ಅಜ್ಜ – ಅಜ್ಜಿ ಜೊತೆ ಮೊಮ್ಮಕ್ಕಳು ಬೆಳೆಯಬೇಕೆಂದು ಕೆಲವರು ಹೇಳ್ತಾರೆ. ಇನ್ನು ಕೆಲವರು ಅಜ್ಜ – ಅಜ್ಜಿ ಜೊತೆ ಮೊಮ್ಮಕ್ಕಳು ಬೆಳೆದ್ರೆ ಹಾಳಾಗ್ತಾರೆ ಎನ್ನುತ್ತಾರೆ. ಇದ್ರಲ್ಲಿ ಯಾವುದು ಸರಿ ಎಂಬ ಗೊಂದಲ ಕೆಲ ಪಾಲಕರನ್ನು ಕಾಡುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.
ಅಜ್ಜ (Grandfather) – ಅಜ್ಜಿ (Grandmother) ತಮ್ಮ ಮಕ್ಕಳಿಗಿಂತ ತಮ್ಮ ಮೊಮ್ಮಕ್ಕಳನ್ನು ಹೆಚ್ಚು ಪ್ರೀತಿಸುತ್ತಾರೆ. ಇದರಲ್ಲಿ ಎರಡು ಮಾತಿಲ್ಲ. ಮೊಮ್ಮಕ್ಕಳ ಜೊತೆ ಆಟವಾಡಲು ಮತ್ತು ಅವರ ಜೊತೆ ಸಮಯ ಕಳೆಯಲು ಅಜ್ಜ – ಅಜ್ಜಿ ಇಷ್ಟಪಡ್ತಾರೆ. ಅಜ್ಜ ಅಜ್ಜಿಯರು ಮೊಮ್ಮಕ್ಕಳಿಗೆ ಕಥೆಗಳನ್ನು ಹೇಳುತ್ತಾ, ಪ್ರೀತಿ (Love)ಯಿಂದ ಮುದ್ದಿಸುತ್ತಾರೆ ಮತ್ತು ಅವರೊಂದಿಗೆ ಹೆಚ್ಚು ಆಟವಾಡುತ್ತಾರೆ. ಆದಾಗ್ಯೂ, ಕೆಲವು ಪೋಷಕರು, ಅಜ್ಜಿ ಅಥವಾ ಅಜ್ಜ ತಮ್ಮ ಮಕ್ಕಳನ್ನು ಹಾಳು ಮಾಡುತ್ತಿದ್ದಾರೆ ಎಂದು ದೂರುತ್ತಾರೆ. ಉದಾಹರಣೆಗೆ, ಪೋಷಕರು ಮಗುವಿಗೆ ಜಂಕ್ ಫುಡ್ ನೀಡಬಾರದು ಎಂಬ ನಿಯಮವನ್ನು ಮಾಡಿರುತ್ತಾರೆ. ಆದರೆ ಅಜ್ಜ-ಅಜ್ಜಿಯರು ಮಗುವನ್ನು ವಾಕಿಂಗ್ ಗೆ ಕರೆದೊಯ್ಯುವಾಗ ಜಂಕ್ ಫುಡ್ (Junk Food )ಗಳನ್ನು ನೀಡುತ್ತಾರೆ. ಇದು ಪೋಷಕರ ಕೋಪಕ್ಕೆ ಕಾರಣವಾಗುತ್ತದೆ.
ಮಕ್ಕಳನ್ನು ಅನೇಕ ಪೋಷಕರು ಶಿಸ್ತಿನಿಂದ ಬೆಳೆಸಿರುತ್ತಾರೆ. ಓದಲು ಸಮಯ ಫಿಕ್ಸ್ ಮಾಡಿರುತ್ತಾರೆ. ಆದ್ರೆ ಅಜ್ಜ – ಅಜ್ಜಿ ಈ ನಿಯಮವನ್ನು ಮುರಿಯುತ್ತಾರೆ. ಇದು ಪಾಲಕರ ಕೋಪಕ್ಕೆ ಕಾರಣವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅನೇಕ ಪೋಷಕರು ತಮ್ಮ ಮಗುವನ್ನು ತಮ್ಮ ಅಜ್ಜ - ಅಜ್ಜಿಯಿಂದ ದೂರವಿಡುತ್ತಾರೆ. ಆದ್ರೆ ಇದು ಸರಿಯಲ್ಲ. ಅಜ್ಜಿಯರು ಮಗುವಿನ ಜೀವನ ಮತ್ತು ಪ್ರೀತಿಯ ಮೇಲೆ ಹಕ್ಕನ್ನು ಹೊಂದಿದ್ದಾರೆ. ಮಗುವಿನ ಬೆಳವಣಿಗೆಗೆ ಅಜ್ಜಿ ಹಾಗೂ ಅಜ್ಜನ ಪ್ರೀತಿಯೂ ಸಹ ಅಗತ್ಯವಾಗಿದೆ. ಅಜ್ಜ- ಅಜ್ಜಿಯ ಪ್ರೀತಿ ಮಕ್ಕಳಿಗೆ ಬೇಕು ಹಾಗೆ ಅಜ್ಜ – ಅಜ್ಜಿಯಿಂದ ಮಕ್ಕಳು ಹಾಳಾಗ್ತಿದ್ದಾರೆ ಎನ್ನುವ ಪಾಲಕರು ಅದಕ್ಕೊಂದು ಪ್ಲಾನ್ ಮಾಡಬಹುದು. ಅಜ್ಜ – ಅಜ್ಜಿ ಭೇಟಿಗೆ ಸಮಯ ನಿಗದಿ ಮಾಡಬಹುದು. ವಾರದಲ್ಲಿ ಎಷ್ಟು ದಿನ ಹಾಗೂ ವಾರದಲ್ಲಿ ಎಷ್ಟು ಸಮಯ ಅಜ್ಜ – ಅಜ್ಜಿ ಜೊತೆ ಕಳೆಯಬೇಕು ಎಂಬುದನ್ನು ಪಾಲಕರು ನಿರ್ಧರಿಸಬೇಕು.
ಅಜ್ಜ – ಅಜ್ಜಿ ಜೊತೆ ಮೊಮ್ಮಕ್ಕಳನ್ನು ಎಷ್ಟು ಹೊತ್ತು ಬಿಡಬೇಕು? : ಈ ಪ್ರಶ್ನೆಗೆ ಅಜ್ಜ- ಅಜ್ಜಿಯರು ನಿಮ್ಮ ಮನೆಯಿಂದ ಎಷ್ಟು ದೂರದಲ್ಲಿ ವಾಸಿಸುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಅಜ್ಜ –ಅಜ್ಜಿ, ಮೊಮ್ಮಕ್ಕಳು ವಾಸಿಸುವ ನಗರದಲ್ಲಿಯೇ ವಾಸಿಸುತ್ತಿದ್ದರೆ, ಅವರು ತಮ್ಮ ಮೊಮ್ಮಕ್ಕಳನ್ನು ವಾರಕ್ಕೊಮ್ಮೆ ಕನಿಷ್ಠ ಎರಡು ಗಂಟೆಗಳ ಕಾಲವಾದ್ರೂ ನೋಡಲು ಅವಕಾಶ ನೀಡಬೇಕು.
ಮಗು ನಡೆಯುವುದಕ್ಕೂ ಮೊದಲು ಅಂಬೆಗಾಲಿಡಬೇಕು, ಯಾಕೆ?
ಬೇರೆ ನಗರದಲ್ಲಿ ವಾಸಿಸುತ್ತಿದ್ದರೆ ಏನು ಮಾಡ್ಬೇಕು? : ಮತ್ತೊಂದೆಡೆ ಅಜ್ಜ - ಅಜ್ಜಿಯರು ಬೇರೆ ನಗರದಲ್ಲಿ ವಾಸಿಸುತ್ತಿದ್ದರೆ ಮೊಮ್ಮಕ್ಕಳನ್ನು ಭೇಟಿಯಾಗುವುದು ಅಪರೂಪವಾಗುತ್ತದೆ. ವರ್ಷಕ್ಕೆ ಮೂರು ಅಥವಾ ನಾಲ್ಕು ಬಾರಿ ಮಾತ್ರ ಮೊಮ್ಮಕ್ಕಳನ್ನು ಭೇಟಿಯಾಗಲು ಅವಕಾಶ ಸಿಗುತ್ತದೆ. ಪ್ರತಿ ಬಾರಿ ಕನಿಷ್ಠ ಒಂದು ವಾರವಾದ್ರೂ ಮೊಮ್ಮಕ್ಕಳ ಜೊತೆ ಅವರು ಸಮಯ ಕಳೆಯಬೇಕು.
Relationship Tips: ಪ್ರೀತಿಯಲ್ಲಿ ಸುಳ್ಳು ಹೇಳಿ, ಸಂಬಂಧ ಉಳಿಸಿಕೊಳ್ಳಿ
ನಿಮ್ಮದೇ ಅಂತಿಮ ನಿರ್ಧಾರ : ಈ ಮೇಲಿನ ಉತ್ತರ ಓದಿದ ಮೇಲೆ ನಿಮ್ಮ ಮಕ್ಕಳನ್ನು ಎಷ್ಟು ಸಮಯ ನಿಮ್ಮ ಪಾಲಕರ ಜೊತೆ ಬಿಡ್ಬೇಕೆಂದು ನೀವು ಗೊಂದಲಕ್ಕೊಳಗಾಗಬಹುದು. ಇದಕ್ಕೆ ನಿಮ್ಮ ಬಳಿಯೇ ಉತ್ತರವಿರುತ್ತದೆ. ಅಜ್ಜ – ಅಜ್ಜಿ ಜೊತೆ ನಿಮ್ಮ ಮಕ್ಕಳು ಎಷ್ಟು ಸಂತೋಷವಾಗಿರುತ್ತಾರೆ ಎನ್ನುವುದರ ಮೇಲೆ ಸಮಯ ನಿಗದಿಯಾಗಲಿದೆ.
ಮೊಮ್ಮಕ್ಕಳ ಆರೈಕೆಯಲ್ಲಿ ಅಜ್ಜ – ಅಜ್ಜಿ : ಇತ್ತೀಚಿನ ದಿನಗಳಲ್ಲಿ ತಂದೆ-ತಾಯಿ ಇಬ್ಬರೂ ಕೆಲಸ ಮಾಡುತ್ತಿದ್ದಾರೆ ಮತ್ತು ಅವರು ತಮ್ಮ ಮಕ್ಕಳನ್ನು ಅಜ್ಜ ಅಥವಾ ಅಜ್ಜಿಯ ಬಳಿ ಬಿಟ್ಟು ಹೋಗುತ್ತಾರೆ. ಮಕ್ಕಳು ತಮ್ಮ ಅಜ್ಜಿಯರೊಂದಿಗೆ ಇಡೀ ದಿನವನ್ನು ಕಳೆಯುತ್ತಾರೆ, ಆದ್ದರಿಂದ ಈ ಪರಿಸ್ಥಿತಿಯಲ್ಲಿ ನೀವು ಅವರಿಗೆ ಯಾವುದೇ ಸಮಯವನ್ನು ಮಿತಿಗೊಳಿಸಲು ಸಾಧ್ಯವಿಲ್ಲ. ಆದ್ರೆ ಕೆಲವೊಂದು ನಿಮಯ ಜಾರಿಗೊಳಿಸಬಹುದು.