ನಮ್ಮ ವರ್ಕ್ ಫ್ರಮ್‌ ಹೋಮ್‌;ಗಂಡ- ಹೆಂಡತಿ ಜಗಳ ಮಾಡದೆಯೂ ಜತೆ ಇರಬಹುದು!

Kannadaprabha News   | Asianet News
Published : May 09, 2020, 03:32 PM ISTUpdated : May 09, 2020, 04:01 PM IST
ನಮ್ಮ ವರ್ಕ್ ಫ್ರಮ್‌ ಹೋಮ್‌;ಗಂಡ- ಹೆಂಡತಿ ಜಗಳ ಮಾಡದೆಯೂ ಜತೆ ಇರಬಹುದು!

ಸಾರಾಂಶ

ವಾರಗಟ್ಟಲೆ ದಿನ ಪೂರ್ತಿ ಸಂಗಾತಿ ಜತೆ ಇದ್ದರೆ ಜಗಳ ಆಗುತ್ತದೆ ಅಂತ ನನ್ನ ಅನೇಕ ಗೆಳತಿಯರು ದೂರು ಕೊಟ್ಟಿದ್ದರು. ಮೊದಲು ನಂಗೂ ಹಾಗನ್ನಿಸಿತ್ತು. ಹಾಗಾಗಿ ಇಬ್ಬರೂ ಸೇರಿಕೊಂಡು ಒಂದು ಪ್ಲಾನ್‌ ಮಾಡಿದ್ವಿ. ಅದರಂತೆ ನಡೆದು ಜಗಳವಿಲ್ಲದ ಲಾಕ್‌ಡೌನ್‌ ದಿನಗಳನ್ನು ಕಳೆದಿದ್ದೇವೆ.

ಸೀಮಾ ರಾಹುಲ್‌

- ಯಾರೋ ಒಬ್ಬರಿಗೆ ಯಾವುದೋ ಹೊತ್ತಲ್ಲಿ ಮೀಟಿಂಗ್‌ ಇರುತ್ತದೆ. ಆ ಟೈಮಲ್ಲಿ ನಾನು ಮಿಕ್ಸರ್‌ ಆನ್‌ ಮಾಡಿ ಗಿರ್ರನ್‌ ತಿರುಗಿಸಿದರೆ ನಾನು ಬೇಡವೆಂದರೂ ಜಗಳ ಆಗುತ್ತದೆ. ಹಾಗಾಗಿ ಈ ಟೈಮ್‌ಗಳನ್ನೆಲ್ಲಾ ಮನಸ್ಸಲ್ಲಿಟ್ಟುಕೊಂಡು ಪರಸ್ಪರರಿಗಾಗಿ ಆ ಟೈಮ್‌ ಬಿಟ್ಟುಕೊಡುವುದನ್ನು ಮೊದಲು ಕಲಿತೆವು. ಅವನ ಕೆಲಸದ ಸಮಯದಲ್ಲಿ ನಾನು ಏನೂ ತರ್ಲೆ ಮಾಡದೆ ನನ್ನ ಸಮಯದಲ್ಲಿ ಅವನೂ ಕಾಟ ಕೊಡದೆ ಇದ್ದಿದ್ದರಿಂದ ಕೆಲಸಗಳು ಆರಾಮಾಗಿ ನಡೆಯಿತು.

ಇನ್ನು ಸಂದರ್ಶನದಲ್ಲಿ ಕೇಳೋ ಪ್ರಶ್ನೆ, ವರ್ಕ್‌ ಫ್ರಮ್‌ ಹೋಮ್‌ ಹೇಗ್ ಮಾಡ್ತೀರಾ?

- ಕೆಲಸದ ಮಧ್ಯೆ ಬ್ರೇಕ್‌ ತೆಗೆದುಕೊಳ್ಳುವುದು ಕೂಡ ಅನಿವಾರ್ಯ. ಆಫೀಸಿಗೆ ಹೋಗುವಾಗ ಹೇಗೆ ನಾವು ಸಹೋದ್ಯೋಗಿಗಳ ಜತೆ ಕಾಫಿ ಕುಡಿಯುತ್ತಾ ಸಣ್ಣ ಮಾತುಕತೆ ನಡೆಸುತ್ತಿದ್ದೆವೋ ಹಾಗೆಯೇ ಮನೆಯಲ್ಲಿ ಕುಳಿತೇ ಚಾಟ್‌ ಮಾಡುವುದೋ ಫೋನ್‌ ಮಾಡುವುದೋ ಮಾಡಿ ಹಗುರಾದೆವು. ನಾವು ಹಗುರಾದಾಗ ಇನ್ನೊಬ್ಬರನ್ನು ಹಗುರ ಮಾಡುವುದು ಸುಲಭ. ಹಾಗೆಯೇ ಇಬ್ಬರೂ ಜತೆಗೇ ಬ್ರೇಕ್‌ ತೆಗೆದುಕೊಳ್ಳುವುದನ್ನು ಹೇಳಬೇಕಾಗಿಲ್ಲವಲ್ಲ.

- ಜತೆಗೇ ಕೂತು ಕೆಲಸ ಮಾಡುವುದು ಕಷ್ಟ. ಅದೂ ಬೆಡ್‌ ಮೇಲೆ ಕುಳಿತು ಕೆಲಸ ಮಾಡುವ ಸಾಹಸ ಮಾಡಲೇಬಾರದು. ಇದನ್ನೆಲ್ಲಾ ಮನಸ್ಸಲ್ಲಿಟ್ಟುಕೊಂಡು ಬೇರೆ ಬೇರೆ ಕೆಲಸದ ಜಾಗವನ್ನು ಫಿಕ್ಸ್‌ ಮಾಡಿದೆವು. ಅವನೊಂದು ಕಡೆ ಕುಳಿತರೆ ನಾನು ಮತ್ತೊಂದೆಡೆ ಚೇರ್‌ ಹಾಕಿ ಕೂರುತ್ತಿದ್ದೆ. ಆಗಾಗ ಕಣ್‌ಕಣ್ಣ ಸಲಿಗೆ ನಡೆಯುತ್ತಿರುವುದು ಇಬ್ಬರಿಗೂ ಒಳ್ಳೆಯದು.

Work from Home:ಬೆನ್ನುನೋವು ಬರದಿರಲು ಪಾಲಿಸಲೇ ಬೇಕಾದ ಅಷ್ಟಸೂತ್ರಗಳು

- ಎಲ್ಲಕ್ಕಿಂತ ಹೆಚ್ಚು ದಿನ ಆರಂಭಿಸುವಾಗಲೇ ಒಂದು ಟೈಮ್‌ ಟೇಬಲ್‌ ಹಾಕಿಕೊಳ್ಳುವುದು ಮುಖ್ಯ. ಎಷ್ಟುಗಂಟೆಗೆ ಊಟ, ಎಷ್ಟುಗಂಟೆಗೆ ಕೆಲಸ ಮುಗಿಸಬೇಕು ಇತ್ಯಾದಿ. ಆಗ ಇಬ್ಬರಿಗೂ ಮುಂದಿನ ಕ್ಷಣಗಳ ಬಗ್ಗೆ ಗೊತ್ತಿರುತ್ತದೆ. ಇಲ್ಲದಿದ್ದರೆ ಅವನು ಕರೆಯುವುದು, ನಾನು ಹೋಗದಿರುವುದು ಇತ್ಯಾದಿ ರಂಪ ನಡೆದು ಮುನಿಸು ಆರಂಭವಾಗುವ ಸಾಧ್ಯತೆ ಹೆಚ್ಚಿರುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗಂಡಿಗಿಂತ ಹೆಣ್ಣಿಗೇ ಕಾಮದಾಹ ಹೆಚ್ಚಾ? ಬೆಡ್ ರಹಸ್ಯ ಬಿಚ್ಚಿಟ್ಟ ವೌಚರ್ ಕೋಡ್ಸ್ ಅಧ್ಯಯನ
BBK 12 ಫಿನಾಲೆ ಬೆನ್ನಲ್ಲೇ ಹೊಸ ವಿವಾದ, ಗಿಲ್ಲಿ ನಟ ಅಶ್ವಿನಿ ಗೌಡ ಫ್ಯಾನ್ಸ್ ನಡುವೆ ಭಾಷೆ ಜೊತೆ ಜಾತಿ ಜಗಳ..!