ಬೋರಾಗುವ ಸಂಬಂಧಕ್ಕೆ ಜೋಶ್ ತುಂಬಲು ಮತ್ತೆ ರೊಮ್ಯಾನ್ಸ್ ಶುರು ಮಾಡಿ!

By Suvarna News  |  First Published Dec 5, 2019, 2:47 PM IST

ಸಂಬಂಧಗಳು ಹಲವು ಕಾರಣಗಳಿಂದ ಹಳಸುತ್ತವೆ, ಒಂದು ಕಾಲದಲ್ಲಿ ಖುಷಿ ಕೊಡುತ್ತಿದ್ದದ್ದು ಈಗ ಕಿರಿಕಿರಿ ಎನಿಸತೊಡಗುತ್ತದೆ, ಆಗ ಪರ್ಫೆಕ್ಟ್ ಎನಿಸಿದ್ದರಲ್ಲಿ ನೂರೊಂದು ತೂತು ಕಾಣಿಸುತ್ತದೆ...


ಡೇಟಿಂಗ್ ಸ್ಟೇಜ್ ಮುಗಿದಿದೆ. ಈಗ ಗಂಭೀರ ಸಂಬಂಧದ ಹಂತಕ್ಕೆ ಬಂದಿದ್ದೀರಿ. ಆರಂಭಿಕ ಆಕರ್ಷಣೆಗಳು ಕಡಿಮೆಯಾಗಿವೆ. ಎಲ್ಲವೂ ಸರಿಯೆನಿಸುತ್ತಿದ್ದಲ್ಲಿ ಈಗ ಸ್ವಲ್ಪ ತಪ್ಪುಗಳು ಕಾಣತೊಡಗಿವೆ. ಜಗಳ ಹೆಚ್ಚಾಗಿದೆ. ಆರಂಭದಲ್ಲಿದ್ದಷ್ಟು ಖುಷಿ ಈಗಿಲ್ಲ.

ಎಲ್ಲವೂ ರೂಟೀನ್ ಆಗಿಬಿಟ್ಟಿದೆ. ನಿರೀಕ್ಷೆಗಳು ಹೆಚ್ಚಿವೆ, ಅವುಗಳಲ್ಲಿ ಹಲವು ಹುಸಿಯಾಗುತ್ತಿವೆ. ತಪ್ಪು ನಿರ್ಧಾರ ತೆಗೆದುಕೊಂಡೆನಾ ಎಂಬ ಅನುಮಾನ ದಟ್ಟವಾಗಿ ಕಾಡುತ್ತಿದೆ. ಆದರೆ, ನೀವು ಮಾಡುತ್ತಿರುವ ಕೆಲ ತಪ್ಪುಗಳಿಂದ ನಿಮ್ಮ ಸಂಬಂಧ ಬಳಲುತ್ತಿರಬಹುದು. ಹೀಗಾಗಿ, ಸಂಬಂಧದ ನಡುವೆ ಈ ತಪ್ಪುಗಳನ್ನು ಮಾಡಬೇಡಿ. 

Tap to resize

Latest Videos

ಕೈ ಕೊಟ್ಟ ಲವರ್‌ಗೆ ಡೋಂಟ್‌ ಕೇರ್; ಬಿಟ್ಹಾಕಿ!

1. ರೊಮ್ಯಾನ್ಸ್ ಕಡೆಗಣಿಸಬೇಡಿ.

undefined

ಸಂಬಂಧ ಹಳತಾದಂತೆಲ್ಲ ರೊಮ್ಯಾನ್ಸ್ ಹಿನ್ನೆಲೆಗೆ ಸರಿಯುತ್ತದೆ. ಆರಂಭದಲ್ಲಿ ಅತಿ ಆಕರ್ಷಕವಾಗಿ ಕಾಣುತ್ತಿದ್ದ ರೊಮ್ಯಾನ್ಸ್ ಈಗ ಇಲ್ಲವೇ ಇಲ್ಲವೆಂದರೆ ಸಂಬಂಧವೆಂಬ ಅಡುಗೆಯಲ್ಲಿ ಉಪ್ಪೇ ಇಲ್ಲದಂತಾಗಿ ಸಪ್ಪೆ ಸಪ್ಪೆಯಾಗುತ್ತದೆ. ಹಾಗಾಗಿ, ಗಮನವಿಟ್ಟು ರೊಮ್ಯಾನ್ಸ್‌ಗಾಗಿ ಸ್ವಲ್ಪ ಪ್ರಯತ್ನ ಹಾಕಿ. ಮುಂಚಿನಂತೆ ಫ್ಲರ್ಟ್ ಮಾಡುವ ಮಾತುಗಳು, ಆಗಾಗ ಸಿಹಿಮುತ್ತು ಇತ್ಯಾದಿಗಳು ಸಂಬಂಧವನ್ನು ಫ್ರೆಶ್ ಆಗಿರಿಸುತ್ತವೆ.

2. ಕಂಟ್ರೋಲ್ ಮಾಡಬೇಡಿ

ಒಬ್ಬರು ನಮ್ಮವರಾದರೆಂದ ಮಾತ್ರಕ್ಕೆ ಅವರ ಮೇಲೆ ಸಂಪೂರ್ಣ ನಿಯಂತ್ರಣ ಹೇರತೊಡಗುತ್ತಾರೆ ಹಲವರು. ಅಲ್ಲಿ ಹೋಗಬೇಡ, ಹಾಗೆ ಮಾಡಬೇಡ, ಅವನ ಬಳಿ ಮಾತಾಡಬೇಡ, ಈ ಬಟ್ಟೆ ಹಾಕಬೇಡ, ಆ ರೀತಿ ನಡೆಯಬೇಡ, ಮೇಕಪ್ ಬೇಡ ಇತ್ಯಾದಿ ಇತ್ಯಾದಿ. ಆದರೆ, ಹೀಗೆ ನಿಯಂತ್ರಣ ಹೇರಲು ಸಂಗಾತಿಯೇನು ವಸ್ತುವಲ್ಲ. ಯಾರನ್ನೇ ಆದರೂ ಪ್ರೀತಿಯಿಂದ ಕಟ್ಟಿಹಾಕಬೇಕೇ ಹೊರತು ನಿಯಮಗಳಿಂದಲ್ಲ. ಅವರು ಒಬ್ಬ ಸ್ವತಂತ್ರ ಜೀವಿ ಎಂಬುದನ್ನು ನೆನಪಿಡಿ. ನಿಮಗೆ ಯಾರಾದರೂ ಬೆಳಗ್ಗೆ ಎದ್ದಾಗಿನಿಂದ ನೀವು ಹೇಗೇಗೆ ವರ್ತಿಸಬೇಕು ಎಂಬುದನ್ನು ಹೇಳುತ್ತಿದ್ದರೆ ಕಿರಿಕಿರಿಯಾಗುವುದಿಲ್ಲವೇ? ನೀವು ಹೀಗೆ ಮಾಡುತ್ತಿದ್ದರೆ, ಖಂಡಿತಾ ಅರು ನಿಮ್ಮನ್ನು ಬಿಟ್ಟು ಹೋಗುತ್ತಾರೆ ಹಾಗೂ ಅವರು ಹಾಗೆ ಮಾಡುವುದೇ ಸರಿ. 

3. ಪರ್ಫೆಕ್ಷನ್ ನಿರೀಕ್ಷೆ

ನಾವೆಲ್ಲರೂ ಮನುಷ್ಯರೇ. ಮನುಷ್ಯರೆಂದ ಮೇಲೆ ತಪ್ಪುಗಳನ್ನು ಮಾಡಿಯೇ ಮಾಡುತ್ತಾರೆ. ಅಂದ ಮೇಲೆ ನಿಮ್ಮ ಸಂಗಾತಿ ಮಾತ್ರ ತಪ್ಪು ಮಾಡಲೇಬಾರದು ಎಂಬಂಥ ಅತಿಯಾದ ನಿರೀಕ್ಷೆಗಳನ್ನು ಇಟ್ಟುಕೊಳ್ಳಬೇಡಿ. ಪರ್ಫೆಕ್ಟ್ ಆಗಿರುವ ಯಾರೂ ಜಗತ್ತಿನಲ್ಲಿಲ್ಲ. ನೆನಪಿರಲಿ, ಇಂಪರ್ಫೆಕ್ಷನ್‌ನಲ್ಲಿ ಪರ್ಫೆಕ್ಷನ್ ಹುಡುಕುವುದೇ ಪ್ರೀತಿ. 

ಚೆಂದವಿಲ್ಲ ಎಂಬ ಕೀಳರಿಮೆಯೇ? ಇದು ಹುಟ್ಟಲು ನೀವೇ ಕಾರಣವಿರಬಹುದು!

4. ಜಗಳ ದೂರವಿಡುವುದು

ಸಂಗಾತಿಯೊಂದಿಗೆ ಜಗಳ ಮಾಡಿ ಮನಸ್ಸು ಹಾಳು ಮಾಡಿಕೊಳ್ಳಲು ಯಾರಿಗೂ ಇಷ್ಟವಿರುವುದಿಲ್ಲ. ಹೀಗಾಗಿ, ತಮ್ಮೆಲ್ಲ ಸಮಸ್ಯೆಗಳನ್ನು ಬದಿಗೆ ಹಾಕುತ್ತಲೇ ಸಾಗುತ್ತೇವೆ. ಆದರೆ, ಹೀಗೆ ಬದಿಗೆ ಬಿದ್ದ ಸಮಸ್ಯೆಗಳೆಲ್ಲ ಗುಂಪಾಗಿ ಸಮಸ್ಯೆಯ ತೀವ್ರತೆ ಹೆಚ್ಚುತ್ತದೆ. ಇದರಿಂದ ಯಾವುದೋ ಒಂದು ದಿನ ಎಲ್ಲವೂ ಸ್ಫೋಟಗೊಂಡು ದೊಡ್ಡ ಬಿರುಕಾಗಬಹುದು. ಸಂಬಂಧದಲ್ಲಿ ಸಂವಹನ ಅತಿ ಮುಖ್ಯ. ಏನೇ ಸಮಸ್ಯೆ ಎನಿಸಿದರೂ ಅಲ್ಲಲ್ಲೇ ಮಾತನಾಡಿ ಸರಿ ಮಾಡಿಕೊಳ್ಳಿ. ಚಿಕ್ಕ ಪುಟ್ಟ ಜಗಳಗಳಾದರೂ ಸರಿ, ಸಮಸ್ಯೆ ಬೆಳೆಯಲು ಬಿಡಬೇಡಿ.

5. ಎಲ್ಲಕ್ಕೂ ಜಗಳವಾಡುವುದು

ಜಗಳವಾದರೂ ಸರಿ, ಸಮಸ್ಯೆಗಳನ್ನು ಹೇಳಿಕೊಳ್ಳಬೇಕು ಎಂದ ಮಾತ್ರಕ್ಕೆ ಮಾತುಮಾತಿಗೂ ವಾದ ಮಾಡುವುದು, ಜಗಳ ಮಾಡುವುದು ಸರಿಯಲ್ಲ. ನಿಮಗೆ ನಿಮ್ಮ ಸಂಗಾತಿ ಕುರಿತು ಏನೆಲ್ಲ ಸಮಸ್ಯೆಗಳಿವೆಯೋ ಅವೆಲ್ಲವನ್ನೂ ಒಟ್ಟಿಗಿಟ್ಟು ವಿಮರ್ಶಿಸಿ. ಯಾವುದು ನಿಜವಾಗಿಯೂ ಸಮಸ್ಯೆ ಎಂಬುದನ್ನು ಪರಾಮರ್ಶಿಸಿ ಅದನ್ನು ಶಾಂತರೀತಿಯಲ್ಲಿ ಹೇಳಿ ಸರಿಪಡಿಸಿಕೊಳ್ಳಿ.

ಸಂಬಂಧದಲ್ಲಿ ಈ ವಿಷಯಗಳು ನಿಮ್ಮವನನ್ನು ಅಭದ್ರತೆಗೆ ದೂಡುತ್ತವೆ!

6. ಸಂಗಾತಿಯನ್ನು ಬದಲಾಯಿಸುವ ಹಪಹಪಿ

ಪ್ರತಿಯೊಬ್ಬರೂ ವಿಶಿಷ್ಠ ವ್ಯಕ್ತಿತ್ವ ಹೊಂದಿರುತ್ತಾರೆ. ಜಗತ್ತಿನಲ್ಲಿ ಯಾರನ್ನು ಯಾರೂ ಬದಲಾಯಿಸಲಾರರು. ನೀವು ಒಬ್ಬರನ್ನು ಅವರು ಇರುವ ಹಾಗೆಯೇ ಇಷ್ಟ ಪಟ್ಟ ಮೇಲೆ, ಬದಲಾಯಿಸುವ ಹಪಹಪಿಯಾದರೂ ಏಕೆ? ನಿಮ್ಮ ಬಾಯ್‌ಫ್ರೆಂಡ್ ಸಿಕ್ಕಾಪಟ್ಟೆ ಕೇರ್‌ಫ್ರೀ ಇರಬಹುದು. ನಿಮಗೆ ಮುಂಚೆ ಅದೇ ಗುಣವೇ ಇಷ್ಟವಾಗಿರಬಹುದು. ಈಗ ಅದನ್ನು ಬದಲಿಸಿಕೋ ಎನ್ನುವುದು ಸರಿಯಲ್ಲ. ನೀವು ಬದಲಾಗಲು ಅವರು ಹೇಳಿದರೆ ಕೇಳುವಿರೇ? ಇಲ್ಲ ಅಲ್ಲವೇ? ಹಾಗೆಯೇ ಅವರನ್ನು ಬದಲಾಯಿಸುವ ಯೋಚನೆಯನ್ನೂ ಬಿಟ್ಟುಬಿಡಿ. 

7. ಸಂಗಾತಿಯ ಬಳಿ ವಿಷಯಗಳನ್ನು ಮುಚ್ಚಿಡುವುದು

ನಿಮ್ಮ ಜೀವನದ ಪ್ರತಿ ಕ್ಷಣದ ಆಗುಹೋಗುಗಳನ್ನು ಸಂಗಾತಿಗೆ ಹೇಳಿಕೊಳ್ಳಬೇಕೆಂದಲ್ಲ. ಆದರೆ, ಯಾವುದೇ ವಿಷಯವನ್ನಾದರೂ ಬೇಕೆಂದೇ ಮುಚ್ಚಿಡುತ್ತಿದ್ದೀರಿ ಎಂದರೆ ಮಾತ್ರ ಅದು ಸಂಬಂಧದ ನಡುವೆ ಮುಂದೊಂದು ದಿನ ಬಿರುಕು ತರಲಿದೆ ಎಂದೇ ಅರ್ಥ. ಯಾವುದಾದರೂ ವಿಷಯವನ್ನು ಸಂಗಾತಿಗೆ ಹೇಳಿಲ್ಲ ಎಂಬ ಪಶ್ಚಾತ್ತಾಪ ನಿಮ್ಮನ್ನು ಕಾಡುತ್ತಿದೆ ಎಂದರೆ ಅದು ನೀವು ಮಾಡಿದ ತಪ್ಪೆಂಬುದನ್ನು ಅರಿಯಿರಿ. ಇಂಥ ದೊಡ್ಡ ಸೀಕ್ರೆಟ್‌ಗಳನ್ನು ಸಂಗಾತಿಯಿಂದ ಕಾಪಾಡಬೇಡಿ.

click me!