ಅಪ್ಪನ ಖಾಸಗಿ ಅಂಗ ಕತ್ತರಿಸಿ ಹತ್ಯೆ ಮಾಡಿದ್ದ ಅಮ್ಮ- ಮರ್ಡರ್‌ ಮಿಸ್ಟ್ರಿ ಬಿಚ್ಚಿಟ್ಟ ಮಗಳು

By Roopa Hegde  |  First Published Aug 7, 2024, 2:41 PM IST

ಮಗಳ ಮುಂದೆಯೇ ಮಹಿಳೆ ತನ್ನ ಗಂಡನ ಹತ್ಯೆ ಮಾಡಿದ್ದಳು. ಖಾಸಗಿ ಅಂಗವನ್ನು ಕತ್ತರಿಸಿ ಗಂಡನ ಕೊಲೆ ಮಾಡಿದ್ದವಳು ಅದನ್ನು ಮುಚ್ಚಿಡುವ ಪ್ರಯತ್ನ ನಡೆಸಿದ್ದಳು. ಆದ್ರೆ ಆಕೆಗೆ ಮಗಳೇ ಮುಳುವಾದ್ಲು. 
 


ಮಗಳ ಮುಂದೆಯೇ ಅಪ್ಪನ ಖಾಸಗಿ ಅಂಗ ಕತ್ತರಿಸಿ, ರಕ್ತದ ಮಡುವಿನಲ್ಲಿ ರಾಕ್ಷಸಿ ರೂಪ ತಾಳಿದ್ದ ಅಮ್ಮ ಈಗ ಜೈಲು ಸೇರಿದ್ದಾಳೆ. ಅಮ್ಮನ ಈ ಕ್ರೌರ್ಯಕ್ಕೆ ಮಗಳು ಸಾಕ್ಷ್ಯವಾಗಿದ್ದಳು. ತನ್ನ ಚಿಕ್ಕಪ್ಪ ಹಾಗೂ ಪೊಲೀಸ್ ಮುಂದೆ ಎಲ್ಲವನ್ನೂ ಹೇಳಿದ್ದಳು 9 ವರ್ಷದ ಮಗಳು. ಘಟನೆ ನಡೆದು ಎರಡು ವರ್ಷಗಳ ನಂತ್ರ ಪತ್ನಿಯೇ ಅಪರಾಧಿ ಎಂಬುದು ಸಾಬೀತಾಗಿದೆ. ಆಕೆಗೆ ಜೀವಾವಧಿ ಶಿಕ್ಷೆಯನ್ನು ಕೋರ್ಟ್ ವಿಧಿಸಿದೆ. 

ಘಟನೆ ನಡೆದಿರೋದು ಉತ್ತರಾಖಂಡ್ (Uttarakhand) ದ ಪಿಥೋರಗಡದಲ್ಲಿ. ಫೆಬ್ರವರಿ 14, 2022ರಂದು ಮೃತ ಜಿತೇಂದ್ರ ರಾಮ್ ಸಹೋದರ ಪುರಾನ್ ರಾಮ್‌ಗೆ ಕರೆ ಬರುತ್ತೆ. ಪುರಾನ್ ರಾಮ್ ಅಣ್ಣನ ಮನೆಗೆ ಓಡಿ ಬಂದಿದ್ದನಾದ್ರೂ ಆತ ಬರುವ ಮೊದಲೇ ಜಿತೇಂದ್ರ ರಾಮ್ ಸಾವನ್ನಪ್ಪಿದ್ದ. ಆತನ ಸುತ್ತಮುತ್ತ, ಡ್ರೆಸ್ ಮೇಲೆ ಅಲ್ಲಲ್ಲಿ ರಕ್ತ (Blood) ದ ಕಲೆ ಕಾಣಿಸಿತ್ತು. ಅಣ್ಣನ ಸಾವು ಹತ್ಯೆ ಎಂಬ ಅನುಮಾನ ಪುರಾನ್ ರಾಮ್ ಗೆ ಆಗ್ಲೇ ಬಂದಿತ್ತು. ಈ ಸಂಬಂಧ ಪೊಲೀಸರಿಗೆ ಆತ ದೂರು ನೀಡಿದ್ದ. ಆತನ ಪತ್ನಿ ಸುನಿತಾ ಹತ್ಯೆ (Murder) ಮಾಡಿದ್ದಾಳೆಂದು ಆರೋಪ ಮಾಡಿದ್ದ. ಇಷ್ಟು ಖಂಡಾಖಂಡಿತವಾಗಿ ಆತ ಆರೋಪಿಸಲು ಕಾರಣ ಸುನಿತಾ ಮಗಳು, 9ನೇ ತರಗತಿ ವಿದ್ಯಾರ್ಥಿನಿ ಕಾರಣ. ಚಿಕ್ಕಪ್ಪ ಪುರಾನ್ ರಾಮ್ ಅಲ್ಲಿಗೆ ಬರ್ತಿದ್ದಂತೆ, ಜಿತೇಂದ್ರನ ಮಗಳು, ತಮ್ಮ ಅಪ್ಪನನ್ನು, ಅಮ್ಮನೇ ಹತ್ಯೆ ಮಾಡಿದ್ದಾಳೆ ಎಂದಿದ್ದಳು. ಪೊಲೀಸ್ ಮುಂದೆಯೂ ಆಕೆ ಇದೇ ಹೇಳಿಕೆ ನೀಡಿದ್ದಳು.

Tap to resize

Latest Videos

undefined

ದರ್ಶನ್ ಬಟ್ಟೆ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆ, ಹತ್ಯೆಗೆ ಸಿಕ್ತು ಬಿಗ್ ಟ್ವಿಸ್ಟ್!

ಆ ದಿನ ನಡೆದಿದ್ದು ಏನು? : ಜಿತೇಂದ್ರ ಸಹೋದರ ಪುರಾನ್ ರಾಮ್ ಪ್ರತ್ಯೇಕವಾಗಿ ವಾಸವಾಗಿದ್ದಾನೆ. ಜಿತೇಂದ್ರ ಮತ್ತು ಆತನ ಪತ್ನಿ ಸುನಿತಾ ಹಾಗೂ ಮಗಳು ಡಿಗಾಸ್ ಗ್ರಾಮದಲ್ಲಿ ವಾಸವಾಗಿದ್ದಾರೆ. ಆ ದಿನ ರಾತ್ರಿ, ಸುನಿತಾ ಹಾಗೂ ಜಿತೇಂದ್ರನ ಮಧ್ಯೆ ದೊಡ್ಡ ಜಗಳ ನಡೆದಿತ್ತು. ಜಿತೇಂದ್ರ ಕೆಲಸ ಮುಗಿಸಿ ಮನೆಗೆ ಬರ್ತಿದ್ದಂತೆ ಸುನಿತಾ ಜಗಳ ಶುರುಮಾಡಿದ್ದಳು. ರೂಮ್ ಬಾಗಿಲು ಹಾಕಿಕೊಂಡು, ಜಿತೇಂದ್ರನನ್ನು ಥಳಿಸಲು ಶುರು ಮಾಡಿದ್ಲು. ಇಷ್ಟೇ ಅಲ್ಲ ಆತನ ಖಾಸಗಿ ಅಂಗವನ್ನು ಬ್ಲೇಡ್ ನಿಂದ ಕತ್ತರಿಸಿದ್ದಳು. ಈ ಎಲ್ಲವನ್ನೂ ಸುನಿತಾ, ಕಿಟಕಿ ಬಳಿ ನಿಂತು ನೋಡಿದ್ದಳು. ಅಮ್ಮನಿಗೆ ಬಾಗಿಲು ತೆರೆಯುವಂತೆ ವಿನಂತಿಸಿದರೂ ಅಮ್ಮ ಬಾಗಿಲು ತೆರೆದಿರಲಿಲ್ಲ. ಕೋಪದಲ್ಲಿದ್ದ ಸುನಿತಾ, ಪತಿಯ ಖಾಸಗಿ ಅಂಗ ಕತ್ತರಿಸುತ್ತಿದ್ದಂತೆ ರಕ್ತ ಚಿಮ್ಮಿತ್ತು. ರಕ್ತಸ್ರಾವ ಹೆಚ್ಚಾಗ್ತಿದ್ದಂತೆ ಜಿತೇಂದ್ರ ನರಳಿ ಜೀವಬಿಟ್ಟಿದ್ದ. 

ಪುರಾನ್, 15 ವರ್ಷದ ಅಣ್ಣನ ಮಗಳು ಹೇಳಿದ ಕಥೆಯನ್ನು ಪೊಲೀಸರಿಗೆ ಹೇಳಿದ್ದ. ಆ ನಂತ್ರ ಸುನಿತಾ ಮಗಳು ಕೂಡ, ಈ ಕೊಲೆಯನ್ನು ಅಮ್ಮನೇ ಮಾಡಿದ್ದು ಎಂದು ಸಾಕ್ಷ್ಯ ಹೇಳಿದ್ದಳು. ಕಟಕಟೆಯಲ್ಲಿ ಅಮ್ಮನ ಎದುರು ನಿಂತು, ಅಪ್ಪನ ಕೊಲೆಯನ್ನು ಅಮ್ಮ ಮಾಡಿದ್ದಾಳೆ ಎಂದಿದ್ದ ಹುಡುಗಿ, ಘಟನೆಯನ್ನು ಜಡ್ಜ್ ಮುಂದೆ ವಿವರಿಸಿದ್ದಳು.

ಬೆಂಗಳೂರು: ಪುತ್ರನ ಹತ್ಯೆಗೈದ ರೌಡಿಯ ಕೊಂದ ತಂದೆ, ಮಗನ ಕೊಲೆಗೆ ರಿವೇಂಜ್‌ ತೀರಿಸಿಕೊಂಡ ಅಪ್ಪ..!

ಈ ನಂತ್ರ ಸುನಿತಾ ಕೂಡ ತಪ್ಪೊಪ್ಪಿಕೊಂಡಿದ್ದಳು. ಪತಿಯ ಹತ್ಯೆ ಮಾಡಿದ್ದು ನಾನೇ ಎಂದು ಸುನಿತಾ ಹೇಳಿದ್ದಳು. ಬ್ಲೇಡನ್ನು ಪೊದೆಗೆ ಎಸೆದು, ರಕ್ತವನ್ನು ಕ್ಲೀನ್ ಮಾಡಿದ್ದಾಗಿ ಒಪ್ಪಿಕೊಂಡಿದ್ದಳು. ಈ ಭಯಾನಕ ಕಥೆಯನ್ನು ಕೇಳಿದ ಪಿಥೋರಗಢ ಸೆಷನ್ಸ್ ನ್ಯಾಯಾಲಯವು ಅಪರಾಧಿ ಸುನಿತಾಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಅಲ್ಲದೆ 50 ಸಾವಿರ ದಂಡ ಪಾವತಿಸುವಂತೆ ಸೂಚನೆ ನೀಡಿದೆ. ಒಂದ್ವೇಳೆ ಸುನಿತಾ 50 ಸಾವಿರ ರೂಪಾಯಿ ದಂಡ ಪಾವತಿಸಲು ವಿಫಲವಾದ್ರೆ ಆಕೆ ಶಿಕ್ಷೆಯನ್ನು ಇನ್ನೂ ಐದು ವರ್ಷ ಹೆಚ್ಚಿಸುವಂತೆ ಕೋರ್ಟ್ ತೀರ್ಪು ನೀಡಿದೆ. 

click me!