ಕುಡಿದು ಡ್ಯಾನ್ಸ್ ಮಾಡುತ್ತಾ ಮೈಮರೆತ ಮದುಮಗ, ಕಾದು ಕಾದು ಸುಸ್ತಾಗಿ ಬೇರೆಯವನನ್ನು ಮದುವೆಯಾದ ವಧು !

By Suvarna News  |  First Published May 18, 2022, 3:53 PM IST

ಇತ್ತೀಚಿನ ದಿನಗಳಲ್ಲಿ ಜನರು ಮದುವೆ (Marriage) ಸಾಂಪ್ರದಾಯಿಕವಾಗಿರುವುದರ ಜೊತೆಗೆ ತಾವು ಮದುವೆಯ ಎಲ್ಲಾ ಕ್ಷಣಗಳನ್ನು ಖುಷಿಯಿಂದ ಎಂಜಾಯ್ (Enjoy) ಮಾಡಬೇಕೆಂದು ಬಯಸುತ್ತಾರೆ. ಆದ್ರೆ ಜೈಪುರದಲ್ಲಿ ಈ ಎಂಜಾಯ್‌ ಮಾಡೋ ಭರದಲ್ಲಿ ಮದುಮಗನೇ (Bridegroom) ಮದುವೆ ಮಿಸ್ ಮಾಡ್ಕೊಂಡಿದ್ದಾನೆ. ಅರೆ ಏನ್‌ ಹೇಳ್ತಿದ್ದಾರಪ್ಪ ಅಂತ ಗಾಬರಿ ಆಗ್ಬೇಡಿ. ಮುಂದೆ ಓದಿ.


ಮದುವೆ (Marriage) ಜೀವನದಲ್ಲಿ ಒಮ್ಮೆ ಆಗುವಂತಹದ್ದು. ಆ ಮದುವೆ ಕ್ಷಣ, ದಿನಗಳು ಸದಾ ನೆನಪಿನಲ್ಲಿರಬೇಕು. ಮದುವೆಗಾಗಿ ಜನರು ತಿಂಗಳ ಮೊದಲೇ ತಯಾರಿ ನಡೆಸುತ್ತಾರೆ. ಮದುವೆಗೆ ಥೀಮ್ ಸಿದ್ಧಪಡಿಸಿ, ಅದಕ್ಕೆ ತಕ್ಕಂತೆ ಡ್ರೆಸ್ (Dress) ಧರಿಸುತ್ತಾರೆ. ಡೆಕೊರೇಶನ್‌, ಫುಡ್‌, ಲೈಟಿಂಗ್ಸ್, ಮೆರವಣಿಗೆ, ಮ್ಯೂಸಿಕ್‌ ಎಲ್ಲವನ್ನೂ ಎಂಜಾಯ್ (Enjoy) ಮಾಡಬೇಕೆಂದು ಬಯಸುತ್ತಾರೆ. ಹಿಂದೆಲ್ಲಾ ಮದುವೆಯೆಂದ್ರೆ ಶಾಸ್ತ್ರೋಸ್ತಕವಾಗಿ, ಶಿಸ್ತುಬದ್ಧವಾಗಿ ಮಾಡಲಾಗುತ್ತಿತ್ತು. ಆದರೆ ಈಗ ಜನರ ಮನಸ್ಥಿತಿ ಬದಲಾಗಿದೆ. ಹೀಗಾಗಿ ಸಂಪ್ರದಾಯವನ್ನು ಪಾಲಿಸುವುದರ ಜತೆಗೆ ಮದುವೆಯಲ್ಲಿ ಮಸ್ತಿಯನ್ನೂ ಮಾಡುತ್ತಾರೆ.

ಅದರಲ್ಲೂ ಸಾಮಾಜಿಕ ಜಾಲತಾಣಗಳು (Social media) ಈಗ ಎಲ್ಲರ ಫೇವರೆಟ್. ಮದುವೆ ಮಂಟಪದಲ್ಲಿ ವಧು-ವರರು ಚೇಷ್ಟೆ ಮಾಡಿದ ಸುದ್ದಿಗಳು, ಘಟನೆಗಳು ಆಗಾಗ ವೈರಲ್ (Viral) ಆಗ್ತಿರುತ್ತವೆ. ಹೀಗಾಗಿ ಜನರು ಅದರಲ್ಲಿ ಪೋಸ್ಟ್ ಮಾಡಬೇಕು ಎಂಬ ಕಾರಣಕ್ಕೂ ಮದುವೆ ದಿನ. ಭರ್ಜರಿಯಾಗಿ ಡ್ಯಾನ್ಸ್ (Dance) ಮಾಡ್ತಾರೆ. ಇತ್ತೀಚಿನ ದಿನಗಳಲ್ಲಿ ಜನರು ಮದುವೆಯನ್ನು ತಮ್ಮಿಷ್ಟದಂತೆ ಮಾಡಿಕೊಳ್ತಾರೆ. ಸಾಂಪ್ರದಾಯಿಕವಾಗಿರುವುದರ ಜೊತೆಗೆ ಎಲ್ಲಾ ಕ್ಷಣಗಳನ್ನು ಖುಷಿಯಿಂದ ಎಂಜಾಯ್ ಮಾಡಬೇಕೆಂದು ಬಯಸುತ್ತಾರೆ. ಹೀಗಾಗಿಯೇ ಮದುವೆಗೆ ಮೊದಲೇ ಬ್ಯಾಚುಲರ್ ಪಾರ್ಟಿ ಮಾಡಿಕೊಳ್ತಾರೆ. ಮೆಹಂದಿಯಂತೂ ಡ್ಯಾನ್ಸ್, ಮ್ಯೂಸಿಕ್ ಸೇರಿ ಫುಲ್ ಕಲರ್ ಫುಲ್ ಆಗಿರುತ್ತದೆ. ಮದುವೆ ದಿನವೂ ಗ್ರ್ಯಾಂಡ್ ಎಂಟ್ರಿ ಕೊಟ್ಟು ಜನರನ್ನು ನಿಬ್ಬೆರಗೊಳಿಸಬೇಕೆಂದು ಅಂದುಕೊಳ್ಳುತ್ತಾರೆ. ಆದ್ರೆ ಜೈಪುರದಲ್ಲಿ ಈ ಎಂಜಾಯ್‌ ಮಾಡೋ ಭರದಲ್ಲಿ ಮದುಮಗನೇ ಮದುವೆ ಮಿಸ್ ಮಾಡ್ಕೊಂಡಿದ್ದಾನೆ. ಅಸಲಿಗೆ ಅಲ್ಲಾಗಿದ್ದೇನು ತಿಳಿಯೋಣ.

Tap to resize

Latest Videos

Viral Story : ಯಪ್ಪಾ..! ಈ ಕಾರಣಕ್ಕೆ ಮದುವೆ ನಿಲ್ಲಿಸಿದ ವಧು

ಮದುವೆ ಸಮಯದಲ್ಲಿ ತಮಾಷೆ, ವಿಚಿತ್ರ ಮತ್ತು ವಿಲಕ್ಷಣ ಘಟನೆಗಳು ನಡೆಯುತ್ತ ಇರುತ್ತೆ. ಅದೇ ರೀತಿ ಇಲ್ಲೊಂದು ಮದುವೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ವರನೊಬ್ಬ ಚೆನ್ನಾಗಿ ಕುಡಿದು, ಡ್ಯಾನ್ಸ್ ಮಾಡುತ್ತ ಮೈಮರೆತಿದ್ದಾನೆ. ಪಾಪ ಅಲಂಕಾರಗೊಂಡ ಹುಡುಗಿ ಎಷ್ಟು ಹೊತ್ತೂಂತ ಕಾಯ್ತಾಳೆ. ವಧು ಬೇರೆಯವರನ್ನು ಮದುವೆಯಾಗಿದ್ದಾಳೆ.

ಅಸಲಿಗೆ ನಡೆದಿದ್ದೇನು?
ರಾಜಸ್ತಾನದ ಚೂರಿನಲ್ಲ ವರ (Bridegroom) ಸುನೀಲ್ ಮತ್ತು ಆತನ ಸಂಬಂಧಿಕರು ವಧುವಿನ ಗ್ರಾಮಕ್ಕೆ ಆಗಮಿಸುವಾಗ ಈ ಘಟನೆ ನಡೆದಿದೆ. ಮದುವೆಯ ಮುಹೂರ್ತ ಸೋಮವಾರ ನಸುಕಿನ ಜಾವ 1.15 ಪ್ರಾರಂಭವಾಗಬೇಕಿತ್ತು. ಈ ಹಿನ್ನೆಲೆ ವರನ ಕಡೆಯವರು ಭಾನುವಾರ ರಾತ್ರಿ 9 ಗಂಟೆಗೆ ಮೆರವಣಿಗೆ ಪ್ರಾರಂಭಿಸಿದ್ದಾರೆ. ಆದರೆ ಸುನೀಲ್ ತನ್ನ ಸ್ನೇಹಿತರೊಂದಿಗೆ ಚೆನ್ನಾಗಿ ಕುಡಿದು ಡಿಜೆ ಸಾಂಗ್‍ಗೆ ನೃತ್ಯ ಮಾಡುತ್ತಾ ಮೈ ಮರೆತಿದ್ದಾನೆ. 

ಇದರಿಂದ ಗಂಟೆಗಟ್ಟಲೆ ಮೆರವಣಿಗೆ ವಿಳಂಬವಾಯಿತು. ವಧುವಿನ (Bride) ಕಡೆಯವರು, ವರನ ಬರುವಿಕೆಗಾಗಿ ಕಾಯುತ್ತಿದ್ದರು. ಹಲವು ಗಂಟೆಗಳಾದರೂ ವರನು ಬಾರದೆ ಇರುವುದನ್ನು ನೋಡಿ ವಧುವಿನ ಕಡೆಯವರು ಗಾಬರಿಗೊಂಡರು. ಈ ಹಿನ್ನೆಲೆ ವಧುವಿಗೆ ಬೇರೆ ವರನನ್ನು ನೋಡಿ ಮದುವೆ ಮಾಡಿಸಿದ್ದಾರೆ. ವರ ಮತ್ತು ಅವರ ಸಂಬಂಧಿಕರು ಕೊನೆಗೂ ಸ್ಥಳಕ್ಕೆ ಬಂದಾಗ, ವಧು ಈಗಾಗಲೇ ಮತ್ತೊಬ್ಬರನ್ನ ಮದುವೆಯಾಗಿರುವುದನ್ನು ನೋಡಿ ಆಘಾತಕ್ಕೊಳಗಾದರು.

Relationship Tips : ಪತಿ ಮುಂದೆ ಖುಷಿ ನಾಟಕವಾಡೋದೇ ದುಬಾರಿಯಾಗ್ತಿದೆ

ಅವಮಾನಕ್ಕೊಳಗಾದ ವರನ ಕಡೆಯವರು ವಧುವಿನ ಕಡೆಯವರ ವಿರುದ್ಧ ರಾಜ್‍ಗಢ ಪೊಲೀಸ್ ಠಾಣೆಗೆ ದೂರು ಕೊಡಲು ಹೋಗಿದ್ದಾರೆ. ಅದಕ್ಕೆ ವಧುವಿನ ಕಡೆಯವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ವಧುವಿನ ಕುಟುಂಬಸ್ಥರು, ವರ ಮತ್ತು ಅವನ ಕುಟುಂಬವು ಮದುವೆಯ ಆಚರಣೆಗಳ ಬಗ್ಗೆ ತುಂಬಾ ಅಸಡ್ಡೆ ಹೊಂದಿದ್ದಾರೆ. ಮುಂದೆ ಭವಿಷ್ಯದಲ್ಲಿಯೂ ಈ ನಡವಳಿಕೆಯು ಮುಂದುವರಿಯುತ್ತೆ ಎಂದು ನಮಗೆ ಭಯವಾಗಿ ಈ ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದರು. ಎರಡು ಕುಟುಂಬಗಳನ್ನು ವಿಚಾರಣೆ ಮಾಡಿದ ಬಳಿಕ ಪೊಲೀಸರು ಸಮಾಲೋಚನೆ ಮಾಡಿ, ಮದುವೆಯನ್ನು ಕಾನೂನುಬದ್ಧವಾಗಿಸಲು ನಿರ್ಧರಿಸುವುದಾಗಿ ತಿಳಿಸಿದ್ದಾರೆ. ಇದನ್ನು ಎರಡು ಕುಟುಂಬ ಒಪ್ಪಿಕೊಂಡಿದೆ.

click me!