MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Relationship
  • ಈಗಷ್ಟೇ ಮದುವೆಯಾದ ಜೋಡಿಗಳು ಈ ರೀತಿಯಾಗಿ ವ್ಯಾಲೆಂಟೈಲ್ಸ್ ಡೇ ಸೆಲೆಬ್ರೇಟ್ ಮಾಡಿ

ಈಗಷ್ಟೇ ಮದುವೆಯಾದ ಜೋಡಿಗಳು ಈ ರೀತಿಯಾಗಿ ವ್ಯಾಲೆಂಟೈಲ್ಸ್ ಡೇ ಸೆಲೆಬ್ರೇಟ್ ಮಾಡಿ

ನೀವು ಈಗಷ್ಟೇ ಮದುವೆಯಾಗಿದ್ದೀರಾ? ಸದ್ಯದಲ್ಲೇ ವ್ಯಾಲೆಂಟೈನ್ಸ್ ಡೇ ಬರುತ್ತಿದೆ. ಈ ದಿನವನ್ನು ಇಬ್ಬರು ಜೊತೆಯಾಗಿ ಹೇಗೆ ವಿಶೇಷವಾಗಿ ಸೆಲೆಬ್ರೇಟ್ ಮಾಡಬಹುದು ಎಂದು ನೀವು ಯೋಚನೆ ಮಾಡುತ್ತಿದ್ದರೆ, ನಿಮಗಾಗಿ ಒಂದಷ್ಟು ಟಿಪ್ಸ್ ಇಲ್ಲಿವೆ.  

3 Min read
Pavna Das
Published : Feb 12 2025, 10:47 AM IST| Updated : Feb 12 2025, 11:17 AM IST
Share this Photo Gallery
  • FB
  • TW
  • Linkdin
  • Whatsapp
18
According vastu give these gifts to your love on valentines day

According vastu give these gifts to your love on valentines day

ಫೆಬ್ರವರಿ ಬರುತ್ತಿದ್ದಂತೆ, ಕಪಲ್ಸ್ ಹೆಚ್ಚು ಉತ್ಸುಕರಾಗುತ್ತಾರೆ. ಯಾಕಂದ್ರೆ ಫೆಬ್ರುವರಿ ಅಂದ್ರೆ ಪ್ರೇಮಿಗಳ ದಿನ. ಪ್ರೇಮಿಗಳ ದಿನವು ಪ್ರೀತಿಯ ದಿನ (Valentines Day). ಇದು ಪ್ರೀತಿ ಮಾಡೋರಿಗೆ ಹಬ್ಬದಷ್ಟೇ ಸ್ಪೆಷಲ್ ಆಗಿರುತ್ತೆ. ಅದರಲ್ಲೂ ವಿಶೇಷವಾಗಿ ಹೊಸದಾಗಿ ಮದುವೆಯಾದ ದಂಪತಿಗಳು ಈ ದಿನವನ್ನು ಇನ್ನಷ್ಟು ವಿಶೇಷವಾಗಿಸಲು ಪ್ರಯತ್ನಿಸುತ್ತಾರೆ. ಮದುವೆಯ ನಂತರ ದಂಪತಿಗಳು ತಮ್ಮ ಮೊದಲ ವ್ಯಾಲೆಂಟೈನ್ಸ್ ಡೇಯನ್ನು ತುಂಬಾ ಮೆಮೊರೇಬಲ್ ಮತ್ತು ರೋಮ್ಯಾಂಟಿಕ್ ಮಾಡಲು ಬಯಸುತ್ತಾರೆ.
 

28

ನಿಮ್ಮ ಸಂಗಾತಿಗೆ ತುಂಬಾನೆ ಸ್ಪೆಷಲ್ ಫೀಲ್ ಮೂಡಿಸಲು ನೀವು ಬಯಸುವ ಕ್ಷಣ ಇದು. ಇದರೊಂದಿಗೆ, ನಿಮ್ಮ ಸಂಬಂಧ ಕೂಡ ಮತ್ತಷ್ಟು ಗಾಢವಾಗಿ ಬೆಳೆಯುತ್ತೆ. ವೈವಾಹಿಕ ಜೀವನದ (married life) ಸುಂದರವಾದ ಆರಂಭಕ್ಕಾಗಿ ಪ್ರೇಮಿಗಳ ದಿನವನ್ನು ರೊಮ್ಯಾಂಟಿಕ್ ಆಗಿ ಆಚರಿಸಲು, ಈ ವಿಶೇಷ ದಿನದಂದು ಹೊಸ ಅಡ್ವೆಂಚರ್ ಟ್ರೈ ಮಾಡಿ, ಇದರ ಜೊತೆಗೆ ಒಟ್ಟಿಗೆ ಗುಣಮಟ್ಟದ ಸಮಯವನ್ನು ಕಳೆಯಿರಿ.
 

38

ಪ್ರೇಮಿಗಳ ದಿನವನ್ನು ಪ್ಲ್ಯಾನ್ ಮಾಡುವಾಗ, ನಿಮ್ಮ ಸಂಗಾತಿಯ ಆದ್ಯತೆಗಳು ಮತ್ತು ಭಾವನೆಗಳಿಗೆ ಪ್ರಾಮುಖ್ಯತೆ ನೀಡಿ. ನಿಮ್ಮ ಪ್ರೀತಿಯನ್ನು ತೋರಿಸಲು ನಿಮಗೆ ತುಂಬಾ ದುಬಾರಿ ಉಡುಗೊರೆಗಳು ಅಥವಾ ಪ್ಲ್ಯಾನ್ ಅಗತ್ಯವಿಲ್ಲ; ಬದಲಾಗಿ, ನೀವು ನಿಮ್ಮ ಪ್ರೀತಿಯನ್ನು ಸಣ್ಣ ವಿಷಯಗಳಲ್ಲಿಯೂ ವ್ಯಕ್ತಪಡಿಸಬಹುದು. ಪ್ರೇಮಿಗಳ ದಿನವನ್ನು ಇನ್ನಷ್ಟು ವಿಶೇಷವಾಗಿಸಲು ಕೆಲವು ಅಗತ್ಯ ವಿಚಾರಗಳನ್ನು ಎಕ್ಸ್ ಪ್ಲೋರ್ ಮಾಡೋಣ ಬನ್ನಿ.
 

48

ಡೇಟ್ ನೈಟ್ ಪ್ಲ್ಯಾನ್ ಮಾಡಿ
ಪ್ರತಿ ಜೋಡಿಗಳ ಬಂಧವು ವಿಭಿನ್ನವಾಗಿರುತ್ತದೆ. ನಿಮ್ಮಿಬ್ಬರ ಆದ್ಯತೆಗಳ ಪ್ರಕಾರ ಡೇಟ್ ನೈಟ್ (date night) ಕಸ್ಟಮೈಸ್ ಮಾಡಿ. ನಿಮ್ಮ ಸಂಗಾತಿಯ ನೆಚ್ಚಿನ ಸ್ಥಳದಲ್ಲಿ ಡಿನ್ನರ್ ಪ್ಲ್ಯಾನ್ ಮಾಡಿ. ನೀವು ಮನೆಯಲ್ಲಿ ಕ್ಯಾಂಡಲ್ ಲೈಟ್ ಡಿನ್ನರ್ ಸಹ ಮಾಡಬಹುದು. ರೊಮ್ಯಾಂಟಿಕ್ ಪ್ಲೇ ಲಿಸ್ಟ್ ರೆಡಿ ಮಾಡಿ ಮತ್ತು ಹಿನ್ನೆಲೆಯಲ್ಲಿ ಸ್ಮೂತ್ ಮ್ಯೂಸಿಕ್ ಪ್ಲೇ ಮಾಡಲು ಮರೆಯಬೇಡಿ. ದಿನವನ್ನು ಇನ್ನಷ್ಟು ವಿಶೇಷವಾಗಿಸಲು, ನೀವು ಮನೆಯಲ್ಲಿ ತಯಾರಿಸಿದ ಆಹಾರ ಸೇವಿಸಬಹುದು. ನೀವಿಬ್ಬರೂ ಒಟ್ಟಿಗೆ ಸೇರಿ ಅಡುಗೆ ಮಾಡಬಹುದು ಮತ್ತು ಕ್ವಾಲಿಟಿ ಸಮಯ ಕಳೆಯಬಹುದು. ಡೇಟ್ ನೈಟ್ ಗಾಗಿ ನೀವು ವಿಶೇಷ ವೈನ್ ಸಹ ಆರ್ಡರ್ ಮಾಡಬಹುದು.

58

ಫೋಟೊ ಶೂಟ್
ಮದುವೆಯ ನಂತರ ತಮ್ಮ ಮೊದಲ ವ್ಯಾಲೆಂಟೈನ್ಸ್ ಡೇ ಆಚರಿಸುವ ಕಪಲ್ಸ್ ವ್ಯಾಲೆಂಟೈನ್ಸ್ ವಿಶೇಷ ಫೋಟೋಶೂಟ್ (special photoshoot) ಮಾಡಿಸಿ. ಈ ಸುಂದರ ಕ್ಷಣವನ್ನು ಯಾವಾಗಲೂ ನೆನಪಿಟ್ಟುಕೊಳ್ಳಲು ನೀವು ಮುದ್ದಾದ ಮತ್ತು ರೊಮ್ಯಾಂಟಿಕ್ ಫೋಟೋಶೂಟ್ ಆಯ್ಕೆ ಮಾಡಬಹುದು. ಕ್ಲಾಸಿಕ್ ಬೀಚ್ ಅಥವಾ ಗಾರ್ಡನ್ ನಂತಹ ಥೀಮ್ ಆಧಾರಿತ ಫೋಟೋಶೂಟ್ ಆರಿಸಿ. ನಿಮ್ಮ ಮದುವೆಯ ಡ್ರೆಸ್ ಅಥವಾ ಯಾವುದಾದರು ಸುಂದರ ಮ್ಯಾಚಿಂಗ್ ಡ್ರೆಸ್ ಧರಿಸಿ ಪೋಸ್ ನೀಡಿ.

68

ರೊಮ್ಯಾಂಟಿಕ್ ಸಿನಿಮಾ ಪ್ಲಾನ್
ನಿಮ್ಮಿಬ್ಬರಿಗೂ ಮೂವಿ ಅಂದ್ರೆ ತುಂಬಾನೆ ಇಷ್ಟ ಆಗಿದ್ರೆ, ನೀವು ಈ ದಿನ ರೊಮ್ಯಾಂಟಿಕ್ ಮೂವಿ ನೈಟ್ (romantic movie night) ಸೆಲೆಬ್ರೇಟ್ ಮಾಡಬಹುದು. ನೀವು ಚಲನಚಿತ್ರಗಳನ್ನು ನೋಡಲು ಹೊರಗೆ ಹೋಗಲು ಇಷ್ಟಪಡದಿದ್ದರೆ, ನೀವು ಮನೆಯಲ್ಲಿ ರೊಮ್ಯಾಂಟಿಕ್  ಮೂವಿ ನೈಟ್ ಅರೇಂಜ್ ಮಾಡಬಹುದು. ಮನೆಯನ್ನು ಚಲನಚಿತ್ರ ಮಂದಿರದಂತೆ ಸಿದ್ಧಪಡಿಸಲು ಕೆಲವು ಮೇಣದಬತ್ತಿಗಳನ್ನು ಬೆಳಗಿಸಿ, ಕೆಲವು ತಿಂಡಿಗಳನ್ನು ತಂದು ಮತ್ತು ಹಿತಕರವಾದ ಕಂಬಳಿಗಳಲ್ಲಿ ನಿಮ್ಮನ್ನು ಸುತ್ತಿಕೊಳ್ಳಿ. ಮದುವೆಯ ವೀಡಿಯೊಗಳು ಅಥವಾ ಚಿತ್ರಗಳನ್ನು ನೋಡುವ ಮೂಲಕ ಕೂಡ ನೀವು ಹಳೆಯ ನೆನಪುಗಳನ್ನು ತಾಜಾಗೊಳಿಸಬಹುದು.

78

ಉಡುಗೊರೆ ಹ್ಯಾಂಪರ್ ತಯಾರಿಸಿ 
ವ್ಯಾಲೆಂಟೈನ್ಸ್ ಡೇಯ ನಿರ್ಣಾಯಕ ಭಾಗವೆಂದರೆ ಉಡುಗೊರೆಗಳನ್ನು ನೀಡುವುದು, ಆದರೆ ವಿಶೇಷವಾದದ್ದನ್ನು ಮಾಡಲು, ನೀವು ರೆಡಿಮೇಡ್ ಉಡುಗೊರೆಗಳನ್ನು ಖರೀದಿಸುವ ಬದಲು ಉಡುಗೊರೆ ಹ್ಯಾಂಪರ್ ಅನ್ನು (Gift Hamper)ನೀವೇ ತಯಾರಿಸಬಹುದು. ನಿಮ್ಮ ಸಂಗಾತಿ ಇಷ್ಟಪಡುವ ನೆಚ್ಚಿನ ವಸ್ತುಗಳ ಸಂಗ್ರಹವನ್ನು ನೀವು ರೆಡಿ ಮಾಡಬಹುದು. ಅದಕ್ಕಾಗಿ ಚಾಕೊಲೇಟ್, ಸುಗಂಧ ದ್ರವ್ಯಗಳು, ಫೋಟೋ ಫ್ರೇಮ್, ಸ್ಕಿನ್ ಕೇರ್ ಪ್ರಾಡಕ್ಟ್ ಇತ್ಯಾದಿಗಳನ್ನು ಸೇರಿಸಬಹುದು. ಕೈಯಿಂದ ತಯಾರಿಸಿದ ಸ್ಕ್ರ್ಯಾಪ್ ಬುಕ್ ಅಥವಾ ನೀವೇ ಮಾಡಿದ ಪೈಂಟಿಂಗ್ ಸಹ ಉಡುಗೊರೆಯಾಗಿ ನೀಡಬಹುದು. 

88

ಸ್ಪಾ ಡೆ ಎಂಜಾಯ್ ಮಾಡಿ
ನೀವು ವಿಶ್ರಾಂತಿ ಮತ್ತು ಆರಾಮದಾಯಕವಾಗಿ ಪ್ರೇಮಿಗಳ ದಿನವನ್ನು ಸೆಲೆಬ್ರೇಟ್ ಮಾಡಲು ಬಯಸಿದ್ರೆ, ನೀವು ಮನೆಯಲ್ಲಿ ಸ್ಪಾ ಡೇಟ್ ಪ್ಲ್ಯಾನ್ ಮಾಡಬಹುದು. ನೀವು ಪರಸ್ಪರ ಮಸಾಜ್ ಮಾಡಬಹುದು. ಸುಂದರ ಮತ್ತು ರೊಮ್ಯಾಂಟಿಕ್ ವಾತಾವರಣವನ್ನು ಸೃಷ್ಟಿಸಲು ಅರೋಮಾಥೆರಪಿ ಕ್ಯಾಂಡಲ್ ಗಳನ್ನು ಅರೇಂಜ್ ಮಾಡಬಹುದು. ಮಸಾಜ್ ಗೆ ಎಸೆನ್ಶಿಯಲ್ ಆಯಿಲ್ ಬಳಸಿ. ಒಟ್ಟಿಗೆ ಬೆಚ್ಚಗಿನ ಸ್ನಾನ ಮಾಡಿ ಮತ್ತು ಸಂಗೀತವನ್ನು ನುಡಿಸಿ. ಪ್ರೇಮಿಗಳ ದಿನದಂದು, ನಿಮ್ಮ ಸಂಗಾತಿಗೆ ವಿಶೇಷ ಭಾವನೆ ಮೂಡಿಸಲು ಪ್ರಯತ್ನಿಸಿ ಮತ್ತು ಈ ದಿನವನ್ನು ಸ್ಮರಣೀಯವಾಗಿಸಿ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ವ್ಯಾಲೆಂಟೈನ್ಸ್ ಡೇ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved