#Feelfree: ಸೆಕ್ಸ್ ಸಾಮರ್ಥ್ಯದ ಬಗ್ಗೆ ಸಂಕೋಚವೇಕೆ ಗುರು?

By Suvarna News  |  First Published Dec 12, 2020, 3:30 PM IST

ಗೆಳೆಯರು ತಾವು ಎಷ್ಟು ಹೊತ್ತು ಸೆಕ್ಸ್ ಮಾಡಿದೆವು ಎಂದು ಹೇಳಿಕೊಳ್ಳುವಾಗ ನನ್ನನ್ನು ಊಹಿಸಿಕೊಂಡು ಮುಜುಗರವಾಗುತ್ತದೆ. ಯಾಕೆಂದರೆ ನನಗೆ ಬಲುಬೇಗ ವೀರ್ಯಸ್ಖಲನ ಆಗಿಬಿಡುತ್ತೆ.


ಪ್ರಶ್ನೆ: ಈಚೆಗೆ ನಮ್ಮ ಗೆಳೆಯರ ಬಳಗದಲ್ಲಿ ಒಂದು ಸ್ವಾರಸ್ಯಕರ ಚರ್ಚೆ ನಡೆಯಿತು. ಪ್ರತಿಯೊಬ್ಬನೂ ತಾವು ಎಷ್ಟು ಹೊತ್ತು ಸೆಕ್ಸ್ ನಡೆಸಬಲ್ಲೆವು ಎಂದು ವಿವರಿಸುತ್ತಿದ್ದರು. ಕೆಲವರು ಹತ್ತು ನಿಮಿಷ ಎಂದರು; ಇನ್ನು ಕೆಲವರು ಐದು ನಿಮಿಷ ಎಂದರು; ಇಪ್ಪತ್ತು ನಿಮಿಷ ಎಂದವರೂ ಇದ್ದರು. ನಾನು ಮಾನ ಕಾಪಾಡಿಕೊಳ್ಳಲು ಏನೋ ಹೇಳಿದೆ ಎಂದಿಟ್ಟುಕೊಳ್ಳಿ. ಆದರೆ ನಿಜಕ್ಕೂ ನಾನು ಸಂಭೋಗಿಸುವಾಗ ಎರಡು- ಮೂರು ನಿಮಿಷಗಳಲ್ಲಿ ಸ್ಖಲನ ಮಾಡಿಬಿಡುತ್ತೇನೆ. ಅದಕ್ಕಿಂತ ಹೆಚ್ಚು ಹೊತ್ತು ಹಿಡಿದಿಟ್ಟುಕೊಳ್ಳಲು ಆಗುವುದಿಲ್ಲ. ಒಬ್ಬ ಐಡಿಯಲ್ ಗಂಡಸು ಎಷ್ಟು ಹೊತ್ತು ಸಂಭೋಗಿಸಿದರೆ ಅದು ನಾರ್ಮಲ್? ಹೆಚ್ಚು ಹೊತ್ತು ಇದನ್ನು ನಡೆಸುವವರು ನಿಜಕ್ಕೂ ಸಾಮರ್ಥ್ಯವಂತರೇ?

#Feelfree: ಸಾಕಷ್ಟು ತೇವ ಇಲ್ಲವಾದರೆ ಸೆಕ್ಸ್ ಉರಿ ಭಯಂಕರ! ...

ಉತ್ತರ: ನಿಮ್ಮ ಪ್ರಶ್ನೆ ನಿಜಕ್ಕೂ ಸ್ವಾರಸ್ಯಕರವಾಗಿದೆ. ಇದು ಬಹುಶಃ ಎಲ್ಲ ಗಂಡಸರ ಮನದಲ್ಲೂ ಮೂಡುವ ಪ್ರಶ್ನೆ ಇರಬಹುದು. ಯಾಕೆಂದರೆ ಸೆಕ್ಸ್ ಜೀವನ ನಡೆಸುವ ಎಲ್ಲರಲ್ಲೂ, ನಾನು ಸರಿಯಾಗಿದ್ದೀನಾ ಇಲ್ಲವಾ ಅನ್ನುವ ಪ್ರಶ್ನೆ ಮೂಡಿಯೇ ಇರುತ್ತೆ. ಎಲ್ಲರೂ ತಮ್ಮ ತಮ್ಮ ಟೈಮನ್ನು ಉತ್ಪ್ರೇಕ್ಷಿಸಿ ಹೇಳಿಕೊಳ್ಳುತ್ತಿರುತ್ತಾರೆ. ಆದ್ದರಿಂದ ಹೆಚ್ಚು ಸಮಯ ಸಂಭೋಗಿಸುತ್ತೇನೆ ಅನ್ನುವ ಎಲ್ಲರ ಮಾತನ್ನು ನಂಬಬೇಡಿ. ಅವರು ತಾವು ಮಹಾ ಸಾಮರ್ಥ್ಯವಂತರೆಂದು ಕೊಚ್ಚಿಕೊಳ್ಳುತ್ತಿರುತ್ತಾರೆ ಅಷ್ಟೇ. ನಿಜಕ್ಕೂ ಹಾಗಿರುವುದಿಲ್ಲ.

Tap to resize

Latest Videos

ಹಾಗಿದ್ದರೆ, ಎಷ್ಟು ಹೊತ್ತಿನ ಸೆಕ್ಸ್ ನಿಜಕ್ಕೂ ಐಡಿಯಲ್? ನಿಜಕ್ಕೂ ನಾರ್ಮಲ್? ಈ ಪ್ರಶ್ನೆಗೆ ಉತ್ತರಿಸೋಣ. ನಿಜಕ್ಕೂ ಸಂಭೋಗಕ್ಕೆ, ಅಂದರೆ ಯೋನಿಯೊಳಗೆ ಶಿಶ್ನವು ನಡೆಸುವ ಘರ್ಷಣೆಗೆ, ಒಂದು ಸರಾಸರಿ ಸಮಯ ಎಂಬುದೇ ಇಲ್ಲ. ಪ್ರತಿಯೊಬ್ಬ ಗಂಡಸಿಗೂ ಇದು ಬದಲಾಗಬಹುದು. ಈ ಬಗ್ಗೆ ಕೆಲವು ಸಮೀಕ್ಷೆಗಳನ್ನು ನಡೆಸಲಾಯಿತು. ಈ ಬಗ್ಗೆ ಬೆಸ್ಟ್ ಅಧ್ಯಯನದ ಫಲಿತಾಂಶ ಹೀಗಿದೆ. 500 ಮಂದಿಯನ್ನು ಅಧ್ಯಯನ ನಡೆಸಿದಾಗ, ಅವರಲ್ಲಿ 33 ಸೆಕೆಂಡ್‌ನಿಂದ ಹಿಡಿದು 44 ನಿಮಿಷದವರೆಗೆ ಸಂಭೊಗ ನಡೆಸಿದವರೂ ಇದ್ದರು. ಇದರ ಎವರೇಜ್ ತೆಗೆದರೆ ಅದು 5.3 ನಿಮಿಷಗಳಾಗುತ್ತದೆ. ಹಾಗಾಗಿ ಸರಾಸರಿ ಇದೇ ಎನ್ನಬಹುದು. ಆದರೆ ಇದೇ ಐಡಿಯಲ್ ಅಥವಾ ಮಾದರಿ ಎನ್ನಲಾಗದು. ತುಂಬಾ ಹೊತ್ತು ಸಂಭೋಗ ನಡೆಸಿದವರೆಲ್ಲ ತುಂಬ ಸುಖ ಪಡೆದಿದ್ದಾರೆ ಎನ್ನಲಾಗದು ಹಾಗೇ ಕಡಿಮೆ ಹೊತ್ತು ಸಂಭೋಗಿಸಿದವರು ಅಲ್ಪತೃಪ್ತರು ಎಂದೂ ಹೇಳಲು ಸಾಧ್ಯವಿಲ್ಲ. 

#Feelfree: ನಾನ್ ಮದ್ವೆ ಆಗೋ ಹುಡುಗೀಗೆ ಬೇರೆಯವ್ರ ಜೊತೆ ದೈಹಿಕ ಸಂಬಂಧ ಇರಬಹುದಾ? ...

ಇನ್ನೂ ಕೆಲವು ಸ್ವಾರಸ್ಯಕರ ಫಲಿತಾಂಶಗಳೂ ಈ ಸಂಶೋಧನೆಯಲ್ಲಿ ಕಂಡುಬಂದಿವೆ. ಉದಾಹರಣೆಗೆ, ಸುನ್ನತಿ ಮಾಡಿಸಿದವರು ಹೆಚ್ಚು ಸಮಯ ಸ್ಖಲನಕ್ಕೆ ಮುನ್ನ ಸಂಭೋಗ ನಡೆಸಬಲ್ಲರು ಎಂಬ ನಂಬಿಕೆ ಇತ್ತು, ಅದು ಕೂಡ ಸುಳ್ಳು ಎಂಬುದು ಸಾಬೀತಾಯಿತು. ವಯಸ್ಸಾದಂತೆ ಸ್ಖಲನದ ಅವಧಿ, ಸೆಕ್ಸ್‌ನ ಅವಧಿ ದೀರ್ಘವಾಗುತ್ತದೆ ಎಂಬ ನಂಬಿಕೆಯೂ ಸುಳ್ಳು ಎಂದು ಗೊತ್ತಾಯಿತು.

ನಿಜಕ್ಕೂ ಇಂಟರೆಸ್ಟಿಂಗ್ ಅನ್ನಿಸುವುದು ಜೀವಶಾಸ್ತ್ರದ ವಿವರಗಳು. ಗಂಡಸು ಅಥವಾ ಹೆಣ್ಣು ಯಾಕೆ ಅಷ್ಟೊಂದು ಹೊತ್ತು ಸೆಕ್ಸ್ ನಡೆಸುತ್ತಾರೆ. ಅಥವಾ ಯಾಕೆ ಅಷ್ಟೊಂದು ಬಾರಿ ಶಿಶ್ನವನ್ನು ಯೋನಿಯೊಳಗೆ ಹಾಕಿ ತೆಗೆಯುತ್ತಾರೆ? ಯಾಕೆ ಒಂದೇ ಸಲಕ್ಕೆ ಗಂಡಿಗೆ ಸ್ಖಲನ ಆಗಿಬಿಡುವುದಿಲ್ಲ? ಇದು ಸ್ವಾರಸ್ಯಕರ. ಪ್ರಾಣಿ ವರ್ತನೆವಿಜ್ಞಾನ, ಜೀವವಿಜ್ಞಾನದ ಪ್ರಕಾರ, ಹೀಗೆ ಶಿಶ್ನದ ಘರ್ಷಣೆ ನಡೆಯುವುದು, ಈ ಮೊದಲೇ ಒಳಸೇರಿರಬಹುದಾದ ಬೇರೆ ಗಂಡಸಿನ ವೀರ್ಯ ಇದ್ದರೆ ಅದನ್ನು ಹೊರ ಹಾಕುವುದಕ್ಕಾಗಿ. ಹಾಗಾಗಿಯೇ ತನ್ನ ವೀರ್ಯಸ್ಖಲನ ಆದ ಕೂಡಲೇ ಗಂಡಿನ ಶಿಶ್ನ ಸಂಕುಚಿತಗೊಂಡುಬಿಡುತ್ತದೆ. ಪ್ರತಿಯೊಂದು ಪ್ರಾಣಿಯಲ್ಲೂ ಹೀಗೆಯೇ ಆಗುವುದು. ಮನುಷ್ಯನೂ ಅದಕ್ಕೆ ಹೊರತಲ್ಲ.

#Feelfree: ಮಗಳು ನನ್ನ ಹತ್ರಾನೇ ಬರೋಲ್ಲ, ಏನು ಮಾಡಲಿ? ...

ಆದರೂ ನಮ್ಮ ಸಮಾಜದಲ್ಲಿ, ಹೆಚ್ಚು ಹೊತ್ತು ಸೆಕ್ಸ್ ನಡೆಸಿದವನು ಮಹಾ ಸಾಮರ್ಥ್ಯವಂತ ಗಂಡಸು ಎಂಬ ನಂಬಿಕೆ ಚಾಲ್ತಿಯಲ್ಲಿದೆ. ಅದು ನಿಜವಲ್ಲ. ಆತನಲ್ಲಿ ದೈಹಿಕ ಸಾಮರ್ಥ್ಯ ಇರಬಹುದೇ ಹೊರತು, ಸಂತತಿಯಾಗಬಹುದಾದ ವೀರ್ಯಾಣು ಇರಬಹುದು ಎಂದೇನೂ ಅರ್ಥವಲ್ಲ. ಮನುಷ್ಯಕುಲದ ಅತ್ಯಂತ ಬಲಿಷ್ಠ ಎನಿಸಿದ ಗಂಡಸರಿಗೆ ಮಕ್ಕಳೇ ಹುಟ್ಟದಿರುವ ಉದಾಹರಣೆಗಳೂ ಇವೆ. ಹೀಗಾಗಿ ನಿಮ್ಮ ಸೆಕ್ಸ್ ಸಾಮರ್ಥ್ಯದ ಬಗ್ಗೆ ಸಂಕೋಚ ಬೇಡ. ಇರುವ ಸಾಮರ್ಥ್ಯದಲ್ಲಿ ಸಂತೋಷ ಪಡಬಹುದು.

click me!