ಬೆಂಗಳೂರು: ಮಹಾನಗರಿ ಬೆಂಗಳೂರಿನ ಕನಿಷ್ಠ 2,000 ವೃದ್ಧರು ನಿವೃತ್ತಿಯ ನಂತರ ತಮ್ಮ ಕುಟುಂಬಗಳಿಂದ ನಿರಾಶ್ರಿತರಾಗಿ, ಪರಿತ್ಯಕ್ತರಾಗಿ ಬದುಕುತ್ತಿದ್ದಾರೆ. ಉಳಿದ ಜೀವನಕ್ಕಾಗಿ ಆಶ್ರಯವನ್ನು ಹುಡುಕುತ್ತಾರೆ ಅಥವಾ ಭಿಕ್ಷಾಟನೆಯನ್ನು ಆಶ್ರಯಿಸುತ್ತಾರೆ ಎಂದು ವರದಿಯೊಂದು ಹೇಳಿದ್ದು, ಬೆಚ್ಚಿ ಬೀಳಿಸುವಂತಿದೆ. ಬೆಂಗಳೂರಿನ ಆರ್ಥಿಕವಾಗಿ ಸಧೃಡರಲ್ಲದ ಹಿರಿಯರು ತಮ್ಮ ಕುಟುಂಬಗಳಿಂದ ನಿರ್ಲಕ್ಷ್ಯ, ನಿಂದನೆ ಮತ್ತು ಪರಿತ್ಯಕ್ತತೆಯನ್ನು ಎದುರಿಸುತ್ತಾರೆ ಮತ್ತು ಅವರಿಗೆ ವೃದ್ಧಾಪ್ಯ ವಸತಿ ಮತ್ತು ಆರೈಕೆಯ ಅಗತ್ಯವಿದೆ. ಕೋವಿಡ್ ಸಾಂಕ್ರಾಮಿಕದ ಮಧ್ಯೆ ಹಿರಿಯ ನಾಗರಿಕರ ವಸತಿಗಾಗಿ ಬೇಡಿಕೆ ಹೆಚ್ಚಿದೆ ಮತ್ತು ಮುಂಬರುವ ವರ್ಷಗಳಲ್ಲಿ ಬೆಳೆಯುವ ಸಾಧ್ಯತೆಯಿದೆ ಎಂದು ಫೆಬ್ರವರಿಯ ವರದಿಯೊಂದು ಹೇಳಿದೆ.
ಭಾರತದಲ್ಲಿ ಮೊದಲ ಬಾರಿಗೆ ಹಿರಿಯರಿಗಾಗಿ ಆರಂಭಿಸಿದ ಹಿರಿಯರ ಸಹಾಯವಾಣಿ ಬೆಂಗಳೂರಿನಲ್ಲಿದ್ದು ಇದು ನಗರದಲ್ಲಿ ವೃದ್ಧರ ಕಲ್ಯಾಣಕ್ಕಾಗಿ ಸೇವೆಗಳನ್ನು ಒದಗಿಸುತ್ತದೆ. 2021ರ ಅಧ್ಯಯನದ ಪ್ರಕಾರ ಈ ಸಹಾಯವಾಣಿ ಏಪ್ರಿಲ್ 2009 ರಿಂದ ಮಾರ್ಚ್ 2020 ವರೆಗೆ ಬೆಂಗಳೂರಿನಲ್ಲಿ ಹಿರಿಯ ವಯಸ್ಕರಿಂದ ನಿಂದನೆಗೆ ಸಂಬಂಧಿಸಿದಂತೆ 1400 ದೂರು ಕರೆಗಳನ್ನು ದಾಖಲಿಸಿದೆ. ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್ ಎಂಬ ಎನ್‌ಜಿಒ, ಭಾರತದಲ್ಲಿ ವಯಸ್ಸಾದವರಿಗೆ ಬುದ್ಧಿಮಾಂದ್ಯತೆಯಾಗದಂತೆ ಆರೈಕೆ ಮತ್ತು ಉದ್ಯೋಗಗಳನ್ನು ಒದಗಿಸುತ್ತದೆ.
ಪೋಷಕರು, ಹಿರಿಯ ನಾಗರಿಕರ ನಿಂದಿಸಿದರೆ ಜೈಲು ಶಿಕ್ಷೆ: ಮಸೂದೆ ಮಂಡನೆ!
ವೃದ್ಧಾಪ್ಯದಲ್ಲಿ ಪರಿತ್ಯಕ್ತರಾದ ಇವರನ್ನು ಹೆಚ್ಚಾಗಿ ದೈಹಿಕ ಅಥವಾ ಮಾನಸಿಕ ಅಸ್ವಸ್ಥತೆಗಳ ಕಾರಣಗಳಿಂದ ಕುಟುಂಬಗಳು ಕೈಬಿಟ್ಟಿವೆ. ಬೀದಿಗಳಲ್ಲಿ ಭಿಕ್ಷೆ ಬೇಡಲು ವೃದ್ಧರಿಗೆ ಒತ್ತಾಯಿಸಲಾಗುತ್ತದೆ ಮತ್ತು ಅವಮಾನ ಮತ್ತು ನೋವಿನ ಅನರ್ಹ ಜೀವನವನ್ನು ಅವರು ನಡೆಸುತ್ತಾರೆ ಎಂದು ಎನ್‌ಜಿಒ ಹೇಳಿದೆ. ಬೆಂಗಳೂರಿನಾದ್ಯಂತ ವಿವಿಧ ಖಾಸಗಿ ವೃದ್ಧಾಶ್ರಮಗಳಿವೆ, ಆದರೆ ಅವುಗಳಲ್ಲಿ ಐದು ಮಾತ್ರ ಸರ್ಕಾರಿ ಅನುದಾನಿತ/ಧನಸಹಾಯ ಪಡೆದಿವೆ. ಬಡತನದಲ್ಲಿ ವಾಸಿಸುವ ಹಿರಿಯ ನಾಗರಿಕರು ಆದಾಯವನ್ನು ಗಳಿಸಲು ಸಾಧ್ಯವಾಗದ ಕಾರಣ ತಮ್ಮ ಸ್ವಂತ ಕುಟುಂಬದಿಂದ ಪರಿತ್ಯಕ್ತರಾಗುತ್ತಾರೆ.
ಹಿರಿಯರಿಗಾಗಿ ಹೋಮ್ ಕೇರ್: ಎ ಕಾಲ್ ಟು ಆಕ್ಷನ್' ಶೀರ್ಷಿಕೆಯಡಿ ಹೆಲ್ಪ್‌ಏಜ್ ಇಂಡಿಯಾ ಸಂಸ್ಥೆ ಮಾಡಿದ 2019 ರ ವರದಿಯ ಪ್ರಕಾರ, ಸುಮಾರು 3 ಮಿಲಿಯನ್ ವೃದ್ಧರು ಆಶ್ರಯ ವಂಚಿತರಾಗಿದ್ದಾರೆ ಮತ್ತು ಅವರಲ್ಲಿ 93% ರಷ್ಟು ಜನ ನಿವೃತ್ತಿ ನಂತರದ ಪ್ರಯೋಜನಗಳು ಅಥವಾ ಪಿಂಚಣಿಗಳಿಲ್ಲದೆ ಅಸಂಘಟಿತ ವಲಯಕ್ಕೆ ಸೇರಿದ್ದಾರೆ.
ಹಿರಿಯರನ್ನು ಸಾಕದಿದ್ದರೆ ಅಳಿಯ, ಸೊಸೆಗೂ ಶಿಕ್ಷೆ
ಹೆಲ್ಪ್‌ಏಜ್‌ನ ಮತ್ತೊಂದು ಸಮೀಕ್ಷೆಯು ಬೆಂಗಳೂರಿನಲ್ಲಿ 218 ವೃದ್ಧರ ಪೈಕಿ ನಾಲ್ಕನೇ ಒಂದು ಭಾಗದಷ್ಟು ಜನರು ಮನೆಯಲ್ಲಿ ದೌರ್ಜನ್ಯಕ್ಕೊಳಗಾಗಿದ್ದಾರೆ ಎಂದು ಹೇಳಿದೆ. ಅವರಲ್ಲಿ ಸುಮಾರು 73% ಜನರು ಅವಮಾನವನ್ನು ಎದುರಿಸಿದ್ದಾರೆಂದು ಹೇಳಿದ್ದಾರೆ. ಅವರಲ್ಲಿ ಶೇ. 52% ಜನರು ನಿರ್ಲಕ್ಷ್ಯವನ್ನು ಎದುರಿಸಿದ್ದಾರೆ ಮತ್ತು ಕೆಲವರು ಮೌಖಿಕ, ದೈಹಿಕ ಅಥವಾ ಆರ್ಥಿಕ ನಿಂದನೆಯನ್ನು ಅನುಭವಿಸಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರಿನ ನಿವಾಸಿಯಾಗಿರುವ 70 ವರ್ಷದ ಮಹಿಳೆಯೊಬ್ಬರಿಗೆ, ಆಕೆಯ ಗಂಡನ ಮರಣದ ನಂತರ ಆಕೆಗೆ ಅತ್ತೆಯ ಮನೆಯನ್ನು ಬಿಡಲು ಕೇಳಲಾಯಿತು ಎಂದು ಹೇಳಿದರು. ತನಗಾಗಿ ಒಂದು ಮನೆಯನ್ನು ಹುಡುಕಲು ತನ್ನ ಉಳಿತಾಯದ ಬಹುಪಾಲು ಖರ್ಚು ಮಾಡಿದ ನಂತರ, ಆಕೆಯ ಸಂಬಂಧಿಕರು ಅವಳನ್ನು ಹುಡುಕುವವರೆಗೆ ಮತ್ತು ಅವಳನ್ನು ಕರೆದೊಯ್ಯುವವರೆಗೂ ಅವಳು 2017ರವರೆಗೆ ಒಬ್ಬಂಟಿಯಾಗಿ ವಾಸಿಸುತ್ತಿದ್ದಳು ಎಂದು ತಿಳಿದು ಬಂದಿದೆ. ನನಗೆ ಸ್ಥಿರವಾದ ಮನೆ ಇರಲಿಲ್ಲ. ಕೆಲವು ವರ್ಷಗಳ ಅವಧಿಯಲ್ಲಿ ನಾನು ಎಂಟು ಬಾರಿ ಸ್ಥಳಗಳನ್ನು ಬದಲಾಯಿಸಬೇಕಾಗಿತ್ತು ಏಕೆಂದರೆ ನನ್ನ ಬಳಿ ಹಣ ಅಥವಾ ಕುಟುಂಬವಿಲ್ಲ ಮತ್ತು ಭದ್ರತೆಯ ಸಮಸ್ಯೆಯಾಗಿತ್ತು ಎಂದು ಅವರು ಹೇಳಿದರು.