್ನು ಅವಿನಾಶ್ ವಿಧಿಸಿದ್ದಾನಂತೆ. ಯಾವುದೇ ಕಾರಣಕ್ಕೂ ಕುಟುಂಬಕ್ಕೆ ನಮ್ಮಿಬ್ಬರ ಸತ್ಯ ಗೊತ್ತಾಗಬಾರದು ಎಂದಿದ್ದಾನಂತೆ. ಇದೇ ಕಾರಣಕ್ಕೆ ಎಲ್ಲರ ಮುಂದೆ ಪತಿ-ಪತ್ನಿಯಂತೆ ನಾಟಕವಾಡ್ತಾರಂತೆ ಇವರು. ರೋಮ್ಯಾಂಟಿಕ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಜೊತೆಗೆ ಇಬ್ಬರ ಮಧ್ಯೆ ಪ್ರೀತಿಯಿದೆ ಎಂಬುದನ್ನು ತೋರಿಸುವ ಪ್ರಯತ್ನ ನಡೆಸುತ್ತಾರಂತೆ. ಅಷ್ಟೇ ಅಲ್ಲ ಅನೇಕ ಬಾರಿ ಅವಿನಾಶ್ ಪತ್ನಿಗಾಗಿ ಟೂರ್ ಪ್ಲಾನ್ ಕೂಡ ಮಾಡಿದ್ದಾನಂತೆ. ಇಬ್ಬರು ಅನೇಕ ನಗರಗಳನ್ನು ಸುತ್ತಿದ್ದಾರಂತೆ. ಇಬ್ಬರು ಒಟ್ಟಿಗೆ ಇರುವುದು ನಮಗೆ ಹಿಂಸೆಯಾಗುತ್ತದೆ. ಮನೆಯಿಂದ ಹೊರಗೆ ಬೀಳ್ತಿದ್ದಂತೆ ನಮ್ಮ ದಾರಿ ಬೇರೆಯಾಗುತ್ತದೆ. ಇಬ್ಬರೂ ನಮಗಿಷ್ಟವಾದ ಕೆಲಸವನ್ನು ನಾವು ಮಾಡ್ತೇವೆ ಎನ್ನುತ್ತಾಳೆ ಮಹಿಳೆ.

ವಿಚ್ಛೇದನ ಬಯಸೋದ್ರಲ್ಲಿ ಮಹಿಳೆಯರೇ ಮುಂದು!

ವಿವಾಹೇತರ ಸಂಬಂಧಕ್ಕಿಲ್ಲ ಅಡ್ಡಿ : ಇಷ್ಟೇ ಅಲ್ಲ, ಪತ್ನಿ ಬೇರೆಯವರ ಜೊತೆ ಸಂಬಂಧ ಬೆಳೆಸುವುದು ಅವಿನಾಶ್ ಗೆ ಇಷ್ಟವಂತೆ. ಅನೇಕ ಬಾರಿ ಆತನೇ ಅನೇಕರ ಪರಿಚಯಮಾಡಿಕೊಟ್ಟಿದ್ದಾನಂತೆ. ವಿವಾಹೇತರ ಸಂಬಂಧದ ಬಗ್ಗೆ ಮಹಿಳೆ ಹೇಳಿದ್ರೆ ಪತಿ ಖುಷಿಯಾಗ್ತಾನಂತೆ. ಖುಷಿಯಾಗಿರಲು ಏನು ಬೇಕಾದ್ರೂ ಮಾಡು ಎನ್ನುತ್ತಾನಂತೆ. ಆದ್ರೆ ಈ ವಿಷ್ಯ ಸಂಬಂಧಿಕರು, ಸ್ನೇಹಿತರು, ಕುಟುಂಬಸ್ಥರಿಗೆ ತಿಳಿಯಬಾರದು ಎನ್ನುತ್ತಾನಂತೆ ಅವಿನಾಶ್. ನಾನೂ ಕೂಡ ಇದನ್ನೇ ಬಯಸುತ್ತೇನೆ. ನಮ್ಮಿಬ್ಬರ ಸಂಬಂಧದ ಬಗ್ಗೆ ಯಾರೂ ಪ್ರಶ್ನೆ ಮಾಡುವುದು ನನಗೆ ಇಷ್ಟವಿಲ್ಲ. ನಮ್ಮಿಬ್ಬರನ್ನು ಅರ್ಥ ಮಾಡಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ನಾವಿಬ್ಬರೂ ಖುಷಿಯಾಗಿದ್ದೇವೆ. ನಾವಿಬ್ಬರೂ ಸಂತೋಷವಾಗಿದ್ದೇವೆಂದ್ಮೇಲೆ ಇದ್ರಲ್ಲಿ ತಪ್ಪೇನಿಲ್ಲ ಎನ್ನುತ್ತಾಳೆ ಮಹಿಳೆ.

click me!