
ಅಮ್ಮ- ಮಗಳು (mother- daughter) ಬಾಂಧವ್ಯದಂತೆಯೇ ಅಪ್ಪ- ಮಗಳು (father- daughter) ಬಾಂಧವ್ಯ ಕೂಡ ಮಧುರವಾದದ್ದು. ಅದರಲ್ಲಿ ತೀರ ಗಂಭೀರ ಸಮಸ್ಯೆಗಳು ಉಂಟಾಗಿದ್ದರೆ, ಮುಂದೆ ಆ ಹೆಣ್ಣುಮಕ್ಕಳು ಜೀವಮಾನದುದ್ದಕ್ಕೂ ಸಫರ್ ಆಗುತ್ತಾರೆ. ಮಾನಸಿಕವಾಗಿ ಸದಾ ಹಿಂಸಿಸುವ ಅಪ್ಪ ಸಿಕ್ಕಿದರೆ ಹೆಣ್ಣುಮಕ್ಕಳು ಬುಲೀಮಿಯಾ ಮುಂತಾದ ಹಸಿವಿನ ಕಾಯಿಲೆ ಹೊಂದುವ ಸಾಧ್ಯತೆ ಹೆಚ್ಚು ಅಂತ ಮೆಲ್ಬೋರ್ನ್ ವಿಶ್ವವಿದ್ಯಾಲಯದ ಒಂದು ಸ್ಟಡಿ ಸಾಬೀತುಪಡಿಸಿದೆ. ಅಪ್ಪಂದಿರು ಕಟುವಾಗಿದ್ದರೆ, ಹೆಣ್ಣು ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳಲಾರದವರಾಗಿದ್ದರೆ, ಹೆಣ್ಣು ಮಕ್ಕಳು ಮುಂದೆ ಜೀವನದಲ್ಲಿ ತುಂಬಾ ಯಾತನೆಗೆ ಒಳಗಾಗುತ್ತಾರೆ. ಆದರೆ ಒಳ್ಳೆಯ ತಂದೆ ಸಿಕ್ಕಿದರೆ ಹೆಣ್ಣು ಮಕ್ಕಳು ಕೂಡ ಆರೋಗ್ಯವಂತ ವ್ಯಕ್ತಿಗಳಾಗಿ ಬದುಕುತ್ತಾರೆ.
ಈ ಹಿಂದಿನ ತಲೆಮಾರಿನ ಅಪ್ಪ ಮಕ್ಕಳನ್ನು ನೋಡಿದರೆ, ಅಲ್ಲಿ ಶಿಸ್ತೇ ಪ್ರಧಾನವಾಗಿ ಕಂಡುಬರುತ್ತಿತ್ತು. ಮಕ್ಕಳು ಅಪ್ಪನಿಗೆ ಹೆದರುವುದೇ ಇತ್ತು. ಆದರೆ ಈ ಶತಮಾನದ ಆರಂಭದಿಂದ ಚಿತ್ರಣ ಬದಲಾಗಿದೆ. ಅಪ್ಪ- ಹೆಣ್ಣುಮಗಳ ನಡುವಿನ ಸಂಬಂಧ ಅಪ್ಪ- ಮಗನ ಸಂಬಂಧಕ್ಕಿಂತ ಹೆಚ್ಚು ಹಾರ್ದಿಕ, ಆಪ್ತವಾಗುತ್ತಿದೆ.
'ನಾನು ನನ್ನ ಕನಸು' ಫಿಲಂ ನೀವು ನೋಡಿರಬೇಕಲ್ಲವೇ? ಅದರಲ್ಲಿ ಮಗಳ ಮುದ್ದಿನ ತಂದೆಯಾಗಿ ಪ್ರಕಾಶ್ ರೈ ಮತ್ತು ತಂದೆಯ ಮುದ್ದಿನ ಮಗಳಾಗಿ ಅಮೂಲ್ಯರ ನಟನೆ ನಿಮ್ಮನ್ನು ತಟ್ಟಿರಬಹುದು. ಇದು ಅಪ್ಪ- ಮಗಳು ಇರುವ ಹೆಚ್ಚಿನ ಮನೆಗಳ ಕತೆಯೂ ಆಗಿರಬಹುದು ಅಲ್ಲವೇ. ಅಪ್ಪ- ಮಗಳ ಮಧುರ ಬಾಂಧವ್ಯ ಯಾವುದೇ ವ್ಯಾಖ್ಯಾನಕ್ಕೆ ನಿಲುಕದು.
ಹಾಗಿದ್ದರೆ ಅಪ್ಪ- ಮಗಳ ಸಂಬಂಧದ ಬಗ್ಗೆ ವಿಜ್ಞಾನ ಏನು ಹೇಳುತ್ತೆ? ಹೆಣ್ಣು ಮಕ್ಕಳಿಗೆ ಎಂಥ ಅಪ್ಪ ಸಿಗಬೇಕು?
- ಬೆಳವಣಿಗೆಯ ಕಾಲದಲ್ಲಿ ತನ್ನ ಎಲ್ಲ ವಿಷಯದಲ್ಲೂ ಕೇರ್ ತೆಗೆದುಕೊಳ್ಳುವ ಅಪ್ಪ ಸಿಕ್ಕಿದರೆ, ಮಗಳು ಮುಂದೆ ಎಲ್ಲರಿಗಿಂತ ಆರೋಗ್ಯವಂತಳಾಗಿ ಇರುತ್ತಾಳೆ.
- ತಮ್ಮ ಅಪ್ಪಂದಿರ ಜೊತೆ ತುಂಬಾ ಹಾರ್ದಿಕ ಸಂಬಂಧ ಹೊಂದಿರುವ ಟೀನೇಜ್ ಹೆಣ್ಣು ಮಕ್ಕಳು, ಮುಂದೆ ವ್ಯಸನಿಗಳಾಗುವ ಸಾಧ್ಯತೆ ತುಂಬಾ ತುಂಬಾ ಕಡಿಮೆ.
- ತಂದೆಯ ಜೊತೆಗೆ ಒಳ್ಳೆಯ ಸಂಬಂಧ ಹೊಂದಿಲ್ಲದಿರುವುದು, ಆತ್ಮೀಯತೆ ಹಂಚಿಕೊಳ್ಳುವ ತಂದೆಯಿಲ್ಲದಿರುವುದು ಹೆಣ್ಣು ಮಕ್ಕಳಲ್ಲಿ ಅತಿಯಾದ ಹಸಿವು, ತಿನ್ನುವ ತೊಂದರೆಗಳಾದ ಬುಲೀಮಿಯಾ ಮುಂತಾದವುಗಳಿಗೆ ಕಾರಣವಾಗುತ್ತದೆ.
Zodiac Signs: ಈ ರಾಶಿಗಳ ಮಕ್ಕಳಿಗೆ ಅಪ್ಪ ಅಂದ್ರೆ ಸ್ಟ್ರಾಂಗೆಸ್ಟ್ ಮ್ಯಾನ್
- ತಮ್ಮ ಅಪ್ಪನೊಂದಿಗೆ ಬಿಗಿಯಾದ ಬಾಂಧವ್ಯ ಹೊಂದಿರುವ ಮಗಳು ಒತ್ತಡ- ಖಿನ್ನತೆಗೆ ಒಳಗಾಗುವ ಸಂಭವ ಕಡಿಮೆ ಹಾಗೂ ಸ್ವಾಭಿಮಾನ- ಆತ್ಮಗೌರವ ಹೊಂದಿರುವಿಕೆ ಹೆಚ್ಚು.
- ತಮ್ಮ ಅಪ್ಪನೊಂದಿಗೆ ಆತ್ಮೀಯತೆ ಹೊಂದಿದ ಹೆಣ್ಣುಮಕ್ಕಳು ಒತ್ತಡವನ್ನು ಚೆನ್ನಾಗಿ ನಿಭಾಯಿಸುತ್ತಾರೆ.
- ತನ್ನ ಅಪ್ಪ ತನ್ನೊಂದಿಗೆ ಯಾವ ರೀತಿಯಲ್ಲಿ ನಡೆದುಕೊಳ್ಳುತ್ತಾನೆ ಎಂಬುದರ ಮೇಲೆ ಮಗಳ ಆತ್ಮಗೌರವ ನಿಂತಿದೆ.
- ಪ್ರೀತಿಸುವ ಅಪ್ಪ, ಕೇರ್ ತೆಗೆದುಕೊಳ್ಳೂವ ಅಪ್ಪನೇ ಕಡೆಗೂ ಮಗಳಿಗೆ ಬೇಕಾಗುವುದು. ಆಕೆಯ ಮುಂದಿನ ಜೀವನದ ಎಲ್ಲ ಸಂಬಂಧಗಳ ಮೇಲೂ ಈ ಅಪ್ಪ- ಮಗಳ ಸಂಬಂಧದ ನೆರಳು ಬಿದ್ದೇ ಬೀಳುತ್ತದೆ.
- ಚಿಕ್ಕಂದಿನಲ್ಲಿ ಅಪ್ಪ ಕುಡಿತ- ಹೊಡೆತ- ಬಡಿತದ ವರ್ತನೆಯವನಾಗಿದ್ದರೆ, ಮುಂದಿನ ಜೀವನದಲ್ಲೂ ಅದು ಮಗಳನ್ನು ಸದಾ ಸಂಬಂಧಗಳ ನಡುವೆ ಕಾಡುತ್ತಾ ಇರುತ್ತದೆ.
- ನಿಮ್ಮ ತಂದೆ ಅಥವಾ ನಿಮ್ಮ ಮಗಳ ಜೊತೆಗೆ ಕ್ವಾಲಿಟಿ ಸಮಯ ಕಳೆಯುವುದು ನಿಮ್ಮ ಭಾವನಾತ್ಮಕ ಆರೋಗ್ಯದ ಮೇಲೆ ತುಂಬಾ ಧನಾತ್ಮಕ ಪರಿಣಾಮ ಬೀರುತ್ತದೆ.
- ಒತ್ತಡವನ್ನು ನಿಭಾಯಿಸುವ ಶಕ್ತಿಗೂ ಬಾಲ್ಯದಲ್ಲಿ ಮಕ್ಕಳು ತಂದೆಯ ಜೊತೆಗೆ ಹೊಂದಿದ್ದ ಸಂಬಂಧಕ್ಕೂ ಸಂಬಂಧವನ್ನು ತಜ್ಞರು ಕಂಡುಕೊಂಡಿದ್ದಾರೆ.
- ಹೆಣ್ಣು ಮಕ್ಕಳ ವಿದ್ಯಾಭ್ಯಾಸದಲ್ಲಿ, ಅಕಾಡೆಮಿಕ್ ಸಾಧನೆಗಳಲ್ಲಿ ಉದ್ದಕ್ಕೂ ಜೊತೆಯಾಗಿ ಬರುವ ಅಪ್ಪಂದಿರನ್ನು ಹೊಂದಿರುವ ಮಕ್ಕಳು ಕಾಲೇಜುಗಳಲ್ಲಿ ಹೆಚ್ಚಿನ ಸಾಧನೆ ಮಾಡಿ ಗ್ರಾಜುಯೇಟ್‌ಗಳಾಗಿ ಹೊಮ್ಮುವ, ಹೆಚ್ಚಿನ ಸಂಬಳ ಹೊಂದುವ ಕೆಲಸಗಳನ್ನು ಪಡೆಯುವ ಸಾಧ್ಯತೆಗಳನ್ನು ಅಧ್ಯಯನಗಳು ಖಚಿತಪಡಿಸಿವೆ. ಇವರು ಕೆರಿಯರ್‌ನಲ್ಲಿ ಹೆಚ್ಚಿನ ಹೊಣೆಯನ್ನೂ ನಿರ್ವಹಿಸಲು ಶಕ್ತರಾಗಿರುತ್ತಾರೆ.
- ಇಲ್ಲಿ ತಾಯಿಯ ಪಾತ್ರವನ್ನೂ ಮರೆಯುವಂತಿಲ್ಲ. ತಂದೆ- ಮಗಳ ಬಾಂಧವ್ಯ ಉತ್ತಮ ರೀತಿಯಲ್ಲಿ ಇರಲು ತಾಯಿಯ ಪಾತ್ರವೂ ಅಗತ್ಯ. ವಿಚ್ಛೇದಿತ ಕುಟುಂಬಗಳ ಮಕ್ಕಳು, ವ್ಯಸನಿಗಳು ಹಾಗೂ ಅಪರಾಧಿಗಳಾಗುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನಗಳು ಹೇಳಿವೆ. ಹೀಗಾಗಿ ಮಗಳ ಬೆಳವಣಿಗೆಯಲ್ಲಿ ಇಬ್ಬರ ಪಾತ್ರವೂ ಪ್ರಮುಖವೇ ಎಂಬುದನ್ನು ಕಡೆಗಣಿಸಬಾರದು.
ಮಕ್ಕಳಿಗ ಗೆಲುವಿನ ಬಗ್ಗೆಯಲ್ಲ, Failure ಆದಾಗ ಮೇಲೇಳುವುದು ಹೇಳಿ ಕೊಡಿ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.