Baby Care : ಮನೆಯ ಈ ವಸ್ತು ಮಕ್ಕಳ ಆಟಿಕೆಯಾಗದಿರಲಿ

Published : Jun 03, 2022, 02:44 PM IST
 Baby Care : ಮನೆಯ ಈ ವಸ್ತು ಮಕ್ಕಳ ಆಟಿಕೆಯಾಗದಿರಲಿ

ಸಾರಾಂಶ

ಮಕ್ಕಳ ಕಣ್ಮುಂದೆ ಯಾವುದು ಕಂಡ್ರೂ ಅವರಿಗೆ ಬೇಕು. ಹೊಸ ವಸ್ತು ಕಾಣ್ತಿದ್ದಂತೆ ಅದನ್ನು ಹಿಡಿಯಲು ಓಡ್ತವೆ. ಅದು ಕೈಗೆ ಸಿಗ್ತಿದ್ದಂತೆ ಅದನ್ನು ಬಾಯಿಗೆ ಹಾಕಿಕೊಳ್ತವೆ. ಆದ್ರೆ ಎಲ್ಲ ವಸ್ತುಗಳು ಮಕ್ಕಳಿಗೆ ಒಳ್ಳೆಯದಲ್ಲ.  

ಮನೆ (Home) ತುಂಬ ಆಟ (Game) ದ ಸಾಮಾನುಗಳಿದ್ದರೂ ಮಕ್ಕಳ (Children) ಗಮನ ಮಾತ್ರ ಬೇರೆ ವಸ್ತುವಿನ ಮೇಲಿರುತ್ತದೆ. ಮಕ್ಕಳಿಗಾಗಿ ನೀವು ಎಷ್ಟೇ ಹೊಸ ಹೊಸ ಆಟಿಕೆಗಳನ್ನು ತನ್ನಿ. ಮಕ್ಕಳು ಸ್ವಲ್ಪ ಸಮಯ ಅದನ್ನು ಆಡಿ ನಂತ್ರ ಬಿಸಾಕ್ತಾರೆ. ಈವರೆಗೂ ಆಡಿರದ ಮನೆ ವಸ್ತುಗಳ ಮೇಲೆ ಅವರ ಗಮನ ಸದಾ ಇರುತ್ತದೆ. ಪ್ರತಿ ವಸ್ತುಗಳನ್ನು ಬಾಯಿಗೆ ಹಾಕುವ ಅಭ್ಯಾಸ ಕೂಡ ಮಕ್ಕಳಿಗಿರುತ್ತದೆ. ಆಟಿಕೆ ಬಿಟ್ಟು ಮನೆ ವಸ್ತುಗಳನ್ನು ನೀಡುವಂತೆ ಮಕ್ಕಳು ಗಲಾಟೆ ಮಾಡಿದಾಗ, ಪಾಲಕರು ಅದಕ್ಕೆ ಕಾಂಪ್ರೋಮೈಸ್ ಆಗ್ತಾರೆ. ಮಕ್ಕಳನ್ನು ಸುಮ್ಮನಾಗಿಸಲು ಮನೆ ವಸ್ತುಗಳನ್ನು ನೀಡ್ತಾರೆ. ಆದ್ರೆ ಮಕ್ಕಳಿಗೆ ನೀಡುವ ಈ ವಸ್ತುಗಳ ಅವರ ಹಲ್ಲು ಮುರಿಯಬಹುದು. ಅಲ್ಲದೆ ಇನ್ನೂ ಅನೇಕ ಅನಾರೋಗ್ಯ ಮತ್ತು ಸಮಸ್ಯೆಗೆ ಕಾರಣವಾಗಬಹುದು. ಮಕ್ಕಳು ಅಳ್ತವೆ ಎನ್ನುವ ಕಾರಣಕ್ಕೆ ಮಕ್ಕಳಿಗೆ ಎಲ್ಲ ವಸ್ತುಗಳನ್ನು ನೀಡ್ಬಾರದು. ಇಂದು ಮಕ್ಕಳಿಗೆ ಯಾವ ವಸ್ತುವನ್ನು ಆಡಲು ಕೊಡಬಾರದು ಎಂಬುದನ್ನು ನಾವು ಹೇಳ್ತೇವೆ.

ಆಟಕ್ಕಾಗಿ ಮಕ್ಕಳಿಗೆ ನೀಡ್ಬೇಡಿ ಈ ವಸ್ತು : 

ಟಿವಿ ರಿಮೋಟ್ : ಬಹುತೇಕ ಮಕ್ಕಳು ಟಿವಿ ರಿಮೋಟ್ ಹಿಡಿದುಕೊಂಡು ಆಟವಾಡಲು ಇಷ್ಟಪಡ್ತಾರೆ. ಮಕ್ಕಳು ರಿಮೋಟ್‌ನ ಬ್ಯಾಟರಿ ಭಾಗವನ್ನು ಸಹ ತಮ್ಮ ಬಾಯಿಗೆ ಹಾಕ್ತಾರೆ. ಇದರಿಂದಾಗಿ ಹಾನಿಕಾರಕ ಸೂಕ್ಷ್ಮಜೀವಿಗಳು ಮತ್ತು ರಾಸಾಯನಿಕಗಳು ಅವರ ದೇಹವನ್ನು ಪ್ರವೇಶಿಸುತ್ತವೆ. ಮಗುವು ಬ್ಯಾಟರಿಯ ಸಣ್ಣ ಗುಂಡಿಗಳನ್ನು ಸಹ ನುಂಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಟಿವಿ ರಿಮೋಟನ್ನು ಮಕ್ಕಳಿಗೆ ನೀಡ್ಬೇಡಿ.  

ಕೀಲಿಗಳು : ಕೀಲಿಗಳು ಮಕ್ಕಳನ್ನು ಆಕರ್ಷಿಸುತ್ತವೆ. ನಾಲ್ಕೈದು ಕೀಲಿ ಒಟ್ಟಿಗೆ ಇದ್ದರೆ ಅದರಿಂದ ಬರುವ ಶಬ್ಧ ಮಕ್ಕಳಿಗೆ ಇಷ್ಟವಾಗುತ್ತದೆ. ಕೀಲಿಗಳನ್ನು ಹಿತ್ತಾಳೆಯಿಂದ ಮಾಡಿರುತ್ತಾರೆ. ಸ್ವಲ್ಪ ಪ್ರಮಾಣದ ಸೀಸವನ್ನು ಸೇರಿಸಿರುತ್ತಾರೆ. ಇದು ಮಗುವಿನ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಕೀಯನ್ನು ಬಾಯಿಗೆ ಹಾಕುವುದ್ರಿಂದ ಬಾಯಿಗೆ ಗಾಯವಾಗುವ ಸಾಧ್ಯತೆಯಿರುತ್ತದೆ. ಅದನ್ನು ಜಗಿಯಲು ಪ್ರಯತ್ನಿಸಿದಾಗ ಹಲ್ಲು ಮುರಿಯುವ ಸಂಭವವಿದೆ.

Parent Shaming: ಪೋಷಕರ ಮೇಲೆ ಮಾತ್ರವಲ್ಲ ಮಕ್ಕಳ ಮೇಲೂ ಕೆಟ್ಟ ಪರಿಣಾಮ !

ಮೊಬೈಲ್ : ಮೊಬೈಲ್ ಫೋನ್ ಗಳು ರೋಗಾಣುಗಳ ನೆಲೆಯಾಗಿದೆ. ಮೊಬೈಲನ್ನು ನಾವು ಎಲ್ಲೆಲ್ಲಿಯೋ ಇಟ್ಟಿರುತ್ತೇವೆ. ಅನೇಕರು ಶೌಚಾಲಯಕ್ಕೆ ಮೊಬೈಲ್ ತೆಗೆದುಕೊಂಡು ಹೋಗ್ತಾರೆ. ಮೊಬೈಲ್ ನಲ್ಲಿ ಸಾಕಷ್ಟು ಕೀಟಾಣುಗಳಿರುತ್ತವೆ. ಮಕ್ಕಳು ಮೊಬೈಲನ್ನು ಬರೀ ಕೈನಲ್ಲಿ ಆಡುವುದಿಲ್ಲ, ಅದನ್ನು ಬಾಯಿಗಿಟ್ಟುಕೊಳ್ಳುತ್ತವೆ. ಇದರಿಂದಾಗಿ ಹಾನಿಕಾರಕ ಸೂಕ್ಷ್ಮಜೀವಿಗಳು ಅವನ ದೇಹವನ್ನು ಪ್ರವೇಶಿಸುತ್ತವೆ. ಇದ್ರಿಂದ ಮಕ್ಕಳಿಗೆ ಹೊಟ್ಟೆ ನೋವು, ಅತಿಸಾರ ಸೇರಿದಂತೆ ಅನಾರೋಗ್ಯ ಕಾಡುವ ಸಾಧ್ಯತೆ ಹೆಚ್ಚಿರುತ್ತದೆ. 

ಐಪ್ಯಾಡ್ ಮತ್ತು ಟ್ಯಾಬ್ಲೆಟ್ : ಈ ಸಾಧನಗಳು ಮಕ್ಕಳಿಗಾಗಿ ಅನೇಕ ಅಪ್ಲಿಕೇಶನ್‌ಗಳನ್ನು ಹೊಂದಿವೆ. ಆದರೆ ಅವುಗಳನ್ನು ಮಕ್ಕಳಿಂದ ದೂರವಿಡುವುದು ಉತ್ತಮ. ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ತಮ್ಮ ಶೈಕ್ಷಣಿಕ ವಿಷಯವನ್ನು ಅರ್ಥಮಾಡಿಕೊಳ್ಳುವುದಿಲ್ಲ. ಅದೇ ಸಮಯದಲ್ಲಿ, ಹೆಚ್ಚಿನ ಪರದೆಯ ಸಮಯವು ಚಿಕ್ಕ ಮಕ್ಕಳಿಗೆ ಹಾನಿಕಾರಕವಾಗಿದೆ. ಅನೇಕ ಪಾಲಕರು ಮಕ್ಕಳನ್ನು ಸುಮ್ಮನಿರಿಸಲು ಟ್ಯಾಬ್ಲೆಟ್ ನೀಡ್ತಾರೆ. ಮಕ್ಕಳು ಅದನ್ನು ನೋಡ್ತಾ ಊಟ, ಹಾಲು ಸೇವನೆ ಮಾಡ್ತಾರೆ. ಇದು ಬರೀ ಕಣ್ಣಿಗೆ ಮಾತ್ರವಲ್ಲ ಮಕ್ಕಳ ಮೆದುಳಿನ ಮೇಲೂ ಪರಿಣಾಮ ಬೀರುತ್ತದೆ.

ಮಕ್ಕಳ ಜೊತೆ ಈ ರೀತಿ ನಡೆದುಕೊಂಡ್ರೆ ಮಾನಸಿಕವಾಗಿ ಕುಗ್ಗಿ ಹೋಗ್ತಾರೆ !

ಮಾರ್ಕರ್ ಪೆನ್ : ಮಾರ್ಕರ್‌ಗಳು ಮತ್ತು ಪೆನ್ನುಗಳನ್ನು ಸಹ ಮಕ್ಕಳಿಗೆ ನೀಡಬಾರದು. ಅವು ವಿಷಕಾರಿಯಲ್ಲ ಆದರೆ ಮಗುವಿನ ಕಣ್ಣು ಅಥವಾ ಬಾಯಿಗೆ ಗಾಯವನ್ನು ಉಂಟುಮಾಡಬಹುದು. ಕೆಲ ಮಕ್ಕಳು ಅಲ್ಲಲ್ಲಿ ಚುಚ್ಚಿಕೊಂಡು ಗಾಯ ಮಾಡಿಕೊಳ್ಳುತ್ತಿರುತ್ತಾರೆ.  

ಸಣ್ಣ ವಸ್ತು, ನಾಣ್ಯ : ಮನೆಯಲ್ಲಿರುವ ಸಣ್ಣಪುಟ್ಟ ವಸ್ತುಗಳು ಕೂಡ ಅಪಾಯಕಾರಿ. ಬಟನ್, ನಾಣ್ಯಗಳನ್ನು ಮಕ್ಕಳಿಗೆ ಆಡಲು ನೀಡಬಾರದು. ಮಕ್ಕಳು ಅದನ್ನು ಬಾಯಿಗೆ ಹಾಕುತ್ತಾರೆ. ಇದು ಗಂಟಲಿನಲ್ಲಿ ಸಿಕ್ಕಿ ಬೀಳುತ್ತದೆ. ಇದ್ರಿಂದ ಪ್ರಾಣಕ್ಕೆ ಅಪಾಯ.
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಸುಂದರ ದೇಶದಲ್ಲಿ ಬಾಡಿಗೆಗೆ ಸಿಗ್ತಾನೆ ಗಂಡ, ಗಂಟೆಗೆ ಇಷ್ಟಿದೆ ಸಂಬಳ!
ಮದುವೆ ಮುಂದೂಡಿಕೆ ಆದ 12 ದಿನಗಳ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಮೊದಲ ಪೋಸ್ಟ್‌ ಮಾಡಿದ ಸ್ಮೃತಿ, ಕೈಯಲ್ಲಿದ್ದ ರಿಂಗ್‌ ಮಾಯ!