Tips for smartness: ನೀವು ಇನ್ನಷ್ಟು ಸ್ಮಾರ್ಟ್ ಆಗಬೇಕಾ? ಈ 7 ಟಿಪ್ಸ್ ಫಾಲೋ ಮಾಡಿ..

By Suvarna News  |  First Published Feb 2, 2022, 3:40 PM IST

ಜಾಣತನ ಅಥವಾ ಸ್ಮಾರ್ಟ್‌ನೆಸ್ ಈ ಆಧುನಿಕ ಯುಗದಲ್ಲಿ ಎಲ್ಲರಿಗೂ ಬೇಕು. ಅದನ್ನ ಹೆಚ್ಚಿಸಿಕೊಳ್ಳಲು ನೀವೇನು ಮಾಡಬೇಕು? ಇಲ್ಲಿವೆ 7 ಟಿಪ್ಸ್.
 


ಸ್ಮಾರ್ಟ್ (Smartness) ಆಗಿರೋದು, ಜಾಣತನಕ್ಕೆ ಮಿತಿಯೇ ಇಲ್ಲ. ಮಾನವನ ಮೆದುಳು (Brain) ಅಪರಿಮಿತ ಪ್ರಮಾಣದ ಜ್ಞಾನ (Knowledge) ವನ್ನು ಗಳಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಆದ್ದರಿಂದ ನಿಮ್ಮ ಕಲ್ಪನೆಗೂ ಮೀರಿ ನೀವು ಚುರುಕಾಗಬಹುದು. ಮತ್ತು ನೀವು ಚುರುಕಾದಾಗ, ನಿಮ್ಮ ಬಗ್ಗೆಯೇ ನಿಮಗೆ ಅಪರಿಮಿತ ಆತ್ಮವಿಶ್ವಾಸ ಮೂಡುತ್ತದೆ. ನಿಮಗೂ ನಿಮ್ಮ ಸ್ನೇಹಿತರಿಗೂ ನೀವು ವಿಭಿನ್ನವಾಗಿ ಕಾಣಿಸತೊಡಗುತ್ತೀರಿ. ಹೆಚ್ಚಿನ ಸಂದರ್ಭಗಳಲ್ಲಿ ನೀವು ಭಯಪಡುವುದಿಲ್ಲ. ನೀವು ಸ್ಮಾರ್ಟ್ ಆಗಲು ಸಹಾಯ ಮಾಡುವ ಕೆಲವು ಸಣ್ಣ ವಿಷಯಗಳನ್ನು ಪ್ರತಿದಿನ ಅನುಸರಿಸುವುದು ಮುಖ್ಯವಾಗಿದೆ.

1. ಮುಂಜಾನೆ ಸಾಕಷ್ಟು ನೀರು ಕುಡಿಯಿರಿ (Dehydrate) 
ಪ್ರತಿದಿನ ಬೆಳಿಗ್ಗೆ ಎದ್ದ ನಂತರ ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ಎರಡು ಲೋಟ ನೀರು (drink Water) ಕುಡಿಯುವುದು. ನೀವು ಮತ್ತು ನಿಮ್ಮ ದೇಹ ಇಡೀ ರಾತ್ರಿ ನಿದ್ರಿಸುತ್ತಿರುತ್ತದೆ. ಏಳುವಾಗ ದೇಹ ಸಾಕಷ್ಟು ನಿರ್ಜಲೀಕರಣಗೊಂಡಿರುತ್ತದೆ. ನಿಮ್ಮ ಆಂತರಿಕ ಅಂಗಗಳ ಕೆಲಸ ಖಚಿತಪಡಿಸಲು, ನಿಮ್ಮ ದಿನಚರಿ ಮುಂದಕ್ಕೆ ಒಯ್ಯಲು ನೀರಿನ ಅಗತ್ಯವಿರುತ್ತದೆ. ಜಲಸಂಪನ್ನಗೊಂಡ ದೇಹವು ಮಾನಸಿಕ ಕಾರ್ಯಗಳನ್ನು ಉತ್ತಮವಾಗಿ ನಿರ್ವಹಿಸಲು ನಿಮಗೆ ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ಸಾಬೀತುಪಡಿಸಿವೆ. ನಿಮ್ಮ ಮೆದುಳು ನಿರ್ಜಲೀಕರಣಗೊಂಡಿರುವ ದೇಹವನ್ನು ಮುಂದಕ್ಕೆ ಒಯ್ಯಲಾರದು. 

2. ಗ್ರೀನ್ ಟೀ ಕುಡಿಯುವುದು (Green Tea)
ಈಗ, ಹೆಚ್ಚಿನ ಜನರು ಕೆಲಸ ಮಾಡುವಾಗ ಕೆಫೀನ್ (Caffeine) ಅನ್ನು ಉತ್ತೇಜಕವಾಗಿ ಬಳಸುತ್ತಾರೆ. ಇದು ಒಳ್ಳೆಯದೇ ಆಗಿದ್ದರೂ, ಕೆಫೀನ್ ವ್ಯಕ್ತಿಯನ್ನು ತುಂಬಾ ಚಿಂತೆಗೀಡು ಮಾಡುತ್ತದೆ. ಅಲ್ಲದೆ, ಇದು ರಾತ್ರಿಯ ನಂತರ ನಿಮ್ಮ ನಿದ್ರೆಗೆ ಅಡ್ಡಿಪಡಿಸುತ್ತದೆ. ಕೆಲಸ ಮಾಡುವಾಗ ಗ್ರೀನ್ ಟೀ ಕುಡಿಯುವುದು ಉತ್ತಮ ಅಭ್ಯಾಸ. ಹಸಿರು ಚಹಾ, ಶುಂಠಿ ಟೀಗಳು ಮಿದುಳಿನ ಆಲ್ಫಾ ಅಲೆಗಳ ಹೆಚ್ಚಳಕ್ಕೆ ಕಾರಣವಾಗುವ ಎಲ್-ಥೈನೈನ್ ಅನ್ನು ಹೊಂದಿರುತ್ತದೆ. ಅರೆನಿದ್ರಾವಸ್ಥೆಯನ್ನು ಉಂಟುಮಾಡದೆ ಮಾನವ ದೇಹಕ್ಕೆ ವಿಶ್ರಾಂತಿ ನೀಡಲು ಸಹ ಇದು ಹೆಸರುವಾಸಿಯಾಗಿದೆ.

Tap to resize

Latest Videos

undefined

Motivational story: ಈಕೆ ತೋಳುಗಳೇ ಇಲ್ಲದ ವಿಮಾನ ಪೈಲಟ್!

3. ಮಧ್ಯಾಹ್ನದ ನಿದ್ರೆ (Afternoon sleep)
ನಾವೆಲ್ಲರೂ ಶಿಶುಗಳಾಗಿದ್ದಾಗ ಸಣ್ಣ ಪುಟ್ಟ ನಿದ್ರೆಗಳನ್ನು ದ್ವೇಷಿಸುತ್ತಿದ್ದೆವು. ಆದರೆ ಸಂಪೂರ್ಣವಾಗಿ ಬೆಳೆದ ವಯಸ್ಕರಿಗೆ ಈ ಚಿಕ್ಕ ನಿದ್ರೆಗಳು ಅತ್ಯಗತ್ಯ. ದಿನದ ಮಧ್ಯದಲ್ಲಿ ಚಿಕ್ಕನಿದ್ರೆ ಮಾಡುವುದರಿಂದ ಮನುಷ್ಯನ ಮನಸ್ಸಿನ ಕ್ಷಮತೆ ಹೆಚ್ಚುತ್ತದೆ ಎಂದು ತಿಳಿದುಬಂದಿದೆ. ಇದು ಮನಸ್ಸನ್ನು ರಿಫ್ರೆಶ್ ಮಾಡುತ್ತದೆ, ಹೀಗಾಗಿ ನೀವು ಇನ್ನೂ ಉತ್ತಮವಾಗಿ ಕೆಲಸ ಮಾಡಲು ಮತ್ತು ಹೆಚ್ಚಿನ ಜ್ಞಾನವನ್ನು ಹೊಂದಲು ಅನುವು ಮಾಡಿಕೊಡುತ್ತದೆ. ನಿದ್ರೆ ಮಾಡಲು ಉತ್ತಮ ಸಮಯವೆಂದರೆ ಮಧ್ಯಾಹ್ನ 3 ಗಂಟೆಯ ಸಮಯ. ಅಥವಾ ವ್ಯಾಯಾಮದ ಅವಧಿಯ ನಂತರ ನೀವು ಸರಳವಾಗಿ ಚಿಕ್ಕನಿದ್ರೆ ತೆಗೆದುಕೊಳ್ಳಬಹುದು.

4. ಟಿವಿ ನೋಡುವ ಬದಲು ಆಟ ಆಡಿ (Vedio game)
ನೀವು ಟಿವಿಯಲ್ಲಿ ಅಥವಾ ಮೊಬೈಲ್‌ನಲ್ಲಿ ಚಲನಚಿತ್ರವನ್ನು (Movie) ವೀಕ್ಷಿಸುತ್ತಿದ್ದರೆ, ಹೆಚ್ಚಿನ ಸಮಯ ನಿಷ್ಪ್ರಯೋಜಕವಾಗುತ್ತಿರುವುದನ್ನು ಕಾಣುತ್ತೀರಿ. ಹೌದು, ಇದು ಮನರಂಜನೆ (Entertainment) ಆಗಿರಬಹುದು. ಆದರೆ ಇದು ನಿಮಗೆ ಕಡಿಮೆ ಪ್ರಯೋಜನಕಾರಿ ಅಥವಾ ನಿಷ್ಪ್ರಯೋಜಕ. ಆದರೆ ನೀವು ವೀಡಿಯೊ ಆಟಗಳಲ್ಲಿ ನಿಮ್ಮನ್ನು ತೊಡಗಿಸಿಕೊಂಡರೆ, ನೀವು ನಿಮ್ಮ ಮೆದುಳಿಗೆ ಸಾಕಷ್ಟು ಕೆಲಸ ಕೊಡುತ್ತಿರುತ್ತೀರಿ. ನಿಮ್ಮ ಸಂಪೂರ್ಣ ಗಮನ ಮತ್ತು ಕ್ರಿಯೆಯ ಅಗತ್ಯವಿರುವ ಯಾವುದನ್ನಾದರೂ ನೀವು ಮಾಡುತ್ತಿರುವುದು ನಿಮ್ಮ ಮೆದುಳಿಗೆ ಮೋಜಿನ ತಾಲೀಮು ಎಂದು ಪರಿಗಣಿಸಿ. ವೀಡಿಯೊ ಆಟಗಳು ಚಲನಚಿತ್ರಗಳಿಗಿಂತ ಉತ್ತಮ. 

5. ಪುಸ್ತಕವನ್ನು ಓದಿ (Book Reading)
ಇದರಲ್ಲಿ ಆಶ್ಚರ್ಯವಿಲ್ಲ. ಪುಸ್ತಕಗಳನ್ನು ಓದುವುದು ಮಾಹಿತಿಯ ಉತ್ತಮ ಮೂಲವೂ ಹೌದು. ಜ್ಞಾನವೇ ಶಕ್ತಿ ಎಂಬ ಹಳೆಯ ಮಾತನ್ನು ನೀವು ಕೇಳಿರಬಹುದು. ಜ್ಞಾನ ಎಷ್ಟು ಹೊಂದಿದ್ದರೂ ಸಾಕಾಯಿತು ಎಂಬುದಿಲ್ಲ. ನೀವು ಪುಸ್ತಕವನ್ನು ಓದುತ್ತಿರುವಾಗ, ಉತ್ತಮ ಪ್ರಮಾಣದ ಮಾಹಿತಿಯನ್ನು ತೆಗೆದುಕೊಳ್ಳುವುದರಿಂದ ಮೆದುಳಿಗೆ ವ್ಯಾಯಾಮದ (Excersise) ಮೂಲವಾಗಿ ಕಾರ್ಯನಿರ್ವಹಿಸುತ್ತದೆ. ಪುಸ್ತಕದ ಓದು ನಿಮ್ಮ ಮೆದುಳಿನಲ್ಲಿ ತನ್ನದೇ ಆದ ಚಿತ್ರವನ್ನು ಮೂಡಿಸುತ್ತಿರುತ್ತದೆ, ಅಂದರೆ ಇದು ಮೆದುಳಿಗೂ ಸಾಕಷ್ಟು ಕೆಲಸ ಕೊಡುತ್ತದೆ. ಅದು ಮೆದುಳಿನ ಉತ್ತೇಜಕತೆಯ ಉತ್ತಮ ರೂಪವಾಗಿದೆ.

6. ಪ್ರೋಗ್ರಾಮಿಂಗ್ ಮಾಡಿ (Programing)
ತಾರ್ಕಿಕವಾಗಿ (Logic) ಮತ್ತು ಮಾದರಿಗಳಲ್ಲಿ ಯೋಚಿಸಲು ನಿಮ್ಮ ಮೆದುಳಿಗೆ ತರಬೇತಿ ನೀಡಲು ನೀವು ಬಯಸಿದರೆ, ನೀವು ಪ್ರೋಗ್ರಾಮಿಂಗ್ ಮಾಡಬೇಕು. ಇದು ನಿಮ್ಮ ಮೆದುಳನ್ನು ಹೆಚ್ಚು ವ್ಯಾಯಾಮದ ಕಡೆಗೆ ತಳ್ಳುತ್ತದೆ. ನೀವು ಹೆಚ್ಚು ಚುರುಕಾದ ವ್ಯಕ್ತಿಯಾಗಿ ರೂಪುಗೊಳ್ಳುತ್ತೀರಿ. ನೀವು ಪದಬಂಧಗಳನ್ನು ಪರಿಹರಿಸುತ್ತೀರಲ್ಲವೇ? ಪ್ರೋಗ್ರಾಮಿಂಗ್ ಅನ್ನು ಅದರ ಮುಂದುವರಿದ ಹಂತವಾಗಿ ನೋಡಬಹುದು. ಪ್ರೋಗ್ರಾಂ ಮಾಡಲು ಕಲಿಯಲು ನಿಮಗೆ ಸಹಾಯ ಮಾಡುವ ಸಾಕಷ್ಟು ಉಚಿತ ವೆಬ್‌ಸೈಟ್‌ಗಳಿವೆ. ಇದಲ್ಲದೆ, ಬಹಳಷ್ಟು ಉದ್ಯೋಗಗಳಿಗೆ ಪ್ರೋಗ್ರಾಮಿಂಗ್ ಅಗತ್ಯವಿರುತ್ತದೆ. ಅದನ್ನು ಹೇಗೆ ಮಾಡಬೇಕೆಂದು ನಿಮಗೆ ತಿಳಿದಿದ್ದರೆ ಅದು ನಿಮ್ಮ ಬಯೋಡೇಟಾದಲ್ಲಿ ನಿಮ್ಮ ಮೌಲ್ಯವರ್ಧಕವಾಗಿ ಕಾಣುತ್ತದೆ.

7. ಬುದ್ಧಿವಂತರೊಂದಿಗೆ ಸಮಯ ಕಳೆಯಿರಿ
ನೀವು ಎಷ್ಟೇ ಬುದ್ಧಿವಂತರಾಗಿದ್ದರೂ, ನಿಮಗಿಂತ ಬುದ್ಧಿವಂತರು ಯಾವಾಗಲೂ ಇರುತ್ತಾರೆ. ಇದನ್ನು ನಿಮ್ಮ ಅನುಕೂಲಕ್ಕೆ ಬಳಸಿಕೊಳ್ಳಿ. ಚುರುಕಾದ ಯಾರೊಂದಿಗಾದರೂ ಹ್ಯಾಂಗ್ ಔಟ್ ಮಾಡಿ, ಅವರ ಅಭ್ಯಾಸಗಳನ್ನು ಮತ್ತು ವಿಭಿನ್ನ ವಿಷಯಗಳ ಬಗ್ಗೆ ಅವರ ಗ್ರಹಿಕೆಯನ್ನು ಪಡೆಯಲು ಪ್ರಯತ್ನಿಸಿ. ಇದು ನಿಮ್ಮ ಮನಸ್ಸನ್ನು ವಿಶಾಲಗೊಳಿಸಲು ಮತ್ತು ವಿಷಯಗಳನ್ನು ಹೊಸ ರೀತಿ ನೋಡಲು ಸಹಾಯ ಮಾಡುತ್ತದೆ. ನೀವು ಚುರುಕಾದ ಜನರೊಂದಿಗೆ ಸಮಯ ಕಳೆಯುವಾಗ, ಅವರ ಗುಣಲಕ್ಷಣಗಳು ನಿಮ್ಮ ಮೇಲೆ ಸ್ವಲ್ಪಮಟ್ಟಿಗೆ ಪ್ರಭಾವ ಬೀರುತ್ತವೆ. ಅದು ತುಂಬಾ ಒಳ್ಳೆಯದು.

Parenting Tips : ಮಕ್ಕಳ ಪರ ಮಾತನಾಡಿ, ಶಿಕ್ಷಕರನ್ನು ದೂರುವ ಪಾಲಕರಿಗೆ ಕಿವಿ ಮಾತು

click me!