Teenage Love: ಸೂಕ್ಷ್ಮವಾದ ವಿಷ್ಯ, ಪೋಷಕರು ಹುಷಾರಾಗರಿಬೇಕಷ್ಟೇ!

Published : Aug 16, 2022, 04:54 PM IST
Teenage Love: ಸೂಕ್ಷ್ಮವಾದ ವಿಷ್ಯ, ಪೋಷಕರು ಹುಷಾರಾಗರಿಬೇಕಷ್ಟೇ!

ಸಾರಾಂಶ

ಟೀನೇಜ್‌ ಲವ್‌ ಪಾಲಕರಿಗೆ ದೊಡ್ಡ ತಲೆನೋವು. ಎಲ್ಲ ಅರ್ಥವೂ ಆಗದ, ಇನ್ನೂ ಆಕರ್ಷಣೆಯ ಹಂತದಲ್ಲಿರುವ ಮಕ್ಕಳಿಗೆ ವಿವರಿಸಿ ಹೇಳುವುದೂ ಕಷ್ಟವಾಗಿ ಕೋಪ ಬರುತ್ತದೆ. ಕೋಪಿಸಿಕೊಳ್ಳುವುದಕ್ಕಿಂತ ಕಿಶೋರಾವಸ್ಥೆಯಲ್ಲಿರುವ ಮಕ್ಕಳ ಪ್ರೀತಿ-ಪ್ರೇಮ ನಿಭಾಯಿಸುವ ಕಲೆಯನ್ನು ಪಾಲಕರು ಕಲಿತುಕೊಳ್ಳಬೇಕು.  

ಭಾರತೀಯ ಪಾಲಕರು ತಮ್ಮ ಮಕ್ಕಳು ಶಾಲೆಯಲ್ಲಿ ಉತ್ತಮ ಅಂಕ ಗಳಿಸಿದಾಗ ಸಂಭ್ರಮಿಸುತ್ತಾರೆ. ಎಲ್ಲರೆದುರು ಹೇಳಿಕೊಂಡು ಬೀಗುತ್ತಾರೆ. ಕಲಿಕೆಯ ಜತೆಗೆ ಇತರ ಚಟುವಟಿಕೆಗಳಲ್ಲಿ ಮುಂದಿದ್ದರಂತೂ ಇನ್ನೊಂದು ಹೆಜ್ಜೆ ಮುಂದಾಗಿ ಹೆಮ್ಮೆ ಪಡುತ್ತಾರೆ. ಆದರೆ, ಅವರಿಗೆ ಒಂದು ವಿಚಾರವನ್ನು ಒಪ್ಪಿಕೊಳ್ಳಲು ಕಷ್ಟವಾಗುತ್ತದೆ. ಅದೆಂದರೆ, ತಮ್ಮ ಮಕ್ಕಳು ಯಾರನ್ನಾದರೂ ಪ್ರೀತಿಸಿದರೆ, ಇಷ್ಟಪಟ್ಟರೆ ಪಾಲಕರಿಗೆ ಅದು ನುಂಗಲಾರದ ತುತ್ತಾಗಿ ಪರಿಣಮಿಸುತ್ತದೆ. ಅದರಲ್ಲೂ ಚಿಕ್ಕ ವಯಸ್ಸಿನ ಮಕ್ಕಳ ಸಂಬಂಧವನ್ನು ಒಪ್ಪಿಕೊಳ್ಳಲು ಅವರಿಗೆ ಸಾಧ್ಯವಾಗುವುದಿಲ್ಲ, ಜೀವನವನ್ನು ಹಾಳುಮಾಡಿಕೊಳ್ಳುತ್ತಾರೆ ಎನ್ನುವ ಆತಂಕಕ್ಕೆ ಬಿದ್ದುಬಿಡುತ್ತಾರೆ. ಮಕ್ಕಳ ಪ್ರೀತಿ-ಪ್ರೇಮದ ಬಗ್ಗೆ ಗೊತ್ತಾದಾಗ ಬಹಳಷ್ಟು ಪಾಲಕರು ಅತಿಯಾದ ಕೋಪ ಪ್ರದರ್ಶಿಸುತ್ತಾರೆ. ವಿವಿಧ ನಿಷೇಧ ಹೇರುತ್ತಾರೆ. ಮೊಬೈಲ್‌ ಫೋನ್‌ ಕಸಿದುಕೊಳ್ಳುತ್ತಾರೆ. ಕಠೋರವಾದ ಶಿಕ್ಷೆಯನ್ನೂ ನೀಡಬಹುದು. ಪರಿಣಾಮವಾಗಿ, ಮಕ್ಕಳು ಹೆದರಿಹೋಗಬಹುದು ಅಥವಾ ಪಾಲಕರನ್ನು ದ್ವೇಷಿಸಲು ತೊಡಗಬಹುದು. ತಮ್ಮ ಭಾವನೆಗಳನ್ನು ಪಾಲಕರಿಂದ ಮುಚ್ಚಿಡಲು ಆರಂಭಿಸಬಹುದು. ಇವೆಲ್ಲವೂ ಅಪಾಯಕಾರಿ ಬೆಳವಣಿಗೆಗಳೇ ಆಗಿವೆ. ಹೀಗಾಗಿ, ಟೀನೇಜ್‌ ಲವ್‌ ಅನ್ನು ನಿಭಾಯಿಸುವುದನ್ನು ಪಾಲಕರು ಅರಿತುಕೊಳ್ಳಬೇಕು. ಈ ಸಮಯದಲ್ಲಿ ಕೋಪ-ತಾಪಕ್ಕೆ ಬೀಳದೆ  ಮಾರ್ಗದರ್ಶನ ಮಾಡಿದರೆ ಬಹಳಷ್ಟು ಮಕ್ಕಳಲ್ಲಿ ಅರಿವು ಮೂಡುತ್ತದೆ. ಕೆಲವರು ಮಾತ್ರವೇ ರೆಬೆಲ್‌ ಆಗಿರುತ್ತಾರೆ, ಅವರನ್ನು ಹ್ಯಾಂಡಲ್‌ ಮಾಡುವುದು ಕಷ್ಟವಾಗಬಹುದೇ ವಿನಾ, ಉಳಿದಂತೆ ಸಾಧಾರಣ ಎಲ್ಲ ಮಕ್ಕಳನ್ನೂ ನಿಭಾಯಿಸಬಹುದು.

ಮಕ್ಕಳು (Children) ನಿಮ್ಮೊಂದಿಗೆ ಮನಬಿಚ್ಚಿ ಮಾತನಾಡಬೇಕು ಎಂದಾದರೆ ಅವರೊಂದಿಗೆ ಸ್ನೇಹಿತರಂತೆ (Like Friend) ಇರಬೇಕು. ನಾವೆಲ್ಲ ಒಂದೇ ಟೀಮ್‌ ಎನ್ನುವ ಭಾವನೆ ಅವರಲ್ಲಿ ಮೂಡಬೇಕು. ಮಕ್ಕಳೊಂದಿಗೆ ಪಾಲಕರಾಗಿ (Parents) ಮಾತನಾಡಿದರೆ ಅವರು ನಿಮ್ಮಿಂದ ಬಹಳಷ್ಟು ವಿಚಾರಗಳನ್ನು ಮುಚ್ಚಿಡುತ್ತಾರೆ. “ನಾಚಿಕೆ ಆಗಲ್ವಾ? ಇಷ್ಟು ಚಿಕ್ಕ ವಯಸ್ಸಿನಲ್ಲಿ ಪ್ರೀತಿ-ಪ್ರೇಮ ಎನ್ನುತ್ತೀಯಲ್ಲ? ಕುಟುಂಬದ ಮರ್ಯಾದೆ ತೆಗೆಯುತ್ತೀಯʼ ಎಂದೆಲ್ಲ ಮಾತನಾಡಬೇಡಿ. ಈ ಮಾತುಗಳು ಮಕ್ಕಳಲ್ಲಿ ಕೋಪ (Angry) ಬರಿಸುತ್ತವೆ. ಮೊಬೈಲ್‌ (Mobile)ಗೆ ನಿಷೇಧ (Ban) ಹೇರುವುದು, ಶಿಕ್ಷೆ (Punishment) ನೀಡುವುದನ್ನು ಮಾಡಿದರೆ ಮಕ್ಕಳು ಇನ್ನಷ್ಟು ದೂರವಾಗುವ ಸಾಧ್ಯತೆಯೇ ಅಧಿಕ. ಹೀಗಾಗಿ, ಪಾಲಕರು ಈ ಸಮಯದಲ್ಲಿ ಎಚ್ಚರಿಕೆಯಿಂದ ವರ್ತಿಸಬೇಕಾಗುತ್ತದೆ.

ಹುಚ್ಚು ಪ್ರೀತಿ: HIV ಪಾಸಿಟಿವ್ ರಕ್ತ ಇಂಜೆಕ್ಟ್‌ ಮಾಡಿಕೊಂಡ ಬಾಲಕಿ

•    ಹರೆಯಪೂರ್ವದ (Puberty) ಸಮಯದಲ್ಲಿ ಮಕ್ಕಳಿಗೆ ಪಾಲಕರ ಬೆಂಬಲ ಅಗತ್ಯ. ಕಿಶೋರಾವಸ್ಥೆಯಲ್ಲಿ ಆಗುವ ಹಾರ್ಮೋನ್‌ (Hormone) ಬದಲಾವಣೆಗಳಿಂದ ಭಿನ್ನ ಲಿಂಗಿಯ ಕುರಿತಾದ ಆಕರ್ಷಣೆ ಸಹಜ. ಹೀಗಾಗಿ, ಮಕ್ಕಳ ಮೇಲೆ ಕೋಪ ಮೂಡಿಸಿಕೊಳ್ಳುವುದು ಸರಿಯಲ್ಲ.
•    ವಿಷಯ ತಿಳಿದಾಕ್ಷಣ ಕೋಪಿಸಿಕೊಳ್ಳುವ ಬದಲು ಯಾರೊಂದಿಗಾದರೂ ಮಾತನಾಡಿ. ಪತಿ-ಪತ್ನಿಯ ಜತೆ ಕೂತು ಚರ್ಚಿಸಿ. ಮೊದಲಿಗೆ, ನಿಮ್ಮನ್ನು ನೀವು ಶಾಂತಗೊಳಿಸಿಕೊಳ್ಳುವುದು ಅಗತ್ಯ.
•    ಮಕ್ಕಳ ಭಾವನೆಗಳಿಗೆ (Feelings) ಬೆಲೆ ನೀಡಿ. ಅವರ ಪ್ರೀತಿಯನ್ನು ಒಪ್ಪಿಕೊಳ್ಳಿ. ಮಕ್ಕಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಒಪ್ಪಿಕೊಳ್ಳುವ ಜತೆಗೆ ಅವರ ಭಾವನೆಗಳಿಗೆ ಬೆಲೆ ನೀಡುವುದನ್ನು ಎಲ್ಲ ಪಾಲಕರೂ ಕಲಿತುಕೊಳ್ಳಬೇಕು. ಅವರು ಹೇಳಿದ್ದಕ್ಕೆಲ್ಲ “ಹೂಂʼಗುಡಬೇಕು ಎಂದಲ್ಲ, ಆದರೆ, ಅವರ ಭಾವನೆಗಳನ್ನು ಗೌರವಿಸುವುದು (Respect) ಉತ್ತಮ. ಕಿಶೋರಾವಸ್ಥೆಯ ಈ ಸಮಯದಲ್ಲಿ ಅವರಲ್ಲಿ ಕೋಪ ಹೆಚ್ಚಾಗಿ ಇರುತ್ತದೆ. ಇದನ್ನು ಅರ್ಥೈಸಿಕೊಳ್ಳಬೇಕು.
•    ಅವರ ಪ್ರೀತಿಯ (Love) ಬಗ್ಗೆ ಮುಕ್ತವಾಗಿ ಮಾತನಾಡಬೇಕು. ಪ್ರೀತಿಸುವುದು ತಪ್ಪಲ್ಲ ಎನ್ನುವ ಭಾವನೆಯಲ್ಲೇ ಮಾತನಾಡಿದರೆ ಅವರಿಗೆ ಪಾಲಕರ ಬಗ್ಗೆ ನಂಬಿಕೆ (Trust) ಮೂಡುತ್ತದೆ. ಅವರೊಂದಿಗೆ ಮಾತನಾಡಿದರೆ ಅನೇಕ ಗೊಂದಲ, ಸಮಸ್ಯೆಗಳು ನಿವಾರಣೆಯಾಗುತ್ತವೆ.
•    ಮಗಳಾಗಿರಲಿ, ಮಗನಾಗಿರಲಿ. ಎಲ್ಲ ಕ್ಲಾಸ್‌ ಮೇಟ್‌‌ಗಳೊಂದಿಗೆ ಸ್ನೇಹದಿಂದ ಇರಲು ತಿಳಿಸಿ. ಶಾಲೆ ಬಿಟ್ಟ ಬಳಿಕ ಯಾರದ್ದೋ ಒಬ್ಬರ ಜತೆ ಮಾತನಾಡುವ ಬದಲು ಎಲ್ಲರೊಂದಿಗೂ ಸ್ನೇಹದಿಂದ (Friendly) ಇರುವಂತೆ ಪ್ರೇರೇಪಿಸಬೇಕು. ಜತೆಗೆ, ಈ ವಯಸ್ಸಿನಲ್ಲಿ ಪರಸ್ಪರ ರೊಮ್ಯಾಂಟಿಕ್‌ (Romantic) ಭಾವನೆ, ಲೈಂಗಿಕ (Sexual) ಭಾವನೆಗಳೆಲ್ಲ ಸಹಜ ಎನ್ನುವುದನ್ನು ತಿಳಿಸಿ ಹೇಳಿ. ಒಂದೊಮ್ಮೆ ನಿಮಗೆ ಈ ವಿಚಾರಗಳನ್ನು ಹೇಳುವುದು ಕಷ್ಟವಾದರೆ ಅವರನ್ನು ಕೌನ್ಸೆಲರ್ ಬಳಿ ಕರೆದೊಯ್ಯಬಹುದು.
•    ಮಕ್ಕಳೊಂದಿಗೆ ಅವರ ಸ್ನೇಹಿತರನ್ನೂ ಅರಿತುಕೊಳ್ಳಬೇಕು. ಆಪ್ತ ಸ್ನೇಹಿತರನ್ನು ಮನೆಗೆ ಆಹ್ವಾನಿಸುವಂತೆ ತಿಳಿಸಬೇಕು. ಅವರ ಗುಂಪು ಯಾವುದರ ಬಗ್ಗೆ ಆಸಕ್ತಿ ಹೊಂದಿದೆ, ಅವರ ಹವ್ಯಾಸವೇನು ಎನ್ನುವುದನ್ನು ತಿಳಿದುಕೊಳ್ಳಬೇಕು. ಅವರೊಂದಿಗೆ ನೀವೂ ಸ್ನೇಹಿತರಾಗಿ ಇದ್ದುಬಿಡಬೇಕು. 

ಟೀನೇಜ್‌ ಲವ್‌ಗೆ ರೇಪ್‌ ಬಣ್ಣ: ಜೈಲು ಪಾಲಾದ ಇನಿಯನ ವಾಪಸ್ ಪಡೆಯಲು ಬೈಕ್ ಕದ್ದ ಯುವತಿ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
Bigg Boss ಭವ್ಯಾ ಗೌಡ ಮದ್ವೆ ಅವಿನಾಶ್​ ಶೆಟ್ಟಿ ಜೊತೆನಾ? Karna ನಿಧಿಯ ಅಸಲಿ ಗುಟ್ಟೇನು? ನಟ ಹೇಳಿದ್ದೇನು?