Relationship Tips : ತಕ್ಷಣ ಪತಿ ಮೂಡ್ ಸರಿ ಮಾಡ್ಬೇಕಾ?

By Suvarna News  |  First Published Apr 20, 2022, 2:13 PM IST

ತಲೆ ತಿನ್ಬೇಡ, ಮೊದಲೇ ಮೂಡ್ ಸರಿ ಇಲ್ಲ ಎಂಬ ಮಾತುಗಳನ್ನು ನಾವು ಹೇಳ್ತಿರ್ತೇವೆ. ಈ ಮೂಡ್ ಯಾವಾಗ ಬದಲಾಗುತ್ತೆ ಗೊತ್ತಾಗೋದಿಲ್ಲ. ದಾಂಪತ್ಯದಲ್ಲಿ ಮೂಡ್ ಸ್ವಿಂಗ್ ಆದಾಗ ಸಮಸ್ಯೆ ಜಾಸ್ತಿಯಾಗುತ್ತದೆ. ಹಾಗಾಗಿ ಚಿಟಕಿ ಹೊಡೆಯೋದ್ರಲ್ಲಿ ಪತಿ ಮೂಡ್ ಹೇಗೆ ಸರಿ ಮಾಡೋದು ಎಂಬ ವಿಷ್ಯ ಮಹಿಳೆಗೆ ಗೊತ್ತಿರಬೇಕು.  
 


ಇಬ್ಬರಲ್ಲಿ ಒಬ್ಬ ಸಂಗಾತಿ (Partner) ಮೂಡ್ (Mood) ಸರಿ ಇಲ್ಲವೆಂದ್ರೂ ಇಬ್ಬರ ಮಧ್ಯೆ ಗಲಾಟೆ ಶುರುವಾಗುತ್ತದೆ. ಮೂಡ್ ಯಾವಾಗ? ಯಾರಿಗೆ ಹಾಳಾಗುತ್ತೆ ಎನ್ನಲು ಸಾಧ್ಯವಿಲ್ಲ. ಹಾಗೆ ಹಾಳಾದ ಮೂಡ್ ಸರಿಯಾಗೋದು ಕೂಡ ಸುಲಭವಲ್ಲ. ಕೆಲವೊಮ್ಮೆ ದಿನಗಟ್ಟಲೆ ಮೂಡ್ ಹಾಳು ಮಾಡಿಕೊಂಡಿರುತ್ತಾರೆ ಜನರು. ಮತ್ತೆ ಕೆಲವರ ಮೂಡ್ ತಕ್ಷಣ ಬದಲಾಗುತ್ತದೆ. ಪುರುಷರು ಬೇಗ ಕೋಪ (Anger) ಗೊಳ್ತಾರೆ. ಅವರನ್ನು ಮನವರಿಕೆ ಮಾಡಿ, ಅವರ ಮುಖದಲ್ಲಿ ನಗು ತರಿಸುವುದು ಸುಲಭದ ಕೆಲಸವಲ್ಲ. ಪುರುಷರ ಮೂಡ್ ಸರಿಮಾಡುವ ಟ್ರಿಕ್ ಮಹಿಳೆಯರಿಗೆ ತಿಳಿದಿರಬೇಕು. ಮೂಡ್ ಹಾಳಾಗಲು ಅನೇಕ ಕಾರಣಗಳಿರಬಹುದು. ಉದಾಹರಣೆಗೆ ಕೆಲಸದ ಒತ್ತಡ, ನಿಮ್ಮೊಂದಿಗೆ ಜಗಳ ಅಥವಾ ಆರ್ಥಿಕ ಒತ್ತಡಕ್ಕೆ ಮೂಡ್ ಹಾಳಾಗಬಹುದು. ಮುಖ ಊದಿಸಿಕೊಂಡಿರುವ ಪುರುಷರನ್ನು ತಕ್ಷಣ ಸರಿ ಮಾಡೋದು ಸವಾಲು. ನಾವಿಂದು ಅವರ ಮೂಡ್ ಹೇಗೆ ಸರಿ ಮಾಡೋದು ಎಂಬುದನ್ನು ನಿಮಗೆ ಹೇಳ್ತೇವೆ.

ಪುರುಷರ ಮೂಡ್ ಸರಿ ಮಾಡೋಕೆ ಇಲ್ಲಿದೆ ಪ್ಲಾನ್ : 
ಅವರಿಗೆ ಕೆಲಸದಲ್ಲಿ ಸಹಾಯ ಮಾಡಿ :
 ನಿಮ್ಮ ಸಂಗಾತಿ ಯಾವುದೇ ಕೆಲಸವನ್ನು ಮಾಡುತ್ತಿದ್ದರೂ, ಅವರಿಗೆ ನಿಮ್ಮ ಸಹಾಯದ ಅಗತ್ಯವಿಲ್ಲದಿದ್ದರೆ ಅವರನ್ನು ಕೇಳಿ. ಅವರು ಪ್ರತಿಕ್ರಿಯಿಸದಿದ್ದರೂ, ಅವರೊಂದಿಗೆ ಕುಳಿತು ಅವರ ಕೆಲಸದಲ್ಲಿ ಸ್ವಲ್ಪ ಸಹಾಯ ಮಾಡಲು ಪ್ರಯತ್ನಿಸಿ. ಒಂದು ವೇಳೆ ನೀವು ಮಾಡುವ ಸಹಾಯ ಅವರಿಗೆ ಸರಿ ಬರ್ತಿಲ್ಲವೆಂದ್ರೆ ಬಲವಂತ ಮಾಡಲು ಹೋಗಬೇಡಿ. ಅವರನ್ನು ಒಂಟಿಯಾಗಿರಲು ಬಿಡಿ. ಅವರ ಜೊತೆ ಕುಳಿತು ಯಾಕೆ ಅಸಮಾಧಾನಗೊಂಡಿದ್ದೀರಿ ಎಂದು ಕೇಳಿ. ಮತ್ತೊಂದೆಡೆ, ಸಂಗಾತಿಯ ಕೆಟ್ಟ ಮನಸ್ಥಿತಿಗೆ ಕಾರಣ ನಿಮ್ಮೊಂದಿಗಿನ ಜಗಳವಾಗಿದ್ದರೆ ಮತ್ತು ಅದರಲ್ಲಿ ನಿಮ್ಮ ತಪ್ಪಿದ್ದರೆ ತಕ್ಷಣ ಕ್ಷಮಿಸಿ ಎಂದು ಹೇಳಿ ವಿಷಯವನ್ನು ಮುಗಿಸಲು ಪ್ರಯತ್ನಿಸಿ. ನೀವು ಅವರಿಗೆ ಫೋನ್‌ ಮಾಡಿ ಕ್ಷಮೆ ಕೇಳಬಹುದು. ಇಲ್ಲವೆ ಫೋನ್ ನಲ್ಲಿ  ಕ್ಷಮಿಸಿ ಎಂಬ ಮುದ್ದಾದ GIF ಸಂದೇಶಗಳನ್ನು ಸಹ ಕಳುಹಿಸಬಹುದು.

Tap to resize

Latest Videos

ಸುಧಾಮೂರ್ತಿಯವರು ಹೇಳುವಂತೆ ಮಕ್ಕಳ ಜೊತೆ ಪೋಷಕರು ಹೇಗಿರಬೇಕು ?

ಅವರ ಆಯ್ಕೆಯ ಆಹಾರವನ್ನು ತಯಾರಿಸಿ : ಹುಡುಗನ ಹೃದಯ ತಲುಪಲು ಹೊಟ್ಟೆಯೇ ದಾರಿ ಎನ್ನಲಾಗುತ್ತದೆ. ಹಾಗಾಗಿ ಸಂಗಾತಿಯ ಮನಸ್ಥಿತಿ ಕೆಟ್ಟದ್ದಾಗಿದ್ದಾಗ ಅವರನ್ನು ಖುಷಿಗೊಳಿಸಲು ಆಹಾರ ಉತ್ತಮ ಮಾರ್ಗ. ಸಂಗಾತಿ ಇಷ್ಟಪಟ್ಟು ತಿನ್ನುವ ಆಹಾರವನ್ನು ತಯಾರಿಸಿ. ನೆಚ್ಚಿನ ಆಹಾರ ನೋಡ್ತಿದ್ದಂತೆ ಆತನ ಮೂಡ್ ಬದಲಾಗೋದ್ರಲ್ಲಿ ಎರಡು ಮಾತಿಲ್ಲ. ಸಾಧ್ಯವಾದ್ರೆ ನೀವು ಕ್ಯಾಂಡಲ್ ಲೈಟ್ ಡಿನ್ನರ್ ಕೂಡ ಮಾಡ್ಬಹುದು. ಅಡುಗೆ ಮಾಡುವುದು ತಿಳಿದಿಲ್ಲವೆಂದಾದ್ರೆ ಹೊರಗಿನಿಂದ ಅವರಿಗಿಷ್ಟವಾಗುವ ಆಹಾರವನ್ನು ತರಿಸಬಹುದು.

ಸಮಸ್ಯೆ ತಿಳಿಯುವ ಪ್ರಯತ್ನ ಮಾಡಿ : ಸಂಗಾತಿ ಮನಸ್ಥಿತಿ ಸರಿಯಿಲ್ಲ ಎಂಬುದು ನಿಮ್ಮ ಅರಿವಿಗೆ ಬಂದ ನಂತ್ರ ಅವರ ಮೂಡ್ ಹಾಳು ಮಾಡುವ ಮಾತುಗಳನ್ನು ಆಡಬೇಡಿ. ಅದರ ಬದಲು ಅವರ ಬಳಿ ಕುಳಿತು ಸಮಸ್ಯೆ ಏನು ಎಂಬುದನ್ನು ಕೇಳಿ ತಿಳಿಯಿರಿ. ಅನೇಕಬಾರಿ ಒಂಟಿತನ ಅವರ ಮೂಡ್ ಹಾಳಾಗಲು ಕಾರಣವಾಗಿರುತ್ತದೆ. ನೀವು ಅವರ ಜೊತೆ ಮಾತನಾಡಿದ್ರೆ ಅವರು ನಿಮ್ಮ ಜೊತೆ ಮನಸ್ಸು ಬಿಚ್ಚಿ ಮಾತನಾಡಬಹುದು. ಕೋಪವಿದ್ರೆ ಅದನ್ನು ಹೊರ ಹಾಕಬಹುದು. ಇದ್ರಿಂದ ಅವರ ಮನಸ್ಸು ಶಾಂತವಾಗುತ್ತದೆ. ಮನಸ್ಸು ಸಮಾಧಾನಗೊಳ್ಳುತ್ತದೆ.  

ಈ ತಪ್ಪುಗಳು ಹನಿಮೂನ್ ನ ರೋಮ್ಯಾಂಟಿಕ್ ಮೂಡ್ ನ್ನೆ ಹಾಳು ಮಾಡುತ್ತೆ

ಜಗಳದಿಂದ ದೂರವಿರಿ : ದಂಪತಿ ನಡುವೆ ಹೊಂದಾಣಿಕೆ ಇಲ್ಲದ ಕಾರಣ ಅವರ ನಡುವೆ ಆಗಾಗ್ಗೆ ಜಗಳಗಳು ನಡೆಯುತ್ತವೆ. ಒಬ್ಬ ಸಂಗಾತಿ ಕೋಪಗೊಂಡರೆ, ಇನ್ನೊಬ್ಬರು  ಶಾಂತವಾಗಿರಬೇಕು. ಆದ್ರೆ ಬಹುತೇಕರು ಇದ್ರಲ್ಲಿ ವಿಫಲರಾಗ್ತಾರೆ. ಮೂಡ್ ಹಾಳಾಗಿದೆ ಎಂಬುದು ಗೊತ್ತಿದ್ದೂ ಜಗಳ ಶುರು ಮಾಡ್ತಾರೆ. ಇದ್ರಿಂದ ಮನಸ್ಸು ಶಾಂತವಾಗುವ ಬದಲು ಮತ್ತಷ್ಟು ಕೆಡುತ್ತದೆ. ಹಾಗಾಗಿ ಸಂಗಾತಿ ಮೂಡ್ ಸರಿಯಿಲ್ಲ ಎಂಬುದು ಗೊತ್ತಾದಾಗ ನೀವು ಜಗಳವಾಡದೆ ಸುಮ್ಮನಿರಿ.
 

click me!