ಬ್ರೇಕಪ್‌ ನಂತರ ಪ್ಯಾಚಪ್‌ ಮಾಡ್ಕೊಳ್ಳಲು ಸಿಂಪಲ್ ಟಿಪ್ಸ್‌ ಇಲ್ಲಿದೆ

By Suvarna News  |  First Published Jun 25, 2022, 4:46 PM IST

ಪ್ರೀತಿ (Love) ಹುಟ್ಟೋಕೆ ಕೆಲವೇ ನಿಮಿಷಗಳು ಸಾಕು, ಹಾಗೆಯೇ ಆ ಪ್ರೀತಿ ಕೊನೆಯಾಗೋಕು ಕೆಲವೇ ನಿಮಿಷಗಳ ನಿರ್ಧಾರ ಸಾಕಾಗುತ್ತದೆ. ಆದ್ರೆ ಬ್ರೇಕಪ್‌ (Breakup) ಮಾಡಿಕೊಂಡ ನಂತರ ಸಂಗಾತಿ (Partner)ಯನ್ನು ಮಿಸ್ ಮಾಡ್ಕೊಂಡು ಹಲವರು ಒದ್ದಾಡ್ತಾರೆ. ಹೀಗಾದಾಗ ಮತ್ತೆ ಪ್ಯಾಚಪ್ (Patchup) ಮಾಡ್ಕೊಳ್ಳೋದು ಹೇಗೆ ? ಇಲ್ಲಿದೆ ಕೆಲವೊಂದು ಟಿಪ್ಸ್‌.


ರಿಲೇಶನ್ ಶಿಪ್ (Relationship)ಗೆ ಬರೋದು ಎಂದರೆ ಇಬ್ಬರು ವ್ಯಕ್ತಿಗಳು ಪರಸ್ಪರ ಕ್ಲೋಸ್ ಆಗಿ ಒಬ್ಬರನ್ನೊಬ್ಬರು ತಿಳಿದುಕೊಳ್ಳುವುದು. ಆದರೆ ಎಲ್ಲಾ ಸಂಬಂಧವು ಬಹುದೂರ ಸಾಗಿ ಮದುವೆಯಂತಹ ಪವಿತ್ರ ಬಂಧದ ಹೊಸ್ತಿಲನ್ನು ತಲುಪುವ ಅಗತ್ಯವಿಲ್ಲ. ಕೆಲವು ಸಂದರ್ಭಗಳಲ್ಲಿ, ಆ ಸಂಬಂಧಗಳು ಅರ್ಧದಲ್ಲೇ ಮುರಿದು ಬೀಳುತ್ತವೆ. ಸಂಗಾತಿ ಜೊತೆ ಸರಿಯಾಗಿ ಹೊಂದಾಣಿಕೆ ಸಾಧ್ಯವಾಗದೆ ಇದ್ದಾಗ ಆ ಸಂಬಂಧದಿಂದ ಹೊರಬರುತ್ತಾರೆ. ಅಂದ್ರೆ ಬ್ರೇಕ್ ಅಪ್ (Breakup) ಆಗಿಬಿಡುತ್ತೆ. ಕೆಲವೊಂದು ಭಿನ್ನಾಭಿಪ್ರಾಯ, ದುರಾಭಿಮಾನ ಈ ತಪ್ಪು ನಿರ್ಧಾರಕ್ಕೆ ಕಾರಣವಾಗುತ್ತೆ. ನಂತರ ಕೆಲವೇ ದಿನಗಳಲ್ಲಿ ಹೀಗೆ ಮಾಡಬಾರದಿದ್ದು, ತಪ್ಪು ಮಾಡ್ಬಿಟ್ಟೆ ಅನಿಸಲು ಶುರುವಾಗುತ್ತದೆ. ಹೀಗೆ ಬ್ರೇಕಪ್ ಆದಾಗ ಮತ್ತೆ ಸಂಬಂಧದಲ್ಲಿ ಇರಬೇಕು ಅನಿಸಿದರೆ ಪ್ಯಾಚಪ್‌ (Patchup) ಮಾಡಿಕೊಳ್ಳುವುದು ಹೇಗೆ ? ಬಾಯ್‌ಫ್ರೆಂಡ್ ಜೊತೆ ಸಂಬಂಧವನ್ನು ಸರಿಪಡಿಸಿಕೊಳ್ಳಲು ಏನು ಮಾಡಬಹುದು ?

ಬ್ರೇಕಪ್ ನಂತರ ಪ್ಯಾಚ್ ಅಪ್ ಮಾಡಿಕೊಳ್ಳುವುದು ಹೇಗೆ?

Tap to resize

Latest Videos

ಬಾಯ್‌ಫ್ರೆಂಡ್ (Boyfriend) ಮುಂದೆ ಖುಷಿಯಾಗಿರಿ: ಮೊದಲನೆಯದಾಗಿ, ಸಂಗಾತಿಯ ಬಗ್ಗೆ ನೀವು ಇನ್ನೂ ಕೆಲವು ಭಾವನೆಗಳನ್ನು ಹೊಂದಿದ್ದರೆ, ಬ್ರೇಕಪ್‌ ಮಾಡಿಕೊಂಡಿದ್ದಕ್ಕೆ ವಿಷಾದಿಸುತ್ತಿದ್ದರೆ, ನೀವು ಮತ್ತೆ ಅವರ ಬಳಿಗೆ ಮರಳಿ ಹೋಗಬಹುದು. ನೀವು ದುಃಖದಲ್ಲಿರುವ ಬದಲು ಖುಷಿಯಾಗಿರುವ ಮೂಲಕ ಅವರನ್ನು ಗೊಂದಲಕ್ಕೆ ಒಳಪಡಿಸಬಹುದು. ಬ್ರೇಕಪ್‌ನ ನಂತರವೂ ನೀವು ಖುಷಿ (Happy)ಯಾಗಿರುವುದನ್ನು ನೋಡಿ ಅವರು ಗೊಂದಲಕ್ಕೊಳಗಾಗಬಹುದು. ಮತ್ತೆ ನಿಮ್ಮನ್ನು ಅಪ್ರೋಚ್‌ ಮಾಡಬಹುದು. ನಿಮ್ಮಿಂದ ಬೇರ್ಪಟ್ಟು ದೊಡ್ಡ ತಪ್ಪು ಮಾಡಿದ್ದಾನೆಯೇ ಎಂದು ಯೋಚಿಸಲು ಅವರನ್ನು ಒತ್ತಾಯಿಸಬಹುದು.

Love Break Up ಆಯಿತಾ? ಏನೂ ಆಗದಂತೆ ಇರಲು ಇಲ್ಲಿವೆ ಟಿಪ್ಸ್

ಭಾವನಾತ್ಮಕವಾಗಿ ಸಂಪರ್ಕಿಸಲು ಯತ್ನಿಸಿ: ಬ್ರೇಕಪ್‌ ನಂತರ, ಸ್ವಲ್ಪ ಸಮಯದವರೆಗೆ ಯಾವುದೇ ಪಾರ್ಟಿ, ಗೆಟ್‌ ಟುಗೆದರ್ ನಲ್ಲಿ ಭಾಗವಹಿಸಬೇಡಿ. ಇದನ್ನು ಮಾಡುವುದರಿಂದ, ಅವರು ನಿಮ್ಮ ಬಗ್ಗೆ ಚಿಂತಿಸಬಹುದು ಮತ್ತು ಈ ಮೂಲಕ ಅವರು ನಿಮ್ಮೊಂದಿಗೆ ಭಾವನಾತ್ಮಕವಾಗಿ  (Emotional) ಮತ್ತೆ ಕನೆಕ್ಟೆಡ್‌ ಅನಿಸಬಹುದು. ನಿಮ್ಮನ್ನು ಶಾಶ್ವತವಾಗಿ ಕಳೆದುಕೊಳ್ಳುವ ಭಯವು ಅವರನ್ನುಹೆದರಿಸಬಹುದು. ನಿಮ್ಮಿಂದ ಅವರನ್ನು ದೂರ ಮಾಡಲು ನೀವು ಎಷ್ಟು ಪ್ರಯತ್ನಿಸುತ್ತೀರೋ, ಅವರು ನಿಮಗೆ ಮತ್ತಷ್ಟು ಹತ್ತಿರವಾಗಲು ಬಯಸುತ್ತಾರೆ. 

ಕರೆ ಸಂದೇಶವನ್ನು ನಿರ್ಲಕ್ಷಿಸಿ: ನೀವು ಯಾರನ್ನಾದರೂ ಹೆಚ್ಚು ಹಿಂಬಾಲಿಸಿದಾಗ, ನಿಮ್ಮ ಮೌಲ್ಯವು ಕಡಿಮೆಯಾಗುತ್ತಾ ಹೋಗುತ್ತದೆ. ಇದು ಸಂಬಂಧಗಳಿಗೂ ಅನ್ವಯಿಸುತ್ತದೆ. ಆರಂಭಿಕ ಹಂತಗಳಲ್ಲಿ ಬ್ರೇಕಪ್‌ ನಂತರವೂ, ದಂಪತಿಗಳು ತಕ್ಷಣವೇ ಅದರಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಕಾಲ್‌, ಮೆಸೇಜ್ ಮಾಡಬೇಕೆಂದು ಅನಿಸಲು ತೊಡಗುತ್ತದೆ. ಆದರೆ ಹೀಗೆ ಮಾಡಬೇಡಿ. ಈ ಇಮೋಶನಲ್‌ ವೀಕಾಗಿರುವ ಸ್ವಭಾವ ನಿಮ್ಮನ್ನು ಮತ್ತಷ್ಟು ದೂರವಿರುವಂತೆ ಮಾಡುತ್ತದೆ. ಆದರೆ ನೀವು ಅವರನ್ನು ನಿರ್ಲಕ್ಷಿಸಲು ಪ್ರಾರಂಭಿಸಿದಾಗ, ಅವರ ಕರೆಗಳು ಅಥವಾ ಮೆಸೇಜ್‌ಗಳಿಗೆ ಉತ್ತರಿಸದೆ ಇದ್ದಾಗ ಅವರಾಗಿಯೇ ಮರಳಿ ನಿಮ್ಮ ಬಳಿಗೆ ಬರುತ್ತಾರೆ. 

ಒಲ್ಲದ ಸಂಬಂಧದಿಂದ ಹೊರ ಬರೋಕು ಇಷ್ಟೊಂದು ಒದ್ದಾಡ್ಬೇಕಾ?

ನಿಮ್ಮನ್ನು ಸುಧಾರಿಸಲು ಶ್ರಮಿಸಿ: ಅನೇಕ ಬಾರಿ ಸಂಬಂಧದಲ್ಲಿರುವಾಗ ನೀವು ಮಾಡಲು ಬಯಸುವ ಕೆಲವೊಂದು ಕೆಲಸಗಳನ್ನು ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ. ನಿಮಗಾಗಿ ಹೆಚ್ಚಿನ ಸಮಯವನ್ನು ಮೀಸಲಿಡಲು ಸಮಯವಿರುವುದಿಲ್ಲ. ಸಂಬಂಧದಿಂದ ಹೊರಬಂದಾಗ ನೀವು ನಿಮ್ಮ ವ್ಯಕ್ತಿತ್ವವನ್ನೇ ಉತ್ತಮಗೊಳಿಸಲು ಯತ್ನಿಸಿ. ವ್ಯಾಯಾಮ, ಡ್ಯಾನ್ಸ್ ಮೊದಲಾದ ಚಟುವಟಿಕೆಗಳಲ್ಲಿ ಭಾಗವಹಿಸಿ ಖುಷಿಯಾಗಿರಿ. ಇದು ನಿಮ್ಮ ಸಂಗಾತಿಯು ನಿಮ್ಮಿಂದ ಬ್ರೇಕಪ್ ಮಾಡುವ ಮೂಲಕ ನಾನು ಏನಾದರೂ ತಪ್ಪು ಮಾಡಿದ್ದಾನೆಯೇ ಎಂದು ಯೋಚಿಸುವಂತೆ ಮಾಡುತ್ತದೆ.

click me!