ಮಕ್ಕಳು ಮಾಡೋಕೆ ಬಿಡ್ತಿಲ್ಲವೆಂದು ದೂರು ಕೊಟ್ಟ ಕಂಜೂಸ್ ಗಂಡನ ನೀಚ ಬುದ್ಧಿ ಬಿಚ್ಚಿಟ್ಟ ಹೆಂಡತಿ!

Published : Mar 19, 2025, 04:10 PM ISTUpdated : Mar 19, 2025, 04:26 PM IST
ಮಕ್ಕಳು ಮಾಡೋಕೆ ಬಿಡ್ತಿಲ್ಲವೆಂದು ದೂರು ಕೊಟ್ಟ ಕಂಜೂಸ್ ಗಂಡನ ನೀಚ ಬುದ್ಧಿ ಬಿಚ್ಚಿಟ್ಟ ಹೆಂಡತಿ!

ಸಾರಾಂಶ

ಪತ್ನಿ ಮಕ್ಕಳು ಬೇಡ ಎನ್ನುವ ಗಂಡನ ಆರೋಪಕ್ಕೆ ಪ್ರತಿಕ್ರಿಯಿಸಿದ ಹೆಂಡತಿ, ಗಂಡ ಸುಳ್ಳು ಹೇಳುತ್ತಿದ್ದಾರೆ ಎಂದಿದ್ದಾರೆ. ತಂದೆ 40 ಲಕ್ಷ ಕೊಟ್ಟು ಮದುವೆ ಮಾಡಿದರು, ಆದರೆ ಗಂಡನ ಮನೆಯಲ್ಲಿ ಊಟಕ್ಕೂ ತೊಂದರೆಯಿದೆ. ಅತ್ತೆ ಕಾಟ ಕೊಡುತ್ತಿದ್ದರು, ಮನೆಯ ಖರ್ಚಿಗೆ ಕಡಿಮೆ ಹಣ ನೀಡುತ್ತಿದ್ದರು. ತರಕಾರಿ ಇಲ್ಲದೆ ಅಡುಗೆ ಮಾಡುವಂತೆ ಒತ್ತಾಯಿಸುತ್ತಿದ್ದರು ಎಂದು ಆಕೆ ಆರೋಪಿಸಿದ್ದಾರೆ. ಪೊಲೀಸರು ಕರೆದರೂ ಗಂಡ ಠಾಣೆಗೆ ಬರುತ್ತಿಲ್ಲ ಎಂದು ಆಕೆ ಹೇಳಿದ್ದಾರೆ.

ಬೆಂಗಳೂರು (ಮಾ.19): ನನ್ನ ಹೆಂಡತಿ ಮದುವೆ ಮಾಡಿಕೊಳ್ಳುವುದಕ್ಕೆ ಮಾತ್ರ ಒಪ್ಪಿಕೊಂಡಿದ್ದು, ಮಕ್ಕಳನ್ನು ಮಾಡಿಕೊಳ್ಳುವುದಕ್ಕೆ ಒಪ್ಪಿಕೊಳ್ಳುತ್ತಿಲ್ಲ ಎಂದು ಹೆಂಡತಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಗಂಡನ ನೀಚ ಬುದ್ಧಿಯನ್ನು ಹೆಂಡತಿಯೂ ಬಿಚ್ಚಿಟ್ಟಿದ್ದಾಳೆ. ಇದು ಅತುಲ್ ಸುಭಾಶ್ ಕಥೆಯಲ್ಲಿ, ಕಂಜೂಸ್ ಗಂಡನಿಂದ ಅನುಭವಿಸುತ್ತಿರುವ ವ್ಯಥೆ ಎಂದು ಹೆಂಡತಿ ಅಳಲು ತೋಡಿಕೊಂಡಿದ್ದಾಳೆ.

ನಾವಿಬ್ಬರೂ ಮದುವೆಯಾಗಿ ಎರಡು ವರ್ಷ ಕಳೆದಿದೆ. ಆದರೆ, ಈಗ ನನ್ನ ಹೆಂಡತಿ ಸಂಸಾರ ಮಾಡಲು ಒಪ್ಪುತ್ತಿಲ್ಲವೆಂದು ಸುಳ್ಳು ಹೇಳಿದ್ದಾರೆ. ತಮಗೆ ಹೇಗೆ ಬೇಕೋ ಹಾಗೆ ಆಡಿಯೋ ವಿಡಿಯೋ ಎಡಿಟ್ ಮಾಡಿ ಮಾಧ್ಯಮಗಳ ಮುಂದೆ ಕೊಟ್ಟಿದ್ದಾರೆ ಎಂದು ಗಂಡ ಶ್ರೀಕಾಂತ್ ವಿರುದ್ಧ ಹೆಂಡತಿ ಬಿಂದುಶ್ರೀ ಆರೋಪ ಮಾಡಿದ್ದಾರೆ. ನನ್ನ ಹೆಂಡತಿ ತನ್ನ ಸೌಂದರ್ಯ ಹಾಳಾಗುತ್ತದೆ ಎಂಬ ಕಾರಣಕ್ಕೆ ಮಕ್ಕಳನ್ನು ಮಾಡಿಕೊಳ್ಳುವುದಕ್ಕೆ ಒಪ್ಪುತ್ತಿಲ್ಲ ಎಂದು ಹೇಳಿದ್ದ ಗಂಡ ಎಲ್ಲ ಬುದ್ಧಿಯನ್ನು ಬಿಚ್ಚಿಟ್ಟಿದ್ದಾರೆ.

ನಮ್ಮ ತಂದೆ ತಾಯಿ 40 ಲಕ್ಷ ರೂ. ಕೊಟ್ಟು ಮದುವೆ ಮಾಡಿದ್ದಾರೆ. ಆದರೆ, ಗಂಡನ ಮನೆಗೆ ಹೋದ ನಂತರ ನನ್ನನ್ನು ಸರಿಯಾಗಿ ನೋಡಿಕೊಂಡಿಲ್ಲ. ದಿನಕ್ಕೆ ಮೂರು ಹೊತ್ತು ಸರಿಯಾಗಿ ಊಟ ಕೊಡೋದಿಲ್ಲ. ಹೀಗಾಗಿ ನಾನು ನನ್ನ ತಾಯಿ ಮನೆಗೆ ಹೋಗಿ ಬರುತ್ತಿದ್ದೆ. ನಾನು ಗಂಡನಿಗೆ ಯಾವುದೇ ಕಿರುಕುಳ ಕೊಟ್ಟಿಲ್ಲ. ನೀನು ಸರಿಯಾದರೆ ನಾನು ನಿನ್ನ ಜೊತೆ ಸಂಸಾರ ಮಾಡುತ್ತೇನೆ ಎಂದು ಅವರ ಬಳಿ ಹೇಳಿದ್ದೇನೆ. ನನಗೆ ಹೊಡೆದು, ಬಡಿದು ಮಾಡುತ್ತಿದ್ದರು. ಒಮ್ಮೆ ನಾನು ತಲೆ ಸುತ್ತಿ ಬಿದ್ದಿದ್ದೆ. ಇದೀಗ ದೂರು ಕೊಟ್ಟ ವೈಯಾಲಿಕಾವಲ್ ಪೊಲೀಸರು ಕರೆದರು ಬರುತ್ತಿಲ್ಲ ಎಂದು ಬಿಂದುಶ್ರೀ ಹೇಳಿದರು.

ಇದನ್ನೂ ಓದಿ: ನನ್ನನ್ನು ಮುಟ್ಟಬೇಡ ಬ್ಯೂಟಿ ಹಾಳಾಗುತ್ತೆ; ಮದುವೆ ಮಾಡಿಕೊಂಡಿರೋದು ಅಷ್ಟೇ ಸಾಕು, ಮಕ್ಕಳು ಮಾತ್ರ ಬೇಡ!

ಈಗ ದೂರು ಕೊಟ್ಟ ಗಂಡನೇ ಪೊಲೀಸ್ ಠಾಣೆಗೆ ಬರದೇ ಮಿಡಿಯಾಗಳ ಮುಂದೆ ಈ ರೀತಿ ಮಾತನಾಡುತ್ತಿದ್ದಾರೆ. ನಮ್ಮ ಅತ್ತೆ ತುಂಬಾ ಕಾಟ ಕೊಡುತ್ತಿದ್ದರು. ನಾನು ಸಂಸಾರ ಮಾಡಲು ಹಣ ಡಿಮ್ಯಾಂಡ್ ಮಾಡಿಲ್ಲ. ನಾನು ಮ್ಯೂಚುವಲ್ ತಗೊಳೋಕೆ ರೆಡಿ ಇದ್ದೀನಿ. ಆದರೆ, ಈಗ ಅವರೇ ಪೊಲೀಸ್ ಠಾಣೆ ಬನ್ನಿ ಎಂದರೂ ಬರುತ್ತಿಲ್ಲ. ಇದಕ್ಕೆ ನಾನು ದಾಖಲೆಗಳನ್ನು ಕೂಡ ಕೊಡುತ್ತೇನೆ. ಅವರಿಗೆ ಬೇಕಾಗಿರುವ ಆಡಿಯೋ ಹಾಗೂ ವಿಡಿಯೋ ಎಡಿಟ್ ಮಾಡಿ ಕಳಿಸಿದ್ದಾರೆ. ಪ್ರತಿಯೊಂದನ್ನ ವಿಡಿಯೋ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ನಾನು ಮನೆಯನ್ನು ನಡೆಸಿಕೊಂಡು ಹೋಗುವುದಕ್ಕೆ ಇಡಿ ಮನೆಗೆ ಕೇವಲ ಅರ್ಧ ಲೀಟರ್ ಹಾಲು ಖರ್ಚು ಮಾಡಬೇಕು. ಮನೆಯವರಿಗೆ ಇಂತಿಷ್ಟು ಮಾತ್ರ ಅಕ್ಕಿ ಕೊಡುತ್ತಾರೆ. ಅವರು ಹೇಳಿದ್ದಕ್ಕಿಂತ ಸ್ವಲ್ಪ ಅಕ್ಕಿ ಜಾಸ್ತಿ ಹಾಕಿ ಅಡಿಗೆ ಮಾಡಿದರೆ ಬಾಯಿಗೆ ಬಂದಂತೆ ಬೈಯ್ಯುತ್ತಿದ್ದರು. ಹೀಗೆ ಮಾಡಿದರೆ ನಾನು ಹೇಗೆ ಇರೋದು. ತರಕಾರಿ ಇಲ್ಲದೆ ಅಡುಗೆ ಮಾಡಬೇಕಿತ್ತು. ಎರೆಡು ಟಮೋಟ ಹಾಕಿ ಸಾರು ಮಾಡಬೇಕು ಅಂತಾರೆ. ಇಲ್ಲಿದೆ ನೋಡಿ ಎಂದು ತರಕಾರಿ ಇಲ್ಲದ ಅನ್ನ ಸಾಂಬರ್ ಫೋಟೋವನ್ನು ಕೂಡ ತೋರಿಸಿದ್ದಾರೆ.

ಇದನ್ನೂ ಓದಿ: ಪ್ಲೀಸ್​ ನಿವೇದಿತಾಗೆ ಅಂಥ ಕಮೆಂಟ್ಸ್​ ಮಾಡ್ಬೇಡಿ... ನಾವಿಬ್ರೂ.... ಎನ್ನುತ್ತ ಕೈಮುಗಿದು ಚಂದನ್​ ಶೆಟ್ಟಿ ಬೇಡಿಕೊಂಡದ್ದೇನು?

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಸುಂದರ ದೇಶದಲ್ಲಿ ಬಾಡಿಗೆಗೆ ಸಿಗ್ತಾನೆ ಗಂಡ, ಗಂಟೆಗೆ ಇಷ್ಟಿದೆ ಸಂಬಳ!
ಮದುವೆ ಮುಂದೂಡಿಕೆ ಆದ 12 ದಿನಗಳ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಮೊದಲ ಪೋಸ್ಟ್‌ ಮಾಡಿದ ಸ್ಮೃತಿ, ಕೈಯಲ್ಲಿದ್ದ ರಿಂಗ್‌ ಮಾಯ!