ಪತಿ ಸ್ನೇಹಿತೆ ಮೇಲೆ ಡೌಟಾ? ಹೀಗ್ ಚೆಕ್ ಮಾಡಬಹುದು ನೋಡಿ

By Suvarna NewsFirst Published Aug 16, 2022, 4:07 PM IST
Highlights

ಹುಡುಗರನ್ನು ಒಂದ್ಕಡೆ ಕಟ್ಟಿಡೋದು ಕಷ್ಟ ಎನ್ನುವ ಮಾತನ್ನ ನೀವು ಕೇಳಿರ್ತೀರಿ. ಎಲ್ಲ ಹುಡುಗ್ರು ಹಾಗಿಲ್ಲದೆ ಇರಬಹುದು. ಆದ್ರೆ ಪತ್ನಿಯಾದವಳಿಗೆ ತನ್ನ ಪತಿ ಮೇಲೆ ಶಂಕೆ ಇದ್ದೇ ಇರುತ್ತೆ. ಅದ್ರಲ್ಲೂ ಆತನಿಗೆ ಸ್ನೇಹಿತೆಯರಿದ್ದಾರೆಂದ್ರೆ ಮುಗೀತು ಕಥೆ. 
 

ಪತಿ ಮೇಲೆ ಪತ್ನಿಯ ಒಂದು ಕಣ್ಣು ಇದ್ದೇ ಇರುತ್ತೆ. ಪತಿ ಎಲ್ಲಿ ಹೋಗ್ತಾನೆ, ಏನು ಮಾಡ್ತಾನೆ, ಯಾರ ಜೊತೆ ಮಾತನಾಡ್ತಾನೆ ಹೀಗೆ ಆತನ ಪ್ರತಿ ಹೆಜ್ಜೆಯನ್ನು ಪತ್ನಿ ಗಮನಿಸ್ತಾಳೆ. ಪತಿ ಅಕ್ರಮ ಸಂಬಂಧ ಬೆಳೆಸಿದ್ರೆ ಎಂಬ ಭಯ ಆಕೆಯನ್ನು ಕಾಡೋದು ಸಾಮಾನ್ಯ. ಪ್ರತಿ ದಿನ ಕಚೇರಿಯಲ್ಲಿ ಪತಿ ಏನು ಮಾಡ್ತಾನೆ ಎಂಬುದು ಆಕೆಗೆ ಗೊತ್ತಿಲ್ಲದೆ ಇರಬಹುದು ಆದ್ರೂ ಅಲ್ಲಿಂದ ಇಲ್ಲಿಂದ ಒಂದಿಷ್ಟು ಮಾಹಿತಿ ಕಲೆ ಹಾಕಿರ್ತಾಳೆ. ಇತ್ತೀಚಿನ ದಿನಗಳಲ್ಲಿ ಹುಡುಗ – ಹುಡುಗಿ ಫ್ರೆಂಡ್ಸ್ ಆಗಿರೋದು ಮಾಮೂಲಿ. ಆದ್ರೆ ಕಚೇರಿಯಲ್ಲಿ ಇರಲಿ ಇಲ್ಲ ಕಾಲೇಜ್ ಫ್ರೆಂಡ್ ಆಗಿರಲಿ, ಪತಿಗೆ ಹುಡುಗಿ ಫ್ರೆಂಡ್ ಇದ್ದಾಳೆ ಎಂದಾಗ ಪತ್ನಿಯಾದವಳಿಗೆ ಅದೇನೋ ಸಂಕಟ ಮಾಮೂಲಿ. ಗಂಡನ ಆಪ್ತ ಸ್ನೇಹಿತೆಯನ್ನು ಆಕೆ ಅನುಮಾನದಿಂದ ನೋಡ್ತಾಳೆ. ಗಂಡನ ಬಗ್ಗೆ ಅಸುರಕ್ಷಿತ ಭಾವ ಆಕೆಗೆ ಉಂಟಾಗುತ್ತದೆ. ಇದು ದಾಂಪತ್ಯದ ಕಹಿಗೆ ಕಾರಣವಾಗುತ್ತದೆ. 

ಗಂಡ (Husband) ನ ಮೇಲೆ ಅನುಮಾನ (Doubt) ಯಾಕೆ ? : ಗಂಡನ ವಿಷ್ಯದಲ್ಲಿ ಮಹಿಳೆಯರು ಸ್ವಾರ್ಥಿಗಳಾಗಿರ್ತಾರೆ.  ಅನೇಕ ಮಹಿಳೆಯರು ತಮ್ಮ ಗಂಡನ ಬಗ್ಗೆ ತುಂಬಾ ಸ್ವಾಮ್ಯವನ್ನು ಹೊಂದಿರುತ್ತಾರೆ. ಗಂಡನ  ಸ್ನೇಹಿತೆ (Friend) ಎಂದೂ ತನ್ನ ಪತಿಯ ಹೃದಯ (Heart) ದಲ್ಲಿ ಸ್ಥಾನ ಪಡೆಯಬಾರದು ಎಂದು ಆಕೆ ಭಾವಿಸ್ತಾಳೆ. ಅನೇಕ ಬಾರಿ ಅವರಿಬ್ಬರ ಮಧ್ಯೆ ಬೇರೆ ಸಂಬಂಧವಿದೆ ಎಂದು ಅನುಮಾನ ಶುರು ಮಾಡ್ತಾಳೆ. ಅಲ್ಲದೆ ಪತಿ ನನಗಿಂತ ಸ್ನೇಹಿತೆಗೆ ಹೆಚ್ಚು ಸಮಯ ಹಾಗೂ ಮಹತ್ವ ನೀಡ್ತಿದ್ದಾನೆಂದು ಭಾವಿಸ್ತಾಳೆ. 

HAPPY LIFE: ಸುಖಕರ ಜೀವನಕ್ಕೆ ನಿಮಗೆ ನೀವೇ ಕೊಡಬಹುದು ಈ ಉಡುಗೊರೆ

ಪತಿ ಮೇಲಿನ ಸಂದೇಹ ನಿವಾರಣೆ ಹೇಗೆ? : ಪತಿ ಸ್ನೇಹಿತೆ ಜೊತೆ ಬೇರೆ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನ ಶುರುವಾಗ್ತಿದ್ದರೆ ಮೊದಲು ಪತಿಯ ಸ್ನೇಹಿತೆಯ ಜೊತೆ ನೀವು ಸ್ನೇಹ ಬೆಳೆಸಿ. ಆಕೆ ಜೊತೆ ಸ್ನೇಹ ಬೆಳೆಸಿದಾಗ, ಆಕೆ ನಿಮ್ಮ ಪತಿ ಜೊತೆ ಹೇಗಿದ್ದಾಳೆ ಎಂಬುದನ್ನು ನೀವು ಸುಲಭವಾಗಿ ಅರ್ಧ ಮಾಡಿಕೊಳ್ಳಬಹುದು. ಹಾಗೆಯೇ ಅವರಿಬ್ಬರ ಸ್ನೇಹ ಏಕೆ ಮುಖ್ಯ ಎಂಬುದು ನಿಮಗೆ ಅರ್ಥವಾಗುತ್ತದೆ. ಸ್ನೇಹಿತೆ ನಿಮಗೆ ಹತ್ತಿರವಾದಷ್ಟು ಬೇಗ ನಿಮ್ಮ ಅನುಮಾನಗಳು ದೂರವಾಗಲು ಪ್ರಾರಂಭಿಸುತ್ತವೆ.

ಸ್ನೇಹಿತೆ ಇರ್ಲೇಬಾರದು ಎಂಬುದು ತಪ್ಪು : ಪತಿ ಯಾವುದೇ ಸ್ನೇಹಿತೆ ಹೊಂದಿರಬಾರದು ಎಂಬುದು ಮೂರ್ಖತನವಾಗುತ್ತದೆ. ಇಂದಿನ ಯುಗದಲ್ಲಿ ಮಹಿಳೆಯರು ಶಾಲೆ, ಕಾಲೇಜು ಮತ್ತು ಕೆಲಸದ ಸ್ಥಳದಲ್ಲಿ ಪುರುಷರೊಂದಿಗೆ ಕೆಲಸ ಮಾಡುವಾಗ ಸಂವಹನ ಸಂಪೂರ್ಣವಾಗಿ ಶೂನ್ಯಗೊಳಿಸುವುದು ಅಸಾಧ್ಯ. ಇದಲ್ಲದೇ ಗ್ರೂಪ್ ಪಾರ್ಟಿಗಳು, ಟೀಮ್ ಲಂಚ್, ಟೀಮ್ ಡಿನ್ನರ್ ಗಳು ಆಫೀಸ್ ನಲ್ಲಿ ಹಲವು ಬಾರಿ ಒಟ್ಟಿಗೆ ನಡೆಯುತ್ತಿದ್ದರೆ ಇದರಲ್ಲಿ ಮಹಿಳೆಯರು ಶಾಮೀಲಾಗುವುದು ಸಾಮಾನ್ಯ. ಹೊಸ ಯುಗಕ್ಕೆ ತಕ್ಕಂತೆ ನಿಮ್ಮ ಆಲೋಚನೆಯನ್ನು ಬದಲಾಯಿಸಿಕೊಳ್ಳುವುದು ಇಲ್ಲಿ ಉತ್ತಮ.

Relationship Tips: ನಿಮ್ಮ ಸಂಗಾತಿ ನಿಮಗೆ ಮೈಕ್ರೋ ಚೀಟಿಂಗ್ ಮಾಡ್ತಾರಾ?

ಮಾತಿನಲ್ಲಿದೆ ಸಮಸ್ಯೆಗೆ ಪರಿಹಾರ : ಪತ್ನಿಗೆ ಪತಿ ಮೇಲೆ ಅನುಮಾನ ಬಂದ್ರೆ ಅದನ್ನು ಬೇರೆಯವರ ಬಳಿ ಹೇಳಿಕೊಳ್ತಾಳೆ. ಇದು ಸರಿಯಲ್ಲ. ನೇರವಾಗಿ ಪತಿ ಜೊತೆ ಮಾತನಾಡುವುದು ಮುಖ್ಯ. ನಿಮ್ಮ ಸಮಸ್ಯೆಯನ್ನು ಪತಿಯೊಂದಿಗೆ ಹಂಚಿಕೊಳ್ಳುವುದು ಮತ್ತು ಅವರ ನಡುವೆ ಕೇವಲ ಸ್ನೇಹ ಸಂಬಂಧವಿದೆಯೇ ಅಥವಾ ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳುವುದು ಉತ್ತಮ.

ಅಸೂಯೆ ಬೇಡ : ಪ್ರತಿಯೊಬ್ಬರಲ್ಲೂ ಇರುವಂತಹ ಗುಣ ಅಸೂಯೆ. ಆದರೆ ಅದು ಮಿತಿ ಮೀರಿದಾಗ ಸಮಸ್ಯೆ ಹೆಚ್ಚಾಗುತ್ತದೆ.  ಹುಡುಗ- ಹುಡುಗಿ ಉತ್ತಮ ಸ್ನೇಹಿತರಾಗಿರಲು ಸಾಧ್ಯವಿಲ್ಲ. ನಿಮಗಿಲ್ಲ, ನಿಮ್ಮ ಪತಿಗೆ ಉತ್ತಮ ಸ್ನೇಹಿತೆಯಿದ್ದಾಳೆ ಎಂಬ ಕಾರಣಕ್ಕೆ ನೀವು ಪತಿ ಮೇಲೆ ಅಸೂಯೆಪಟ್ಟುಕೊಂಡು ಗಲಾಟೆ ಮಾಡುವುದು ತಪ್ಪು. ಈ ಅಸೂಯೆ ಸಂಬಂಧವನ್ನು ಹಾಳು ಮಾಡುತ್ತದೆ. 
 

click me!