ಸಂಬಂಧದಲ್ಲಿ ಕೆಮಿಸ್ಟ್ರಿ ಚೆನ್ನಾಗಿದೆ ಎನ್ನುವುದನ್ನು ಗುರುತಿಸುವುದು ಸುಲಭ. ಇಬ್ಬರ ನಡುವೆ ಆಕರ್ಷಣೆ, ಹೊಂದಾಣಿಕೆ, ಸೌಹಾರ್ದತೆ ಇರುವಾಗ ದೇಹ ಹಾಗೂ ಮನಸ್ಸಿನಲ್ಲಿ ಹಲವು ಬದಲಾವಣೆಗಳು ಉಂಟಾಗುತ್ತವೆ. ಅವುಗಳ ಮೂಲಕ ರೋಮ್ಯಾಂಟಿಕ್ ಕೆಮಿಸ್ಟ್ರಿಯನ್ನು ಅರ್ಥ ಮಾಡಿಕೊಳ್ಳಬಹುದು.
“ಇಬ್ಬರ ನಡುವಿನ ಕೆಮಿಸ್ಟ್ರಿ ಚೆನ್ನಾಗಿದೆ’ ಎಂದು ಆಗಾಗ ಕೇಳಿಬರುವ ಮಾತು. ಚಲನಚಿತ್ರಗಳ ವಿಶ್ಲೇಷಣೆಯಲ್ಲೂ ಈ ಪದಬಳಕೆ ಹೆಚ್ಚಾಗಿ ಜಾರಿಯಲ್ಲಿದೆ. ಏನಿದು ಕೆಮಿಸ್ಟ್ರಿ? ಇಬ್ಬರ ನಡುವಿನ ಹೊಂದಾಣಿಕೆಯೇ? ದೈಹಿಕ ಆಪ್ತತೆಯೇ ಅಥವಾ ಇನ್ನೇನು ಎಂದು ಸಾಕಷ್ಟು ಜನ ಪ್ರಶ್ನಿಸಿಕೊಳ್ಳುವುದು ಸಹಜ. ಪರಸ್ಪರ ಹೊಂದಾಣಿಕೆ, ಸೌಹಾರ್ದತೆ, ಅರಿಯದೇ ಉಂಟಾದ ಆಪ್ತಭಾವ ಎಲ್ಲವೂ ಸೇರಿದಾಗ ಸೃಷ್ಟಿಯಾಗುವುದೇ ಈ ಕೆಮಿಸ್ಟ್ರಿ. ಯಾವುದೇ ಸಂಬಂಧ ಚೆನ್ನಾಗಿರಲಿಕ್ಕೂ ಇದು ಅಗತ್ಯ. ಸೌಹಾರ್ದ ಭಾವನೆಯಿಲ್ಲದೆ ಯಾವ ಸಂಬಂಧವೂ ದೃಢವಾಗಿರಲು ಸಾಧ್ಯವಿಲ್ಲ. ರೋಮ್ಯಾಂಟಿಕ್ ಬಾಂಧವ್ಯ ಹೆಚ್ಚಲು ಕೂಡ ಉತ್ತಮ ಕೆಮಿಸ್ಟ್ರಿ ಅಗತ್ಯವಾಗಿರುತ್ತದೆ. ಯಾರನ್ನಾದರೂ ಮೊದಲ ಬಾರಿ ನೋಡಿದಾಗ ಆಪ್ತಭಾವನೆ ಮೂಡುತ್ತದೆಯಲ್ಲವೇ? ಎಷ್ಟೋ ವರ್ಷಗಳಿಂದ ಒಡನಾಡಿರುವ ಹಾಗೆ ಅನಿಸುತ್ತದೆಯಲ್ಲವೇ? ಅಲ್ಲಿ ಕೆಲಸ ಮಾಡುವುದು ಸಹ ಇದೇ.
ರೋಮ್ಯಾಂಟಿಕ್ ಕೆಮಿಸ್ಟ್ರಿ ಉಂಟಾಗಲು ಮುಖ್ಯವಾಗಿ ನಾಲ್ಕು ಮೂಲ ಕಾರಣಗಳನ್ನು ಗುರುತಿಸಲಾಗಿದೆ. ಸಾಮೀಪ್ಯ, ಸಮಾನತೆ, ಪರಸ್ಪರ ಹೊಂದಾಣಿಕೆ ಹಾಗೂ ದೈಹಿಕ ಆಕರ್ಷಣೆ. ಇವೆಲ್ಲವೂ ಸೇರಿದಾಗ ಒಬ್ಬರ ಬಗ್ಗೆ ಆಳವಾದ ಪ್ರೀತಿಯುಂಟಾಗುತ್ತದೆ. ಸಂಬಂಧದಲ್ಲಿ ಕೆಮಿಸ್ಟ್ರಿ ಚೆನ್ನಾಗಿದೆಯೇ ಎನ್ನುವುದನ್ನು ಹಲವು ಅಂಶಗಳ ಮೂಲಕ ತಿಳಿದುಕೊಳ್ಳಬಹುದು. ಹಾಗೆಯೇ, ಯಾರನ್ನಾದರೂ ಭೇಟಿ ಮಾಡಿದಾಗ ಅವರ ಬಗ್ಗೆ ಉಂಟಾಗುವ ಹಲವು ಭಾವನೆಗಳು ಸಹ ಅವರೊಂದಿಗೆ ನಮ್ಮ ಕೆಮಿಸ್ಟ್ರಿಯನ್ನು ಅರ್ಥೈಸಬಲ್ಲವು.
• ಪರಿಚಿತ ಭಾವನೆ (Familiarity)
ಯಾರನ್ನಾದರೂ ಮೊದಲ ಬಾರಿ ಭೇಟಿಯಾದರೂ ಅವರ ಬಗ್ಗೆ ಪರಿಚಿತ ಭಾವನೆ (Feel) ಮೂಡಿದರೆ ಇಬ್ಬರ ಎನರ್ಜಿಯೂ (Energy) ಚೆನ್ನಾಗಿ ಹೊಂದಾಣಿಕೆಯಾಗುತ್ತಿದೆ ಎಂದರ್ಥ. ಮೊದಲ ಭೇಟಿಯಾಗಿದ್ದರೂ ಅಲ್ಲಿ ಮುಜುಗರವಿರುವುದಿಲ್ಲ, ಅಹಿತಕರ (Uncomfortable) ಭಾವನೆ ಮೂಡುವುದಿಲ್ಲ. ಪರಸ್ಪರ ಆತ್ಮೀಯವಾದ ಮಾತುಕತೆ ಸಾಧ್ಯವಾಗುತ್ತದೆ.
ಹೆಂಡ್ತಿ, ಗಂಡನಿಂದ ಯಾವಾಗ್ಲೂ ಈ ವಿಷ್ಯಕೇಳೋಕೆ ಬಯಸ್ತಾಳಂತೆ
• ಪ್ರಯತ್ನವಿಲ್ಲದೆ ಸ್ನೇಹ (Friendship)
ಕೆಲವು ಬಾರಿ, ಕೆಲವರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಲು ಪ್ರಯತ್ನಿಸಬೇಕಾಗುತ್ತದೆ. ಮುಜುಗರ, ಹಿಂಜರಿಕೆಗಳನ್ನು ಮೀರಿ ವರ್ತಿಸಬೇಕಾಗುತ್ತದೆ. ಆದರೆ, ಇಬ್ಬರ ನಡುವೆ ಹೆಚ್ಚಿನ ಪ್ರಯತ್ನವಿಲ್ಲದೇ ಉತ್ತಮ ಸ್ನೇಹ ಸೃಷ್ಟಿಯಾಗಿದೆ ಎಂದರೆ ನಿಮ್ಮಿಬ್ಬರ ನಡುವೆ ಕೆಮಿಸ್ಟ್ರಿ (Chemistry) ಚೆನ್ನಾಗಿದೆ ಎಂದರ್ಥ. ಇಬ್ಬರೂ ಮಾತಿನಲ್ಲಿ ಮುಳುಗುವುದು, ನಗುವುದು ಸಹಜವಾಗಿರುತ್ತದೆ. ಅಲ್ಲಿ ಯಾವುದೇ ಅನನುಕೂಲವಾಗುವ ಭಾವನೆ ಇರುವುದಿಲ್ಲ. ಸ್ಪರ್ಧೆ (Compitition), ಉದ್ದೇಶ (Intention), ಅಸೂಯೆ ಇರುವುದಿಲ್ಲ.
• ಪರಸ್ಪರ ಆಕರ್ಷಣೆ (Attraction)
ಇಬ್ಬರು ವ್ಯಕ್ತಿಗಳ ನಡುವೆ ದೈಹಿಕ (Physical) ಮತ್ತು ಭಾವನಾತ್ಮಕ (Emotional) ಆಕರ್ಷಣೆ ಉಂಟಾಗುವುದು ಸಹಜ. ಪ್ರತಿ ಬಾರಿ ಭೇಟಿಯಾದಾಗಲೂ ಆಳವಾದ ಅನ್ಯೋನ್ಯತೆಯ ಭಾವನೆ ಮೂಡುತ್ತದೆ. ಪರಸ್ಪರ ಜೀವನದ ಬಗ್ಗೆ ಆಸಕ್ತಿ (Interest) ವ್ಯಕ್ತವಾಗುತ್ತದೆ. ಇವು ಮೇಲ್ನೋಟಕ್ಕೆ ನಿಲುಕುವುದಿಲ್ಲವಾದ್ದರಿಂದ ಈ ಭಾವನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಬೇಕು.
• ದೇಹಭಾಷೆ (Body Language)
ಪರಸ್ಪರ ಉತ್ತಮ ಸೌಹಾರ್ದತೆ (Reciprocity) ಇರುವುದನ್ನು ದೇಹಭಾಷೆ ಅತ್ಯಂತ ಸೂಕ್ತವಾಗಿ ವ್ಯಕ್ತಪಡಿಸುತ್ತದೆ. ನೀವು ಅವರನ್ನು ಭೇಟಿಯಾದಾಗ ಆಂಗಿಕ ಭಾಷೆ ಯಾವ ರೀತಿಯಲ್ಲಿ ಬದಲಾಗುತ್ತದೆ, ಹೇಗಿರುತ್ತದೆ ಎನ್ನುವ ಬಗ್ಗೆ ಗಮನ ಕೊಡಿ. ಅವರನ್ನು ಭೇಟಿಯಾಗಲು ಉತ್ಸಾಹವೆನಿಸುತ್ತದೆ. ಅವರನ್ನು ಕಂಡಾಗ ಖುಷಿಯಾಗಿ ಕೈ ಚಾಚಬಹುದು ಇತ್ಯಾದಿ.
ಸಂಬಂಧದಲ್ಲಿ ತುಂಬಾ ಸೂಕ್ಷ್ಮವಾಗಿರಬೇಡಿ, ಸ್ವಲ್ಪ ಸ್ಟ್ರಾಂಗ್ ಆಗಿರೋದೂ ಕಲೀರಿ!
• ಫ್ಲರ್ಟಿಂಗ್ (Flirting)
ಆರೋಗ್ಯಕರ ಫ್ಲರ್ಟಿಂಗ್ ಕೂಡ ಇಬ್ಬರು ವ್ಯಕ್ತಿಗಳ ಉತ್ತಮ ರೋಮ್ಯಾಂಟಿಕ್ ಬಂಧವನ್ನು ತೋರ್ಪಡಿಸುತ್ತದೆ. ಜೋಕ್ ಮಾಡುವುದು, ಅವರು ನಗುವಂತೆ ಮಾಡುವುದು, ಅವರ ನಗುವಿಗೆ ನಿಮ್ಮ ನಗು ಜೋಡಿಸುವುದು, ಕಣ್ಣುಗಳನ್ನು ಸೇರಿಸುವುದು (Eye Contact) ಇವು ಗುಡ್ ಕೆಮಿಸ್ಟ್ರಿಯನ್ನು ವ್ಯಕ್ತಪಡಿಸುತ್ತವೆ.
• ದೇಹದಲ್ಲಿ ಬದಲಾವಣೆ (Body Changes)
ಅವರನ್ನು ಕಂಡಾಗ ಖುಷಿಯ ಅಲೆಗಳು ಸೃಷ್ಟಿಯಾಗುತ್ತದೆ. ಕಣ್ಣುಗಳು ಪ್ರಜ್ವಲಿಸುತ್ತವೆ. ನರನಾಡಿಗಳಲ್ಲಿ ಖುಷಿಯ (Happy) ಸಂಚಾರವಾಗುತ್ತದೆ. ಹೊಟ್ಟೆಯ ಕೆಳಭಾಗದಲ್ಲಿ ನುಲಿದಂತೆ ಆಗಬಹುದು. ನಾಚಿಕೆ ಎನಿಸಬಹುದು. ಸಣ್ಣದಾಗಿ ನರ್ವಸ್ ಆಗಬಹುದು. ಇವೆಲ್ಲ ನೀವು ಅವರ ಬಗ್ಗೆ ಹೊಂದಿರುವ ರೋಮ್ಯಾಂಟಿಕ್ (Romantic) ಕೆಮಿಸ್ಟ್ರಿಯನ್ನು ವ್ಯಕ್ತಪಡಿಸುತ್ತವೆ.