ತಪ್ಪು ತಿಳುವಳಿಕೆ ಅನ್ನೋದು ಒಂದು ಸಂಬಂಧದ ನಡುವೆ ಬಂದರೆ ಅದನ್ನು ಸರಿಯಾಗಿ ಬಗೆಹರಿಸಿಕೊಳ್ಳದೆ ಇದ್ದಾಗ ಸಂಬಂಧದಲ್ಲಿ ಬಿರುಕು ಮೂಡುವ ಸಾಧ್ಯತೆಯಿದೆ. ಇದರಿಂದ ಬರಿ ನೋವು ಹೊರತು ನೆಮ್ಮೆದಿಯಿರುವುದಿಲ್ಲ. ಇಂತಹ ಸೂಕ್ಷ್ಮ ವಿಚಾರಗಳನ್ನು ಬಗೆಹರಿಸಿಕೊಳ್ಳಲು ಇಲ್ಲಿ ಕೆಲವು ಮಾರ್ಗಗಳಿವೆ.
ಒಬ್ಬರ ಜೊತೆ ಮಾತಿಗೆ ಮಾತು ಬಂದು ಜಗಳವಾದರೆ (Conflict) ಸ್ವಲ್ಪ ಸಮಯ ಕಳೆದ ಮೇಲೆ ಮರೆತು ಸರಿ ಹೋಗಿಬಿಡಬಹುದು. ಆದರೆ ಯಾರ ಬಗ್ಗೆಯಾದರೂ ತಪ್ಪು ಅಭಿಪ್ರಾಯಗಳು (Misunderstanding) ಅಥವಾ ಅನುಮಾನಗಳು (Doubt) ಮನಸ್ಸಿಗೆ ಬಂದು ಕೂತರೆ ಅದನ್ನು ನೀವಾಗೆ ಬಗೆಹರಿಸಿಕೊಳ್ಳದೆ ಹೋದರೆ ಅದು ಎಂದಿಗೂ ಹಾಗೆ ಉಳಿದುಬಿಡುತ್ತದೆ. ಅದೂ ಅಲ್ಲದೆ ಸಂಬಂಧ ಹಾಳಾಗುವುದು ನಿಶ್ಚಿತ.
ಇಂತಹ ಸಮಸ್ಯಗೆಳನ್ನು ಬಾರದಂತೆ ತಡೆಯಲು, ಮಾತಿನ ಮಧ್ಯ ತಪ್ಪು ತಿಳುವಳಿಕೆಯಾಗದಂತೆ ಮಾಡಲು ನೀವು ಹೀಗೆ ಮಾಡಬಹುದು.
ನಿಮ್ಮ ಮಾತುಗಳು ಎಲ್ಲೋ ಒಂದು ಕಡೆ ನಿಂತು (Stop) ಹೋಯಿತು, ಇಲ್ಲವೇ ಮಾತಿನ ಮಧ್ಯ ಬೇರೆಯವರು ಬಾಯಿ ಹಾಕಿರಬಹುದು, ಇಲ್ಲವೇ ಬೇರೆ ಯಾವುದೇ ರೀತಿಯ ಅಡೆತಡೆಗಳು ಉಂಟಾಗಿ ನಿಮ್ಮ ಎದುರಿಗಿರುವವರ ಮಾತು ಅಥವಾ ಅವರ ಆ ಮಾತಿನ ಭಾವನೆ (Feeling) ನಿಮಗೆ ಅರ್ಥವಾಗದೆ ಹೋಗಿರಬಹುದು. ಆಗ ನೀವು ಅವರ ಬಳಿ- ನಿಮ್ಮ ಮಾತಿನ ಅರ್ಥವನ್ನು ಇನ್ನೊಮ್ಮೆ ಹೇಳಬಹುದೆ ಎಂದು ಕೇಳಬಹುದು. ಅವರ ಮಾತನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳುವ ಬದಲು ನೇರವಾಗಿ ಹೀಗೆ ಕೇಳುವುದು ಇಬ್ಬರಿಗೂ ಒಳ್ಳೆಯದು.
ಕೆಲವೊಮ್ಮೆ ಇದೇ ಪರಿಸ್ಥತಿ ಸ್ವಲ್ಪ ಉಲ್ಟಾ (Reverse) ಕೂಡಾ ಆಗಬಹುದು. ಅಂದರೆ, ನಿಮ್ಮ ಮಾತು ಅರ್ಧಕ್ಕೆ ತುಂಡಾದರೆ ಆಗ ಕೂಡ ನೀವು ಇದನ್ನು ಅಲ್ಲಿಯೇ ಪರಿಹರಿಸಿಕೊಳ್ಳಬಹುದು. ನನ್ನ ಮಾತು ನಿಮಗೆ ಬಹುಶಃ ನಿಮಗೆ ಅರ್ಥಮಾಡಿಸಲು ಸೋತಿದ್ದೀನಿ (Failure). ನಾನು ಇನ್ನೊಮ್ಮೆ ಅದರ ಬಗ್ಗೆ ಮಾತನಾಡಬಹುದೆ ಎಂದು ಕೇಳಬಹುದು.
ಇನ್ನೂ ಕೆಲವು ಸಂದರ್ಭಗಳು ಹೇಗಾಗುತ್ತದೆ ಅಂದರೆ ನೀವೇನೋ ಯೋಚನೆಯಲ್ಲಿ ಯಾವುದೋ ಮಾತಾಡಿಬಿಡುತ್ತೀರಿ, ಆದರೆ ನೀವು ಹೇಳಲು ಹೊರಟ ಮಾತಿನ ಅರ್ಥ ಬೇರೆಯೇ ಆಗಿರುತ್ತದೆ. ಇಂತಹ ಮಾತುಗಳಿಂದ ತಪ್ಪು ತಿಳುವಳಿಕೆ ಹೆಚ್ಚುತ್ತದೆ. ಈ ವಿಚಾರ ನಿಮ್ಮ ಗಮನಕ್ಕೆ ಬಂದ ಕೂಡಲೆ ನೀವು- ನನ್ನ ಮಾತಿನ ಉದ್ಧೇಶ ಹೀಗಿತ್ತು, ನಾನು ಮಾತನಾಡಿದ ಅರ್ಥದ ಬಗ್ಗೆ ತಪ್ಪು ತಿಳಿಯಬೇಡಿ ಎಂದು ನೀವು ಹೇಳಬಯಸಿದ ವಿಷಯವನ್ನು ಅವರಿಗೆ ಮನವರಿಕೆ (Understand) ಮಾಡಿಸಿ. ಇದು ಎಷ್ಟೋ ತಪ್ಪು ತಿಳುವಳಿಕೆಯಾಗುವುದನ್ನು ತಪ್ಪಿಸುತ್ತದೆ.
ಇನ್ನು ಕೆಲವು ಸಂದರ್ಭಗಳು (Situation) ನೀವು ಇನ್ನೂ ನಿಮ್ಮ ಮಾತನ್ನು ಮುಗಿಸಿರುವುದಿಲ್ಲ, ಕೆಲವು ವಿಷಯಗಳ ಬಗ್ಗೆ ಚರ್ಚಿಸಲು ಬಯಸಿರುತ್ತೀರಿ. ಆದರೆ ನಿಮ್ಮ ಮಾತು ಆಲಿಸುವ ತಾಳ್ಮೆ ನಿಮ್ಮ ಎದುರಿಗಿರುವ ವ್ಯಕ್ತಿಗೆ ಇರುವುದಿಲ್ಲ. ಅವರು ನಿಮ್ಮ ಮಾತಿನ ಮಧ್ಯ ಬಾಯಿ ಹಾಕಿ ಮಾತು ಮುಗಿಸಲು ಪ್ರಯತ್ನಿಸುತ್ತಾರೆ ಅಂದಾಗ ನೀವು ನೇರವಾಗಿ, ಬಹುಶಃ ನಮಗೆ ನಿಮಗೆ ಮಾತು ಸರಿಹೋಗುತ್ತಿಲ್ಲ. ನಾವು ಈ ವಿಚಾರದ ಬಗ್ಗೆ ಇನ್ನೊಮ್ಮೆ ಮಾತನಾಡೋಣ ಎಂದು ಹೇಳಬಹುದು.
ನಿಮ್ಮ ಮಾತನ್ನು ಕೇಳಬೇಕಾದವರು ಮಾತು ಕೇಳಿಸಿಕೊಳ್ಳಲು ಆಸಕ್ತಿ (Interest) ತೋರಿಸುತ್ತಿಲ್ಲ ಅನ್ನುವಂತಹ ಸಮಯದಲ್ಲಿ ಮಾತು ಮುಂದುವರೆಸುವ ಬದಲು ಆ ಮಾತನ್ನು ಅಲ್ಲಿಗೆ ಬಿಡುವುದೇ ಒಳ್ಳೆಯದು. ಇಲ್ಲವಾದರೆ ಅವರು ನಿಮ್ಮ ಮಾತನ್ನು ಪರಿಗಣಿಸದೇ (Consider) ಇರಬಹುದು. ಅದಕ್ಕಿಂತ ನೀವೇ ಸುಮ್ಮನಾಗುವುದು ಒಳ್ಳೆಯದು.
ಹೀಗೆ ತಪ್ಪು ತಿಳುವಳಿಕೆ ತಡೆಯಲು ನಿಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನ ಮಾಡಿ. ಆದರೂ ಇದು ಸರಿಹೋಗುತ್ತಿಲ್ಲ ಎಂದಾಗ ತುಂಬಾ ತಲೆ ಕೆಡಿಸಿಕೊಳ್ಳಬೇಡಿ (Worry). ಆಗ ನಿಮ್ಮ ಎದುರಿಗಿರುವವರು ಕೂಡಾ ಸರಿಯಾಗಿ ಪ್ರತಿಕ್ರಿಯೆ ನೀಡಬೇಕು, ಇಲ್ಲವಾದರೆ ಯಾವೊಂದು ಸಮಸ್ಯೆಯು ಸರಿ ಹೋಗುವುದಿಲ್ಲ, ಆದರೆ ಪ್ರಯತ್ನವೇ ಪಡದೆ ಸುಮ್ಮನೆ ಕುಳಿತುಬಿಡಬೇಡಿ ಅಷ್ಟೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.