ಸೆಕ್ಸ್‌ಗೂ ಮುನ್ನ ಹಿಟ್ಲರ್ ಗೂಳಿ ವೃಷಣದಿಂದ ಮಾಡಿದ ಮಾತ್ರೆ ಸೇವಿಸ್ತಿದ್ದನಂತೆ!

By Roopa Hegde  |  First Published Sep 9, 2024, 2:02 PM IST

ಸರ್ವಾಧಿಕಾರಿ ಹಿಟ್ಲರ್, ಯಾವ ಕ್ಷೇತ್ರದಲ್ಲೂ ಹಿಂದೆ ಬೀಳಲು ಬಯಸಿರಲಿಲ್ಲ. ಮಹಿಳೆಯರಿಗೆ ಯಾವುದೇ ಅಧಿಕಾರ ನೀಡಿರದ ಹಿಟ್ಲರ್ ಗೆ ಮಹಿಳೆ ಮುಂದೆ ಸೋಲುವ ಮನಸ್ಸಿರಲಿಲ್ಲ. ಪುರುಷತ್ವಕ್ಕೆ ಇಂಪಾರ್ಟೆಂಟ್ ನೀಡ್ತಿದ್ದ ಹಿಟ್ಲರ್, ಶಾರೀರಿಕ ಸಂಬಂಧ ಬೆಳೆಸುವ ವೇಳೆ ಏನು ಸೇವನೆ ಮಾಡ್ತಿದ್ದ ಗೊತ್ತಾ?


ಜರ್ಮನಿಯ ನಿರ್ದಯ ಸರ್ವಾಧಿಕಾರಿ ಹಿಟ್ಲರ್ (Dictator Hitler). ಆತನ ಕ್ರೌರ್ಯ ಪ್ರಸಿದ್ಧಿ ಪಡೆದಿದೆ. ಹಿಟ್ಲರನ ಕ್ರೌರ್ಯದ ಅನೇಕ ಕಥೆಗಳನ್ನು ಜನರು ಈಗ್ಲೂ ನೆನಪಿಸಿಕೊಂಡು ಬೆವರುತ್ತಾರೆ. ಆತ ನೀಡಿದ ಕಷ್ಟಕ್ಕೆ ಸಾವಿರಾರು ಕುಟುಂಬಗಳು ಸರ್ವನಾಶ ಕಂಡಿವೆ. ಹಿಟ್ಲರ್  ಒಂದಲ್ಲ ಎರಡಲ್ಲ 6 ಮಿಲಿಯನ್ ಯಹೂದಿಗಳನ್ನು ಕಗ್ಗೊಲೆ ಮಾಡಿದ್ದ. ಹಿಟ್ಲರ್ ಮಾಡ್ತಿದ್ದ ಕೊಲೆ, ನೀಡ್ತಿದ್ದ ಹಿಂಸೆ ಸೇರಿದಂತೆ ಆತನ ಡ್ರೆಸ್, ಆಹಾರ, ಸೆಕ್ಸ್, ಗರ್ಲ್ ಫ್ರೆಂಡ್ ಎಲ್ಲವೂ ಈಗ್ಲೂ ಚರ್ಚೆಯಾಗುವ ವಿಷ್ಯಗಳಲ್ಲಿ ಒಂದು.

ಹಿಟ್ಲರ್, ಯಾವ ಕ್ಷೇತ್ರದಲ್ಲೂ ತನ್ನನ್ನು ದುರ್ಬಲನಾಗಲು ಬಿಟ್ಟಿರಲಿಲ್ಲ. ಹಿಟ್ಲರ್ ದರ್ಪ, ದೌಲತ್ತು ಹಾಗೂ ಆತನ ಮಾತನಾಡುವ ಶೈಲಿಗೆ ಅನೇಕ ಮಹಿಳೆಯರು ಮರುಳಾಗ್ತಿದ್ದರು. ಹುಡುಗಿಯರನ್ನು ತನ್ನತ್ತ ಆಕರ್ಷಿಸುವ ಶಕ್ತಿ ಹಿಟ್ಲರ್ ಗೆ ಇತ್ತು. ಅನೇಕ ಹುಡುಗಿಯರನ್ನು ಪ್ರೀತಿಸಿದ್ದ ಹಿಟ್ಲರ್, ಶಾರಿರೀಕ ಸಂಬಂಧ ಬೆಳೆಸುವ ವೇಳೆ ಎತ್ತಿನ ವೃಷಣ (bull's testicles)ದಿಂದ ತಯಾರಿಸಿದ ಔಷಧಿಯನ್ನು ಬಳಸುತ್ತಿದ್ದನಂತೆ. 

Latest Videos

undefined

ಆ್ಯಂಕರ್​ ಅನುಪಮಾ ಗೌಡ ಮದ್ವೆಯಾಗದಿರೋದಕ್ಕೆ ಉಪೇಂದ್ರ ಕಾರಣ ಅಂತೆ! ಪತ್ನಿ ಎದುರೇ ರಿವೀಲ್​

ಅಡಾಲ್ಫ್ ಹಿಟ್ಲರ್ ಪುರುಷತ್ವಕ್ಕೆ ಹೆಚ್ಚು ಮಹತ್ವ ನೀಡಿದ್ದ. ಒಬ್ಬ ಮನುಷ್ಯ ಎಷ್ಟು ಪುರುಷತ್ವ ಹೊಂದಿದ್ದಾನೋ ಅಷ್ಟೆ ಪ್ರಭಾವಶಾಲಿ ಎಂದು ಭಾವಿಸಿದ್ದ. ಹಿಟ್ಲರ್ ಬಗ್ಗೆ ಅನೇಕ ಪುಸ್ತಕಗಳಿವೆ. ಒಂದು ಪುಸ್ತಕದಲ್ಲಿ ಹಿಟ್ಲರ್ ಸ್ವಭಾವ, ಆತನ ಸ್ನೇಹ, ಮೊಂಡುತನವನ್ನು ಬರೆಯಲಾಗಿದೆ. ನಿಜವಾದ ಸ್ನೇಹಕ್ಕಾಗಿ ಅಸಮರ್ಥನಾಗಿದ್ದ ಹಿಟ್ಲರ್, ಪ್ರಕ್ಷುಬ್ಧ ಇಂದ್ರಿಯವಾದಿ ಎಂದು ಪುಸ್ತಕದಲ್ಲಿ ಪ್ರತಿಪಾದಿಸಲಾಗಿದೆ.  ಮೊಂಡನಾಗಿದ್ದ ಹಿಟ್ಲರ್, ಆತ್ಮವಿಶ್ವಾಸ (confidence) ದಿಂದನೇ ಮಹಿಳೆಯರನ್ನು ಸೆಳೆಯುತ್ತಿದ್ದ. 

ಹೆಣ್ಣನ್ನು ಹೇಗೆ ಒಲಿಸಿಕೊಳ್ಬೇಕು ಎನ್ನುವುದು ಹಿಟ್ಲರ್ ಗೆ ಗೊತ್ತಿತ್ತು. ಮಹಿಳೆಯನ್ನು ಹೊಗಳಿ ಅಟ್ಟಕ್ಕೇರಿಸುತ್ತಿದ್ದ ಆತ ಆಮಿಷ ಒಡ್ಡೋದ್ರಲ್ಲಿ ನಿಪುಣನಾಗಿದ್ದ. ಹಿಟ್ಲರ್ ಇಂಗ್ಲೀಷ್ ಮಹಿಳೆಯನ್ನು ಮದುವೆಯಾಗಿದ್ದ. ಆಕೆ ಹೆಸರು ವಿನಿಫ್ರೆಡ್ ವ್ಯಾಗ್ನರ್. ಹಿಟ್ಲರ್ ಗಿತ್ತು ಇವರೆಲ್ಲರ ಜೊತೆ ಸಂಬಂಧ : ಹಿಟ್ಲರ್ ತನ್ನ ಮಲ ಸೊಸೆ ಗೆಲಿ ರೌಬಲ್ ಜೊತೆಗೂ ಸಂಬಂಧ ಹೊಂದಿದ್ದ. ರೌಬಲ್ ಆತ್ಮಹತ್ಯೆ ಮಾಡ್ಕೊಂಡ ನಂತ್ರ ಹಿಟ್ಲರ್ ಇವಾ ಬ್ರೌನ್ ವಿವಾಹವಾದ. 1945 ರಲ್ಲಿ, ತನ್ನ ಸಾವಿನ ದಿನಗಳಲ್ಲಿ ಸುಸಾನ್ ಇವಾ ಬ್ರಾನ್ ಮದುವೆಯಾಗಿದ್ದ.  ರಷ್ಯಾದ ಸೈನ್ಯವು ಹತ್ತಿರ ಬಂದಾಗ, ಹಿಟ್ಲರ್ ತನ್ನ ಹೆಂಡತಿ ಮತ್ತು 6 ಮಕ್ಕಳೊಂದಿಗೆ ಬಂಕರ್‌ಗೆ ಹೋದ. ಅಲ್ಲಿ ಅವನು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ. ಗುಂಡು ಹಾರಿಸಿಕೊಳ್ಳುವ ಮೊದಲು ತನ್ನ ಸೈನಿಕರಿಗೆ ಹಿಟ್ಲರ್ ಕಟ್ಟುನಿಟ್ಟಾದ ಸೂಚನೆಯೊಂದನ್ನು ನೀಡಿದ್ದ. ಆತ್ಮಹತ್ಯೆ ಮಾಡಿಕೊಂಡ ಮೇಲೆ ನನ್ನ ದೇಹದ ಮೇಲೆ ಮದ್ಯ ಸುರಿದು, ಇಡೀ ದೇಹವನ್ನು ಸುಟ್ಟು ಹಾಕುವಂತೆ ಸೂಚನೆ ನೀಡಿದ್ದ. ಪತ್ನಿ ಮತ್ತು ಮಕ್ಕಳಿಗೆ ಸೈನೈಡ್ ನೀಡಿದ್ದ ಹಿಟ್ಲರ್. ಸೈನಿಕರಿಗೆ, ಜಗತ್ತಿಗೆ ನಾನು ಪುರುಷ ಎಂಬುದನ್ನು ತೋರಿಸೋದು ಆತನ ಉದ್ದೇಶಗಳಲ್ಲಿ ಒಂದಾಗಿತ್ತು. ಹಿಟ್ಲರ್ ಬಾಲ್ಯವನ್ನು ಅತ್ಯಂತ ಕಟ್ಟುನಿಟ್ಟಿನ ವಾತಾವರಣದಲ್ಲಿ ಕಳೆದಿದ್ದ. ಮಹಿಳೆಯರಿಂದ ದೂರವಿರಲು, ರೆಡ್ ಲೈಟ್ ಏರಿಯಾಗಳಿಗೆ ಹೋಗದಂತೆ ಪೋಷಕರು ಆತನಿಗೆ ಸೂಚಿಸಿದ್ದರು. 

2-3 ದಿನಗಳಿಂದ ಫುಲ್‌ ಸುಸ್ತಾಗಿದ್ದೇನೆ ಎನ್ನುತ್ತಲೇ ಹೆಂಡ್ತಿಯ ಕರಾಮತ್ತು ತಿಳಿಸಿದ ತರುಣ್‌ ಸುಧೀರ್‌!

ಹಿಟ್ಲರ್ ಒಬ್ಬ ಮಾದಕ ವ್ಯಸನಿಯಾಗಿದ್ದ. ನಾಜಿ ನಾಯಕ ಹಿಟ್ಲರನ ಆಪ್ತ ವೈದ್ಯ ಡಾ.ಥಿಯೋಡರ್ ಮೋರಲ್ ಅವರ ಪತ್ರಗಳು ಮತ್ತು ಹಳೆಯ ಅಪರೂಪದ ದಾಖಲೆಗಳಿಂದ ಈ ಮಾಹಿತಿ ಬೆಳಕಿಗೆ ಬಂದಿದೆ. ಪ್ರತಿದಿನ 80 ಬಗೆಯ ಔಷಧಗಳನ್ನು ಸೇವಿಸುತ್ತಿದ್ದ.  ಆಂಫೆಟಮೈನ್‌ಗಳು, ಬುಲ್ ಸೆಮೆನ್, ಇಲಿ ವಿಷ ಮತ್ತು ಮಾರ್ಫಿನ್‌ಗಳ ಕಾಕ್‌ಟೈಲ್  ಆತನ ಮಾದಕ ವಸ್ತುವಿನಲ್ಲಿ ಸೇರಿತ್ತು. ಹಿಟ್ಲರ್ ಅನಾರೋಗ್ಯದಿಂದ ಬಳಲುತ್ತಿದ್ದ. ಸೈನಸ್ ಸಮಸ್ಯೆ ಆತನನ್ನು ಕಾಡಿತ್ತು.  ಹಿಟ್ಲರ್ ಕೊಕೇನ್ ಸೇವಿಸುತ್ತಿದ್ದ ದಾಖಲೆಯೂ ಇದೆ. ಅಷ್ಟೇ ಅಲ್ಲ ಹಿಟ್ಲರನಿಗೆ ಹೊಟ್ಟೆಯುಬ್ಬರ ಸಮಸ್ಯೆಯೂ ಕಾಡುತ್ತಿತ್ತು. ವಾಯು ಮತ್ತು ಸೈನಸ್ ಸಮಸ್ಯೆಯನ್ನು ಗುಣಪಡಿಸಲು ಅವನು ಒಂದೇ ಬಾರಿಗೆ 28 ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದನಂತೆ.  

click me!