ಇತ್ತೀಚಿಗಂತೂ ಯಾರು ನೋಡಿದ್ರೂ ಮೊಬೈಲ್ (Mobile) ಸ್ಕ್ರಾಲ್ ಮಾಡ್ತಾ ಇರ್ತಾರೆ. ಎಲ್ರೂ ಹೆಚ್ಚಾಗಿ ನೋಡ್ತಾ ಇರೋದು ವಾಟ್ಸಾಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮೊದಲಾದ ಸೋಷಿಯಲ್ ಮೀಡಿಯಾ (Social Media)ಗಳನ್ನೇ. ಇತ್ತೀಚಿಗೆ ಅತಿಯಾಗಿ ಬಳಕೆಯಾಗ್ತಿರೋ ಸಾಮಾಜಿಕ ಮಾಧ್ಯಮ ಜೀವನ (Life)ಕ್ಕೆ ಒಳ್ಳೆಯದ್ದೋ, ಕೆಟ್ಟದ್ದೋ ?
ಇತ್ತೀಚಿನ ವರ್ಷಗಳಲ್ಲಿ ಮನುಷ್ಯನ ವರ್ತನೆ ಹೇಗಿದೆಯೆಂದರೆ ಮೊಬೈಲ್ (Mobile) ಇಲ್ಲದಿದ್ದರೆ ಬಹುಶಃ ಉಸಿರಾಡೋಕೋ ಸಾಧ್ಯವಿಲ್ಲವೇನೋ ಎಂಬಂಥಾ ವರ್ತನೆ. ಅಷ್ಟರಮಟ್ಟಿಗೆ ಮನುಷ್ಯ ಮೊಬೈಲ್‌ಗೆ ಅವಲಂಬಿತವಾಗಿದ್ದಾನೆ. ಅದರಲ್ಲೂ ಸೋಷಿಯಲ್ ಮೀಡಿಯಾಗಳು ಆರಂಭವಾದ ನಂತರ ಮೂರು ಹೊತ್ತು ಅದರಲ್ಲೇ ಕಾಲ ಕಳೆಯುವಂತಾಗಿದೆ. ಇವತ್ತು ವರ್ಲ್ಡ್ ಸೋಷಿಯಲ್ ಮೀಡಿಯಾ ಡೇ (World Social Media Day). ಈ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮದ ಬಳಕೆ ಜೀವನ (Life)ಕ್ಕೆ ಒಳ್ಳೆಯದೋ, ಕೆಟ್ಟದೋ ಎಂಬುದನ್ನು ತಿಳಿದುಕೊಳ್ಳೋಣ.
ಸಾಮಾಜಿಕ ಮಾಧ್ಯಮವು ಸಂಬಂಧಗಳಿಗೆ ಕೆಟ್ಟದ್ದೇ ?
ಸಾಮಾಜಿಕ ಮಾಧ್ಯಮದ ಬಳಕೆಯು ಸಂಬಂಧ (Relationship)ಗಳ ಮೇಲೆ ಧನಾತ್ಮಕವಾಗಿ ಮತ್ತು ಋಣಾತ್ಮಕವಾಗಿ ಪರಿಣಾಮ ಬೀರಬಹುದು ಎಂದು ಸಂಶೋಧನೆ ತೋರಿಸಿದೆ. ಅದು ಹೇಗೆ ಬಳಸಲ್ಪಡುತ್ತದೆ ಎಂಬುದರ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಸಾಮಾಜಿಕ ಮಾಧ್ಯಮವನ್ನು ಮಿತವಾಗಿ ಬಳಸಿದರೆ, ಸಂಬಂಧಗಳಿಗೆ ಕೆಟ್ಟದ್ದಲ್ಲ. ಆದರೆ ಅತಿಯಾದ ಬಳಕೆಯು ಸಂಬಂಧದಲ್ಲಿ ಬಿರುಕು ಮೂಡಿಸಬಹುದು ಎಂದು ತಿಳಿದುಬಂದಿದೆ,
Womens Day Special: ಮಹಿಳೆಯರಲ್ಲಿ ಖಿನ್ನತೆಗೆ ಕಾರಣವೇನು ?
ಸೋಷಿಯಲ್ ಮೀಡಿಯಾದ ನಕಾರಾತ್ಮಕ ಪರಿಣಾಮಗಳು
1. ಅವಾಸ್ತವಿಕ ನಿರೀಕ್ಷೆಗಳನ್ನು ಸೃಷ್ಟಿಸಬಹುದು: ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಳ್ಳಲಾದ ಕೆಲವು ಉಪಯುಕ್ತ ಸಂಪನ್ಮೂಲಗಳಿದ್ದರೂ, ಎಲ್ಲರೂ ಹೆಚ್ಚಾಗಿ ನೋಡುವುದು ಫಿಲ್ಟರ್ ಮಾಡಲಾದ ಪೋಸ್ಟ್‌ಗಳಾಗಿದ್ದು ಅದು ಸಂಬಂಧ ಎಂದರೇನು ಎಂಬುದರ ಅವಾಸ್ತವಿಕ ಚಿತ್ರಗಳನ್ನು ಮಾತ್ರ ಎತ್ತಿ ತೋರಿಸುತ್ತದೆ. ಇದು ದಂಪತಿಯ ಮಧ್ಯೆ ಒಡಕು ಮೂಡಲು ಕಾರಣವಾಗಬಹುದು. ನೀವು ಸಹ ಸೋಷಿಯಲ್ ಮೀಡಿಯಾದಲ್ಲಿ ಇರುವಂತಹಾ ಸಂಬಂಧವನ್ನು ಎಕ್ಸ್‌ಪೆಕ್ಟ್ ಮಾಡುವ ಕಾರಣ ಇದು ಕೊನೆಯಲ್ಲಿ ನಿರಾಶೆಗೆ ಕಾರಣವಾಗಬಹುದು..
2. ಅಸೂಯೆಗೆ ಕಾರಣವಾಗಬಹುದು: ಕೆಲವು ಸಂಶೋಧನೆಗಳು ಸಾಮಾಜಿಕ ಮಾಧ್ಯಮದ ಬಳಕೆಯನ್ನು ಕಾಲೇಜು ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಅಸೂಯೆ ಮತ್ತು ಸಂಬಂಧದ ಅತೃಪ್ತಿಗೆ ಸಂಬಂಧಿಸಿವೆ ಎಂಬುದನ್ನು ಸೂಚಿಸುತ್ತದೆ. ಅಸುರಕ್ಷಿತ ಲಗತ್ತು ಶೈಲಿಯ ಕಾರಣದಿಂದಾಗಿ ನೀವು ಅಸೂಯೆಗೆ ಗುರಿಯಾಗಿದ್ದರೆ, ನಿಮ್ಮ ಪಾಲುದಾರರ ಚಟುವಟಿಕೆಗಳ ಮೇಲೆ ಕಣ್ಣಿಡಲು ನೀವು ಹೆಚ್ಚು ಸಾಮಾಜಿಕ ಮಾಧ್ಯಮಗಳನ್ನು ಬಳಸಲು ತೊಡಗುತ್ತೀರಿ. ಜನರು ತಮ್ಮ ಪಾಲುದಾರರು ಇತರ ಜನರ ಪೋಸ್ಟ್‌ಗಳನ್ನು ಇಷ್ಟಪಡುವುದನ್ನು ಅಥವಾ ಕಾಮೆಂಟ್ ಮಾಡುವುದನ್ನು ನೋಡಿ ಅಸಮಾಧಾನಗೊಳ್ಳಬಹುದು.
3. ದಂಪತಿಗಳಲ್ಲಿ ಹೆಚ್ಚು ಜಗಳ: ಅತಿಯಾದ ಸಾಮಾಜಿಕ ಮಾಧ್ಯಮ ಬಳಕೆಯು ದಂಪತಿಗಳು ಹೆಚ್ಚು ಜಗಳವಾಡುವುದರೊಂದಿಗೆ ಸಂಬಂಧ ಹೊಂದಿದೆ. 2021ರ ಅಧ್ಯಯನದ ಪ್ರಕಾರ, ಮೂರು ವರ್ಷಗಳಿಗಿಂತ ಕಡಿಮೆ ಕಾಲ ಒಟ್ಟಿಗೆ ಇರುವ ದಂಪತಿಗಳಲ್ಲಿ, ಫೇಸ್‌ಬುಕ್‌ನಲ್ಲಿ ಹೆಚ್ಚು ಸಮಯ ಕಳೆಯುವುದು ಹೆಚ್ಚು ಫೇಸ್‌ಬುಕ್-ಸಂಬಂಧಿತ ಸಂಘರ್ಷಕ್ಕೆ ಕಾರಣವಾಗುತ್ತದೆ ಎಂದು ತಿಳಿದುಬಂದಿದೆ.
4. ದೈನಂದಿನ ಜೀವನದ ಬಗ್ಗೆ ಕಡಿಮೆ ಆಸಕ್ತಿ: ಸಾಮಾಜಿಕ ಮಾಧ್ಯಮದಲ್ಲಿ ಕಾಣ ಸಿಗುವ ಕಲರ್‌ಫುಲ್ ಜೀವನಶೈಲಿಯನ್ನು ನೋಡಿ ನಿಮ್ಮ ದೈನಂದಿನ ಜೀವನ ಬೇಸರ ಹುಟ್ಟಿಸಬಹುದು. ಸ್ಟೈಲಿಶ್ ಡ್ರೆಸ್, ಫೂಟ್‌ವೇರ್, ಮೇಕಪ್ ಐಟಂಗಳು ಕಾಲ್ಪನಿಕ ಲೋಕವನ್ನು ಹುಟ್ಟು ಹಾಕುತ್ತದೆ. ವಾಸ್ತವವನ್ನು ಒಪ್ಪಿಕೊಳ್ಳಲು ಮನಸ್ಸು ನಿರಾಕರಿಸುತ್ತದೆ.
5. ಮಾನಸಿಕ ಅಸ್ವಸ್ಥತೆ: ಅತಿಯಾದ ಸಾಮಾಜಿಕ ಮಾಧ್ಯಮ ಕೆಲವರ ಪಾಲಿಗೆ ಗೀಳಾಗಿ ಕಾಡುತ್ತದೆ. ಆಗಾಗ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸಾಪ್‌ಗಳನ್ನು ಬಳಸುತ್ತಲೇ ಇರಬೇಕು. ಇಲ್ಲವಾದಲ್ಲಿ ಒಂದು ರೀತಿ ನಿರಾಸಕ್ತಿಯ ಭಾವನೆ ಮೂಡುತ್ತದೆ. ಯಾವುದೇ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಆಸಕ್ತಿಯಿರುವುದಿಲ್ಲ.
Vitiligo Day: ವಿಚ್ಛೇದನಕ್ಕೂ ಕಾರಣವಾಗುತ್ತಿದೆ ಈ ಚರ್ಮ ಸಮಸ್ಯೆ
ಸಾಮಾಜಿಕ ಮಾಧ್ಯಮವನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಹಲವು ರೀತಿಯ ಪ್ರಯೋಜನಗಳು ಸಹ ಇವೆ. ಅವು ಯಾವುವೆಲ್ಲಾ ?
ಸೋಷಿಯಲ್ ಮೀಡಿಯಾದ ಧನಾತ್ಮಕ ಪರಿಣಾಮಗಳು
1. ದೂರ ದೂರವಿರುವ ವ್ಯಕ್ತಿಗಳು ಮಾತನಾಡಬಹುದು: ಡಿಜಿಟಲ್ ಯುಗದಲ್ಲಿ, ಜನರು ಆನ್‌ಲೈನ್ ಅಥವಾ ಡೇಟಿಂಗ್ ಅಪ್ಲಿಕೇಶನ್‌ಗಳ ಮೂಲಕ ಭೇಟಿಯಾಗುವುದು ಅಸಾಮಾನ್ಯವೇನಲ್ಲ. 2017 ರ ಸಮೀಕ್ಷೆಯ ಪ್ರಕಾರ 39% ಭಿನ್ನಲಿಂಗೀಯ ದಂಪತಿಗಳು ಆನ್‌ಲೈನ್‌ನಲ್ಲಿ ತಮ್ಮ ಪಾಲುದಾರರನ್ನು ಭೇಟಿಯಾಗಿದ್ದಾರೆಂದು ವರದಿ ಮಾಡಿದ್ದಾರೆ. ಅದೆಷ್ಟೋ ಕುಟುಂಬಗಳು ಈ ರೀತಿಯ ಆನ್‌ಲೈನ್ ಕಾಲ್‌ಗಳಲ್ಲಿ ಭೇಟಿಯಾಗಿ ಮಾತುಕತೆ ನಡೆಸುವ ಮೂಲಕ ಸಂಬಂಧವನ್ನು ಉಳಿಸಿಕೊಂಡಿವೆ.
2. ವೀಡಿಯೋ ಕಾಲ್ ಸೌಲಭ್ಯ: ಒಟ್ಟಿಗೆ ವಾಸಿಸದ ದಂಪತಿಗಳಿಗೆ ಮತ್ತು ದೂರದ ಸಂಬಂಧದಲ್ಲಿರುವ ಜನರಿಗೆ ಇದು ವಿಶೇಷವಾಗಿ ಸಹಾಯಕವಾಗಿದೆ. ಸೈಬರ್ ಸೈಕಾಲಜಿ, ಬಿಹೇವಿಯರ್ ಮತ್ತು ಸೋಶಿಯಲ್ ನೆಟ್‌ವರ್ಕಿಂಗ್ ಜರ್ನಲ್‌ನಲ್ಲಿ ಪ್ರಕಟವಾದ ಸಮೀಕ್ಷೆಯ ಪ್ರಕಾರ, ದೂರದ ಪ್ರಣಯ ಸಂಬಂಧಗಳಲ್ಲಿ ಯುವ ವಯಸ್ಕರು ಸಾಮಾಜಿಕ ನೆಟ್‌ವರ್ಕಿಂಗ್ ಸೈಟ್‌ಗಳನ್ನು ಬಳಸುತ್ತಿದ್ದರೆ ಅವುಗಳನ್ನು ಉತ್ತಮವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ.
3. ನೀವು ತಜ್ಞರಿಂದ ಸಂಬಂಧಗಳ ಬಗ್ಗೆ ಕಲಿಯಬಹುದು: ಸಾಮಾಜಿಕ ಮಾಧ್ಯಮದಲ್ಲಿ ಆರೋಗ್ಯಕರ ಸಂಪರ್ಕವನ್ನು ಅಭಿವೃದ್ಧಿಪಡಿಸಲು ಮತ್ತು ನಿರ್ವಹಿಸಲು ಸಹಾಯ ಮಾಡಲು ಉತ್ತಮ ಮಾಹಿತಿಯನ್ನು ನೀಡುವ ಸಾಕಷ್ಟು ಖಾತೆಗಳಿವೆ. ಬ್ಲಾಗರ್‌ಗಳು, ಮಾನಸಿಕ ಚಿಕಿತ್ಸಕರು ಮತ್ತು ಇತರರಿಂದ ಸಂಬಂಧವನ್ನು ಹೇಗೆ ಸುಧಾರಿಸುವುದು ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.
4. ಫೋಟೋಗಳನ್ನು ಸ್ಟೋರ್ ಮಾಡಿಡುತ್ತದೆ: ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ನಾವು ಶೇರ್ ಮಾಡಿದ ಫೋಟೋಗಳನ್ನು ಸಂಗ್ರಹಿಸಿಡುತ್ತವೆ. ಹೀಗಾಗಿ ಹಲವರ ಪಾಲಿಗೆ ಸೋಷಿಯಲ್ ಮೀಡಿಯಾ ಫೋಟೋಗಳನ್ನು ಸಂಗ್ರಹಿಸಲು ಅತ್ಯುತ್ತಮ ಸ್ಥಳವಾಗಿದೆ. ವರ್ಷಗಳು ಕಳೆದ ಬಳಿಕವೂ ಮೆಮೊರಿಯನ್ನು ತೋರಿಸುತ್ತದೆ ಮತ್ತು ನೆನಪುಗಳನ್ನು ತಾಜಾವಾಗಿಸುತ್ತದೆ.