ಬ್ರೇಕ್ ಅಪ್.. ಈ ಚಿಕ್ಕ ಶಬ್ಧ ಸಾಯುವಷ್ಟು ನೋವು ನೀಡುತ್ತದೆ. ಆದ್ರೆ ತಜ್ಞರು, ಅಷ್ಟೊಂದು ಬೇಸರಪಟ್ಟುಕೊಳ್ಳುವ ಅಗತ್ಯವಿಲ್ಲ ಎನ್ನುತ್ತಾರೆ. ಬ್ರೇಕ್ ಅಪ್ ನಿಂದಲೂ ಲಾಭವಿದೆ. ಏನು ಗೊತ್ತಾ?
ಲವ್ ಅಟ್ ಫಸ್ಟ್ ಸೈಟ್ ಎನ್ನುತ್ತಾರೆ. ಮೊದಲ ಬಾರಿ ಪ್ರೀತಿಸಿದವರನ್ನೇ ಮದುವೆಯಾಗೋದು ಅದೃಷ್ಟ. ಎಲ್ಲರೂ ಪ್ರೀತಿ ವಿಷ್ಯದಲ್ಲಿ ಲಕ್ಕಿ ಆಗಿರೋದಿಲ್ಲ. ಫಸ್ಟ್ ಲವ್ ಸಂಗಾತಿಯಾಗಿ ಬರೋದು ಬಹಳ ಅಪರೂಪ. ತನ್ನ ಸರ್ವಸ್ವವೇ ನೀನು ಎಂದು ನಂಬಿ ಹೃದಯಕೊಟ್ಟವರಿಗೆ ಬ್ರೇಕ್ ಅಪ್ ದೊಡ್ಡ ಶಾಕ್ ನೀಡೋದಿದೆ. ಕಾರಣ ಏನೇ ಇರಲಿ, ಪ್ರೀತಿಸಿದ ವ್ಯಕ್ತಿ ದೂರವಾದಾಗ ಅದನ್ನು ಸಹಿಸಿಕೊಳ್ಳೋದು ಹೇಳಿದಷ್ಟು ಸುಲಭವಲ್ಲ. ಪ್ರೀತಿಯಲ್ಲಿ ಮೋಸ ಹೋದವರು ಮತ್ತೆ ಚೇತರಿಸಿಕೊಳ್ಳಲು ತುಂಬಾ ಸಮಯಬೇಕು. ಕೆಲವರು ಜೀವಂತ ಶವದಂತೆ ವರ್ತಿಸುತ್ತಾರೆ. ಮತ್ತೆ ಕೆಲವರು ಸಾವಿಗೆ ಶರಣಾಗ್ತಾರೆ. ಇನ್ನು ಕೆಲವರು ಬ್ರೇಕ್ ಅಪ್ ನಂತ್ರ ಸಂಪೂರ್ಣ ಬದಲಾಗ್ತಾರೆ. ಈ ಬದಲಾವಣೆ ಸಕಾರಾತ್ಮಕವಾಗಿದ್ದರೆ ಅವರ ಬಾಳಲ್ಲಿ ಹೊಸ ಬೆಳಕು ಮೂಡುತ್ತದೆ. ಬ್ರೇಕ್ ಅಪ್ ಅವರಿಗೆ ಹೊಸ ಪಾಠ ಕಲಿಸುತ್ತದೆ.
ಐಎಎಸ್ (IAS) ಕೋಚಿಂಗ್‌ನಲ್ಲಿ ಯುಪಿಎಸ್‌ಸಿ ಪಠ್ಯಕ್ರಮದ ಜೊತೆಗೆ ಜೀವನದ ಪಾಠಗಳನ್ನು ಕಲಿಸುವ ಡಾ.ವಿಕಾಸ್ ದಿವ್ಯಕೀರ್ತಿ ಅವರು ಈ ಬ್ರೇಕ್ ಅಪ್ ಬಗ್ಗೆ ಮಹತ್ವದ ವಿಷ್ಯವನ್ನು ಜನರಿಗೆ ಹೇಳಿದ್ದಾರೆ. ಮದುವೆಗೆ ಮುನ್ನ ಒಂದೆರಡು ಬ್ರೇಕ್ ಅಪ್ ಆಗೋದು ಒಳ್ಳೆಯದು ಎಂದು ಅವರು ನಂಬಿದ್ದಾರೆ. ಬ್ರೇಕಪ್ ನಂತರ ಆಗುವ ಬದಲಾವಣೆಯು ವ್ಯಕ್ತಿಗೆ ಬಹಳ ಮುಖ್ಯ ಎಂದು ಅವರು ಹೇಳುತ್ತಾರೆ. ಯಾಕೆ ಎಂಬುದನ್ನೂ ಅವರು ವಿವರಿಸಿದ್ದಾರೆ.
ಮದುವೆಯ ನಂತರ ಹುಡುಗಿಯರು ಈ ತಪ್ಪುಗಳನ್ನು ಮಾಡಬಾರದು!
ಮದುವೆ (Marriage) ಗೆ ಮುನ್ನ ಬ್ರೇಕ್ ಅಪ್ ಆಗೋದು ಒಳ್ಳೆಯದು : ಬ್ಯಾಕ್‌ಅಪ್ ಎನ್ನುವುದು ಪ್ರಬುದ್ಧತೆಯ ಮೆಟ್ಟಿಲು ಎನ್ನುತ್ತಾರೆ ಅವರು. ಹುಡುಗ ಅಥವಾ ಹುಡುಗಿ ಬ್ರೇಕ್ ಅಪ್ (Breakup) ಮಾಡಿಕೊಂಡಾಗ ಭಾವನಾತ್ಮಕವಾಗಿ ಬಲವನ್ನು (Emotional Bonding) ಪಡೆಯುತ್ತಾರೆ ಎಂದು ಡಾ.ವಿಕಾಸ್ ದಿವ್ಯಕೀರ್ತಿ ಹೇಳ್ತಾರೆ.
ದಾಂಪತ್ಯ ಬಲಗೊಳ್ಳುತ್ತದೆ (Strong Wedding) : ಮದುವೆ ಯಾವಾಗ್ಲೂ ಪ್ರಬುದ್ಧ ವ್ಯಕ್ತಿಗಳ ಜೊತೆ ಆಗ್ಬೇಕು. ಈಗಾಗಲೇ ಬ್ರೇಕ್ ಅಪ್ ಗೆ ಒಳಗಾಗಿರುವ ವ್ಯಕ್ತಿಗೆ ಸಂಬಂಧ ಮುರಿಯಲು ಯಾವುದು ಕಾರಣ ಎಂಬುದು ತಿಳಿದಿರುತ್ತದೆ. ಹಾಗಾಗಿ ಮಾಡಿದ ತಪ್ಪನ್ನೇ ಆತ ದಾಂಪತ್ಯ ಜೀವನದಲ್ಲಿ ಮಾಡಲು ಹೋಗೋದಿಲ್ಲ. ದಾಂಪತ್ಯವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡ್ತಾನೆ. ಸಂಬಂಧ ದುರ್ಬಲವಾಗಲು ಬಿಡುವುದಿಲ್ಲ. ಎಲ ನಿರ್ಧಾರಗಳನ್ನು ಆಲೋಚನೆ ಮಾಡಿ, ಸರಿಯಾಗಿ ವಿಮರ್ಶಿಸಿ ತೆಗೆದುಕೊಳ್ಳುವ ಕಾರಣ ಸಂಗಾತಿ ಮಧ್ಯೆ ಅನವಶ್ಯಕ ಗಲಾಟೆ, ಜಗಳಕ್ಕೆ ಇಲ್ಲಿ ಆಸ್ಪದವಿರೋದಿಲ್ಲ.
ಸೆಕ್ಸ್ ಮಾಡೋವಾಗ ಸಿಕ್ಕಾಪಟ್ಟೆ ನೋವಾ? ಪೈನ್ ಕಡಿಮೆಯಾಗೋಕೆ ಏನ್ ಮಾಡ್ಬೇಕು ತಿಳ್ಕೊಳ್ಳಿ
ಬಲವಂತದ ಬ್ರೇಕ್ ಅಪ್ (Break Up) ಅಗತ್ಯವಿಲ್ಲ : ದಾಂಪತ್ಯ ಗಟ್ಟಿಯಾಗಲು, ದೀರ್ಘಕಾಲ ಉಳಿಯಲು ಒಂದೆರಡು ಬ್ರೇಕ್ ಅಪ್ ಆಗ್ಬೇಕು ಎನ್ನುವ ಮಾತನ್ನು ನಕಾರಾತ್ಮಕವಾಗಿ ತೆಗೆದುಕೊಳ್ಳಬಾರದು ಎಂದು ಡಾ.ವಿಕಾಸ್ ದಿವ್ಯಕೀರ್ತಿ ಹೇಳಿದ್ದಾರೆ. ಬ್ರೇಕ್ ಅಪ್ ಒಳ್ಳೆಯದು ಎನ್ನುವ ಕಾರಣಕ್ಕೆ ಬಲವಂತದ ಬ್ರೇಕ್ ಅಪ್ ಅಗತ್ಯವಿಲ್ಲ. ಮೊದಲ ಸಂಗಾತಿ ಜೊತೆಯೇ ನೀವು ಹೊಂದಾಣಿಕೆಯಿಂದ ಜೀವನ ನಡೆಸುತ್ತಿದ್ದರೆ, ನಿಮ್ಮಿಬ್ಬರ ಸಂತೋಷಕ್ಕೆ ಯಾವುದು ಮುಖ್ಯ ಎಂಬುದು ನಿಮಗೆ ಗೊತ್ತಿದ್ದರೆ ನೀವು ಉದ್ದೇಶಪೂರ್ವಕವಾಗಿ ಬ್ರೇಕ್ ಅಪ್ ಮಾಡಿಕೊಳ್ಳಬೇಕಾಗಿಲ್ಲ.
ಇಬ್ಬರ ಮಧ್ಯೆ ಹೊಂದಾಣಿಕೆ (Undestanding) ಇಲ್ಲವೆಂದಾಗ ಅಥವಾ ನಿಮ್ಮ ತಪ್ಪಿನಿಂದ ನಿಮ್ಮ ಪ್ರೇಮಿ ನಿಮ್ಮಿಂದ ದೂರವಾದ್ರೆ ಅದಕ್ಕೆ ಅತ್ಯಧಿಕವಾಗಿ ಕೊರಗುವ ಅಗತ್ಯವಿಲ್ಲ. ಇದೇ ಜೀವನದ ಕೊನೆಯಲ್ಲ ಎಂಬುದನ್ನು ನೀವು ತಿಳಿಯಬೇಕು. ಮೊದಲ ಸಂಗಾತಿ ಅಥವಾ ಎರಡನೇ ಸಂಗಾತಿ ಬಿಟ್ಟು ಹೋಗಲು ಕಾರಣವೇನು ಎಂಬುದನ್ನು ನೀವೇ ವಿಮರ್ಶೆ ಮಾಡ್ಬೇಕು. ಅದ್ರಲ್ಲಿ ನಿಮ್ಮ ತಪ್ಪೇ ಹೆಚ್ಚಾಗಿ ಕಾಣಿಸಿದ್ರೆ ಮುಂದೆ ಭವಿಷ್ಯದಲ್ಲಿ ಇದು ಮರುಕಳಿಸದಂತೆ ಎಚ್ಚರಿಕೆವಹಿಸಬೇಕು. ಯಾವುದೇ ಕಾರಣಕ್ಕೂ ನೀವು ಮದುವೆ ನಂತ್ರ ಈ ತಪ್ಪುಗಳನ್ನು ಮಾಡಲು ಹೋಗ್ಬಾರದು ಎನ್ನುತ್ತಾರೆ ಡಾ.ವಿಕಾಸ್ ದಿವ್ಯಕೀರ್ತಿ.