Relationship Tips: ಸುಖಿ ದಂಪತಿಗಳು ಹೀಗೆಲ್ಲ ವರ್ತಿಸೋದಿಲ್ಲ, ದಾಂಪತ್ಯ ಚೆನ್ನಾಗಿರ್ಬೇಕು ಅಂದ್ರೆ ನೀವೂ ಹೀಗೆಯೇ ಇರಿ

By Suvarna NewsFirst Published May 28, 2023, 5:25 PM IST
Highlights

ದಾಂಪತ್ಯ ಚೆನ್ನಾಗಿರಬೇಕು, ಖುಷಿಯಾಗಿರುವ ದಂಪತಿ ನಾವಾಗಬೇಕು ಎನ್ನುವುದು ಎಲ್ಲರ ಭಾವನೆ. ಆದರೆ, ಅದಕ್ಕೆ ಏನು ಬೇಕೋ ಅದನ್ನು ಮಾಡುವ ತಾಳ್ಮೆಯಾಗಲೀ, ಪ್ರಯತ್ನವಾಗಲೀ ಇರುವುದಿಲ್ಲ. ಸತತ ಪ್ರಯತ್ನ, ಬದ್ಧತೆ, ಪ್ರೀತಿ, ಪರಸ್ಪರ ಗೌರವದಿಂದ ಸುಖಿ ದಂಪತಿ ನೀವಾಗಬಹುದು. 
 

ಮದುವೆಯಾದ ಕೆಲವು ವರ್ಷಕ್ಕೇ ಪರಸ್ಪರ ಶತ್ರುಗಳಂತೆ ವರ್ತಿಸುವ ಪತಿ-ಪತ್ನಿಯರಿದ್ದಾರೆ. ಒಬ್ಬರಿಗೊಬ್ಬರು ಗೌರವಿಸಿಕೊಳ್ಳದೆ, ಮನದಲ್ಲಿ ಪ್ರೀತಿಯ ಲವಲೇಶವಿಲ್ಲದಿದ್ದರೂ ಮಕ್ಕಳಿಗಾಗಿ ಜತೆಗೆ ಜೀವಿಸುತ್ತಾರೆ. ಪತಿಗೂ ಪತ್ನಿಯ ಅದೆಷ್ಟೋ ಗುಣಗಳ ಬಗ್ಗೆ ಬೇಸರವಿಸುತ್ತದೆ, ಪತ್ನಿಗೂ ಪತಿಯ ವರ್ತನೆಗಳ ಬಗ್ಗೆ ಕೋಪವಿರುತ್ತದೆ. ಇಂತಹ ದಂಪತಿಗಳನ್ನು ಸಾಕಷ್ಟು ನೋಡಬಹುದು. ಆದರೆ, ಕೆಲವು ಜೋಡಿಗಳಿರುತ್ತಾರೆ. ಇವರೂ ಸಹ ಎಲ್ಲರಂತೆ ಕೆಲವೊಮ್ಮೆ ಮುನಿಸು ಮಾಡಿಕೊಳ್ಳುತ್ತಾರಾದರೂ ಅದು ಅಂದಿಗೇ ಕೊನೆಯಾಗುತ್ತದೆ. ಇವರನ್ನು ನೋಡಿದವರು “ಒಳ್ಳೆಯ ಜೋಡಿʼ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಭಿನ್ನಾಭಿಪ್ರಾಯಗಳನ್ನು ಗೌರವಿಸುತ್ತ ಕುಟುಂಬದಲ್ಲಿ ಸೌಹಾರ್ದ ವಾತಾವರಣ ನಿರ್ಮಿಸುತ್ತಾರೆ. ಇವರು ಸಂಬಂಧದಲ್ಲಿ ಪ್ರೀತಿ, ಗೌರವ, ಬದ್ಧತೆ, ಪ್ರಯತ್ನ ಹಾಗೂ ಉತ್ತಮ ಮಾತುಕತೆ ಇರಬೇಕು ಎನ್ನುವುದನ್ನು ತಿಳಿದಿರುತ್ತಾರೆ. ಮತ್ತು ಅದನ್ನು ಅಳವಡಿಸಿಕೊಂಡು ನಡೆಯುತ್ತಾರೆ. ಹೀಗಾಗಿ, ಇವರ ಬಾಂಧವ್ಯ ಆಳವಾಗಿ ಹಾಗೂ ಅರ್ಥಪೂರ್ಣವಾಗಿ ಇರುತ್ತದೆ. ಇವರ ಪ್ರಯತ್ನಗಳ ಫಲವಾಗಿ ಸಂತಸದಾಯಕ ಕುಟುಂಬ ಅಥವಾ ಸಾಂಗತ್ಯ ಇವರದ್ದಾಗುತ್ತದೆ. ಇಂತಹ ಜೋಡಿಗಳು ಸಾಮಾನ್ಯವಾಗಿ ಕೆಲವು ತಪ್ಪುಗಳನ್ನು ಮಾಡಲು ಹೋಗುವುದಿಲ್ಲ. ಇವು ದಾಂಪತ್ಯದ ಆರೋಗ್ಯಕ್ಕೆ ಹಾನಿ ಎನ್ನುವುದನ್ನು ಅರಿತಿರುತ್ತಾರೆ. 

ಹಿಂದಿನ ತಪ್ಪುಗಳ (Mistakes) ಲೆಕ್ಕ ಇಡುವುದಿಲ್ಲ: ಖುಷಿಯಾಗಿರುವ ಜೋಡಿಗಳು (Happy Couple) ಹಿಂದಿನ ತಪ್ಪುಗಳ ಲೆಕ್ಕ ಇಡುವುದಿಲ್ಲ. ಇತಿಹಾಸವನ್ನು (History) ಅಗೆಯಲು ಹೋಗುವುದಿಲ್ಲ. ತಮ್ಮ ಶಕ್ತಿಯನ್ನು ಉತ್ತಮ ಭವಿಷ್ಯ (Future) ನಿರ್ಮಾಣಕ್ಕಾಗಿ ವಿನಿಯೋಗಿಸುತ್ತಾರೆಯೇ ಹೊರತು ನೆಗೆಟಿವ್‌ (Negative) ನೆನಪುಗಳಲ್ಲಿ ಮುಳುಗುವುದಿಲ್ಲ. ಇದು ಸಂಬಂಧದ (Relation) ಮೇಲೆ ಪರಿಣಾಮ ಬೀರುವ ಪ್ರಮುಖ ಗುಣ. ಹಿಂದಿನ ತಪ್ಪುಗಳನ್ನು ಆಡದೇ ಇರುವುದರಿಂದ ಪರಸ್ಪರ ನಂಬಿಕೆ (Trust) ಹೆಚ್ಚುತ್ತದೆ, ಕೆಟ್ಟ ವರ್ತನೆ, ದೋಷಾರೋಪಣೆಗಳು, ಅಪನಂಬಿಕೆಗಳು ಕಡಿಮೆ ಇರುತ್ತವೆ.

Relationship Tips: ದಾಂಪತ್ಯದಲ್ಲಿ ನೀವು ಬೆಳೆಯುತ್ತಿದ್ದೀರಾ ಅಥವಾ ಸೊರಗುತ್ತಿದ್ದೀರಾ? ಹೇಗಿದ್ರೆ ಜತೆಯಾಗಿ ಬೆಳೀಬಹ್ದು ನೋಡಿ

ಕುಗ್ಗುವಂತಹ ಟೀಕೆ (Criticism) ಇಲ್ಲ:  ಮತ್ತೊಬ್ಬರನ್ನು ಕುಗ್ಗಿಸಿ (Down) ನಾವು ಗ್ರೇಟ್‌ ಎನಿಸಿಕೊಳ್ಳಬಾರದು. ದಾಂಪತ್ಯದಲ್ಲಿ (Married Life) ಹೀಗೆ ಮಾಡುವುದರಿಂದ ಸಂಬಂಧದಲ್ಲಿ ಕೊರತೆಯೊಂದು ಉಳಿದುಹೋಗುತ್ತದೆ. ಆರೋಗ್ಯಕರ ಟೀಕೆ ಇರಬೇಕು. ಆದರೆ, ಕುಗ್ಗಿಸುವಂತಹ ಟೀಕೆ ಮಾಡುವುದರಿಂದ ಪರಸ್ಪರ ವಿಶ್ವಾಸವೂ ಕುಗ್ಗುತ್ತದೆ. 

ಮೈಂಡ್‌ ಗೇಮ್ಸ್‌ (Mind Games) ನಿಂದ ದೂರ: ಒಬ್ಬರನ್ನೊಬ್ಬರು ಕೆರಳಿಸುವಂತಹ, ಪ್ರಚೋದನೆ ನೀಡುವಂತಹ ಗುಣಗಳು ಹಲವಿರುತ್ತವೆ. ಕೆಲವರನ್ನು ನೋಡಿ, ಪತಿಯನ್ನು ಕೆಣಕಲೆಂದೇ ಮಕ್ಕಳೊಂದಿಗೆ ಏನಾದರೂ ಟೀಕೆ ಮಾಡುತ್ತಾರೆ. ಅಥವಾ ಅವರನ್ನು ತಮ್ಮತ್ತ ಸೆಳೆಯಲೆಂದು ಸಣ್ಣ ತಲೆನೋವಿದ್ದರೂ ಅತಿಯಾಗಿ ಆಡುತ್ತಾರೆ. ಇವೆಲ್ಲ ಪರಸ್ಪರ ಪ್ರೀತಿ (Love) ಇಲ್ಲದಿರುವಾಗ ಉಂಟಾಗುವ ವರ್ತನೆಗಳು. ಆದರೆ, ಉತ್ತಮ ದಂಪತಿಗಳು ಇಂತಹ ಸುಳ್ಳು ಭಾವನೆಗಳನ್ನು ಸಾಕುವುದಿಲ್ಲ. 

ನಿಯಂತ್ರಿಸುವ ಪ್ರಯತ್ನವಿಲ್ಲ: ಸಂಬಂಧದಲ್ಲಿ ಮತ್ತೊಬ್ಬರನ್ನು ನಿಯಂತ್ರಿಸಲು (Control) ಯತ್ನಿಸುವುದು ಅಸುರಕ್ಷಿತ (Insecure) ಭಾವನೆಯನ್ನು ತೋರುತ್ತದೆ. ಪರಸ್ಪರ ಅರ್ಥೈಸಿಕೊಂಡಾಗ ನಿಯಂತ್ರಿಸುವ ಗುಣ ಇರುವುದಿಲ್ಲ. ನಂಬಿಕೆ, ವಿಶ್ವಾಸ, ಸಾಮರಸ್ಯದಿಂದ ಮುನ್ನಡೆಯುತ್ತಾರೆ. ಮತ್ತೊಬ್ಬರನ್ನು ನಿಯಂತ್ರಿಸಲು ಯತ್ನಿಸಿದಾಗ ಅತೃಪ್ತಿ ಹೆಚ್ಚುತ್ತದೆ. ಹಾಗೆಯೇ, ಒಬ್ಬರನ್ನೊಬ್ಬರು ನಿರ್ಲಕ್ಷಿಸುವುದೂ ಇಲ್ಲ.

ಪತಿ ಒಳ್ಳೆಯವ್ನೆ ಆದ್ರೂ ನಾನ್ಯಾಕೆ ಅನ್ಯ ಪುರುಷರ ಸಹವಾಸ ಮಾಡ್ದೆ ಗೊತ್ತಾ?

ತಮಗಾಗಿ ಸಮಯ (Care): ಉತ್ತಮ ಜೋಡಿಗಳು ತಮಗಾಗಿ ಕಾಳಜಿ ತೆಗೆದುಕೊಳ್ಳುವುದಿಲ್ಲ  ಎಂದು ಭಾವಿಸುವಂತಿಲ್ಲ. ಉತ್ತಮ ಸಾಂಗತ್ಯಕ್ಕೆ (Good Relation) ಇದೂ ಅಗತ್ಯ. ವೈಯಕ್ತಿಕ ಸ್ಪೇಸ್‌ ಇಟ್ಟುಕೊಂಡು ಗೌರವದಿಂದ ವರ್ತಿಸುತ್ತಾರೆ.

ಪರಸ್ಪರ ಮೆಚ್ಚುಗೆ (Appreciation): ಇನ್ನೊಬ್ಬರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವುದು, ಕೃತಜ್ಞತೆ (Gratitude) ಸಲ್ಲಿಸುವುದು ಹೇಳಿದಷ್ಟು ಸುಲಭವಲ್ಲ. ಇದಕ್ಕೆ ಆಧ್ಯಾತ್ಮಿಕ ಎಚ್ಚರಿಕೆಯೂ ಅಗತ್ಯವಾಗಿರುತ್ತದೆ. ಇಂಥದ್ದೊಂದು ಪ್ರಜ್ಞೆಯಿರುವ ದಂಪತಿಗಳು ಪರಸ್ಪರ ಕೃತಜ್ಞರಾಗಿದ್ದು, ಅಭಿವೃದ್ಧಿ ಹೊಂದುತ್ತಾರೆ.

ಸಿಟ್ಟು, ದ್ವೇಷ (Grudge)ವಿಲ್ಲ, ಕ್ಷಮೆಯೇ (Forgive) ಪರಿಹಾರ: ಹಿಂದಿನ ಯಾವುದೇ ಘಟನೆಗೆ ಸಂಬಂಧಿಸಿ ಸಂಗಾತಿಯ ಮೇಲೆ ಹಗೆ ಅಥವಾ ದ್ವೇಷ ಸಾಧಿಸುವುದರಿಂದ ಮನಸ್ಸು ಖುಷಿಯಾಗಿರಲು ಸಾಧ್ಯವಿಲ್ಲ. ಇಂತಹ ದಂಪತಿಗಳಲ್ಲಿ ಖುಷಿ ಇರಲು ಸಾಧ್ಯವಿಲ್ಲ. ದೊಡ್ಡ ಮನಸ್ಸಿನಿಂದ ಕ್ಷಮೆ ನೀಡುವುದು ನೆಮ್ಮದಿಗೆ ಕಾರಣವಾಗುತ್ತದೆ. ಖುಷಿಯಾಗಿರುವ ದಂಪತಿಗಳು ಪರಸ್ಪರ ಕ್ಷಮಿಸುವ ಗುಣ ಬೆಳೆಸಿಕೊಳ್ಳುತ್ತಾರೆ.

click me!