ಸಂಬಂಧವೊಂದು ಅಂತ್ಯವಾದಾಗ ಅದರ ನೋವು ಕಾಡುವುದು ಸಹಜ. ಆದರೆ, ಅದು ಎರಡನೇ ಸಂಬಂಧಕ್ಕೂ ಮುಂದುವರಿಯಬಾರದು. ಒಂದೊಮ್ಮೆ ಮುಂದುವರಿದರೆ ಅದರಿಂದ ನಿಮಗೇ ಹಾನಿ. ಹಿಂದಿನ ಸಂಬಂಧದ ಒತ್ತಡವೊಂದು ನಿಮ್ಮನ್ನು ಕಾಡುತ್ತಿದೆ ಎಂದು ಈ ಲಕ್ಷಣಗಳ ಮೂಲಕ ಅರಿಯಬಹುದು.
ಸಂಬಂಧ(Relatioship)ವೊಂದು ಮುಗಿದುಹೋದಾಗ ಆಗುವ ನೋವು (Pain) ಸಾಕಷ್ಟು ಕಾಡುತ್ತದೆ. ನಾವೇ ಉದ್ದೇಶಪೂರ್ವಕವಾಗಿ ಸಂಬಂಧ ಕಡಿದುಕೊಂಡಿದ್ದರೂ ನೋವು ಸಹಜ. ಹಿಂದಿನ ಒಡನಾಟಗಳ ಛಾಯೆಯಲ್ಲಿ ಅನೇಕ ದಿನಗಳು ಕಳೆದು ಹೋಗುತ್ತವೆ. ಆದರೆ, ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಸಾಮಾನ್ಯ ದಿನಚರಿಗೆ ಮರಳಬೇಕು. ಇಲ್ಲವಾದಲ್ಲಿ ನಮಗೇ ಹಾನಿ (Loss) ಗ್ಯಾರೆಂಟಿ. ಆದರೂ ಕೆಲವರಿಗೆ ಇದು ಸಾಧ್ಯವಾಗುವುದಿಲ್ಲ.
ಅನೇಕರು ಹಿಂದಿನ ಸಂಬಂಧದ ಕಹಿ (Bitter) ನೆನಪನ್ನು (Memory) ತಮ್ಮೊಂದಿಗೆ ಕೊಂಡೊಯ್ಯುತ್ತಲೇ ಇರುತ್ತಾರೆ. ಭಾವನಾತ್ಮಕ (Emotional) ಭಾರದಿಂದ ಅವರ ಮನಸ್ಸು ನೋವು, ಕೋಪ, ದುಃಖ, ತಿರಸ್ಕಾರ, ಭಯ (Fear) ಹಾಗೂ ಇತರ ನಕಾರಾತ್ಮಕ ಭಾವನೆಗಳಿಂದ ಕೂಡಿರುತ್ತದೆ. ಮೇಲ್ನೋಟಕ್ಕೆ ಅವರು ಹಿಂದಿನ ಸಂಬಂಧದ ಕಹಿ ನೆನಪುಗಳಿಂದ ಹೊರಬಂದಿದ್ದಾರೆ ಎನಿಸಿದರೂ ಅಂತರಂಗದಲ್ಲಿ ಹಾಗಿರುವುದಿಲ್ಲ. ಅವರು ತಮ್ಮ ಸದ್ಯದ ಬದುಕನ್ನೂ ಅದರ ನೆರಳಲ್ಲೇ ಕಳೆಯುತ್ತಿರುತ್ತಾರೆ. ಅಷ್ಟೇ ಅಲ್ಲ, ಎರಡನೇ ಸಂಗಾತಿಯನ್ನೂ ಘಾಸಿಗೊಳಿಸುತ್ತಾರೆ.
ಅಷ್ಟಕ್ಕೂ ಅವರು ಹಿಂದಿನ ಸಂಬಂಧದ ಭಾರ(Baggage)ವನ್ನು ಇಂದಿಗೂ ಹೊತ್ತಿದ್ದಾರೆ ಎಂದು ಅರಿಯುವುದು ಹೇಗೆ ಗೊತ್ತೇ? ಕೆಲವು ಲಕ್ಷಣಗಳನ್ನು ಅವರಲ್ಲಿ ಗುರುತಿಸಬಹುದು.
• ನಂಬಿಕೆ, ವಿಶ್ವಾಸದ (Trust) ಕೊರತೆ: ಹಿಂದಿನ ಸಂಬಂಧದಲ್ಲಿ ಉಳಿದುಹೋದ ಕಾಮನೆಗಳು ಹಾಗೂ ಆ ಅನುಭವಗಳು ಸಾಮಾನ್ಯವಾಗಿ ಇತರರ ಬಗ್ಗೆ ಅಪನಂಬಿಕೆ ಮೂಡಿಸುತ್ತವೆ. ಹೊಸ ಸಂಬಂಧದಲ್ಲೂ ಇದು ಇಣುಕುತ್ತದೆ. ವ್ಯಕ್ತಿಗಳನ್ನು ನಂಬುವುದು ಕಷ್ಟವಾಗುತ್ತದೆ. ಜನರು ನಮ್ಮಿಂದ ಲಾಭ ಪಡೆದುಕೊಳ್ಳುತ್ತಾರೆಯೇ ಹೊರತು ನಮ್ಮೆಡೆಗೆ ನೈಜವಾದ ಕಾಳಜಿ (Care) ಹೊಂದಿರುವುದಿಲ್ಲ ಎಂದೇ ಭಾವಿಸುತ್ತಾರೆ. ಆ ಸಮಯದಲ್ಲಿ ಯಾರೊಂದಿಗೂ ಭಾವನೆಗಳನ್ನು, ಭಾವನಾತ್ಮಕ ಏರಿಳಿತ, ಆಸೆಗಳನ್ನು ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ. ನಿಮ್ಮ ಎರಡನೇ ಸಂಬಂಧದಲ್ಲಿ ಇಂಥದ್ದೊಂದು ಸಂವಹನದ ಕೊರತೆ ಇರಬಾರದು. ಒಂದೊಮ್ಮೆ ಕೊರತೆಯಾದರೆ ಒತ್ತಡ, ಆತಂಕ, ಅನುಮಾನ (Doubt) ಹಾಗೂ ಅಪನಂಬಿಕೆಗಳು ಹೆಚ್ಚಾಗಿ, ಸಂಬಂಧದಲ್ಲಿ ಆಪ್ತತೆ ಇರುವುದಿಲ್ಲ. ಒಂದೊಮ್ಮೆ, ನೀವು ಎರಡನೇ ಸಂಬಂಧದಲ್ಲಿ ಇಲ್ಲದೇ ಹೋದರೂ ಯಾರನ್ನೂ ನಂಬದಿರುವ ಮಾನಸಿಕ ಸ್ಥಿತಿ ಉತ್ತಮವಲ್ಲ. ಇದರಿಂದ ಅಭದ್ರತೆ, ಭಾವನಾತ್ಮಕ ಅಸ್ಥಿರತೆ ಹಾಗೂ ಅವಲಂಬನೆ ಹೆಚ್ಚಾಗುತ್ತದೆಯೇ ಹೊರತೂ ಮತ್ತೇನೂ ಇಲ್ಲ.
Health Care : ಸ್ನಾನದ ವಿಷಯದಲ್ಲಿ ನೀವು 100% ಮಾಡ್ತಿರೋ ಮಿಸ್ಟೇಕಿದು..
• ಅಭದ್ರತೆ (Insecurity): ಹಿಂದಿನ ಸಂಬಂಧದ ಕಹಿ ನೆನಪು ಇನ್ನೂ ಮುಂದುವರಿದಿದೆ ಎನ್ನುವುದರ ಬಹುದೊಡ್ಡ ಲಕ್ಷಣ ಎಂದರೆ ಅಭದ್ರತೆ. ಪ್ರತಿಯೊಂದು ಸಂಬಂಧವೂ ನೋವಿನಲ್ಲಿ ಅಂತ್ಯವಾಗುತ್ತದೆ ಹಾಗೂ ಎಲ್ಲರೂ ನಮ್ಮನ್ನು ಒಂಟಿಯಾಗಿಸಿ ಹೋಗುತ್ತಾರೆ ಎನ್ನುವ ಭಾವನೆ (Feeling) ಈ ಸಮಯದಲ್ಲಿ ಗಟ್ಟಿಯಾಗುತ್ತದೆ. ಯಾರಾದರೂ ನಿಮ್ಮ ಬಗ್ಗೆ ಕಾಳಜಿ ತೋರಿದರೂ ಅನುಮಾನವೇ ಮುಗಿಯುವುದಿಲ್ಲ. ಯಾರ ಬಗ್ಗಾದರೂ ಮತ್ತೆ ಆಕರ್ಷಣೆ, ಪ್ರೀತಿ (Love)ಯುಂಟಾದರೆ ನಿಮ್ಮ ಬಗ್ಗೆಯೇ ಹೇಸಿಗೆ ಅನಿಸುತ್ತದೆ. ಯಾರೂ ನಂಬಿಕೆಗೆ ಯೋಗ್ಯರಲ್ಲ ಎನ್ನುವ ಕಲ್ಪನೆ ಬೆಳೆದು ನಿಮ್ಮ ಹೊಸ ಸಂಬಂಧಗಳನ್ನೂ ನೀವೇ ಕೈಯಾರೆ ಹಾಳು ಮಾಡಿಕೊಳ್ಳುತ್ತೀರಿ.
Relationship Coaching : ಪ್ರೀತಿಸುವ ಪರಿ ಹೇಳಿಕೊಡುವ ಮಾಡೆಲ್ ಪಡೀತಾಳೆ ಗಂಟೆಗೆ 30 ಸಾವಿರ ರೂ.!
• ಹಳೆಯ (Old) ಸಂಬಂಧವನ್ನೇ ಮರುನಿರ್ಮಿಸುವ ಯತ್ನ: ಅನೇಕರು ತಮ್ಮ ಹಿಂದಿನ ಸಂಬಂಧದ ಮಾದರಿಯನ್ನೇ ಹೊಸ ಸಂಬಂಧದಲ್ಲೂ ಪುನರ್ ನಿರ್ಮಿಸಲು ಯತ್ನಿಸುತ್ತಾರೆ. ಇದು ಸಹ ಹಿಂದಿನ ಭಾರ ನಿಮ್ಮಲ್ಲಿದೆ ಎನ್ನುವುದನ್ನು ತೋರುತ್ತದೆ. ಹೊಸ ಸಂಬಂಧವೇ ಬೇರೆ ಎನ್ನುವ ವಾಸ್ತವಿಕ ಪ್ರಜ್ಞೆ ಮರೆಯಾಗಲೂಬಹುದು. ಹಿಂದಿನ ಸಂಗಾತಿಗಿಂತ ಈತ ಅಥವಾ ಈಕೆ ಸಂಪೂರ್ಣವಾಗಿ ಬೇರೆಯವರು ಎನ್ನುವುದನ್ನು ಅರಿತುಕೊಳ್ಳದೆ ಸಮಸ್ಯೆ ಸೃಷ್ಟಿಯಾಗಬಹುದು.
• ಕಲ್ಪನೆ (Illusion): ಹಿಂದಿನ ಸಂಬಂಧದ ಕೆಟ್ಟ ಅನುಭವದಿಂದ ನಿಮ್ಮಲ್ಲಿ ಹಲವು ರೀತಿಯ ಭ್ರಮೆ, ಕಲ್ಪನೆ ಮೊಳೆತಿರಬಹುದು. ಅದನ್ನು ನೀವು ಗಟ್ಟಿಯಾಗಿ ನಂಬಿಕೊಂಡು, ನಿಮ್ಮ ಅಭದ್ರತೆಯನ್ನು ಸಂಗಾತಿಯ ಮೇಲೆ ತೋರ್ಪಡಿಸಿಕೊಳ್ಳಲು ಶುರು ಮಾಡಬಹುದು. ಅವರನ್ನು ದೂರಬಹುದು. ಪರಸ್ಪರ ಭಾವನೆಗಳನ್ನು ಹಂಚಿಕೊಳ್ಳಲು ಆಗ ಸಮಸ್ಯೆಯಾಗಬಹುದು.