
ಸೆಕ್ಸ್ (Sex) ಆರೋಗ್ಯಕ್ಕೆ ಒಳ್ಳೆಯದು. ನಿಯಮಿತ ಸೆಕ್ಸ್ ರಕ್ತ (Blood) ಸಂಚಾರವನ್ನು ಸುಗಮಗೊಳಿಸುವ ಜೊತೆಗೆ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ ಎಂದು ನೀವೆಲ್ಲ ತಿಳಿದಿರಬೇಕು. ಆದ್ರೆ ಸೆಕ್ಸ್ ಕೆಲವೊಮ್ಮೆ ಹೃದಯದ ಬಡಿತವನ್ನು ನಿಲ್ಲಿಸುತ್ತದೆ ಅಂದ್ರೆ ನೀವು ನಂಬ್ತೀರಾ? ನಂಬ್ಲೇಬೇಕು. ನಾಗ್ಪುರ (Nagpur) ದಲ್ಲಿ ಇಂಥಹ ಘಟನೆಯೊಂದು ನಡೆದಿದೆ. ಲಾಡ್ಜ್ ನಲ್ಲಿ ಗೆಳತಿ ಜೊತೆ ಶಾರೀರಿಕ ಸಂಬಂಧ ಬೆಳೆಸುವ ವೇಳೆ ಯುವಕನಿಗೆ ಹೃದಯಾಘಾತವಾಗಿದೆ. ಬರೀ ನಾಗ್ಪುರದ ಹುಡುಗ ಮಾತ್ರವಲ್ಲ ಸೆಕ್ಸ್ ವೇಳೆ ಹೃದಯಾಘಾತವಾಗಿ ಅನೇಕರು ಸಾವನ್ನಪ್ಪಿದ್ದಾರೆ ಎನ್ನುತ್ತದೆ ಅಧ್ಯಯನ.
ಸಂಶೋಧನೆ ಏನು ಹೇಳುತ್ತದೆ?: ಒರೆಗಾನ್‌ನ ಪೋರ್ಟ್‌ಲ್ಯಾಂಡ್ ನಲ್ಲಿ ಈ ಬಗ್ಗೆ ಸಂಶೋಧನೆಯೊಂದು ನಡೆದಿದೆ. 10 ವರ್ಷದ ಅವಧಿಯಲ್ಲಿ ನಡೆದ ಹೃದಯಾಘಾತದ ಬಗ್ಗೆ ಸಂಶೋಧಕರು ಅಧ್ಯಯನ ನಡೆಸಿದ್ದಾರೆ. 10 ವರ್ಷದಲ್ಲಿ ಒರೆಗಾನ್ ಪೋರ್ಟ್ಲ್ಯಾಂಡ್ ನಲ್ಲಿ 4,500 ಕ್ಕೂ ಹೆಚ್ಚು ಹೃದಯಾಘಾತವಾಗಿತ್ತು. ಇದ್ರಲ್ಲಿ 34 ಮಂದಿ, ಹೃದಯಾಘಾತಕ್ಕೆ ಒಂದು ಗಂಟೆ ಮೊದಲು ಶಾರೀರಿಕ ಸಂಬಂಧ ಬೆಳೆಸಿದ್ದರು ಎಂಬುದು ಗೊತ್ತಾಗಿದೆ .
ಭಾರತೀಯ ಮೂಲದ ಸಂಶೋಧಕರ ನೇತೃತ್ವದ ಅಧ್ಯಯನವು ಹೃದಯರಕ್ತನಾಳದ ಕಾಯಿಲೆ ಇರುವ ಪುರುಷರಿಗೆ ಲೈಂಗಿಕ ಸಮಯದಲ್ಲಿ ಅಥವಾ ನಂತರ ಹಠಾತ್ ಹೃದಯ ಸ್ತಂಭನದ ಅಪಾಯ ಹೆಚ್ಚಿರುತ್ತದೆ ಎಂದಿದ್ದಾರೆ. ಹಠಾತ್ ಹೃದಯ ಸ್ತಂಭನದಲ್ಲಿ (SCA), ಹೃದಯವು ಇದ್ದಕ್ಕಿದ್ದಂತೆ ಬಡಿಯುವುದನ್ನು ನಿಲ್ಲಿಸುತ್ತದೆ ಮತ್ತು ಇದು ಯಾವುದೇ ಎಚ್ಚರಿಕೆಯಿಲ್ಲದೆ ಸಂಭವಿಸುತ್ತದೆ ಎಂದಿದ್ದಾರೆ.ಲೈಂಗಿಕ ಚಟುವಟಿಕೆಯ ನಂತರ ಯಾವುದೇ ಔಷಧ, ಉತ್ತೇಜಕ ಪದಾರ್ಥ ಅಥವಾ ಮದ್ಯದ ಬಳಕೆಯು ಹಠಾತ್ ಹೃದಯ ಸ್ತಂಭನಕ್ಕೆ ಕಾರಣವಾಗುತ್ತದೆ ಎಂದವರು ಹೇಳಿದ್ದಾರೆ.
ಲೈಂಗಿಕ ಚಟುವಟಿಕೆ ವೇಳೆ ಹೃದಯಾಘಾತಕ್ಕೆ ಕಾರಣ :
1. ಲೈಂಗಿಕ ಕ್ರಿಯೆಯು ವ್ಯಾಯಾಮದಂತೆಯೇ ಇರುತ್ತದೆ. ಅಂದರೆ, ಈ ಸಮಯದಲ್ಲಿ ನಿಮ್ಮ ದೇಹದಲ್ಲಿ ರಕ್ತದ ಹರಿವು ಹೆಚ್ಚಾಗುತ್ತದೆ ಮತ್ತು ಹೃದಯ ಬಡಿತವೂ ಹೆಚ್ಚಾಗುತ್ತದೆ. ಈ ಅಂಶವು ಹೃದಯಾಘಾತಕ್ಕೆ ಕಾರಣವಾಗಬಹುದು.
2. ಅತಿಯಾದ ಸೆಕ್ಸ್ ತಪ್ಪಿಸಬೇಕು. ವಾರದಲ್ಲಿ ಎರಡು ಬಾರಿ ಸೆಕ್ಸ್ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಆದರೆ ಅನೇಕ ದಂಪತಿ ಲೈಂಗಿಕ ಜೀವನವನ್ನು ಆನಂದಿಸಲು ದಿನಕ್ಕೆ ಹಲವಾರು ಬಾರಿ ಸಂಭೋಗ ಬೆಳೆಸುತ್ತಾರೆ. ಈ ಅಂಶವು ಹೃದಯದ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ.
3. ದಂಪತಿ ತಮ್ಮ ಲೈಂಗಿಕ ಜೀವನವನ್ನು ಮಸಾಲೆಯುಕ್ತಗೊಳಿಸಲು ಹೊಸ ಭಂಗಿಯನ್ನು ಪ್ರಯತ್ನಿಸುತ್ತಾರೆ. ಆದರೆ ಅವುಗಳಲ್ಲಿ ಹಲವು ಅಪಾಯಕಾರಿಯಾಗಿರುತ್ತದೆ. ಇದು ರಕ್ತದ ಹರಿವನ್ನು ಹದಗೆಡಿಸುತ್ತದೆ ಮತ್ತು ಹೃದಯದ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ. ಲೈಂಗಿಕ ಭಂಗಿ ಬಗ್ಗೆ ಸ್ವಲ್ಪ ಎಚ್ಚರದಿಂದಿರುವುದು ಉತ್ತಮ.
4. ಬಿಎಸಿ ಮೆಡಿಸಿನ್ ವರದಿಯಲ್ಲಿ ವಯಾಗ್ರವು ಖಾಸಗಿ ಅಂಗದ ಮೇಲೆ ಮಾತ್ರವಲ್ಲದೆ ಹೃದಯದ ಮೇಲೂ ಪರಿಣಾಮ ಬೀರುತ್ತದೆ ಎಂದು ತಿಳಿಸಿದೆ. ಇದು ಹೃದಯ ಸ್ನಾಯುಗಳ ದಪ್ಪವಾಗಿಸುವ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುವ ಮೂಲಕ ಹೃದಯಾಘಾತವನ್ನು ಉಂಟುಮಾಡಬಹುದು. ವೈದ್ಯರನ್ನು ಸಂಪರ್ಕಿಸಿದ ನಂತರವೇ ಈ ಮಾತ್ರೆ ಬಳಸುವುದು ಉತ್ತಮ.
ಇದನ್ನೂ ಓದಿ: ಗೆಳತಿಯೊಂದಿಗೆ ಸೆಕ್ಸ್ ನಡೆಸುತ್ತಿದ್ದಾಗ ಹೃದಯಾಘಾತ, 28 ವರ್ಷದ ವ್ಯಕ್ತಿ ಸಾವು!
5. ಕೆಲವೊಮ್ಮೆ ದಂಪತಿ ಉತ್ಸಾಹವನ್ನು ಹೆಚ್ಚಿಸಲು ವೈಲ್ಡ್ ಸೆಕ್ಸ್ ನಲ್ಲಿ ತೊಡಗುತ್ತಾರೆ. ಇದು ದೈಹಿಕವಾಗಿ ಹಾಗೂ ಭಾವನಾತ್ಮಕವಾಗಿ ದೇಹದ ಮೇಲೆ ಒತ್ತಡ ಹೇರುತ್ತದೆ. ಇದು ರಕ್ತದ ಹರಿವಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಹೃದಯದ ರಕ್ತವನ್ನು ಪಂಪ್ ಮಾಡುವ ಕ್ರಿಯೆಯು ವೇಗವಾಗಿರುತ್ತದೆ. ಮಿತಿಯ ನಂತರ ಅದು ಆಕ್ರಮಣದ ರೂಪವನ್ನು ಪಡೆಯುತ್ತದೆ.
6. ಲೈಂಗಿಕ ಸಂಭೋಗದ ಸಮಯದಲ್ಲಿ ನೀವು ದಣಿದಿದ್ದರೆ ಅಥವಾ ಎದೆಯಲ್ಲಿ ನೋವು ಅಥವಾ ಒತ್ತಡ ಕಾಣಿಸಿಕೊಂಡ್ರೆ ತಕ್ಷಣ ಕ್ರಿಯೆಯನ್ನು ನಿಲ್ಲಿಸುವುದು ಉತ್ತಮ.
ಇದನ್ನೂ ಓದಿ: Relationship : 45 ವರ್ಷದ ಮಹಿಳೆ ಪ್ರೀತಿಸೋರು ಯಾರೂ ಇಲ್ವಂತೆ
ಲೈಂಗಿಕ ಸಮಯದಲ್ಲಿ ಹೃದಯಾಘಾತವಾದ್ರೆ ಬದುಕುಳಿಯಲು ಸಾಧ್ಯವೆ ? : ಲೈಂಗಿಕ ಸಮಯದಲ್ಲಿ ಹೃದಯಾಘಾತವಾದರೆ ಪುರುಷರಿಗೆ ಸಾವಿನ ಅಪಾಯವು ನಾಲ್ಕು ಪಟ್ಟು ಹೆಚ್ಚಾಗುತ್ತದೆ ಎಂದು ಸಂಶೋಧನೆ ಬಹಿರಂಗಪಡಿಸಿದೆ. ತುರ್ತು ಪರಿಸ್ಥಿತಿಯಲ್ಲೂ ಅವರಿಗೆ ಸೂಕ್ತ ಚಿಕಿತ್ಸೆ ನೀಡಿದ್ರೂ 8 ಜನರಲ್ಲಿ ಒಬ್ಬರು ಮಾತ್ರ ಬದುಕುಳಿದರು ಎಂದು ಸಂಶೋಧಕರು ಹೇಳಿದ್ದಾರೆ. ಸಾಮಾನ್ಯವಾಗಿ ತಕ್ಷಣ ಏನು ಮಾಡ್ಬೇಕೆಂಬುದು ಸಂಗಾತಿಗೆ ತಿಳಿಯುವುದಿಲ್ಲ. ತಕ್ಷಣ ಚಿಕಿತ್ಸೆ ಶುರುವಾದ್ರೆ ರೋಗಿ ಬದುಕುವ ಸಾಧ್ಯತೆ ಹೆಚ್ಚಿರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.