ಪುರುಷರು ಎಷ್ಟು ದಿನಕ್ಕೊಮ್ಮೆ ವೀರ್ಯ ಬಿಡುಗಡೆ ಮಾಡಬೇಕು?

By Suvarna NewsFirst Published Dec 9, 2019, 1:03 PM IST
Highlights

ಬಹಳಷ್ಟು ಪುರುಷರಿಗೆ ತಮ್ಮ ಸೆಕ್ಷುಯಲ್ ಬಿಹೇವಿಯರ್ ಸರಿಯಿದೆಯಾ, ಸಿಕ್ಕಾಪಟ್ಟೆ ಹಸ್ತಮೈಥುನ ಮಾಡುತ್ತಿದ್ದೇನಾ, ಇತರರಷ್ಟು ಸೆಕ್ಸ್ ಹೊಂದುತ್ತಿಲ್ಲವೂ ಎಂಬೆಲ್ಲ ಅನುಮಾನಗಳು ಕಾಡುತ್ತಲೇ ಇರುತ್ತವೆ. ಆದರೆ, ವ್ಯಕ್ತಿಯ ವಯಸ್ಸು, ಆರೋಗ್ಯ ಹಾಗೂ ಸಂಬಂಧಗಳೆಲ್ಲವೂ ಆತನ ಸ್ಖಲನ ಆವರ್ತನದ ಮೇಲೆ ಪರಿಣಾಮ ಹೊಂದಿರುತ್ತವೆ.

ಬಹುತೇಕ ಪುರುಷರಿಗೆ ಸ್ಖಲನ ಎಂದರೆ ಉದ್ರೇಕ ಹಂತ. ಹೀಗೆ ಸ್ಖಲನವಾದಾಗ ಅದರಲ್ಲಿ ಸಿಟ್ರಿಕ್ ಆ್ಯಸಿಡ್, ಕೊಲೆಸ್ಟೆರಾಲ್, ಮ್ಯೂಕಸ್, ನೀರು ಎಲ್ಲವೂ ಇರುತ್ತದೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಹೊರಬರಬೇಕಿರುವುದು ವೀರ್ಯ. ಪುರುಷನು ಎಷ್ಟು ಬಾರಿ, ಎಷ್ಟು ದಿನಕ್ಕೆ ವೀರ್ಯ ಸ್ಖಲನ ಮಾಡುತ್ತಾನೆನ್ನುವುದು ಆತನ ಆರೋಗ್ಯ, ಸ್ಪರ್ಮ್ ಕೌಂಟ್ ಎಲ್ಲದರ ಮೇಲೂ ಪರಿಣಾಮ ಬೀರುತ್ತದೆ ಎಂಬುದನ್ನು ಸಂಶೋಧನೆಗಳು ದೃಢಪಡಿಸಿವೆ. 

ಪುರುಷ ಬಂಜೆತನ: ಸಿಗರೇಟ್ ಸೇದುವ ಅಪ್ಪಂದಿರೇ ಮಕ್ಕಳಿಗೆ ವಿಲನ್!

ಸ್ಖಲನದಿಂದ ಗಂಭೀರ ಆರೋಗ್ಯ ಸಮಸ್ಯೆಗಳಾಗಬಹುದೆಂಬುದಕ್ಕೆ ಯಾವ ಸಾಕ್ಷಿಯೂ ಇಲ್ಲ, ಬದಲಿಗೆ ಆಗಾಗ ಸ್ಖಲನವಾಗುತ್ತಿದ್ದಾಗ ಪುರುಷರಲ್ಲಿ ಪ್ರೊಸ್ಟೇಟ್ ಕ್ಯಾನ್ಸರ್ ಸಂಭವ ಕಡಿಮೆಯಾಗುತ್ತದೆ. ಸಂಗಾತಿಯೊಂದಿಗೆ ತೃಪ್ತಿಕರ ಲೈಂಗಿಕ ಜೀವನ ನಡೆಸುವುದರಿಂದ ಪುರುಷನ ಆರೋಗ್ಯವೂ ಚೆನ್ನಾಗಿರುತ್ತದೆ. ಹಾಗಾದರೆ, ಪುರುಷನು ಎಷ್ಟು ದಿನಕ್ಕೊಮ್ಮೆ, ಎಷ್ಟು ಬಾರಿ ವೀರ್ಯ ಆಚೆ ಹಾಕಬೇಕು, ಇದರಿಂದ ದೇಹದ ಮೇಲೆ ಏನು ಪರಿಣಾಮಗಳಾಗುತ್ತವೆ ಎಂಬುದನ್ನೆಲ್ಲ ಇಲ್ಲಿ ನೀಡಲಾಗಿದೆ.

ನಾರ್ಮಲ್ ಯಾವುದು?

ವ್ಯಕ್ತಿಯ ವಯಸ್ಸು, ಆರೋಗ್ಯ ಹಾಗೂ ಸಂಬಂಧಗಳೆಲ್ಲವೂ ಆತನ ಸ್ಖಲನ ಆವರ್ತನದ ಮೇಲೆ ಪರಿಣಾಮ ಹೊಂದಿರುತ್ತವೆ. ಬಹಳಷ್ಟು ಪುರುಷರಿಗೆ ತಮ್ಮ ಸೆಕ್ಷುಯಲ್ ಬಿಹೇವಿಯರ್ ಸರಿಯಿದೆಯಾ, ಸಿಕ್ಕಾಪಟ್ಟೆ ಹಸ್ತಮೈಥುನ ಮಾಡುತ್ತಿದ್ದೇನಾ, ಇತರರಷ್ಟು ಸೆಕ್ಸ್ ಹೊಂದುತ್ತಿಲ್ಲವೂ ಎಂಬೆಲ್ಲ ಅನುಮಾನಗಳು ಕಾಡುತ್ತಲೇ ಇರುತ್ತವೆ. ಇದರಿಂದ ಏನಾದರೂ ತೊಂದರೆಯಾಗಬಹುದೇ ಎಂಬ ಗೊಂದಲವೂ ಇರುತ್ತದೆ. ಆದರೆ, ನಿಜವೆಂದರೆ, ಪುರುಷನು ಎಷ್ಟು ಬಾರಿ ಸ್ಖಲಿಸಬೇಕು ಎಂಬುದಕ್ಕೆ ಯಾವುದೇ ಅಂಕೆಸಂಖ್ಯೆಗಳಲ್ಲಿ ನಾರ್ಮಲ್ ಎಂಬುದಿಲ್ಲ. 

2015ರ ಸೆಕ್ಷುಯಲ್ ಎಕ್ಸ್‌ಪ್ಲೋರೇಶನ್ ಇನ್ ಅಮೆರಿಕ ಅಧ್ಯಯನದ ಪ್ರಕಾರ, 25ರಿಂದ 29 ವಯಸ್ಸಿನ ಯುವಕರು ಸಂಗಾತಿಯೊಂದಿಗೆ ಹೆಚ್ಚು ಬಾರಿ ಸೆಕ್ಸ್ ನಡೆಸುತ್ತಾರೆ. 30ನೇ ವರ್ಷಕ್ಕೆ ಬರುವ ಹೊತ್ತಿಗೆ ಈ ಸಂಖ್ಯೆ ಶೇ. 6ರಷ್ಟು ಕಡಿಮೆಯಾಗುತ್ತದೆ. ನಂತರದ ಪ್ರತಿ ದಶಕಗಳಲ್ಲೂ ಸಂಖ್ಯೆ ಇಳಿಮುಖವಾಗಿ ಸಾಗುತ್ತದೆ. ಆದರೆ, ಎಲ್ಲ ವಯಸ್ಸಿನ ಪುರುಷರೂ ಸುಮಾರಿಗೆ ಒಂದೇ ಸಮನಾಗಿ ಹಸ್ತಮೈಥುನ ಮಾಡಿಕೊಳ್ಳುತ್ತಾರೆ ಎಂದು ತಿಳಿದುಬಂದಿದೆ. 

ಕನ್ಯತ್ವ ಪ್ರೂವ್ ಮಾಡ್ಲಿಕ್ಕೂ ಬಂದಿದೆ ಮಾತ್ರೆ!

ಯಾವುದು ಸುರಕ್ಷಿತ?

ಪ್ರತಿದಿನ ಹಸ್ತಮೈಥುನ ಮಾಡಿಕೊಂಡರೆ ಅಪಾಯಗಳಿವೆ ಎಂಬ ನಂಬಿಕೆ ಇದೆ. ಆದರೆ ಅದಕ್ಕೆ ಯಾವ ಪುರಾವೆಯೂ ಇಲ್ಲ. ಇನ್ನು ಸೆಕ್ಸ್ ಕೂಡಾ ಇಬ್ಬರೂ ಕಂಫರ್ಟೇಬಲ್ ಆಗಿರುವವರೆಗೆ ಎಷ್ಟು ಬಾರಿ ಮಾಡಿದರೂ ಅಸುರಕ್ಷಿತವಲ್ಲ. ಆದರೆ, ನೋವಾಗುವಂಥ ಲೈಂಗಿಕ ಚಟುವಟಿಕೆಯಿಂದ ದೂರವಿರಿ. 

2015ರ ಅಧ್ಯಯನವೊಂದರಂತೆ ಪ್ರತಿದಿನ ಹಸ್ತಮೈಥುನ ಮಾಡಿಕೊಳ್ಳುವ ಪುರುಷರ ವೀರ್ಯದ ಸಂಖ್ಯೆ ಕಡಿಮೆಯಾಗುವುದು ಕಂಡುಬಂತು. ಆದರೆ, ಅದು ನಾರ್ಮಲ್ ಸಂಖ್ಯೆಗಿಂತ ಕಡಿಮೆಯಾಗಲಿಲ್ಲ. ಅಲ್ಲದೆ, ಪದೇ ಪದೆ ಸ್ಖಲನವಾದರೂ ಇದರಿಂದ ವೀರ್ಯದ ಆರೋಗ್ಯ, ಗುಣಮಟ್ಟ, ವಿನ್ಯಾಸಗಳಿಗೆ ಏನೂ ವ್ಯತ್ಯಾಸವಾಗಲಿಲ್ಲ. ಇನ್ನು ಸಂಗಾತಿಯೊಂದಿಗಿನ ಸೆಕ್ಸ್ ವಿಷಯದಲ್ಲೂ ಅಷ್ಟೇ, ವಾರಕ್ಕಮ್ಮೆ ಲೈಂಗಿಕ ಸಂಪರ್ಕ ಹೊಂದುವ ಜೋಡಿಗಳು ಉತ್ತಮ ಸಂಬಂಧ ಹೊಂದಿದ್ದರು. ಹಾಗಂಥ ಪ್ರತಿದಿನ ಸೆಕ್ಸ್ ಮಾಡುವವರ ಸಂಬಂಧ ಇದಕ್ಕಿಂತ ಹೆಚ್ಚು ತೃಪ್ತಿಕರವಾಗೇನು ಇರಲಿಲ್ಲ. ಆದರೆ, ಇದರಿಂದ ಸಂಬಂಧದಲ್ಲಿ ತೃಪ್ತಿ ಕಡಿಮೆಯೂ ಆಗಲಿಲ್ಲ.

ಕ್ಯಾನ್ಸರ್ ಲಿಂಕ್ ಇದೆಯಾ?

2016ರ ಅಧ್ಯಯನದಂತೆ ಪದೇ ಪದೇ ಹಸ್ತಮೈಥುನ ಮಾಡಿಕೊಳ್ಳುವ ಅಥವಾ ಸೆಕ್ಸ್ ಹೊಂದುವ ಪುರುಷರಲ್ಲಿ ಪ್ರೊಸ್ಟೇಟ್ ಕ್ಯಾನ್ಸರ್  ರಿಸ್ಕ್ ಕಡಿಮೆಯಾಗುತ್ತದೆ. ಅಂದರೆ 40 ವರ್ಷದ ಬಳಿಕ ತಿಂಗಳಿಗೆ 21 ಬಾರಿಯಾದರೂ ಸ್ಖಲಿಸುವವರಲ್ಲಿ ಪ್ರೊಸ್ಟೇಟ್ ಕ್ಯಾನ್ಸರ್ ಬರುವ ಸಂಭವ ಬಹಳಷ್ಟು ಮಟ್ಟಿಗೆ ಇಳಿಕೆಯಾಗುತ್ತದೆ ಎಂದು ಅಧ್ಯಯನ ವರದಿಯಲ್ಲಿ ತಿಳಿಸಿದೆ. 

ಶವದ ಜೊತೆ ಸೆಕ್ಸ್‌ಗಿಳಿಯುವಷ್ಟು ಸ್ಯಾಡಿಸ್ಟ್ ಆಗೋದಾದ್ರೂ ಯಾಕೆ?

ದೇಹದ ಮೇಲೆ ಪರಿಣಾಮ

ರೆಗುಲರ್ ಆಗಿ ಲೈಂಗಿಕ ಚಟುವಟಿಕೆ ಹೊಂದಿದ್ದರೆ ಮೂಡ್ ಚೆನ್ನಾಗಿದ್ದು, ಒತ್ತಡ ಕಡಿಮೆಯಾಗುತ್ತದೆ. ಅದರಲ್ಲೂ ಪಾರ್ಟ್ನರ್ ಜೊತೆಗಿನ ಸೆಕ್ಸ್ ಹೆಚ್ಚು ಲಾಭಕಾರಿಯಾಗಿದ್ದು, ಹೃದಯದ ಸಮಸ್ಯೆಗಳು, ಬೊಜ್ಜು, ಡಯಾಬಿಟೀಸ್ ಎಲ್ಲ ಸಮಸ್ಯೆಗಳ ರಿಸ್ಕ್ ಕೂಡಾ ಕಡಿಮೆಯಾಗುತ್ತದೆ. 

ವಾರಕ್ಕೆ ಕನಿಷ್ಠ ಒಮ್ಮೆ ಸೆಕ್ಸ್ ಹೊಂದುವುದರಿಂದ ರೋಗ ನಿರೋಧಕ ವ್ಯವಸ್ಥೆ ಬಲಗೊಳ್ಳುತ್ತದೆ. ಸ್ಖಲನವು ಹಲವು ಬಾರಿ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಆರೋಗ್ಯಕರ ವ್ಯಕ್ತಿಯಲ್ಲಿ ಪ್ರತಿದಿನ ಲಕ್ಷಾಂತರ ವೀರ್ಯ ಉತ್ಪತ್ತಿಯಾಗುತ್ತದೆ. ಹೀಗಾಗಿ ಪ್ರತಿನಿತ್ಯ ಸೆಕ್ಸ್‌ನಿಂದಾಗಿ ವೀರ್ಯ ನಷ್ಟವಾಗುತ್ತಿದೆ ಎಂಬ ಭಯ ಬೇಡ. ಆಗಾಗ ವೀರ್ಯ ಸ್ಖಲನದಿಂದ ಹಲವು ಆರೋಗ್ಯ ಲಾಭಗಳಿವೆಯಾದರೂ, ಇದು ನಿರಂತರವಾಗಿಲ್ಲ ಎಂದ ಮಾತ್ರಕ್ಕೆ ಆರೋಗ್ಯಕ್ಕೆ ಸಮಸ್ಯೆಯೇನೂ ಇಲ್ಲ. 
 

click me!