Parenting Tips: ಹದಿಹರೆಯದವರು ನಿಮ್ಮ ಮಾತು ಕೇಳಬೇಕು ಅಂದರೆ ಹೀಗೆ ಮಾಡಿ..

By Suvarna News  |  First Published Feb 17, 2022, 5:36 PM IST

ನಿಮ್ಮ ಮನೆಯಲ್ಲಿ ಅಥವಾ ಕುಟುಂಬದಲ್ಲಿ ಹದಿಹರೆಯದವರು ಇದ್ದರೆ ಅವರೊಂದಿಗಿನ ನಿಮ್ಮ ಸಂಬಂಧವನ್ನು ಗಟ್ಟಿಯಾಗಿಸಿಕೊಳ್ಳುವುದು ಹೇಗೆ? ಈ ವಯೋಮಾನದಲ್ಲಿ ಹದಿಹರೆಯದವರ ಮನಸ್ಸಿನಲ್ಲಿ ಚಂಚಲತೆ ಹೆಚ್ಚಿರುತ್ತದೆ. ಅವರ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ, ಅದಕ್ಕಾಗಿ ನೀವು ಹೀಗೆ ಮಾಡಬಹುದು..


ಸಾಮಾನ್ಯವಾಗಿ ಹೆಚ್ಚಿನ ತಂದೆತಾಯಿಯರು (parents) ತಮ್ಮ ಮಕ್ಕಳು ಹದಿಹರೆಯದ (Teenagers) ವಯಸ್ಸಿಗೆ ಕಾಲಿಟ್ಟಾಗ ಅವರ ಭವಿಷ್ಯದ ಕುರಿತು ಹೆಚ್ಚಿನ ಚಿಂತೆ ಮಾಡುತ್ತಾರೆ. ಇಂತಹ ವಯಸ್ಸಿನಲ್ಲಿ ಮಕ್ಕಳು ಕೈ ತಪ್ಪಿ ಹೋಗುವ ಭಯ ಹೆಚ್ಚಿರುತ್ತದೆ. ಹದಿ ಹರೆಯದ ವಯಸ್ಸಿನಲ್ಲಿ ದೈಹಿಕ ಹಾಗೂ ಮಾನಸಿಕವಾಗಿ ಹಲವಾರು ಬದಲಾವಣೆಗಳನ್ನು ಮಕ್ಕಳು ಎದುರಿಸುತ್ತಾರೆ. ಅದಕ್ಕಾಗಿಯೇ ಮಕ್ಕಳು ಒಂದು ವಯಸ್ಸನ್ನು ದಾಟಿದಮೇಲೆ ಅವರನ್ನು ಸ್ನೇಹಿತರಂತೆ ಕಾಣಬೇಕು ಎಂದು ಹಿರಿಯರು ಹೇಳುತ್ತಾರೆ.

ಇಂತಹ ಸಮಯದಲ್ಲಿ ನಿಮ್ಮ ಮಾತುಕತೆ ಅಥವಾ ನಡತೆಯಲ್ಲಿ ಸ್ವಲ್ಪ ಏರಿಳಿತವಾದರೂ ಅದು ನಿಮ್ಮ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ಇಂತಹ ವಯೋಮಾನದ ಮಕ್ಕಳನ್ನು ಸಂಭಾಳಿಸುವಾಗ ಎಚ್ಚರಿಕೆಯಿಂದ (Careful) ಇರಬೇಕು.ಇಂತಹ ಸಮಯದಲ್ಲಿ ನಿಮ್ಮ ಮಕ್ಕಳ ಜೊತೆಗೆ ನೀವು ಹೇಗೆ ನಡೆದುಕೊಳ್ಳಬೇಕು ಎಂಬುದರ ಕುರಿತಾಗಿ ಕೆಲವು ಸಲಹೆಗಳನ್ನು ಪಾಲಿಸಿ..

Tap to resize

Latest Videos

ಅವರ ಮಾತುಗಳನ್ನು ಆಲಿಸಿ

ನೀವು ನಿಮ್ಮ ಪಾಡಿಗೆ ಬುದ್ಧಿಮಾತುಗಳನ್ನು ಹೇಳುವುದನ್ನು ಕಡಿಮೆ ಮಾಡಿ, ಅವರ ಮನಸ್ಸಿನಲ್ಲಿ ಯಾವ ಯೋಚನೆಗಳು ಹರಿದಾಡುತ್ತಿದೆ ಎಂಬುದರ ಕುರಿತು ಗಮನ ನೀಡಿ. ಪ್ರತಿಬಾರಿಯೂ ಹಿರಿಯರು ಹೇಳಿದ ಮಾತುಗಳನ್ನೇ ಕಿರಿಯರು ಕೇಳಬೇಕು ಎಂಬ ಆಲೋಚನೆಯನ್ನು ಬದಿಗಿಟ್ಟು, ಅವರ ಅಭಿಪ್ರಾಯಗಳಿಗೂ ಮನ್ನಣೆ ನೀಡಿ. ನೀವು ಅವರ ಮಾತುಗಳಿಗೆ ಕಿವಿಗೊಡುತ್ತೀರ (Listen) ಎಂದಾದಾಗ ಅವರು ಕೂಡ ನಿಮ್ಮ ಮಾತುಗಳಿಗೆ ಗೌರವ (Respect) ನೀಡುತ್ತಾರೆ. ಅವರು ಹೇಳಿದ್ದೆಲ್ಲವನ್ನೂ ನೀವು ಆಲಿಸುತ್ತಿದ್ದೀರ ಎಂದ ಮಾತ್ರಕ್ಕೆ ಅವರು ಹೇಳಿದ ಮಾತುಗಳೆಲ್ಲ ಸರಿ ಇದೆ ಎಂದರ್ಥವಲ್ಲ, ಬದಲಿಗೆ ಅವರ ದಾರಿಯಲ್ಲಿ ನೀವು ಹೋಗಿ ಅವರಿಗೆ ಮಾರ್ಗದರ್ಶನ ನೀಡಬೇಕು.

Parenting Tips: ಮಕ್ಕಳ ಪ್ರಶ್ನೆಗೆ ‘ಬಹುಶಃ’ ಎಂಬ ಉತ್ತರ ಕೊಡ್ಬೇಬೇಡಿ !

ಅವರ ಮೇಲೆ ನಂಬಿಕೆ ಇಟ್ಟು, ಸ್ನೇಹಿತರೊಂದಿಗೆ (Friends) ಬೆರೆಯಲು ಬಿಡಿ.

ಹದಿಹರೆಯದವರು ತೆಗೆದುಕೊಳ್ಳುವ ನಿರ್ಧಾರದಲ್ಲಿ ದೃಢತೆ ಕಡಿಮೆ ಇರಬಹುದು. ಆದರೆ, ಅವರು ಮಾಡಿದ್ದೆಲ್ಲವೂ ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಅವರು ಮಾಡುವ ಪ್ರತಿ ಕೆಲಸಕ್ಕೂ ನೀವು ದೂರು ಹೇಳುವ ಬದಲಾಗಿ ಅವರ ಮೇಲೆ ನಂಬಿಕೆ (Trust) ಇರಿಸಿ ಹಾಗೂ ನೀವು ಅವರನ್ನು ನಂಬಿರುವ ಬಗ್ಗೆ ಅವರಿಗೆ ಮನವರಿಕೆ ಮಾಡಿಸಿ. ಆಗ ನೀವು ಅವರ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ಕಾರಣಕ್ಕಾದರೂ ಅವರು ತಪ್ಪು ಹಾದಿ ತುಳಿಯುವ ಯೋಚನೆ ಮಾಡುವುದಿಲ್ಲ. ಇನ್ನು ಪದೇಪದೇ ಸ್ನೇಹಿತರೊಂದಿಗೆ ಹೊರಗೆ ಹೋಗಬೇಡಿ ಎಂದು ಬೈಯುವ ಬದಲಾಗಿ ಅವರ ಸ್ನೇಹಿತರನ್ನು ನಿಮ್ಮ ಮನೆಗೆ ಬರಮಾಡಿಕೊಳ್ಳಿ ಅವರ ಸ್ನೇಹ ಬಳಗ ಯಾವ ರೀತಿಯಲ್ಲಿದೆ ಎಂಬುದರ ಬಗ್ಗೆ ನೀವೇ ತಿಳಿದುಕೊಳ್ಳಿ. ಅವರು ತಪ್ಪು ಹಾದಿ ತಿಳಿಯದಂತೆ ಕಾಳಜಿವಹಿಸಿ.

ಹೆಚ್ಚು ಸಮಯ (Time) ಜೊತೆಗೆ ಕಳೆಯಿರಿ

ನಿಮ್ಮ ಕೆಲಸ ಕಾರ್ಯಗಳು ಯಾವಾಗಲೂ ಇರುವಂತಹದು. ಆದರೆ, ನಿಮ್ಮ ಹದಿಹರೆಯದ ಮಕ್ಕಳಿಗಾಗಿ ಹೆಚ್ಚಿನ ಸಮಯವನ್ನು ನೀಡಿ ಅವರೊಂದಿಗೆ ಮಾತನಾಡಿ, ಆಟವಾಡಿ, ಸಿನಿಮಾ ನೋಡಿ, ಹೊರಗೆ ಹೋಗಿ ಹೀಗೆ ಎಷ್ಟು ಸಾಧ್ಯವೋ ಅಷ್ಟು ಸಮಯವನ್ನು ಅವರೊಂದಿಗೆ ಕಳೆಯಲು ಪ್ರಯತ್ನಿಸಿ. ಆಗ, ಅವರ ಮನಸ್ಸಿನ ಇಚ್ಛೆಗಳು ಏನು ಎಂಬ ಕಲ್ಪನೆ ನಿಮಗೆ ಬರುತ್ತದೆ. ಅವರ ಇಷ್ಟ-ಕಷ್ಟಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಬಹುದು. ಇದರ ಜೊತೆಗೆ, ಅವರಿಗೂ ಕೂಡ ನಿಮ್ಮ ಬಗ್ಗೆ ಪ್ರೀತಿ (Love) ಗೌರವ ಹೆಚ್ಚುತ್ತದೆ. 

Personality Development: ಸ್ವಭಾವ ಬದಲಾಯಿಸ್ಕೊಳ್ಳಿ ಎಲ್ಲಾ ಸರಿಯಾಗುತ್ತೆ

ಅವರ ಮಿತಿಯನ್ನು ತಿಳಿಸಿಕೊಡಿ

ನೀವು ಅದರೊಂದಿಗೆ ಬಹಳ ಸ್ನೇಹದಿಂದ ಇದ್ದೀರ. ಆದರೆ, ಅದನ್ನೇ ಅವರು ಅಡ್ವಾಂಟೇಜ್ (Advantage) ಆಗಿ ತೆಗೆದುಕೊಂಡು ತಪ್ಪು ದಾರಿ ತುಳಿಯಬಾರದು. ಅದಕ್ಕಾಗಿ ನಿಮ್ಮದೇ ದಾರಿಯಲ್ಲಿ ಅವರ ಮಿತಿ ಯಾವುದು, ಯಾವುದು ತಪ್ಪು, ಯಾವುದು ಸರಿ ಎಂಬುದರ ಅರಿವನ್ನು ಮೂಡಿಸಿ. ಸರಿ ದಾರಿಯಲ್ಲಿ ನಡೆಯಯುವಂತೆ ನೋಡಿಕೊಳ್ಳಿ.

click me!