
ನೀವು ಅತಿಯಾಗಿ ಕಾಳಜಿ ವಹಿಸುವ ಹುಡುಗಿ ಇತ್ತೀಚೆಗೆ ನಿಮ್ಮನ್ನು ನೆಗ್ಲೆಕ್ಟ್ ಮಾಡುತ್ತಿದ್ದಾಳೆ ಎಂದು ಅನಿಸೋಕೆ ಶುರು ಆಗಿದ್ಯಾ? ಇದರಷ್ಟು ನೋವು ಕೊಡುವ ವಿಚಾರ ಬೇರೊಂದಿಲ್ಲ. ಅದರಿಂದಾಗಿ ಶುರುವಾದ ವಿಚಾರಗಳು ಆಕೆ ಬೇರೊಬ್ಬರೊಂದಿಗೆ ಸ್ನೇಹ ಹೊಂದಿದ್ದಾಳೆಯೇ ಎಂದು ಚಿಂತೆ ಮಾಡುವಲ್ಲಿಗೆ ಬಂತು ನಿಂತಿರುತ್ತವೆ. ಸಿಕ್ಕಾಪಟ್ಟೆ ನೆಗೆಟಿವ್ ಆಲೋಚನೆಗಳಿಂದ ಬಳಲುವಂತೆ ಆಗುತ್ತದೆ. “ಆಕೆ ಯಾಕಾಗಿ ನಿರ್ಲಕ್ಷ್ಯ ಮಾಡುತ್ತಿದ್ದಾಳೆ, ಮತ್ತೆ ಆಕೆಯನ್ನು ಮನವೊಲಿಸುವುದು ಹೇಗೆ? ಎನ್ನುವ ಪ್ರಶ್ನೆಗಳು ಬಸವಳಿಸುವಂತೆ ಮಾಡುತ್ತವೆ. ಅದರ ಬದಲು ಒಂದು ಬಾರಿ ನಿಮ್ಮ ವರ್ತನೆ, ಗುಣಗಳ ಮೇಲೆ ಕಣ್ಣಾಡಿಸಬಹುದು. ಏಕೆಂದರೆ, ನಿಮಗೇ ಗೊತ್ತಿಲ್ಲದೆ ನೀವು ಮಾಡುವ ಕೆಲವು ವರ್ತನೆಗಳು, ನಿಮ್ಮ ಗುಣಗಳು ಆಕೆಯನ್ನು ಸಿಕ್ಕಾಪಟ್ಟೆ ಇರಿಟೇಟ್ ಮಾಡಿರಬಲ್ಲವು. ಎಷ್ಟೇ ಹೇಳಿದರೂ ಸುಧಾರಿಸಿಕೊಳ್ಳುವುದಿಲ್ಲ ಎನ್ನುವ ಭಾವನೆ ಮೂಡಿ ಆಕೆ ನಿಮ್ಮನ್ನು ನಿರ್ಲಕ್ಷ್ಯ ಮಾಡುತ್ತಿರಬಹುದು. ಹುಡುಗಿಯರು ತಮ್ಮನ್ನು ಪ್ರೀತಿಸುವವರೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುವುದಿಲ್ಲ. ಆದರೂ ಆಕೆ ಹೀಗೆ ಮಾಡುತ್ತಿದ್ದಾಳೆ ಎಂದರೆ ನಿಮ್ಮನ್ನು ನೀವು ಅವಲೋಕನ ಮಾಡಿಕೊಳ್ಳುವುದು ಸರಿಯಾದ ಮಾರ್ಗ. ಕೆಟ್ಟದಾಗಿ ಯೋಚನೆ ಮಾಡಿ, ಬಳಿಕ ಪಶ್ಚಾತ್ತಾಪ ಪಡುವ ಬದಲು ಇದು ಒಳ್ಳೆಯದು. ಹುಡುಗಿ ನಿಮ್ಮನ್ನು ನಿರ್ಲಕ್ಷಿಸುವಂತೆ ಮಾಡಿರಬಹುದಾದ ನಿಮ್ಮಲ್ಲಿನ ಗುಣಗಳಿವು.
ಸಿಕ್ಕಾಪಟ್ಟೆ ಅಗತ್ಯ (Needy): ರೋಮ್ಯಾಂಟಿಕ್ ಸಂಬಂಧದಲ್ಲಿ (Romantic Relationship) ಪ್ರತಿಯೊಬ್ಬರೂ ಪ್ರೀತಿಪಾತ್ರರಿಂದ ಅಪೇಕ್ಷೆ ಮಾಡುತ್ತಾರೆ. ಆದರೆ, ನೀವು ಅತಿಯಾದ ನಿರೀಕ್ಷೆ (Expectation) ಮಾಡುತ್ತ ಅವರನ್ನು ಗೋಳು ಹೊಯ್ದುಕೊಳ್ಳುತ್ತೀರಾ ನೋಡಿ. ಅವರಿಗೆ ಬೇರೆ ಏನೂ ಮಾಡಲು ಸಾಧ್ಯವಿಲ್ಲದಂತೆ ಮಾಡುವುದು ಒತ್ತಡಕ್ಕೀಡು ಮಾಡುತ್ತದೆ. ನೀವು ತುಂಬ ಅಟ್ಯಾಚ್ಡ್ (Attached) ಆಗಿದ್ದಾಗ ಅನಾರೋಗ್ಯಕರವಾಗಿ ಅವರನ್ನು ಸೆಳೆಯಲು ಯತ್ನಿಸಬಹುದು. ತರ್ಕರಹಿತವಾದ ಡಿಮಾಂಡ್ (Demand) ಮಾಡಲು ಶುರುಮಾಡಬಹುದು. ಈ ಗುಣ ಆಕೆಯನ್ನು ಅಪ್ಸೆಟ್ (Upset) ಮಾಡಿರಬಹುದು.
Relationship Tips: ಗಂಡ ನನ್ನನ್ನು ದ್ವೇಷಿಸ್ತಾನಾ? ಇಷ್ಟಪಡೋಲ್ವಾ? ಮಹಿಳೆಯರನ್ನ ಕಂಗಾಲು ಮಾಡೋ ಪ್ರಶ್ನೆ ಇದು
ನಿಮ್ಮ ಮೇಲೆ ಕೋಪ (Angry): ಸಾಮಾನ್ಯವಾಗಿ ಪ್ರೀತಿಪಾತ್ರರ (Loved) ಮೇಲೆ ಕೋಪ ಬಂದಾಗ “ಇಂತಹ ವಿಚಾರಕ್ಕೆ ನಿಮ್ಮ ಮೇಲೆ ಕೋಪ ಬಂದಿದೆʼ ಎಂದು ಹೇಳಿಬಿಡುವುದು ಉತ್ತಮ. ಆದರೆ, ಆಕೆ ಹಾಗೆ ಮಾಡದೆ ನಿಮ್ಮನ್ನು ನಿರ್ಲಕ್ಷಿಸುತ್ತಿರಬಹುದು. ಇಂಥ ಘಟನೆ ನಡೆದಿದ್ದರೆ ನೀವೇ ಮೊದಲಾಗಿ ಸಾರಿ ಕೇಳಿಬಿಡಿ. ನೀವು ಮುಗ್ಧರಾಗಿದ್ದರೆ ಅವರಿಗೆ ವಿಷಯ ಮನದಟ್ಟು ಮಾಡಿಕೊಡಿ. ತಪ್ಪು ತಿಳಿವಳಿಕೆಯಿದ್ದರೆ ಸರಿಪಡಿಸಿ.
ಅಭದ್ರ (Insecure) ಭಾವನೆ ಮೂಡಿಸಿದ್ದೀರಾ?: ಸಾಮಾನ್ಯವಾಗಿ ಹುಡುಗಿಯರು ಕೆಲ ವಿಚಾರಗಳ ಬಗ್ಗೆ ಅತಿಯಾಗಿ ಯೋಚಿಸುತ್ತಾರೆ. ಸುಖಾಸುಮ್ಮನೆ ತಲೆಕೆಡಿಸಿಕೊಳ್ಳುತ್ತಾರೆ. ಹುಡುಗರ ಬಗ್ಗೆ ನಂಬಿಕೆ, ಖಾತ್ರಿ ಇಲ್ಲದೆ ಪದೇ ಪದೆ ಏನಾದರೂ ಪ್ರಶ್ನಿಸುತ್ತಾರೆ. ಅವುಗಳ ಬಗ್ಗೆ ಸರಿಯಾಗಿ ಉತ್ತರ ನೀಡದೆ ತಪ್ಪಿಸಿಕೊಳ್ಳುತ್ತಿದ್ದರೆ ಅವರಲ್ಲಿ ಅಸುರಕ್ಷಿತ ಭಾವನೆ ಹೆಚ್ಚುತ್ತದೆ. ಹೀಗಾಗಿ, ನಿರ್ಲಕ್ಷ್ಯ (Neglect) ಮಾಡಲು ಆರಂಭಿಸಬಹುದು. ಅಲ್ಲದೆ, ಹುಡುಗಿಯರಲ್ಲಿ ಹಲವು ರೀತಿಯ ಕೀಳರಿಮೆಗಳೂ ಇರುತ್ತವೆ. ಅದರಿಂದಾಗಿಯೂ ಆಕೆ ಹೀಗೆ ವರ್ತಿಸಬಹುದು. ಯಾವುದಕ್ಕೂ ಸೂಕ್ತ ಸಂವಹನ (Communication) ಅಗತ್ಯ.
ಬೆಂಬಲ (Support) ನೀಡದಿರುವ ಗುಣಕ್ಕೆ ಬೇಸತ್ತಿರಬಹುದು: ಚೆನ್ನಾಗಿರುವ ಸಮಯದಲ್ಲಿ ಆಕೆಯನ್ನು ಹೊಗಳಿ ಹಾಡುವ ನೀವು, ಯಾವುದಾದರೂ ಕಷ್ಟದ ಸಮಯದಲ್ಲಿ ಆಕೆಯನ್ನು ದೂಷಿಸುತ್ತ, ಬೆಂಬಲ ನೀಡದೆ ನಿಮ್ಮ ಪಾಡಿಗೆ ನೀವಿದ್ದು ಬಿಡುತ್ತೀರಾ? ಈ ಗುಣ ಹುಡುಗಿಯರಿಗೆ ಭಾರೀ ಬೇಸರವನ್ನು ಉಂಟುಮಾಡುತ್ತದೆ. ಪದೇ ಪದೆ ಇಂಥ ಘಟನೆ ನಡೆಯುತ್ತಿದ್ದರೆ ಆಕೆ ನಿಮ್ಮ ಬಗ್ಗೆ ನಂಬಿಕೆ ಕಳೆದುಕೊಳ್ಳುತ್ತಾಳೆ.
Relationship Tips: ತಂದೆ ಹೃದಯ ಘಾಸಿಗೊಳಿಸುತ್ತೆ ಮಕ್ಕಳ ಈ ಮಾತು
ಆಕೆ ಸ್ವಾತಂತ್ರ್ಯಪ್ರೇಮಿಯಾಗಿರಬಹುದು: ಪ್ರೀತಿಪಾತ್ರರೊಂದಿಗೆ ಎಷ್ಟೇ ಕ್ಲೋಸ್ ಆಗಿದ್ದರೂ ಒಬ್ಬರಿಗೊಬ್ಬರ ಸ್ವಾತಂತ್ರ್ಯ (Freedom) ಹಾಗೂ ಇಬ್ಬರ ನಡುವೆ ಒಂದಿಷ್ಟು ಸ್ಪೇಸ್ (Space) ಇರುವುದು ಬಹಳ ಮುಖ್ಯ. ಅವರ ಮಿತಿಯನ್ನು ಗೌರವಿಸುವ ಪರಿಪಾಠ ಎಂದಿಗೂ ಅಗತ್ಯ. ನೀವು ಇಂತಹ ಗಡಿರೇಖೆ ಉಲ್ಲಂಘನೆ ಮಾಡುವ ಅಭ್ಯಾಸ ಹೊಂದಿದ್ದರೆ ಹುಡುಗಿಯರು (Girls) ಬಹಳ ನಿರಾಶರಾಗುತ್ತಾರೆ. ಅವರು ಅದನ್ನು ತಮ್ಮನ್ನು ನಿಯಂತ್ರಿಸುವ (Control) ಗುಣ ಎಂಬುದಾಗಿ ಭಾವಿಸುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.