ಆನಂದ ಎನ್ನುವುದು ಮನಸ್ಸಿನಲ್ಲಿಯೇ ಇರುತ್ತೋ, ಮನುಷ್ಯ ಹುಟ್ಟು ದುಃಖಿಯೋ?

ಮನುಷ್ಯ ಮೂಲತಃ ದುಃಖಿಯೋ, ಸುಖಿಯೋ. ಸಮುದ್ರದೊಳಗಿನ ಮೀನಿನ ಕಥೆ ಮೂಲಕ ಆರ್ಟ್ ಆಫ್ ಲೀವಿಂಗ್‌ನ ಶ್ರೀ ರವಿಶಂಕರ್ ಗುರೂಜಿ ವಿವರಿಸಿದ್ದಾರೆ. ಇಲ್ಲಿ ಓದಿ

happiness and human being what makes human feel happy

- ಗುರುದೇವ ಶ್ರೀ ಶ್ರೀ ರವಿ ಶಂಕರ್ 

ಒಮ್ಮೆ ಮೀನುಗಳೆಲ್ಲ ಒಟ್ಟಿಗೆ ಸಭೆ ಸೇರಿ ಯಾರು ಸಮುದ್ರವನ್ನು ನೋಡಿದ್ದಾರೆ ಎಂಬ ವಿಷಯದ ಬಗ್ಗೆ ಚರ್ಚಿಸತೊಡಗಿದವು. ಅವುಗಳಲ್ಲಿ ಯಾವ ಮೀನೂ ಸಮುದ್ರವನ್ನು ನಿಜವಾಗಿ ನೋಡಿರಲಿಲ್ಲ. ಆಗ ಒಂದು ಮೀನು ಮುಂದೆ ಬಂದು, “ಬಹುಶಃ ನನ್ನ ಮುತ್ತಾತ ಸಮುದ್ರವನ್ನು ನೋಡಿದ್ದಾನೆ ಎಂದು ನನಗನಿಸುತ್ತದೆ” ಎಂದು ಹೇಳಿತು. ಎರಡನೆಯ ಮೀನು, “ನಿಜ, ನಿಜ, ಈ ಮಾತನ್ನು ನಾನೂ ಕೇಳಿದ್ದೇನೆ” ಎಂದು ಹೇಳಿತು. ಮೂರನೆಯ ಮೀನು, “ಇದು ಖಂಡಿತವಾಗಿಯೂ ಸತ್ಯ, ಅದರ ಮುತ್ತಾತ ಸಮುದ್ರವನ್ನು ನೋಡಿದ್ದಾನೆ” ಎಂದು ಹೇಳಿತು. ಆದುದರಿಂದ ಆ ಮೀನುಗಳೆಲ್ಲ ಸೇರಿ, “ಅವನ ಮುತ್ತಾತ ಸಮುದ್ರವನ್ನು ನೋಡಿದ್ದಾನೆ, ಆದುದರಿಂದ ಅವನಿಗೆ ಸಮುದ್ರದೊಂದಿಗೆ ನಂಟಿದೆ” ಎಂದು ತೀರ್ಮಾನಿಸಿದವು. ಒಂದು ದೊಡ್ಡ ದೇವಾಲಯವನ್ನು ನಿರ್ಮಿಸಿ, ಆ ಮೀನಿನ ಮುತ್ತಾತನ ಒಂದು ಮೂರ್ತಿಯನ್ನು ಅದರಲ್ಲಿ ಪ್ರತಿಷ್ಠಾಪನೆ ಮಾಡಿದವು. ಜೀವನದಲ್ಲಿ ನಮ್ಮ ಆನಂದದ ಹುಡುಕಾಟವೂ ಇದೇ ರೀತಿಯಾಗಿರುತ್ತದೆ.

Latest Videos

ನೀವು ಯಾವುದಕ್ಕಾಗಿ ಕಾಯುತ್ತಿದ್ದೀರಿ? ಆನಂದವಾಗಿರಲು ಸಿದ್ಧತೆ ಮಾಡಿಕೊಳ್ಳುವ ಬದಲು ಈ ಕ್ಷಣದಲ್ಲಿ ಆನಂದವನ್ನು ಅನುಭವಿಸಿ; ಸ್ವಭಾವ ಸಹಜವಾಗಿ ಆನಂದದಿಂದಿರುವ ಸಂಕಲ್ಪ ತೆಗೆದುಕೊಳ್ಳಿ. ನೀವು ಸಂತೋಷದಿಂದಿರಬೇಕು ಎಂದು ಪರಮಾತ್ಮ ಪ್ರಯತ್ನಿಸುತ್ತಿರುತ್ತಾನೆ. ಆದರೆ ತಮಗೆ ತಾವೇ ಸಹಾಯ ಮಾಡಿಕೊಳ್ಳುವ ಜನರಿಗೆ ಮಾತ್ರ ಪರಮಾತ್ಮ ಸಹಾಯ ಮಾಡುತ್ತಾನೆ. ಆದುದರಿಂದ ಪ್ರತಿದಿನವೂ, “ಈ ದಿನ ಏನು ಬೇಕಾದರೂ ಆಗಲಿ, ನಾನು ಮಾತ್ರ ಸಂತೋಷದಿಂದಿರುತ್ತೇನೆ. ಯಾವುದರಿಂದಲೂ ನನ್ನ ಸಂತೋಷಕ್ಕೆ ಚ್ಯುತಿ ಉಂಟಾಗಲು ನಾನು ಬಿಡುವುದಿಲ್ಲ, ನಾನು ಸಂತೃಪ್ತನಾಗಿರುತ್ತೇನೆ, ಆನಂದದಿಂದಿರುತ್ತೇನೆ” ಎಂಬ ಸಂಕಲ್ಪವನ್ನು ತೆಗೆದುಕೊಳ್ಳಿ.

ನೀವು ಸಂತೋಷವನ್ನು ಮೂರು ಹಂತಗಳಲ್ಲಿ ಅನುಭವಿಸಬಹುದು. ಒಂದನೆಯದು, ಸಮಾಜದಲ್ಲಿ ಸಂತೋಷ; ಪರಿಸರದಲ್ಲಿ ಸಂತೋಷ. ನೀವು ಸಂತೋಷಮಯ ವಾತಾವರಣವನ್ನು ಹೇಗೆ ಸೃಷ್ಟಿಸಬಹುದು? ಎಲ್ಲರೂ ತಮ್ಮ ಬಗ್ಗೆಯೇ ಚಿಂತಿಸುತ್ತಿರುವ ಸ್ಥಳದಲ್ಲಿ ನೀವು ಇರಲು ಬಯಸುತ್ತೀರಾ? ಪರಸ್ಪರ ಹಂಚಿಕೊಳ್ಳುವ ಸ್ವಭಾವವಿಲ್ಲದ, ಆತ್ಮೀಯತೆ ಇಲ್ಲದ, ಸಂತೋಷವಿಲ್ಲದ ಜನರ ಗುಂಪಿನಲ್ಲಿ ಇರಲು ನೀವು ಇಷ್ಟಪಡುತ್ತೀರಾ?

ಕೋಟಿ ಕೋಟಿ ಒಡತಿಯಾದರೂ 30 ವರ್ಷದಿಂದ ಒಂದೇ ಒಂದು ಸೀರೆ ಖರೀದಿಸಿಲ್ಲ!... ಕಾರಣ..!?

ಎರಡನೇ ಹಂತ, ವ್ಯಕ್ತಿಯ ಮನಸ್ಸಿನ ಆನಂದ. ವ್ಯಕ್ತಿಯು ಸ್ವೀಕಾರ ಮನೋಭಾವದಿಂದ, ಅರಿವಿನಿಂದ  ನಡೆಯುವಾಗ ಮನಸ್ಸಿನಲ್ಲಿ ತಾನೇ ತಾನಾಗಿ ಆನಂದವು ಮೂಡುತ್ತದೆ. ಕೆಲವೊಮ್ಮೆ ಎಲ್ಲರೂ ಸಂತೋಷದಿಂದಿರುತ್ತಾರೆ; ನೀವು ಅವರೆಲ್ಲರ ಸೇವೆ ಮಾಡುತ್ತಿರುತ್ತೀರಿ. ಆದರೆ, ನಿಮ್ಮ ಮನಸ್ಸಿನಲ್ಲಿ ಮಾತ್ರ ಸಂತೋಷವಿರುವುದಿಲ್ಲ, ನಿಮ್ಮಲ್ಲಿ ತೃಪ್ತಿ ಇರುವುದಿಲ್ಲ. ಎರಡನೆಯ ಹಂತದ ಸಂತೋಷವು ಶ್ರದ್ಧೆಯಿಂದ ಉಂಟಾಗುತ್ತದೆ.

ಮೂರನೆಯ ಹಂತದ ಆನಂದವು ಆತ್ಮದ ಮಟ್ಟದಲ್ಲಿರುತ್ತದೆ. ಆತ್ಮವು ಪರಮಾತ್ಮನೊಡನೆ ಮಿಲನಗೊಂಡಾಗ ಈ ಹಂತದ ಆನಂದ ಉಂಟಾಗುತ್ತದೆ. ದ್ವೈತ ಅಥವಾ ಎರಡಿಲ್ಲದಿದ್ದಾಗ, ನೀವು ಆಳವಾದ ಧ್ಯಾನದಲ್ಲಿ ಇದ್ದಾಗ ಅಂತರಂಗದ ಆನಂದವನ್ನು ಅನುಭವಿಸುತ್ತೀರಿ.

ಈ ಮೂರೂ ಹಂತಗಳ ಆನಂದವು ಪರಸ್ಪರ ಸಂಬಂಧ ಹೊಂದಿವೆ. ನೀವು ಸಂಪೂರ್ಣವಾಗಿ ಪರಮಾತ್ಮನ ಭಾಗವಾಗಿರುವಾಗ ಎರಡನೆಯ ಮತ್ತು ಮೂರನೆಯ ಹಂತದಲ್ಲಿ ತೃಪ್ತರಾಗದಿರುವುದು ಸಾಧ್ಯವೇ ಇಲ್ಲ. ಅದೇ ರೀತಿ, ಎಲ್ಲರೂ ನಿಮ್ಮ ಭಾಗವೇ ಆಗಿರುವಾಗ ಸೇವೆಯನ್ನು ಮಾಡದೆ ಸುಮ್ಮನಿರುವುದು ನಿಮಗೆ ಸಾಧ್ಯವೇ ಇಲ್ಲ. ನಿಮ್ಮ ಬಗ್ಗೆಯೇ ಸದಾ ಯೋಚಿಸುವುದನ್ನು ಬಿಟ್ಟು ಇತರರ ಸೇವೆಯನ್ನು ಮಾಡುವಾಗ ಮನಸ್ಸಿಗೆ ತೃಪ್ತಿ ದೊರೆಯುತ್ತದೆ, ಮನಸ್ಸು ಪ್ರಸನ್ನವಾಗುತ್ತದೆ, ನಿರಾಳವಾಗುತ್ತದೆ. ಅಂತಹ ಮನಸ್ಸು ಅಂತಹದೇ ವಾತಾವರಣವನ್ನು ಸೃಷ್ಟಿಸುತ್ತದೆ.

ಬುದ್ಧನ ಈ ಮೂರು ಸತ್ಯಗಳನ್ನ ತಿಳಿದರೆ ನೆಮ್ಮದಿಯ ಜೀವನ ನಿಮ್ಮದು!

ಜ್ಞಾನಿಗಳು ತಮ್ಮ ದುರ್ದಿನಗಳಲ್ಲಿಯೂ ಸಂತೋಷವಾಗಿರುತ್ತಾರೆ. ಮೂರ್ಖರು ತಮ್ಮ ಒಳ್ಳೆಯ ದಿನಗಳಲ್ಲಿಯೂ ದುಃಖದಲ್ಲಿರುತ್ತಾರೆ. ಅಧ್ಯಾತ್ಮ ಎನ್ನುವುದು ಈ ಜಗತ್ತಿಗೆ ಹೊರತಾದ ವಿಷಯವಲ್ಲ. ಹಾಗೆ ನೋಡಿದರೆ, ಭೌತಿಕ ಮತ್ತು ಆಧ್ಯಾತ್ಮಿಕ ಎಂಬ ವಿಭಾಗಗಳೇ ಇಲ್ಲ. ಅಧ್ಯಾತ್ಮದ ಹಂತಕ್ಕೆ ಏರುವುದೆಂದರೆ ಎಲ್ಲಾ ಕಡೆಯೂ ಜೀವವಿರುತ್ತದೆ, ಚೈತನ್ಯವಿರುತ್ತದೆ ಎಂಬುದನ್ನು ಗುರುತಿಸುವುದೇ ಆಗಿದೆ. ನೀವು ಆನಂದವನ್ನೂ ಮೀರಿ ಹೋದಾಗ ಏನಾಗುತ್ತದೆ? ಮನಸ್ಸು ವಿಶಾಲವಾಗುತ್ತದೆ; ಆದರೆ, ಅದು ಪ್ರಜ್ಞಾಹೀನವಾಗುವುದಿಲ್ಲ ಅಥವಾ ಅರಿವನ್ನು ಕಳೆದುಕೊಳ್ಳುವುದಿಲ್ಲ. ಸಾಮಾನ್ಯವಾಗಿ ನೀವು ಸಂತೋಷವಾಗಿರುವಾಗ ನಿಮ್ಮ ಏಕಾಗ್ರತೆಯನ್ನು ಕಳೆದುಕೊಳ್ಳುತ್ತೀರಿ; ದುಃಖದಲ್ಲಿರುವಾಗ ಏಕಾಗ್ರವಾಗಿರುತ್ತೀರಿ. ಆದರೆ ಆಧ್ಯಾತ್ಮಿಕ ಜೀವನದಲ್ಲಿ ಆನಂದ, ಅರಿವು ಮತ್ತು ಏಕಾಗ್ರತೆಯನ್ನು ಏಕಕಾಲದಲ್ಲಿ ಅನುಭವಿಸಬಹುದು.

vuukle one pixel image
click me!