
ಭಾರತೀಯ ಪುರುಷರ (Indian men) ಮುಂದೆ ನೀವು ವರ್ಕಿಂಗ್ ವುಮೆನ್ (working women) ಅಥವಾ ಗೃಹಿಣಿ (Housewife) ಎಂಬ ಆಯ್ಕೆ ಇಟ್ಟು ನೋಡಿ. ನಾನು ಸ್ವತಂತ್ರ ಮಹಿಳೆಯನ್ನು ಗೌರವಿಸ್ತೇನೆ ಎನ್ನುವ ಮೇಲ್ನೋಟದ, ತೋರಿಕೆಯ ಮಾತು ಎಲ್ಲರ ಬಾಯಿಂದ ಕೇಳಿ ಬರುತ್ತೆ. ನೀವು ಅವರ ಭಾವನೆಯನ್ನು ಒಳಹೊಕ್ಕಿ ನೋಡ್ದಾಗಲೇ ನಿಮಗೆ ಅಲ್ಲಿನ ಸತ್ಯದ ಅರಿವಾಗೋದು. ಪುರುಷರು ಟು ಇನ್ ಒನ್ ಮಹಿಳೆಯನ್ನು ಬಯಸ್ತಾರೆ ಅನ್ನೋದು ಕಟುವಾಗಿದ್ರೂ ಸತ್ಯ.
ಸಮಾಜ ಎಷ್ಟೇ ಮುಂದುವರೆದಿರಲಿ, ಮಹಿಳೆಯರು ಪುರುಷರ ಸಮಾನ ಕೆಲಸ ಮಾಡ್ತಿರಲಿ, ಬಾಳ ಸಂಗಾತಿ ಆಯ್ಕೆ ಬಂದಾಗ ಪುರುಷರ ಆಲೋಚನಾ ವಿಧಾನವೇ ಬದಲಾಗುತ್ತೆ. ಅವರಿಗೆ ಅಮ್ಮ – ಅಜ್ಜಿಯಂತೆ ಮನೆ ಕೆಲಸ ಮಾತ್ರ ಮಾಡ್ಕೊಂಡಿರುವ ಹುಡುಗಿ ಬೇಡ, ಆದ್ರೆ ಸ್ವತಂತ್ರ (independent)ವಾಗಿ ತನ್ನ ಬದುಕನ್ನು ಕಟ್ಟಿಕೊಳ್ಳುವ ಹುಡುಗಿಯೂ ಬೇಡ. ಆಕೆ ಎರಡು ಕಡೆ ಕೆಲಸ ಮಾಡ್ಬೇಕು. ಕುಟುಂಬದ- ಕೆಲಸ ಎರಡನ್ನೂ ನಿಭಾಯಿಸುವ ತಾಳ್ಮೆ, ಆತ್ಮವಿಶ್ವಾಸ ಹೊಂದಿರಬೇಕು. ಮನೆ ಕೆಲಸವನ್ನು ಅಚ್ಚುಕಟ್ಟಾಗಿ ಮಾಡ್ಬೇಕು. ಮಕ್ಕಳ ಜವಾಬ್ದಾರಿಯನ್ನು ನೋಡಿಕೊಳ್ಬೇಕು. ಮನೆಯಲ್ಲಿ ಕಣ್ಣು ಹಾಯಿಸಿದಾಗ ಪತ್ನಿ ಕಾಣಿಸಿಕೊಳ್ಬೇಕು. ಡೈನಿಂಗ್ ಟೇಬಲ್ ಮೇಲೆ ಆಹಾರ ಸಿದ್ಧವಾಗಿರ್ಬೇಕು. ಹೇಳಿದ ತಕ್ಷಣ ಮನೆ ಕೆಲಸ ಮುಗಿದಿರಬೇಕು. ಮನೆ ಸ್ವಚ್ಛವಾಗಿರಬೇಕು. ಆದ್ರೆ ಆಕೆ ಆರ್ಥಿಕ ಸ್ವಾವಲಂಭಿಯಾಗಿರಬೇಕು.
ಈಗಷ್ಟೇ ಮದುವೆಯಾದ ಜೋಡಿಗಳು ಈ ರೀತಿಯಾಗಿ ವ್ಯಾಲೆಂಟೈಲ್ಸ್ ಡೇ ಸೆಲೆಬ್ರೇಟ್ ಮಾಡಿ
ಭಾರತೀಯ ಕುಟುಂಬದ ಬೆನ್ನೆಲುಬು ಗೃಹಿಣಿ ಎಂದೇ ಬಿಂಬಿತವಾಗಿದೆ. ತಾಯಿ ಮಾಡುವ ಮನೆ ಕೆಲಸ, ತ್ಯಾಗದ ಮೇಲೆ ಉದ್ದುದ್ದದ ಕವನ ಬರೆಯುವ ಮಕ್ಕಳು ಮನೆ ಕೆಲಸವನ್ನು ನಿಜವಾದ ಕೆಲ್ಸ ಅಂತ ಒಪ್ಪಿಕೊಳ್ಳೋದಿಲ್ಲ. ದಣಿವಿಲ್ಲದೆ, ದೂರು ನೀಡದೆ, ಸಂಬಳವಿಲ್ಲದೆ, ಸಮಾಜ ತಾತ್ಸಾರದಿಂದ ನೋಡಿದ್ರೂ ಬೇಸರವಿಲ್ಲದೆ ಮನೆ ಕೆಲಸ ಮಾಡುವ ಮಹಿಳೆ ಆರ್ಥಿಕ ಸುರಕ್ಷತೆ ಬಯಸಿದ್ರೆ ಅದು ಮಹಾ ಅಪರಾಧ. ಇನ್ನೊಂದ್ಕಡೆ ಕೆಲಸ ಮಾಡುವ ಮಹಿಳೆಯನ್ನು ಮಹಾತ್ವಾಕಾಂಕ್ಷಿ, ಸ್ವತಂತ್ರ ಮಹಿಳೆ ಎಂದು ಬಾಯಲ್ಲಿ ಹೊಗಳ್ತಾರೆ. ಆಕೆ ಆತ್ಮವಿಶ್ವಾಸ ಹೊಂದಿದವಳು, ಸಾಧಕಿ, ಆರ್ಥಿಕವಾಗಿ ನೆರವಾಗಬಲ್ಲಳು ಎಂದು ಆಕೆಯನ್ನು ಬಿಂಬಿಸಿದ್ರೂ ಅದು ಕ್ಷಣಿಕ ಮಾತ್ರ. ಪುರುಷ ತನ್ನ ಪೂರ್ಣ ಸಮಯದವರೆಗೆ ವೃತ್ತಿ ಜೀವನ ಮುನ್ನಡೆಸುತ್ತಾನೆ. ಆದ್ರೆ ಮಹಿಳೆ ವಿಷ್ಯದಲ್ಲಿ ಆಕೆ ವೃತ್ತಿ ಜೀವನ ಆಕೆಯ ಕುಟುಂಬದ ಮೇಲೆ ಪರಿಣಾಮ ಬೀರುವವರೆಗೆ ಮಾತ್ರ ಸೀಮಿತ. ಆಕೆಯನ್ನು ಪ್ರಗತಿಯ ಸಂಕೇತ, ಮಹಾತ್ವಾಕಾಂಕ್ಷಿ ಎಂದೆಲ್ಲ ಹೇಳೋದು ಆಕೆಯ ಕೆಲಸದಿಂದ ಕುಟುಂಬಕ್ಕೆ ಅಡ್ಡಿಯಾಗದವರೆಗೆ ಮಾತ್ರ. ಊಟ ಕಟ್ಟಲು ಸಮಯವಿಲ್ಲ, ಬಡ್ತಿ ಅಂತ ಪರ ಊರಿಗೆ ಹೋಗ್ಬೇಕು ಎಂದಾಗ, ಕುಟುಂಬಕ್ಕಿಂತ ಕೆಲಸ ಮುಖ್ಯವೇ ಎಂಬ ಪ್ರಶ್ನೆ ಕೇಳಿ ಬರುತ್ತೆ.
ತಾಯಿ ತನ್ನ ಗಂಡು ಮಗುವಿಗೆ ಈ ಗುಣಗಳನ್ನು ಕಲಿಸಿದರೆ, ಭವಿಷ್ಯದಲ್ಲಿ ಮಹಿಳೆಯ ಮೇಲೆ
ಅವನು ಮಾಡುವ ಕೆಲಸ ಯಾವಾಗ್ಲೂ ಕೆಲಸವೇ. ಅದೇ ಆಕೆ ಮಾಡುವ ಕೆಲಸ ಹವ್ಯಾಸ. ಸಂಪಾದನೆ ಮಾಡ್ಬೇಕು ಆದ್ರೆ ವೃತ್ತಿ ಜೀವನಕ್ಕೆ ಆದ್ಯತೆ ನೀಡ್ಬಾರದು, ಆರ್ಥಿಕವಾಗಿ ಅವಲಂಬಿತಾಗಿರ್ಬಾರದು ಆದ್ರೆ ಮನೆಯಲ್ಲಿ ಇರಬೇಕು, ಮನೆಯನ್ನು ನಿರ್ವಹಿಸುವ ಜೊತೆಗೆ ಹಣ ಸಂಪಾದನೆ ಮಾಡ್ಬೇಕು. ಒಟ್ಟಿನಲ್ಲಿ ಒಬ್ಬ ಸೂಪರ್ ವುಮೆನ್ ಈಗಿನ ಪುರುಷರಿಗೆ ಬೇಕು. ಆಕೆ ಸಾಧುವಿನಂತೆ ಧೈರ್ಯ, ಇಡೀ ದಿನ ಕೆಲಸ ಮಾಡುವ ಶಕ್ತಿ, ಎಲ್ಲವನ್ನೂ ನಿಭಾಯಿಸುವ ತಾಳ್ಮೆ ಹೊಂದಿರಬೇಕು. ಇಲ್ಲಿ ಪುರುಷರು ಮಾತ್ರವಲ್ಲ ಮಹಿಳೆಯರ ನಿರ್ಧಾರ ಕೂಡ ಮುಖ್ಯವಾಗುತ್ತದೆ. ಪುರುಷರು ಏನು ಬಯಸ್ತಾರೆ ಎನ್ನುವುದಕ್ಕಿಂತ ಮಹಿಳೆ ಏನು ಬಯಸ್ತಾಳೆ ಎಂಬುದು ಆಕೆಗೆ ಸ್ಪಷ್ಟವಾಗಿರಬೇಕು. ಆಗ್ಲೇ ಸಮಾಜದಲ್ಲಿ ಬದಲಾವಣೆ ಸಾಧ್ಯ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.