ಜಾಕಿ ಭೇಟಿ ಮಾಡಿದ್ದೀರಾ? ಆಟೋ ಚಾಲಕನ ಜೊತೆ ಬೆಂಗಳೂರು ಸುತ್ತುವ ಮುದ್ದಿನ ನಾಯಿ

Published : Feb 24, 2025, 09:10 PM ISTUpdated : Feb 24, 2025, 09:21 PM IST
ಜಾಕಿ ಭೇಟಿ ಮಾಡಿದ್ದೀರಾ? ಆಟೋ ಚಾಲಕನ ಜೊತೆ ಬೆಂಗಳೂರು ಸುತ್ತುವ ಮುದ್ದಿನ ನಾಯಿ

ಸಾರಾಂಶ

ಬೆಂಗಳೂರಿನ ಈ ಜಾಕಿ ಆಟೋದಲ್ಲಿ ಪ್ರಯಾಣಿಸಿದ್ದೀರಾ? ಆಟೋ ಚಾಲಕನ ಜೊತೆ ಆತನ ಮುದ್ದಿನ ನಾಯಿ ಕೂಡ ಇಡೀ ಬೆಂಗಳೂರು ಪ್ರಯಾಣ ಮಾಡುತ್ತೆ. ಮಾಲೀಕ ಹಾಗೂ ನಾಯಿಯ ವಿಶೇಷ ಜರ್ನಿ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಹಲವರು ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು(ಫೆ.24) ಸಿಲಿಕಾನ್ ಸಿಟಿಯಲ್ಲಿ ಪೀಕ್ ಬೆಂಗಳೂರು ಮೂಮೆಂಟ್ ಕ್ಷಣಗಳನ್ನು ಭಾರಿ ಸದ್ದು ಮಾಡುತ್ತದೆ. ಇದರ ನಡುವೆ ಹೃದಯಸ್ವರ್ಶಿ ಘಟನೆಯೊಂದು ಎಲ್ಲರ ಮನಸ್ಸು ತಟ್ಟಿದೆ. ನೀವು ಎಂದಾದರೂ ಈ ಜಾಕಿ ಭೇಟಿಯಾಗಿದ್ದೀರಾ? ಬೆಂಗಳೂರಿನ ಆಟೋ ಚಾಲಕನ ತನ್ನ ಮುದ್ದಿನ ನಾಯಿ ಜೊತೆ ಪ್ರತಿ ದಿನ ಕೆಲಸ ಆರಂಭಿಸುತ್ತಾನೆ. ಆಟೋ ಚಾಲಕನ ಜೊತೆ ಎಲ್ಲಾ ಕಡೆ ಬಾಡಿಗೆ ತೆರಳುವಾಗಲೂ ಈ ನಾಯಿ ಸಾಥ್ ನೀಡುತ್ತದೆ. ಹಲವರು ಈ ಆಟೋದಲ್ಲಿ ಪ್ರಯಾಣ ಮಾಡಿದ್ದಾರೆ. ಈ ವೇಳೆ ಜಾಕಿ ಭೇಟಿಯಾಗಿದ್ದಾರೆ. ಇದೀಗ ಜಾಕಿ ಹಲವರ ಮುದ್ದಿನ ಕಂಪನಿಯಾಗಿದೆ. ಹೌದು, ಬೆಂಗಳೂರಿನ ಆಟೋ ಚಾಲಕ ತನ್ನ ಮುದ್ದಿನ ನಾಯಿ ಜಾಕಿಯನ್ನು ಜೊತೆಯಲ್ಲಿಟ್ಟುಕೊಂಡೇ ಪ್ರಯಾಣಿಕರಿಗೆ ಸೇವೆ ನೀಡುತ್ತಿದ್ದಾನೆ.

ಈ ನಾಯಿ ಹುಟ್ಟಿದ ನಾಲ್ಕೇ ದಿನಕ್ಕೆ ಆಟೋ ಚಾಲಕನ ಕೈ ಸೇರಿದೆ. ಕಣ್ಣು ಬಿಡುವ ಮೊದಲೇ ಈ ನಾಯಿಗೆ ಆಟೋ ಚಾಲಕನೇ ಎಲ್ಲ. ನಾಯಿಯನ್ನು ಮುದ್ದಾಗಿ ಸಾಕಿದ್ದಾನೆ. ಹಾಲು, ಊಟ, ನೀರು ಸೇರಿ ಆಹಾರ ನೀಡುವುದು ಮಾತ್ರವಲ್ಲ, ಅಷ್ಟೇ ಪ್ರೀತಿಯಿಂದ ಆರೈಕೆ ಮಾಡಿದ್ದಾನೆ. ಮುದ್ದಿನ ನಾಯಿಯನ್ನು ಮನೆಯಲ್ಲಿ ಕಟ್ಟಿ ಹಾಕಿ ತಾನು ಆಟೋ ಸೇವೆ ನೀಡಲು ಹೋಗುವುದು ಈತನಿಗೆ ಇಷ್ಟವಿಲ್ಲ. ಪ್ರೀತಿಯಿಂದ ಸಾಕಿದ ನಾಯಿಯನ್ನು ತನ್ನ ಜೊತೆಗೆ ಕರೆದುಕೊಂಡು ಹೋಗಲು ಈತ ಪ್ಲಾನ್ ಮಾಡಿದ್ದಾನೆ.

ಕೌಕೆಶಿಯನ್ ಶೆಫರ್ಡ್ ಭಾರತದಲ್ಲಿರುವ ಅತೀ ದುಬಾರಿ ನಾಯಿ,ಇದ್ರ ಮೌಲ್ಯ 20 ಬೆಂಜ್ ಕಾರಿಗೆ ಸಮ

ಇದರಂತೆ ಆಟೋ ಚಾಲಕ ತಾನು ಕುಳಿತುಕೊಳ್ಳುವ ಡ್ರೈವರ್ ಸೀಟಿನ ಪಕ್ಕದಲ್ಲಿ ನಾಯಿಗೆ ಸ್ಥಳ ಕೊಟ್ಟಿದ್ದಾನೆ. ಹೀಗಾಗಿ ಮಾಲೀಕ ಕಮ್ ಚಾಲಕ ಎಲ್ಲೆಲ್ಲಾ ಬಾಡಿಗೆ ತೆರಳುತ್ತಾನೆ, ಅಲ್ಲೆಲ್ಲಾ ಈ ನಾಯಿ ಮಾಲೀಕನಿಗೆ ಸಾಥ್ ನೀಡುತ್ತದೆ. ನಾಯಿಯನ್ನು ನೋಡಿ ಪ್ರಯಾಣಿಕರು ಪ್ರೀತಿಯಿಂದ ಮಾತನಾಡಿಸುತ್ತಾರೆ. ನಾಯಿಗೆ ತಮ್ಮ ಬಳಿ ಇದ್ದ ಬಿಸ್ಕೆಟ್ ಸೇರಿದಂತೆ ಇತರ ತಿನಿಸು ನೀಡಿ ಮುದ್ದು ಮಾಡುತ್ತಾರೆ. ಪ್ರತಿ ದಿನ ಈ ಆಟೋದಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರು ಜಾಕಿಯನ್ನು ಬೇಟಿಯಾಗಿ ಮಾತನಾಡಿಸುತ್ತಾರೆ. ಇಷ್ಟೇ ಅಲ್ಲ ಜಾಕಿ ಜೊತೆ ಫೋಟೋ ಕ್ಲಿಕ್ಕಿಸುತ್ತಾರೆ. ಮತ್ತೆ ಕೆಲವರು ನಾಯಿ ಭೇಟಿಯಾಗಲು, ಮುದ್ದು ಮಾಡಲು ಇದೇ ಆಟೋದಲ್ಲಿ  ಪ್ರಯಾಣ ಮಾಡುತ್ತಾರೆ. 

 

 

ಎಕ್ಸ್ ವೇದಿಕೆಯಲ್ಲಿ ಬೆಂಗಳೂರಿನ ವಿಶೇಷ ಆಟೋ ಚಾಲಕ ಹಾಗೂ ಆತನ ಮುದ್ದಿನ ನಾಯಿ ಜಾಕಿ ಕುರಿತು ಮಾಹಿತಿ ಹಂಚಿಕೊಳ್ಳಲಾಗಿದೆ. ದಮಯಂತಿ ಅನ್ನೋ ಎಕ್ಸ್ ಖಾತೆಯಲ್ಲಿ ಈ ಕುರಿತ ಮಾಹಿತಿ ಹಂಚಿಕೊಂಡಿದ್ದಾರೆ. ನನ್ನ ಆಟೋ ಸಹೋದರನ ಜೊತೆಯಾಲ್ಲಿ ಆತನ ಮುದ್ದಿನ ನಾಯಿ ಜಾಕಿ ಪ್ರತಿ ದಿನ ಎಲ್ಲೆಡೆ ಪ್ರಯಾಣಿಸುತ್ತದೆ. ಹುಟ್ಟಿದ ನಾಲ್ಕು ದಿನದಿಂದ ಆಟೋ ಚಾಲಕನ ಈ ಜಾಕಿಯನ್ನು ಆರೈಕೆ ಮಾಡುತ್ತಿದ್ದಾನೆ. ಇದೀಗ ಜಾಕಿ ಆಟೋ ಚಾಲಕನ ಉತ್ತಮ ಕಂಪನಿಯಾಗಿದೆ. ಇದನ್ನು ಪೀಕ್ ಬೆಂಗಳೂರು ಮೂಮೆಂಟ್ ಎಂದು ಹೇಳಬಹುದೇ ಎಂದು ಎಕ್ಸ್ ಖಾತೆಯಲ್ಲಿ ಪ್ರಶ್ನಿಸಿದ್ದಾರೆ.

ಈ ಪೋಸ್ಟ್‌ಗೆ ಹಲವರು ಕಮೆಂಟ್ ಮಾಡಿದ್ದಾರೆ. ಇದೇ ವೇಳೆ ಒಂದಷ್ಟು ಮಂದಿ ತಾವು ಜಾಕಿಯನ್ನು ಭೇಟಿಯಾಗಿರುವುದಾಗಿ ಹೇಳಿದ್ದಾರೆ. ಒಂದೆರೆಡು ಬಾರಿ ಈ ಆಟೋದಲ್ಲಿ ಪ್ರಯಾಣ ಮಾಡಿರುವುದಾಗಿ ಹೇಳಿದ್ದಾರೆ. ಜಾಕಿ ಶಾಂತ ಸ್ವಭಾವದ ನಾಯಿ. ತಾವು ಕೂಡ ಫೋಟೋ ಕ್ಲಿಕ್ಕಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಮತ್ತೆ ಕೆಲವರು ಈ ಹೃದಯಸ್ವರ್ಶಿ ಘಟನೆ ಮನಸ್ಸು ತಣ್ಣಗಾಗಿಸಿದೆ. ಈ ಪ್ರೀತಿ ಅನುಭವಸಿದರೆ ಮಾತ್ರ ಅರ್ಥವಾಗುತ್ತದೆ ಎಂದು ಒಂದಷ್ಟು ಮಂದಿ ಕಮೆಂಟ್ ಮಾಡಿದ್ದಾರೆ. ಇದು ಪೀಕ್ ಬೆಂಗಳೂರು ಅಲ್ಲ ಪೀಕ್ ಹ್ಯೂಮಾನಿಟಿ ಎಂದು ಕೆಲವರು ವಿಶ್ಲೇಷಿಸಿದ್ದಾರೆ.

ಮಾರುಕಟ್ಟೆಯಲ್ಲಿ ಬಿಟ್ಟುಹೋದ ಮಾಲೀಕನಿಗೆ 8 ಗಂಟೆ ಕಾದ ನಾಯಿ, ಮನಕಲುಕಿದ ವಿಡಿಯೋ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಸುಂದರ ದೇಶದಲ್ಲಿ ಬಾಡಿಗೆಗೆ ಸಿಗ್ತಾನೆ ಗಂಡ, ಗಂಟೆಗೆ ಇಷ್ಟಿದೆ ಸಂಬಳ!
ಮದುವೆ ಮುಂದೂಡಿಕೆ ಆದ 12 ದಿನಗಳ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಮೊದಲ ಪೋಸ್ಟ್‌ ಮಾಡಿದ ಸ್ಮೃತಿ, ಕೈಯಲ್ಲಿದ್ದ ರಿಂಗ್‌ ಮಾಯ!