ಸ್ಮಾರ್ಟ್ ಪೋನ್ ಲಾಕ್‌ ವಿಧಾನ ನಿಮ್ಮ ವಯಸ್ಸನ್ನು ಹೇಳುತ್ತೆ!

By Kannadaprabha NewsFirst Published Dec 8, 2019, 3:44 PM IST
Highlights

ನಿಮ್ಮ ವಯಸ್ಸನ್ನು ಮುಚ್ಚಿಡಲು ಎಷ್ಟೇ ಕಸರತ್ತು ಪಟ್ಟರೂ ನಿಮ್ಮ ಕೈಯಲ್ಲಿರುವ ಸ್ಮಾರ್ಟ್ ಫೋನ್ ಹೇಳಿ ಬಿಡುತ್ತೆ. ಅರೇ ಹೇಗೆ ಅಂತೀರಾ? ಈ ಸುದ್ದಿ ಓದಿ

ಇತ್ತೀಚೆಗೆ ಸ್ಮಾರ್ಟ್‌ಫೋನ್‌ಗಳದ್ದೇ ಹವಾ. ಪುಟ್ಟಮಕ್ಕಳಿಂದ ಹಿಡಿದು ವಯೋವೃದ್ಧರ ವರೆಗೂ ಎಲ್ಲರೂ ಸ್ಮಾರ್ಟ್‌ಫೋನ್‌ ಬಳಸ್ತಾರೆ. ಹಾಗೆಯೇ ಮೊಬೈಲ್‌ನಲ್ಲಿರುವ ಸೀಕ್ರೆಟ್‌ಗಳು ಯಾರಿಗೂ ತಿಳಿಯಬಾರದೆಂದು ಲಾಕ್‌ ಕೂಡ ಮಾಡಿರುತ್ತಾರೆ. ಆದರೆ ಹೀಗೆ ಗೌಪ್ಯತೆಗಾಗಿ ಇಡುವ ಲಾಕ್‌ ನಿಮ್ಮ ವಯಸ್ಸನ್ನು ಬಹಿರಂಗ ಮಾಡುತ್ತಂತೆ.

ಹೌದು ಯೂನಿವರ್ಸಿಟಿ ಆಫ್‌ ಬ್ರಿಟಿಷ್‌ ಕೊಲಂಬಿಯಾ ಕೈಗೊಂಡಿದ್ದ ಸಮೀಕ್ಷೆಯಲ್ಲಿ ಈ ಅಂಶ ಬಯಲಾಗಿದೆ. ಸ್ಮಾರ್ಟ್‌ಫೋನ್‌ ಬಳಕೆದಾರರು ಮೊಬೈಲ್‌ ಬಳಸುವ ಅವಧಿ ಹಾಗೂ ಲಾಕ್‌ ಮಾಡಿಟ್ಟವಿಧಾನದ ಆಧಾರದ ಮೇಲೆ ಸಂಶೋಧಕರು ಹೀಗೆ ಹೇಳಿದ್ದಾರೆ. ವಯಸ್ಸಾದವರು ವಯಸ್ಕರಂತೆ ಆಗಾಗ್ಗೆ ಮೊಬೈಲ್‌ ಫೋನ್‌ ಬಳಸುವುದಿಲ್ಲ.

ಬೋರಾಗುವ ಸಂಬಂಧಕ್ಕೆ ಜೋಶ್ ತುಂಬಲು ಮತ್ತೆ ರೊಮ್ಯಾನ್ಸ್ ಶುರು ಮಾಡಿ!

25 ವರ್ಷ ವಯಸ್ಕರು ದಿನಕ್ಕೆ ಕನಿಷ್ಠ 20 ಬಾರಿ ಬಳಕೆ ಮಾಡುತ್ತಾರೆ. ಅದೇ 35 ವರ್ಷದವರು 15 ಬಾರಿ ಬಳಕೆ ಮಾಡುತ್ತಾರೆ. 19-63 ವರ್ಷದೊಳಗಿನ 134 ಮಂದಿ ಸ್ವಯಂ ಪ್ರೇರಿತವಾಗಿ ಕಸ್ಟಂ ಆ್ಯಪನ್ನು ಇನ್‌ಸ್ಟಾಲ್‌ ಮಾಡಿಕೊಂಡು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು.

2 ತಿಂಗಳುಗಳ ಕಾಲ ಈ ಆ್ಯಪ್‌ ಲಾಕ್‌ ಮತ್ತು ಅನ್‌ಲಾಕ್‌ ಡೇಟಾಗಳನ್ನು ಹಾಗೂ ಮೊಬೈಲ್‌ ಬಳಕೆಯ ಅವಧಿಯನ್ನು ಸಂಗ್ರಹಿಸಿತ್ತು. ಈ ಸಮೀಕ್ಷೆ ವೇಳೆ ಲಿಂಗಾಧಾರಿತ ಭಿನ್ನತೆಯೂ ದಾಖಲಾಗಿದೆ. ಸಾಮಾನ್ಯವಾಗಿ ಪುರುಷರು ಆಟೋ ಲಾಕನ್ನೇ ಹೆಚ್ಚು ಬಳಸಿದ್ದು, ಮಹಿಳೆಯರು ಮ್ಯಾನ್ಯುವಲ್‌ ಲಾಕ್‌ ಹೆಚ್ಚು ಬಳಸುತ್ತಾರೆಂದು ತಿಳಿದುಬಂದಿದೆ. ಒಟ್ಟಾರೆ ಸಮೀಕ್ಷೆಯಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಮೊಬೈಲ್‌ ಬಳಕೆ ಮಾಡುತ್ತಾರೆಂಬ ಅಂಕಿ ಅಂಶ ಲಭ್ಯವಾಗಿದೆ. ಆದರೆ ಇದಕ್ಕೆ ಕಾರಣ ಏನು ಎಂಬುದನ್ನು ಸಮೀಕ್ಷೆ ದೃಢಪಡಿಸಿಲ್ಲ.

click me!