
- ನಿತ್ತಿಲೆ
ಮೊನ್ನೆ ತಾನೇ ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ ಸಖತ್ ಕ್ಲೋಸ್ ಆಗಿರೋ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿತ್ತು. ಅದಕ್ಕೂ ಒಂಚೂರು ಮೊದಲು ವಿಜಯ ದೇವರಕೊಂಡ ಮತ್ತು ಸಮಂತಾ ಚಿನ್ನಾಟ ಆಡೋ ರೀಲ್ಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಹೀರೋ ಹೀರೋಯಿನ್ ನಡುವೆ ಈ ಲೆವೆಲ್‌ನ ಕ್ಲೋಸ್‌ನೆಸ್ ಹೇಗೆ ಬರುತ್ತೆ?
ರಶ್ಮಿಕಾ ಮಂದಣ್ಣ ಸೌತ್ ಇಂಡಿಯಾದ ಬಹು ಬೇಡಿಕೆಯ ನಟಿ. ಏನೇ ವಿವಾದಗಳಾದರೂ ಈಕೆಗೆ ಬೇಡಿಕೆ ಇದ್ದೇ ಇದೆ. ಸದ್ಯಕ್ಕೆ ರಣಬೀರ್ ಕಪೂರ್ ಜೊತೆಗೆ ಅನಿಮಲ್ ಅನ್ನೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಶೂಟಿಂಗ್‌ನ ಫೋಟೋಗಳನ್ನು ರಶ್ಮಿಕಾ ಇತ್ತೀಚೆಗೆ ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿದ್ದರು. ರಣಬೀರ್ ಜೊತೆಗೆ ಸಖತ್ ಕ್ಲೋಸ್ ಆಗಿರೋ ಈ ಫೋಟೋ ಕ್ಷಣ ಮಾತ್ರದಲ್ಲಿ ಇನ್‌ಸ್ಟಾದಲ್ಲಿ ವೈರಲ್ ಆಯ್ತು. ದೇವರು ತುಂಬಾ ಟೈಮ್ ತಗೊಂಡು ಒಬ್ಬ ರಣಬೀರ್‌ನ ಸೃಷ್ಟಿಸಿದ್ದಾನೆ. ಆತ ನನ್ನ ಹೃದಯಲ್ಲಿರೋ ಪ್ರಿನ್ಸ್ ಅನ್ನೋ ರಶ್ಮಿಕಾ ಮಾತುಗಳು ಕ್ಷಣ ಮಾತ್ರದಲ್ಲಿ ಹವಾ ಕ್ರಿಯೇಟ್ ಮಾಡಿದವು.
ಇದಕ್ಕೂ ಕೆಲವು ದಿನ ಮೊದಲು ವಿಜಯ ದೇವರಕೊಂಡ ಹಾಗೂ ಸಮಂತಾ ಶೂಟಿಂಗ್ ಸೆಟ್‌ನಲ್ಲಿ ಸಖತ್ ಕ್ಲೋಸ್ ಆಗಿರೋ ಫೋಟೋಗಳು ಎಷ್ಟೋ ಜನರಲ್ಲಿ ಅನುಮಾನ ಮೂಡಿಸಿದವು. ಇದಕ್ಕೂ ಮೊದಲು ವಿಜಯ್ ದೇವರಕೊಂಡ ಜೊತೆಗೆ ಅನನ್ಯಾ ಪಾಂಡೆ ಆತ್ಮೀಯವಾಗಿರೋ ಫೋಟೋಗಳೂ ಅನೇಕ ಗಾಸಿಪ್ ಓಡಾಡಲು ಕಾರಣವಾದವು. ಕನ್ನಡ ಸಿನಿಮಾಗಳಲ್ಲೂ ಈ ಥರದ ಫೋಟೋಸ್ ವೈರಲ್ ಆಗುತ್ತಲೇ ಇರುತ್ತವೆ. 'ಸಪ್ತಸಾಗರದಾಚೆ ಎಲ್ಲೋ' ಸಿನಿಮಾದ ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ರಿಹರ್ಸಲ್ ಫೋಟ್‌ಸ್ ನೋಡಿದವರು, ಎಷ್ಟು ಮುದ್ದಾಗಿದೆ ಈ ಜೋಡಿ, ರಕ್ಷಿತ್ ರಶ್ಮಿಕಾಗಿಂತಲೂ ರಶ್ಮಿಕಾ ರುಕ್ಮಿಣಿ ಜೋಡಿ ಕ್ಯೂಟ್ ಆಗಿದೆ ಎಂದರು.
ಅಲಿಯಾ ಭಟ್ ಪತಿ ಜೊತೆ ರಶ್ಮಿಕಾ ಆಪ್ತತೆ: ರಣಬೀರ್ ಸೆಲ್ಫಿ ವೈರಲ್
ಕೆಲವು ವರ್ಷಗಳ ಹಿಂದೆ ಮಣಿರತ್ನಂ ಅವರ 'ಕಾದಲ್ ಕಣ್ಮಣಿ' ಸಿನಿಮಾದ ನಿತ್ಯಾ ಮೆನನ್ ಮತ್ತು ದುಲ್ಖರ್ ಸಲ್ಮಾನ್ ಜೋಡಿಗೆ ಫಿದಾ ಆಗದವರೇ ಇರಲಿಲ್ಲ. ಅದು ಬಾಲಿವುಡ್ ಇರಲಿ, ಸ್ಯಾಂಡಲ್‌ವುಡ್ ಇರಲಿ. ಮುಹೂರ್ತದಲ್ಲಿ ಆಗಷ್ಟೇ ಪರಿಚಯ ಆದ ಹಾಗಿರೋ ಹೀರೋ ಹೀರೋಯಿನ್ ಶೂಟಿಂಗ್ ಮುಗಿಯೋವಷ್ಟರಲ್ಲಿ ಸಿಕ್ಕಾಪಟ್ಟೆ ಕ್ಲೋಸ್ ಆಗಿರ್ತಾರೆ. ಶೂಟಿಂಗ್‌ನಲ್ಲಿ ಕ್ಲೋಸ್ ಆಗಿರೋ ಶಾಟ್‌ಗಳಲ್ಲಿ ನಟಿಸುತ್ತ ನಟಿಸುತ್ತ ಅವರಲ್ಲಿ ಈ ಆತ್ಮೀಯತೆ ಬೆಳೆಯುತ್ತಾ ಅಥವಾ ಬೇರೆ ಏನಾದರೂ ಟ್ರಿಕ್ಸ್ ಇಲ್ಲಿ ವರ್ಕೌಟ್ ಆಗುತ್ತಾ ಅನ್ನೋ ಡೌಟ್ ಹಲವರಿಗೆ ಇದೆ.
ಇದರ ಜೊತೆಗೆ ಇನ್ನೊಂದು ವಿಷ್ಯ ಅಂದರೆ ಹೀಗೆ ಆಫ್ ಸೀನ್‌ನಲ್ಲಿ ಸಖತ್ ಕ್ಲೋಸ್ ಕ್ಲೋಸ್ ಆಗಿ ಕಾಣೋ ಈ ಜೋಡಿ ಆನ್‌ಸ್ಕ್ರೀನ್‌ನಲ್ಲಿ ಸಖತ್ ರೊಮ್ಯಾಂಟಿಕ್ ಆಗಿ ಕಾಣ್ತಾರೆ. ಹಾಗಂತ ಆಫ್ ಸ್ಕ್ರೀನ್‌ನಲ್ಲಿ ಅಂಥಾ ಕ್ಲೋಸ್ ಆಗಿರದ ನಟ, ನಟಿಯರು ಆನ್‌ಸ್ಕ್ರೀನ್‌ನಲ್ಲಿ ಮೋಡಿ ಮಾಡೋದೂ ಇದೆ. ಅದಕ್ಕೆ ಕಳೆದ ವರ್ಷ ತೆರೆಕಂಡು ಸೂಪರ್ ಹಿಟ್ ಆದ 'ಸೀತಾರಾಮಂ' ಸಿನಿಮಾವೇ ಸಾಕ್ಷಿ. ಶೂಟಿಂಗ್ ಸೆಟ್ ಬಿಡಿ, ಸಿನಿಮಾ ಪ್ರಿ ರಿಲೀಸ್ ಇವೆಂಟ್‌ಗಳಲ್ಲೂ ದುಲ್ಖರ್ ಮತ್ತು ಮೃಣಾಲ್ ಡಿಸ್ಟೆನ್ಸ್ ಮೈಂಟೇನ್ ಮಾಡ್ತಿದ್ರು. ಆದರೆ ಇವರಿಬ್ಬರ ಆನ್ ಸ್ಕ್ರೀನ್ ಕೆಮೆಸ್ಟ್ರಿ ಚೆನ್ನಾಗಿತ್ತು. ಈ ಜೋಡಿಯನ್ನು ಜನ ಮನಸಾರೆ ಮೆಚ್ಚಿಕೊಂಡರು.
ತೆರೆ ಮೇಲೆ ರೊಮ್ಯಾಂಟಿಕ್ ಆಗಿ ಕಾಣ್ಬೇಕು ಅನ್ನೋ ಕಾರಣಕ್ಕೆ, ಆನ್‌ಸ್ಕ್ರೀನ್ ಹೀರೋ ಹೀರೋಯಿನ್ ನಡುವೆ ಕೆಮೆಸ್ಟ್ರಿ ಚೆನ್ನಾಗಿರಬೇಕು ಅನ್ನೋ ರೀಸನ್‌ಗೆ ಆಫ್‌ಸ್ಕ್ರೀನ್‌ನಲ್ಲೂ ಇವರಿಬ್ಬರೂ ಅನಿವಾರ್ಯವಾಗಿ ರೊಮ್ಯಾಂಟಿಕ್ ಆಗಿರೋದನ್ನು ರೂಢಿ ಮಾಡ್ಕೊಳ್ತಾರ ಅನ್ನೋ ಪ್ರಶ್ನೆ. ಅದಕ್ಕೆ ಉತ್ತರ 'ಯೆಸ್'. ಎಲ್ಲ ಸಿನಿಮಾಗಳಲ್ಲಿ ಅಲ್ಲವಾದರೂ ಹೆಚ್ಚಿನ ಸಿನಿಮಾಗಳಲ್ಲಿ ಆಫ್ ಸ್ಕ್ರೀನ್‌ನಲ್ಲೂ ಹೀರೋ ಹೀರೋಯಿನ್ ಕ್ಲೋಸ್ ಆಗಿರುವಂತೆ ನೋಡಿಕೊಳ್ಳಲಾಗುತ್ತೆ. ಅವರಿಬ್ಬರೂ ಹತ್ತಿರವಾದಷ್ಟೂ, ಆತ್ಮೀಯವಾದಷ್ಟೂ ಸ್ಕ್ರೀನ್ ಮೇಲೆ ಪರ್ಫಾಮೆನ್ಸ್ ಹೆಚ್ಚು ಸಹಜವಾಗಿ, ರೊಮ್ಯಾಂಟಿಕ್ ಆಗಿ ಮೂಡಿ ಬರುತ್ತೆ. ಕೆಲವೊಮ್ಮೆ ಈ ಕ್ಲೋಸ್‌ನೆಸ್ ಸಿನಿಮಾ ಮುಗಿದ ಮೇಲೂ ಮುಂದುವರಿಯುತ್ತೆ. ರಿಲೇಶನ್‌ಶಿಪ್‌ಗೆ ತಿರುಗುತ್ತೆ. ಆದರೆ ಹೆಚ್ಚಿನ ಸಲ ಆ ಸಿನಿಮಾದ ಕೆಲಸ ಮುಗಿದ ಮೇಲೆ ಈ ಕ್ಲೋಸ್‌ನೆಸ್‌ಗೂ ಬ್ರೇಕ್ ಬೀಳುತ್ತೆ.
ನೆಚ್ಚಿನ ಹುಡುಗಿ ಫೋಟೋ ಹಂಚಿಕೊಂಡ ವಿಜಯ್ ದೇವರಕೊಂಡ; ರಶ್ಮಿಕಾ ಅಲ್ಲ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.