Relationship: ಸಮಯ ಬೇಕೆಂದಾಗ ಬ್ರೇಕ್ ತೆಗೆದುಕೊಳ್ಳುವ ಮುನ್ನ ಈ ವಿಷಯ ಗಮನದಲ್ಲಿರಲಿ!
ಸಂಬಂಧ ಎಂದ ಮೇಲೆ ಅಲ್ಲಿ ಮೋಜು, ಮಸ್ತಿ, ತುಂಟಾಟ, ಸಿಟ್ಟು, ಬೇಸರ ಎಲ್ಲವೂ ಇರುತ್ತದೆ. ಕೆಲವೊಮ್ಮೆ ಇಬ್ಬರ ಮಧ್ಯೆ ಜಗಳಗಳೂ ಆಗಿ ಮನಸ್ಥಾಪ ಉಂಟಾಗುತ್ತದೆ. ಹಾಗಂತ ಈ ಜಗಳ ಸಂಬಂಧದಲ್ಲಿನ ಕೊನೆ ಎಂದಲ್ಲ. ಕೆಲ ಸಂದರ್ಭದಲ್ಲಿ ಬ್ರೇಕ್‌ನ ಅಗತ್ಯವಿದೆ ಎಂದು. ಈ ಬಗ್ಗೆ ಇಲ್ಲದೆ ಮಾಹಿತಿ.
ಸಂಬಂಧಗಳಲ್ಲಿ "ಟೇಕಿಂಗ್ ಎ ಬ್ರೇಕ್" ಎನ್ನುವುದು ಸಾಮಾನ್ಯವಾಗಿ ಬಳಸುವ ಪ್ರತ್ಯೇಕತೆಯ ಉದ್ದೇಶವನ್ನು ವ್ಯಕ್ತಪಡಿಸುತ್ತದೆ. ಮುಂದೆ ಏನಾಗುತ್ತೆ ಎಂದು ಲೆಕ್ಕಾಚಾರ ಮಾಡುವಷ್ಟರಲ್ಲಿ ಸಂಬಂಧವನ್ನು ತಡೆಹಿಡಿಯಲು ಈ ವಿರಾಮವಯ ಅದ್ಭುತವಾದ ಮಾರ್ಗವೆಂದು ತೋರಿಸುತ್ತದೆ. ಯಾವುದೋ ವಿಷಯದಲ್ಲಿನ ಮನಸ್ಥಾಪಕ್ಕೆ ಸಿಲುಕಿ ಹಠಾತ್ ನಿರ್ಧಾರಕ್ಕೆ ಬರುವ ಮುನ್ನ ಸಮಯ ತೆಗೆದುಕೊಂಡು ಸಂಬಂಧ ಹೇಗೆ ಮುಂದುವರಿಸಬಹುದು ಎಂದು ಯೋಚಿಸಿ ನಿರ್ಧಾರಕ್ಕೆ ಬರಲು ಒಂದು ಸದಾವಕಾಶ ಎನ್ನಬಹುದು. ಈ ವಿರಾಮವು ಸಂಬಂಧವನ್ನು ಬೀಳಿಸಲೂ ಬಹುದು ಅಥವಾ ಯಶಸ್ಸು ಕಾಣಬಹುದು. ಒಂದು ವೇಳೆ ಕಷ್ಟಗಳು ಎದುರಿಸಲು ಯಾವಾಗಲೂ ವಿರಾಮದ ಅಗತ್ಯವಿಲ್ಲದಿದ್ದರೂ ಸಹ ಅಥವಾ ಹಾಗೆ ತೋರಿದರೂ ಒಂದು ಅವಕಾಶ ಪಡೆಯುವುದು ಒಳ್ಳೆಯದು.
ಸಣ್ಣ ವಿರಾಮವು ಸಂದಿಗ್ಧ ಪರಿಸ್ಥಿತಿಯನ್ನು ದಾಟಿ ಸಂಬAಧವನ್ನು ಗಟ್ಟಿಗೊಳಿಸುವ, ಅರ್ಥೈಸಿಕೊಳ್ಳುವ ಅವಕಾಶವೂ ಒದಗಿಸುತ್ತದೆ. ಪ್ರತಿಯೊಂದು ಸಂಬಂಧವು ವಿಶಿಷ್ಟವಾಗಿದೆ ಮತ್ತು ಕಾಲಕಾಲಕ್ಕೆ ಕಷ್ಟಕರವಾದ ಹಂತಗಳನ್ನು ಹೊಂದಿರುತ್ತದೆ. ವಿರಾಮ ತೆಗೆದುಕೊಳ್ಳುವುದರಿಂದ ನಿಮ್ಮ ಸಂಬಂಧದ ಬಗ್ಗೆ ಹಾಗೂ ಅದನ್ನು ಹೇಗೆ ಮುಂದುವರಿಸಲು ಇಚ್ಚಿಸುತ್ತೀರಿ ಎಂದು ಯೋಚಿಸಲು ಕಾಲಾವಕಾಶ ಮತ್ತು ಸ್ಥಳವನ್ನು ನೀಡುತ್ತದೆ.
ಇದನ್ನೂ ಓದಿ: ಮತ್ತೆ ಮತ್ತೆ ಈ ತಪ್ಪು ಆಗುತ್ತಿದ್ಯಾ? ಬೇಡ ಬ್ರೇಕ್ ಅಪ್ ಆಗೋದೇ ಒಳ್ಳೆಯದು!
ಯಾವುದೇ ಸನ್ನಿವೇಶ ಎದುರಾದರೆ ಸಂಬಂಧವನ್ನು ಮುರಿಯುವುದಕ್ಕಿಂತ ವಿರಾಮ ತೆಗೆದುಕೊಂಡು ಅದನ್ನು ಸರಿಪಡಿಸಿಕೊಳ್ಳಲು ವ್ಯಕ್ತಿಯು ಮಾಡಬಹುದಾದ ಮೂರು ಪ್ರಮುಖ ಹಂತಗಳು ಇಲ್ಲಿವೆ.
1. ವಿರಾಮದ ಪರಿಭಾಷೆ ಅರ್ಥ ಮಾಡಿಕೊಳ್ಳಿ
ವಿರಾಮ ಎಂದರೆ ನರೀಕ್ಷೆಗಳನ್ನು ನಿರ್ಧರಿಸುವುದು ಎಂದರ್ಥ. ಕೆಲವೊಬ್ಬರು ಅದನ್ನು ಬ್ರೇಕ್ ಎಂದೇ ಅರ್ಥೈಸಿಕೊಳ್ಳುತ್ತಾರೆ. ಯಾವ ವಿಷಯದ ಬಗ್ಗೆ ಏನನ್ನು ನಿರೀಕ್ಷಿಸುತ್ತಿದ್ದೀರಿ ಎಂಬುದನ್ನು ಮೊದಲು ಇಬ್ಬರೂ ಮಾತನಾಡಿಕೊಂಡು ಅರ್ಥ ಮಾಡಿಕೊಳ್ಳಬೇಕು. ನಂತರ ಆ ಕುರಿತು ಸಣ್ಣ ವಿರಾಮ ಪಡೆದು ಮುನ್ನಡೆಯಬೇಕು. ನಿಮ್ಮ ನಿರೀಕ್ಷೆಗಳನ್ನು ನಿರ್ಧರಿಸಿ ಏನನ್ನು ಅನ್ವೇಷಿಸಬಹುದು ತಿಳಿದಿರಬೇಕು. ಈ ಕುರಿತು ಕೆಲ ಉದಾಹರಣೆಗಳು ಇಲ್ಲಿವೆ.
1. ವಿರಾಮ ಎಂದರೆ "ಸಮಯ ಅಂತರ" ಅಥವಾ ನಿಜವಾದ ವಿಘಟನೆಯೇ?
2. ವಿರಾಮದ ಸಮಯದಲ್ಲಿ ನೀವು ಸಂಪರ್ಕದಲ್ಲಿರುತ್ತೀರಾ? ಹೌದು ಎಂದಾದರೆ, ಎಷ್ಟು ಬಾರಿ?
3. ವಿರಾಮದ ಸಮಯದಲ್ಲಿ ಇತರೆ ಜನರನ್ನು ನೋಡುವುದು/ಡೇಟ್ ಮಾಡುವುದು ಸರಿಯೇ ಅಥವಾ ಇಲ್ಲವೇ?
2. ಉದ್ದೇಶಗಳನ್ನು ಸ್ಪಷ್ಟಪಡಿಸಿ
ವಿರಾಮ ತೆಗೆದುಕೊಳ್ಳುತ್ತಿರುವ ಉದ್ದೇಶ ಬಗ್ಗೆ ಇಬ್ಬರಲ್ಲೂ ಸ್ಪಷ್ಟ ಚಿತ್ರಣವಿರಬೇಕು. ಉದ್ದೇಶಗಳನ್ನು ಸ್ಪಷ್ಟಪಡಿಸುವುದು ನಿಮ್ಮಿಬ್ಬರಿಗೂ ನಿರ್ದೇಶನದ ಅರ್ಥವನ್ನು ನೀಡುತ್ತದೆ. ಇದು ನಿಮ್ಮ ಉದ್ದೇಶಗಳ ಬಗ್ಗೆ ಮತ್ತು ನೀವು ವಿರಾಮವನ್ನು ಯಾವುದಕ್ಕಾಗಿ ಬಳಸಲಿದ್ದೀರಿ. ಅದು ಹೇಗಿರಬಹುದು ಎಂಬುದು ಇಲ್ಲಿದೆ:
1. "ನಾನು ನಿಮ್ಮ ಜೀವನದಲ್ಲಿ ತುಂಬಾ ಸಕ್ರಿಯವಾಗಿದ್ದೇನೆ ಮತ್ತು ಇತ್ತೀಚೆಗೆ ನನ್ನನ್ನು ನಾನು ಮರೆತಿದ್ದೇನೆ ಎಂದು ನನಗೆ ಅನಿಸುತ್ತದೆ. ಹಾಗಾಗಿ ನನ್ನನ್ನು ಮರುಶೋಧಿಸಲು ನನಗೆ ಸ್ವಲ್ಪ ಸ್ಥಳಾವಕಾಶ ಬೇಕು."
2 "ಏಕೆಂದರೆ ನಾವು ಪ್ರಮುಖ ವಿಷಯಗಳ ಬಗ್ಗೆ ಒಂದೇ ಪುಟದಲ್ಲಿಲ್ಲ. ನನಗೆ ಬೇಕಾದುದನ್ನು ಟ್ಯೂನ್ ಮಾಡಲು ನಾನು ಈ ಸಮಯವನ್ನು ತೆಗೆದುಕೊಳ್ಳುತ್ತೇನೆ.
3. "ನಾನು ನಿನ್ನನ್ನು ಪ್ರೀತಿಸುತ್ತಿದ್ದರೂ ಸಹ, ನನ್ನ ಅನುಮಾನಗಳು, ಮೂಡುವ ಆಲೋಚನೆಗಳು, ಆತಂಕ ಮತ್ತು ಪ್ರಚೋದಕಗಳು ನಮ್ಮ ಸಂಬಂಧ ಹಾಳಾಗುತ್ತಿದೆ ಎಂಬುದನ್ನು ನಾನು ಗಮನಿಸಿದ್ದೇನೆ ಮತ್ತು ನಿಮಗೆ ನೋಯಿಸದೆ ಇದನ್ನು ಹೇಗೆ ನಿರ್ವಹಿಸಬೇಕೆಂದು ನಾನು ಕಲಿಯಲು ಬಯಸುತ್ತೇನೆ. ಇದರಿಂದ ನಾನು ಸಣ್ಣ ಬ್ರೇಕ್‌ನಿಂದ ಸ್ವಲ್ಪ ಸ್ಟ್ರಾಂಗ್ ಆಗಿ ಹಿಂತಿರುಗಬಹುದು.
ಇದನ್ನೂ ಓದಿ: ಅಬ್ಬಾ, ನೆಮ್ಮದಿಯನ್ನೇ ಹಾಳು ಮಾಡೋ ಗರ್ಲ್ ಫ್ರೆಂಡ್‌ನಿಂದ ತಪ್ಪಿಸಿಕೊಂಡ್ರೆ ಲೈಫ್ ಬಿಂದಾಸ್ ಬಿಡಿ!
3. ಟೈಮ್‌ಲೈನ್
ಸಣ್ಣ ವಿರಾಮ ಬೇಕು ಎನಿಸಿದರೆ ಬ್ರೇಕ್ ತೆಗೆದುಕೊಳ್ಳುವುದು ಒಳ್ಳೆಯದು. ಆದರೆ ಎಷ್ಟು ಸಮಯದವರೆಗು ಎಂಬುದನ್ನು ನಿರ್ಧರಿಸಿಕೊಳ್ಳುವುದು ಅಷ್ಟೇ ಮುಖ್ಯ. ಏಕೆಂದರೆ ಟೈಮ್‌ಲೈನ್ ಇಲ್ಲದ ವಿರಾಮವು ಬೆಳಕಿಲ್ಲದ ಸುರಂಗದಲ್ಲಿ ಹೋಗುತ್ತಿರುವಂತೆ ಭಾಸವಾಗುತ್ತದೆ. ಈ ಸಮಯದ ಪರಿವಿಲ್ಲದಿದ್ದರೆ ಇತರರ ಕಡೆಗೆ ಅನುಮಾನಗಳು, ಅಸಮಾಧಾನ ಮತ್ತು ಹತಾಶೆಯ ಶೇಖರಣೆಗೆ ಕಾರಣವಾಗಬಹುದು. ನೀವು ಯಾವಾಗ ಮರುಸಂಪರ್ಕಿಸುತ್ತೀರಿ ಎಂಬುದನ್ನು ನಿರ್ಧರಿಸಿ, ಇದರಿಂದ ನೀವು ಎಲ್ಲಿಗೆ ಹೋಗಬೇಕೆಂದು ನಿರ್ಧರಿಸಬಹುದು.